Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

“ರಾಜ್ಯ ಬಜೆಟ್ ‘ಬೃಹತ್ ಶೂನ್ಯ’: ವಿ. ಸುನಿಲ್ ಕುಮಾರ್ ಪ್ರತಿಕ್ರಿಯೆ ”

Dhrishya News by Dhrishya News
06/03/2026
in ಸುದ್ದಿಗಳು
0
“ರಾಜ್ಯ ಬಜೆಟ್ ‘ಬೃಹತ್ ಶೂನ್ಯ’: ವಿ. ಸುನಿಲ್ ಕುಮಾರ್ ಪ್ರತಿಕ್ರಿಯೆ ”
0
SHARES
17
VIEWS
Share on FacebookShare on Twitter

ಕಾರ್ಕಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ ಒಟ್ಟಾರೆ “ಬೃಹತ್ ಶೂನ್ಯ”ವಾಗಿದೆ ಎಂದು ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಹೊಸ ಹೊಸ ಪದಪುಂಜಗಳನ್ನು ಬಳಸುವಲ್ಲಿ ಆದ್ಯತೆ ನೀಡಿದ್ದರೂ, ಹೊಸ ಯೋಜನೆಗಳನ್ನು ಸೃಷ್ಟಿಸುವಲ್ಲಿ ಆಸಕ್ತಿ ತೋರಿಸಿಲ್ಲ. ಬಜೆಟ್‌ ಪೂರ್ವಪೀಠಿಕೆಯಲ್ಲಿ ಈ ಬಾರಿಯ ಬಜೆಟ್ ಅನ್ನು “11G” ಮಾದರಿಯಲ್ಲಿ ರೂಪಿಸಲಾಗಿದೆ ಎಂದು ಅವರು ಹೆಮ್ಮೆಯಿಂದ ಹೇಳಿದ್ದಾರೆ. ಆದರೆ ಇಲಾಖಾವಾರು ವಿಶ್ಲೇಷಣೆ ಮಾಡಿದಾಗ ಅದು “11G” ಬಜೆಟ್ ಅಲ್ಲ, ಬದಲಾಗಿ “11 ಸುಳ್ಳುಗಳ ಬಜೆಟ್” ಎಂದು ಹೇಳಬಹುದಾಗಿದೆ ಎಂದು ಸುನಿಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಕಾಣದ ಮಟ್ಟಿಗೆ ಸಾಲದ ಹೊರೆ ಈ ಬಜೆಟ್ ಮೂಲಕ ಹೆಚ್ಚಾಗಿದೆ. ಬರೋಬ್ಬರಿ ₹1,32,000 ಕೋಟಿ ಸಾಲ ಮಾಡಲಾಗಿದ್ದು, ರಾಜ್ಯದ ಒಟ್ಟು ಹೊಣೆಗಾರಿಕೆ ₹8,24,389 ಕೋಟಿಗೆ ಏರಿಕೆಯಾಗಿದೆ. ಇದಲ್ಲದೆ ಬಂಡವಾಳ ವೆಚ್ಚವನ್ನು ₹74,682 ಕೋಟಿಗೆ ಇಳಿಕೆ ಮಾಡಲಾಗಿದೆ. ಈ ಅಂಶಗಳನ್ನು ಗಮನಿಸಿದರೆ ಇದು ವಿತ್ತೀಯ ಶಿಸ್ತಿನ ಪರಿಮಿತಿಯೊಳಗಿನ ಆಯವ್ಯಯ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ರಾಜ್ಯದ ದೂರಗಾಮಿ ಭವಿಷ್ಯವನ್ನು ಪರಿಗಣಿಸಿದರೆ, ಸಿದ್ದರಾಮಯ್ಯ ಅವರು ಕರ್ನಾಟಕವನ್ನು ತೀವ್ರ ಸಾಲದ ಮಡುವಿನಲ್ಲಿ ನೂಕುವ ದಾರಿಯಲ್ಲಿ ಸಾಗುತ್ತಿದ್ದಾರೆ ಎಂಬ ಆತಂಕ ವ್ಯಕ್ತಪಡಿಸಿದರು.

ಕರಾವಳಿ ವಿರೋಧಿ ಬಜೆಟ್

ಬಜೆಟ್‌ನ ಪ್ರತಿಪುಟವನ್ನು ಪರಿಶೀಲಿಸಿದರೂ ಕರಾವಳಿ ಭಾಗದ ಅಭಿವೃದ್ಧಿಗೆ ಪೂರಕವಾದ ಯಾವುದೇ ಪ್ರಮುಖ ಯೋಜನೆಗಳು ಕಾಣುತ್ತಿಲ್ಲ. ಹೊಸ ವೈದ್ಯಕೀಯ ಕಾಲೇಜು ಬೇಡಿಕೆ ಈಡೇರಿಲ್ಲ. ಪಶ್ಚಿಮ ವಾಹಿನಿ ಯೋಜನೆಗಳಿಗೆ ಸಹ ಸಮರ್ಪಕ ಅನುದಾನ ನೀಡಿಲ್ಲ. ನಗರಾಭಿವೃದ್ಧಿ ಯೋಜನೆಗಳು ಬೆಂಗಳೂರು ನಗರವನ್ನು ಮೀರದೇ ಇರುವುದರಿಂದ “Beyond ಬೆಂಗಳೂರು ” ಎಂಬ ಸರ್ಕಾರದ ಬದ್ಧತೆ ಪ್ರಶ್ನಾರ್ಹವಾಗಿದೆ ಎಂದು ಅವರು ಹೇಳಿದರು.

ಕರಾವಳಿಯ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಕೈಗಾರಿಕಾ ಕ್ಲಸ್ಟರ್, ಪ್ರವಾಸೋದ್ಯಮಕ್ಕೆ ಉತ್ತೇಜನ, ಐಟಿ ಹೂಡಿಕೆಗಳ ಬಗ್ಗೆ ಸ್ಪಷ್ಟ ನಿರ್ಧಾರಗಳನ್ನು ನಾವು ನಿರೀಕ್ಷಿಸಿದ್ದೆವು. ಆದರೆ ಈ ಬಜೆಟ್‌ನಲ್ಲಿ ಅವುಗಳ ಕುರಿತು ಯಾವುದೇ ಸ್ಪಷ್ಟತೆ ಕಾಣಿಸಿಲ್ಲ. ಹೀಗಾಗಿ ಈ ಬಜೆಟ್ ಕರಾವಳಿ ವಿರೋಧಿಯೂ ಆಗಿದೆ ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.

ಒಟ್ಟಾರೆಯಾಗಿ ಸಿದ್ದರಾಮಯ್ಯನವರ ಈ ಬಾರಿಯ ಬಜೆಟ್ “playing to the gallery” ಎಂಬ ಅಪ್ರೋಚ್‌ನಲ್ಲೇ ರೂಪಿತವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Previous Post

ಸೇವಾ ಲೋಪಗಳಿಂದ ಭಾರತೀಯರಿಗೆ ವರ್ಷಕ್ಕೆ 10.8 ಗಂಟೆಗಳ ನಷ್ಟ; ಶೇ. 44 ರಷ್ಟು ಗ್ರಾಹಕರು ಬ್ರ್ಯಾಂಡ್ ಬದಲಿಸಲು ಸಿದ್ಧ: ಸರ್ವೀಸ್‌ನೌ ಸಂಸ್ಥೆಯ 3ನೇ ‘ಸಿಎಕ್ಸ್’ ವರದಿಯಲ್ಲಿ ಬಹಿರಂಗ…!

Next Post

ಸಿದ್ದರಾಮಯ್ಯ ಸರಕಾರದ ‘ಸಾಲ ಗ್ಯಾರಂಟಿ’ ಬಜೆಟ್ : ಕ್ಯಾಪ್ಟನ್ ಗಣೇಶ್ ಕಾರ್ಣಿಕ್

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಸಿದ್ದರಾಮಯ್ಯ ಸರಕಾರದ ‘ಸಾಲ ಗ್ಯಾರಂಟಿ’ ಬಜೆಟ್ : ಕ್ಯಾಪ್ಟನ್ ಗಣೇಶ್ ಕಾರ್ಣಿಕ್

ಸಿದ್ದರಾಮಯ್ಯ ಸರಕಾರದ 'ಸಾಲ ಗ್ಯಾರಂಟಿ' ಬಜೆಟ್ : ಕ್ಯಾಪ್ಟನ್ ಗಣೇಶ್ ಕಾರ್ಣಿಕ್

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಹಿರಿಯಡ್ಕ: ಕೊಟ್ಟಿಗೆಯಲ್ಲಿ ವ್ಯಕ್ತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕುಂದಾಪುರ: ನೇಣು ಬಿಗಿದುಕೊಂಡು ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಆತ್ಮಹತ್ಯೆ..!

25/09/2026
ಕಾರ್ಕಳ: ಕಾರು ಡಿಕ್ಕಿ – ಪಾದಚಾರಿ ಸ್ಥಳದಲ್ಲೇ ಮೃತ್ಯು

ಪಡುಬಿದ್ರಿ ಜಂಕ್ಷನ್‌ನಲ್ಲಿ ಕಾರು–ದ್ವಿಚಕ್ರ ವಾಹನ ಅಪಘಾತ: ಸವಾರ ಸಾವು

25/09/2026
ಎಟಿಎಂ ಡಿಸ್‌ಪ್ಲೇಗೆ ಅಗ್ನಿಶಾಮಕ ಸಾಧನದಿಂದ ಹೊಡೆದು ಹಾನಿ: ಮಲ್ಪೆಯಲ್ಲಿ ಪ್ರಕರಣ ದಾಖಲು..!

ಕಾರ್ಕಳದಲ್ಲಿ ಮಟ್ಕಾ ಜುಗಾರಿ: ₹3,440 ನಗದು ವಶ

24/09/2026
ತುಳು ಶಿವಳ್ಳಿ ಮಾಧ್ವ ಮಹಾಮಂಡಲದ ಸದಸ್ಯರಿಂದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಗೆ ಫಲ ಕಾಣಿಕೆ ಸಮರ್ಪಣೆ

ತುಳು ಶಿವಳ್ಳಿ ಮಾಧ್ವ ಮಹಾಮಂಡಲದ ಸದಸ್ಯರಿಂದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಗೆ ಫಲ ಕಾಣಿಕೆ ಸಮರ್ಪಣೆ

24/09/2026

Recent News

imunify-bot-check