● 2025ರಲ್ಲಿ ಕ್ಲಿಯರ್‌ಟ್ರಿಪ್‌ನಲ್ಲಿ ಬುಕ್ ಆದ ಅತಿ ದೀರ್ಘ ಹೋಟೆಲ್ ವಾಸ್ತವ್ಯ ಬೆಂಗಳೂರಿನದ್ದಾಗಿದೆ.
● ಭಾರತದಲ್ಲಿ ಅತಿ ಹೆಚ್ಚು ಹುಡುಕಲಾದ ತಾಣಗಳಲ್ಲಿ ಮೂರನೇ ಸ್ಥಾನದಲ್ಲಿದೆ.
● ಗಾಜಿಯಾಬಾದ್‌ನಿಂದ ಬೆಂಗಳೂರಿಗೆ ವಿಮಾನ ಪ್ರಯಾಣ ಮಾಡಿದ ಒಬ್ಬ ಪ್ರಯಾಣಿಕ ಹೆಚ್ಚುವರಿ ಬ್ಯಾಗೇಜ್ ಶುಲ್ಕವಾಗಿ ₹65,000 ಖರ್ಚು ಮಾಡಿದ್ದಾರೆ.
● ಎರಡನೇ ಅತಿ ಜನಪ್ರಿಯ ಸೋಲೋ ಟ್ರಾವೆಲ್ ತಾಣವಾಗಿ ಮೂಡಿಬಂದಿದೆ.
ಕ್ಲಿಯರ್‌ಟ್ರಿಪ್ ಸಂಸ್ಥೆಯು ಕ್ಲಿಯರ್‌ಟ್ರಿಪ್ ಅನ್‌ಪ್ಯಾಕ್ಡ್ 2025 ವರ್ಷಾಂತ್ಯ ಪ್ರವಾಸ ವರದಿ ಬಿಡುಗಡೆ ಮಾಡಿದ್ದು, ಆ ವರದಿಯು ಬೆಂಗಳೂರು ಬಿಸಿನೆಸ್ ಹಬ್ ಆಗಿ ಹೆಚ್ಚು ಆಕರ್ಷಣೆ ಗಳಿಸುತ್ತಿರುವುದನ್ನು ಸಾರಿದೆ. ಅಕ್ಟೋಬರ್‌ನಲ್ಲಿ ನಗರದಲ್ಲಿ 30 ದಿನಗಳ ದೀರ್ಘ ಬುಕಿಂಗ್ ಆಗಿದ್ದಾಗಿ ಕ್ಲಿಯರ್ ಟ್ರಿಪ್ ವರದಿ ತಿಳಿಸಿದ್ದು, ಈ ಮೂಲಕ ಬೆಂಗಳೂರು ಈ ವರ್ಷದ ಅತಿ ದೀರ್ಘ ಹೋಟೆಲ್ ವಾಸ್ತವ್ಯ ಹೊಂದಿದ ದಾಖಲೆ ಮಾಡಿದೆ. ಅದೇ ತಿಂಗಳಲ್ಲಿ ಪ್ಲಾಟ್‌ಫಾರ್ಮ್‌ನಲ್ಲಿ 5ನೇ ಅತಿ ದೀರ್ಘ ವಾಸ್ತವ್ಯದ ದಾಖಲೆ ಕೂಡ ಬೆಂಗಳೂರಿನದ್ದಾಗಿದೆ.
ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ಬೆಂಗಳೂರು, 2,500ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳ ಮನೆಯಾಗಿದ್ದು, ಜನಪ್ರಿಯ ರಜಾ ತಾಣಗಳಿಗೆ ಉತ್ತಮ ರಸ್ತೆ ಸಂಪರ್ಕ ಹೊಂದಿದೆ. ಆದ್ದರಿಂದ ಬಿಸಿನೆಸ್ ಮತ್ತು ವಿರಾಮ ಪ್ರವಾಸಿ ಕೇಂದ್ರವಾಗಿ ಅದರ ಬೆಳವಣಿಗೆಯು ಆಶ್ಚರ್ಯವೇನಲ್ಲ. ನಗರದಲ್ಲಿ ಕೆಲಸ ಸಂಬಂಧಿತ ಪ್ರವಾಸಗಳ ಹೋಟೆಲ್ ಬುಕಿಂಗ್‌ಗಳು 54.74% ಹೆಚ್ಚಾಗಿವೆ ಮತ್ತು ಅತಿ ಹೆಚ್ಚು ಹುಡುಕಲಾದ ಮೂರು ತಾಣಗಳಲ್ಲಿ ಒಂದಾಗಿದೆ. ಕೊಡಗು, ಊಟಿ ಮತ್ತು ಕೊಡೈಕೆನಾಲ್‌ಗಳಿಗೆ ಹಾಗೂ ಅಲ್ಲಿಂದ ಇಲ್ಲಿಗೆ ಅತಿ ಹೆಚ್ಚು ಪ್ರಯಾಣಗಳು ದಾಖಲಾಗಿವೆ.
ವರದಿಯು ಕರ್ನಾಟಕಕ್ಕೆ ಸಂಬಂಧಿಸಿದ ವರ್ಷದ ಕೆಲವು ಅಸಾಮಾನ್ಯ ಪ್ರವಾಸ ಕ್ಷಣಗಳನ್ನೂ ತಿಳಿಸಿದೆ. 2025ರಲ್ಲಿ ಚಿಕ್ಕಮಗಳೂರಿನ ಒಂದು ಪ್ರಾಪರ್ಟಿಗೆ ಬಹಳ ಮೊದಲೇ ಹೋಟೆಲ್ ಬುಕಿಂಗ್ ಅಂದರೆ 361 ದಿನಗಳ ಮುಂಚಿತವಾಗಿ ಬುಕಿಂಗ್ ಮಾಡಲಾಗಿದೆ. ಜುಲೈಯಲ್ಲಿಯೇ ಬುಕ್ ಮಾಡಲಾಗಿದೆ. ಜನಪ್ರಿಯ ಹಿಲ್ ಸ್ಟೇಷನ್ ಗಳ ಮೇಲಿನ ಪ್ರೀಮಿಯಂ ವಾಸ್ತವ್ಯ ಸೌಲಭ್ಯಕ್ಕೆ ಪ್ರಯಾಣಿಕರು ಬಹಳ ಮುಂಚಿತವಾಗಿ ಯೋಜನೆ ಮಾಡುತ್ತಿರುವುದನ್ನು ಇದು ತೋರಿಸುತ್ತದೆ.
ವಿಶೇಷವೆಂದರೆ ಗಾಜಿಯಾಬಾದ್‌ನಿಂದ ಬೆಂಗಳೂರಿಗೆ ವಿಮಾನ ಪ್ರಯಾಣ ಮಾಡಿದ ಒಬ್ಬ ಪ್ರಯಾಣಿಕ ಹೆಚ್ಚುವರಿ ಬ್ಯಾಗೇಜ್ ಶುಲ್ಕವಾಗಿ ₹65,000 ಪಾವತಿಸಿದ್ದಾರೆ, ಇದು ಪ್ಲಾಟ್‌ಫಾರ್ಮ್‌ನಲ್ಲಿ ದಾಖಲಾದ ಅತಿ ದುಬಾರಿ ಶುಲ್ಕ ಪಾವತಿಗಳಲ್ಲಿ ಒಂದು.
ನಗರದ ಸಾಂಸ್ಕೃತಿಕ ಆಕರ್ಷಣೆಯೂ ತೀವ್ರಗೊಳ್ಳುತ್ತಿದ್ದು, ಬೆಂಗಳೂರು ಎರಡನೇ ಅತಿ ಜನಪ್ರಿಯ ಸೋಲೋ ಟ್ರಾವೆಲ್ ತಾಣವಾಗಿ ಹೊರಹೊಮ್ಮಿದೆ. ಇದು ಅದರ ಸ್ವಾಗತಾರ್ಹ ವಾತಾವರಣ, ನಗರ ಜೀವನಶೈಲಿ ಮತ್ತು ಪ್ರಕೃತಿ ಸ್ನೇಹಿ ತಾಣಗಳಿಗೆ ಸುಲಭ ಸಂಪರ್ಕ ಇತ್ಯಾದಿ ಕಾರಣದಿಂದ ಸಾಧ್ಯವಾಗಿದೆ.






