ಮೂಡುಬಿದಿರೆ : ಜನವರಿ 05:ಮಂಗಳೂರು: ಯುವತಿಯೊಬ್ಬಳು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ಹೊರವಲಯದ ಗುರುಪುರದಲ್ಲಿ ಜ.5 ರಂದು ನಡೆದಿದೆ.
ಘಟನೆ ಏನು?
ಇಬ್ಬರು ಯುವತಿಯರು ಗುರುಪುರ ಕೈಕಂಬದ ನದಿ ಸೇತುವೆಯ ಬಳಿ ಬಂದಿದ್ದು ಈ ವೇಳೆ ಒಬ್ಬಳು ಹಠಾತ್ತನೆ ನದಿಗೆ ಹಾರಿದ್ದಾಳೆ. ಇದನ್ನು ಕಂಡು ಬೆಚ್ಚಿಬಿದ್ದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನದಿಗೆ ಹಾರಿದ ಯುವತಿ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದ್ದು, ಮತ್ತೊಬ್ಬ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಸ್ಥಳೀಯ ಮೂಲಗಳ ಪ್ರಕಾರ, ಆತ್ಮಹತ್ಯೆಗೆ ಶರಣಾದ ಯುವತಿ ಮೂಡುಬಿದಿರೆಯ ಗಾಂಧಿ ನಗರ ಸಮೀಪದ ನಿವಾಸಿ ಎನ್ನಲಾಗಿದೆ. ಆಕೆಯ ಜೊತೆಗಿದ್ದ ಮತ್ತೊಬ್ಬಾಕೆ ನಿಡ್ಡೋಡಿ ಮೂಲದವಳು ಎಂದು ಹೇಳಲಾಗುತ್ತಿದೆ. ಇವರಿಬ್ಬರೂ ಅಲ್ಲಿಗೆ ಯಾಕೆ ಬಂದಿದ್ದರು? ಆತ್ಮಹತ್ಯೆಗೆ ಕಾರಣಗಳೇನು? ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಬಗ್ಗೆ ನಿಖರ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.






