ಕಾರ್ಕಳ: ಡಿಸೆಂಬರ್ 29:ಕಾರ್ಕಳ ಕ್ಷತ್ರೀಯ ಮರಾಠ ಸಮಾಜ(ರಿ) ವತಿಯಿಂದ ಕಾರ್ಕಳದ ಸ್ವರಾಜ್ಯ ಮೈದಾನದಲ್ಲಿ ಎರಡು ದಿನಗಳ ಕಾಲ ಆಯೋಜನೆಗೊಂಡಿರುವ ಕ್ರೀಡಾ ಕೂಟದ ಕ್ರಿಕೇಟ್ ಪಂದ್ಯಾಟದಲ್ಲಿ ವೀರ ಶಿವಾಜಿ ಆದೂರು ಕಾಸರಗೋಡು ಪ್ರಥಮ, ಕ್ಷತ್ರಿಯ ಮರಾಠ ಸಮಾಜ ಕಾರ್ಕಳ ದ್ವಿತೀಯ, ಮರಾಠ ಆರ್ಯನ್ಸ್ ಮಂಗಳೂರು ತೃತೀಯ, ಎ.ಬಿ.ಜಿ.ಟಿ ಮಂಗಳೂರು ಚತುರ್ಥ ಸ್ಥಾನವನ್ನು ಪಡೆಯಿತು.
ಮಹಿಳೆಯರ ತೋಬಾಲ್ ಪ್ರಥಮ ಮರಾಠ ಯುವನ್ಸ್ ಬೆಳ್ತಂಗಡಿ, ದ್ವಿತೀಯ ಛತ್ರಪತಿ ಪಡೀಲ್ ಮಂಗಳೂರು, ತೃತೀಯ ಗ್ರೇಟ್ ಮರಾಠ ಕಾರ್ಕಳ, ಹಾಗೂ ಕ್ಷತ್ರೀಯ ಮರಾಠ ಸಮಾಜ ಕಾರ್ಕಳ ಚತುರ್ಥ ಸ್ಥಾನವನ್ನು ಪಡೆಯಿತು. ಬಾಲಕರ ಕ್ರಿಕೇಟ್ ಗ್ರೇಟ್ ಮರಾಠ ಕಾರ್ಕಳ ಪ್ರಥಮ, ಕ್ಷತ್ರೀಯ ಮರಾಠ ಸಮಾಜ ದ್ವಿತೀಯ ಸ್ಥಾನವನ್ನು ಪಡೆಯಿತು.
ವಿಜೇತರಿಗೆ ನಗದು, ಶಾಶ್ವತ ಫಲಕ ಮತ್ತು ಪದಕಗಳನ್ನು ನೀಡಿ ಗೌರವಿಸಲಾಯಿತು, ಎಲ್ಲಾ ವಿಭಾಗದಲ್ಲಿ ವೈಯಕ್ತಿಕ ಪ್ರಶಸ್ತಿ ನೀಡಿ ಪುರಸ್ಕಾರಿಸಲಾಯಿತು, ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೆ ಸ್ಮರಣಿ ನೀಡಿ ಅಭಿನಂದಿಸಲಾಯಿತು. ಸಹಕರಿಸಿದ ದಾನಿಗಳಿಗೆ ಮತ್ತು ಸಮಾಜ ಬಂದುಗಳಿಗೆ ಸ್ಮರಣಿಕೆ ನೀಡಿ ಕೃತಜ್ಞತೆ ಸಲ್ಲಿಸಲಾಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಮಾಜದ ಅಧ್ಯಕ್ಷರಾದ ಶುಭದರಾವ್ ವಹಿಸಿಕೊಂಡು ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು ವೇದಿಕೆಯಲ್ಲಿ ಉಮೇಶ್ ರಾವ್ ಮೋರೆ ಬಜಗೋಳಿ, ಗಿರೀಶ್ ರಾವ್ ಮೋರೆ,ನವೀನ್ ರಾವ್ ಸುರೈ, ದಿನೇಶ್ ಶೆಟ್ಟಿ, ಹರಿಶ್ಚಂದ್ರ ರಾವ್ ಪವಾರ್, C A ಹರೀಶ್ ಮೋರೆ, ಶಿವಾಜಿ ಜಾದವ್, ಪ್ರಕಾಶ್ ಜಾದವ್, ಗಣೇಶ್ ಮುಂಡ್ಕೂರು, ದಯಾನಂದ ಶಿಂಧೆ, ವಿರೇಂದ್ರ ರಾವ್, ಹರೀಶ್ ಸಾಣೂರು, ಪಾಂಡು ಸಾಣೂರು, ಪ್ರಕಾಶ್ ಕವಡೆ ಜನ್ನೋಜಿರಾವ್ ಮುಂಡ್ಕೂರು, ರಾಜೇಶ್ ರಾವ್ ಪರಪ್ಪು, ಸಂತೋಷ್ ರಾವ್ ಜೋಡುರಸ್ತೆ, ಕೀರ್ತನ್ ಲಾಡ್, ಹರೀಶ್ ಸಾಣೂರು, ರಾಮಚಂದ್ರ ರಾವ್, ಗಣೇಶ್ ಕವಡೆ, ಮೊದಲಾದವರು ಉಪಸ್ಥಿತಿತರಿದ್ದರು,
ದಿವ್ಯಾ ಹರೇಂದ್ರ ಸ್ವಾಗತಿಸಿದರು, ಪ್ರಸನ್ನ ರಾವ್ ಧನ್ಯವಾದವಿತ್ತು ಆಶಾಲತಾ ಗಿರೀಶ್ ಕವಡೆ ಕಾರ್ಯಕ್ರಮವನ್ನು ನಿರೂಪಿಸಿದರು.
ಸುರೇಂದ್ರ ಮೋರೆ, ಗುರುಪ್ರಸಾದ್, ಗಿರೀಶ್ ಕವಡೆ ರಾಕೇಶ್ ಮೋರೆ, ರೋಷನ್ ಮೋರೆ, ದರ್ಶನ್, ದಿವ್ಯಾ ಸುರೇಂದ್ರ ವಾಮನ್ ರಾವ್ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.






