ಈ ಮೂಲಕ ಏಜೆಂಟಿಕ್ ಎಐ, ಬುದ್ಧಿವಂತ ಕಾರ್ಯನಿರ್ವಹಣೆ ಮತ್ತು ಎಂಟರ್‌ಪ್ರೈಸ್ ಸರ್ಚ್ ಸಾಮರ್ಥ್ಯವನ್ನು ಸಂಯೋಜಿಸಿ ಉದ್ಯಮಗಳ ಉದ್ಯೋಗಿಗಳ ಕೆಲಸವನ್ನು ಸುಗಮಗೊಳಿಸುವ ವಿಶ್ವದ ಅತ್ಯಂತ ಸುಧಾರಿತ ಎಐ ಪ್ಲಾಟ್‌ಫಾರ್ಮ್ ಅನ್ನು ಒದಗಿಸಲಾಗುತ್ತದೆ.
ಬೆಂಗಳೂರು : ಉದ್ಯಮವನ್ನು ಮರುರೂಪಿಸಿಕೊಳ್ಳಲು ನೆರವಾಗುವ ಎಐ ಕಂಟ್ರೋಲ್ ಟವರ್ ಆಗಿರುವ ಸರ್ವೀಸ್‌ನೌ (NYSE: NOW) ಸಂಸ್ಥೆಯು ಇಂದು ಮೂವ್‌ವರ್ಕ್ಸ್ ನ ಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವುದಾಗಿ ಘೋಷಿಸಿದೆ. ಈ ಸ್ವಾಧೀನ ಪ್ರಕ್ರಿಯೆಯು ಜನರಿಗಾಗಿ ಎಐಯನ್ನು ದುಡಿಸಿಕೊಳ್ಳುವ ಸರ್ವೀಸ್‌ನೌನ ದೂರದೃಷ್ಟಿಗೆ ಪೂರಕವಾಗಿ ಕೆಲಸ ಮಾಡಲಿದೆ. ಈ ಮೂಲಕ ಸರ್ವೀಸ್‌ನೌನ ವಿಶ್ವಾಸಾರ್ಹ ಏಜೆಂಟಿಕ್ ಎಐ ಮತ್ತು ಬುದ್ಧಿವಂತ ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ಮೂವ್‌ವರ್ಕ್ಸ್ ನ ಮುಂಚೂಣಿಯ ಎಐ ಅಸಿಸ್ಟೆಂಟ್, ಎಂಟರ್‌ಪ್ರೈಸ್ ಸರ್ಚ್ ಮತ್ತು ಏಜೆಂಟಿಕ್ ರೀಸನಿಂಗ್ ಎಂಜಿನ್ ಸೌಲಭ್ಯದ ಜೊತೆಗೆ ಸಂಯೋಜಿಸಲಾಗುತ್ತಿದ್ದು, ಜೊತೆಯಾಗಿ ಈ ಕಂಪನಿಗಳು ಸರ್ವೀಸ್‌ನೌ ಎಐ ಪ್ಲಾಟ್‌ಫಾರ್ಮ್‌ನ ಸಾಮರ್ಥ್ಯಗಳನ್ನು ಹೆಚ್ಚಿಸಿ, ಉದ್ಯೋಗಿಗಳು ಕೆಲಸವನ್ನು ನಿರ್ವಹಿಸುವ ರೀತಿಯನ್ನು ಸುಗಮಗೊಳಿಸಲಿದೆ ಮತ್ತು ಮರುರೂಪಿಸಲಿದೆ. ಈ ಮೂಲಕ ವೇಗವಾದ ಫಲಿತಾಂಶಗಳು ದೊರೆಯಲಿದೆ, ಎಐ ಅಳವಡಿಕೆ ಹೆಚ್ಚಲಿದೆ ಮತ್ತು ಜನರು ಬಳಸಲು ಇಷ್ಟಪಡುವ ಎಐ ಅನುಭವಗಳನ್ನು ಸೃಷ್ಟಿಸಲಾಗುತ್ತದೆ.
*ಈ ಸಂದರ್ಭದಲ್ಲಿ ಮಾತನಾಡಿರುವ ಸರ್ವೀಸ್‌ನೌನ ಅಧ್ಯಕ್ಷ, ಮುಖ್ಯ ಕಾರ್ಯಾಚರಣೆ ಅಧಿಕಾರಿ ಮತ್ತು ಮುಖ್ಯ ಉತ್ಪನ್ನ ಅಧಿಕಾರಿ ಅಮಿತ್ ಜವೇರಿ* ಅವರು, “ಉದ್ಯಮದಲ್ಲಿರುವ ಎಲ್ಲಾ ವಿಭಾಗಗಳ ಜನರ ಕೆಲಸವನ್ನು ಸುಲಭಗೊಳಿಸಲು ಎಐಯನ್ನು ದುಡಿಸಿಕೊಳ್ಳುವ ಸರ್ವೀಸ್‌ನೌನ ದೂರದೃಷ್ಟಿಯನ್ನು ಮೂವ್‌ವರ್ಕ್ಸ್ ಸಂಸ್ಥೆಯು ವೇಗಗೊಳಿಸಲಿದೆ. ಒಂದೇ ಆರ್ಕಿಟೆಕ್ಚರ್ ಅಥವಾ ವಾಸ್ತುಶಿಲ್ಪದಲ್ಲಿ ನಿರ್ಮಿತವಾದ ಬುದ್ಧಿಮತ್ತೆಯನ್ನು ಎರಡು ದಶಕಗಳ ಕಾಲ ಕಾರ್ಯನಿರ್ವಹಣೆಗೆ ಬಳಸಿಕೊಂಡಿರುವ ಪರಿಣತಿಯ ಆಧಾರದಲ್ಲಿ ನಾವು ಉದ್ಯಮಗಳಿಗಾಗಿ ಶಕ್ತಿಯುತ ಏಜೆಂಟಿಕ್ ಎಐ ಆಪರೇಟಿಂಗ್ ಸಿಸ್ಟಂ ಅನ್ನು ಒದಗಿಸುತ್ತಿದ್ದೇವೆ. ಮೂವ್‌ವರ್ಕ್ಸ್ ನ ಎಐ ಅಸಿಸ್ಟೆಂಟ್ ಮತ್ತು ಸರ್ವೀಸ್‌ನೌನ ಏಜೆಂಟಿಕ್ ಪ್ಲಾಟ್‌ಫಾರ್ಮ್ ಒಟ್ಟಿಗೆ ಸುರಕ್ಷಿತವಾಗಿ, ಜವಾಬ್ದಾರಿಯುತವಾಗಿ ಮತ್ತು ವಿಸ್ತಾರವಾಗಿ ಮಾತುಕತೆಗಳನ್ನು ಸಂಪೂರ್ಣ ಕೆಲಸವಾಗಿ ಪರಿವರ್ತಿಸುವ, ಗ್ರಾಹಕರು ಸಮಸ್ಯೆಗಳನ್ನು ಅಟೋಮ್ಯಾಟಿಕ್ ಆಗಿ ಪರಿಹರಿಸಲು ಅನುವು ಮಾಡಿಕೊಡುವ, ಬುದ್ಧಿವಂತ ಕಾರ್ಯನಿರ್ವಹಣೆಗೆ ಮತ್ತು ಉತ್ತಮ ಫಲಿತಾಂಶಗಳನ್ನು ಪಡೆಯಲು ಅನುವು ಮಾಡಿಕೊಡುವ ಎಐ ಆಧರಿತ ಜಗತ್ತಿನ ಬಾಗಿಲನ್ನು ತೆರೆಯಲಿದೆ” ಎಂದು ಹೇಳಿದರು.
*ಮೂವ್‌ವರ್ಕ್ಸ್ ನ ಸಿಇಓ ಭವಿನ್ ಶಾ* ಅವರು ಮಾತನಾಡಿ, “ಕೆಲಸವನ್ನು ಸುಲಭಗೊಳಿಸಲು, ಅದಕ್ಕೆ ಪೂರಕವಾಗಿ ಕೆಲಸವನ್ನು ಮಾಡಿ ಮುಗಿಸುವ ಶಕ್ತಿಶಾಲಿ ಎಐ ಸಹಾಯಕ ಪ್ಲಾಟ್‌ಫಾರ್ಮ್ ನಿರ್ಮಿಸಲು ಮೂವ್‌ವರ್ಕ್ಸ್ ಅನ್ನು ಸ್ಥಾಪಿಸಲಾಯಿತು. ಇದೀಗ ಸರ್ವೀಸ್‌ನೌ ಸಂಸ್ಥೆ ಜೊತೆಗೆ ಸೇರ್ಪಡೆಯಾಗುವ ಮೂಲಕ, ನಮ್ಮ ರೀಸನಿಂಗ್ ಎಂಜಿನ್ ಆಧರಿತವಾದ ನಮ್ಮ ಎಐ ಅಸಿಸ್ಟೆಂಟ್ ಮತ್ತು ಎಂಟರ್‌ಪ್ರೈಸ್ ಸರ್ಚ್ ಅನ್ನು ಹಾಗೂ ಸರ್ವೀಸ್‌ನೌ ನ ವಿಶ್ವಾಸಾರ್ಹ ವರ್ಕ್ ಫ್ಲೋ ಆಟೋಮೇಷನ್ ಮತ್ತು ಎಐ ಆಡಳಿತ ಸೌಲಭ್ಯದ ಜೊತೆ ಸೇರಿಸಿಕೊಂಡು ಯಾವುದೇ ಉದ್ಯಮಮಕ್ಕೆ ಈ ಏಜೆಂಟಿಕ್ ಸೌಲಭ್ಯವನ್ನು ದೊಡ್ಡ ಪ್ರಮಾಣದಲ್ಲಿ ಒದಗಿಸಬಹುದು. ಜೊತೆಯಾಗಿ, ನಾವು ಎಲ್ಲೆಡೆ ಇರುವ ಉದ್ಯೋಗಿಗಳಿಗೆ ಸುರಕ್ಷಿತ, ವೇಗದ, ಎಂಡ್-ಟು-ಎಂಡ್ ಪರಿಹಾರವನ್ನು ನೀಡುತ್ತೇವೆ” ಎಂದು ಹೇಳಿದರು.
*ಉದ್ಯೋಗಿಗಳಿಗೆ ಬುದ್ಧಿವಂತ ಅನುಭವ ಒದಗಿಸುವ ಬುದ್ಧಿವಂತ ಪ್ಲಾಟ್ ಫಾರ್ಮ್*
ಸರ್ವೀಸ್‌ನೌ ಎಐ ಪ್ಲಾಟ್‌ಫಾರ್ಮ್ ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆಯೊಂದಿಗೆ ದೊಡ್ಡ ಪ್ರಮಾಣದಲ್ಲಿ ಕೆಲಸವನ್ನು ಆಟೋಮೇಟ್ ಮಾಡುವ ನೇಟಿವ್ ಇಂಟಿಗ್ರೇಟೆಡ್ ಎಐ ಸೌಲಭ್ಯವನ್ನು ನೀಡುತ್ತದೆ. ಸರ್ವೀಸ್‌ನೌ ಗೆ ಜೊತೆಗೆ ಉತ್ತಮ ರೀತಿಯಲ್ಲಿ ಸಂಯೋಜನೆ ಹೊಂದಿರುವ ಮೂವ್‌ವರ್ಕ್ಸ್ ಸಂಸ್ಥೆಯು ಉದ್ಯೋಗಿಗಳು ಎಲ್ಲಿಯೇ ಕೆಲಸ ಮಾಡುತ್ತಿದ್ದರೂ ಸಹಜವಾಗಿ ಕೇಳಲು, ಹುಡುಕಲು ಮತ್ತು ಕ್ರಮ ತೆಗೆದುಕೊಳ್ಳಲು ಅನುವು ಮಾಡಿಕೊಡಲು ನೆರವು ಒದಗಿಸುತ್ತದೆ. ಸರ್ವೀಸ್‌ನೌ ಮತ್ತು ಮೂವ್‌ವರ್ಕ್ಸ್ ಜೊತೆಯಾಗಿ ಉದ್ಯೋಗಿಗಳು, ಗ್ರಾಹಕರು, ಡೆವಲಪರ್‌ಗಳು, ಐಟಿ ತಂಡಗಳು ಮತ್ತು ಅಡ್ಮಿನ್ ಗಳಿಗಾಗಿ ಪ್ರತೀ ಕೋರಿಕೆಯನ್ನು ಅಟೋಮ್ಯಾಟಿಕ್ ಆಗಿ ಪೂರೈಸಿ ಪರಸ್ಪರ ಕನೆಕ್ಟ್ ಮಾಡುವ ಮೂಲಕ ಬುದ್ಧಿವಂತ ಅನುಭವಗಳನ್ನು ಉಂಟು ಮಾಡುತ್ತದೆ. ಈ ಮೂಲಕ ಪುನರಾವರ್ತನೆ ತಡೆಯುತ್ತದೆ, ಸಮಯವನ್ನು ಮೌಲ್ಯವಾಗಿ ಪರಿವರ್ತಿಸುತ್ತದೆ ಮತ್ತು ಎಂಟರ್‌ಪ್ರೈಸ್‌ನಾದ್ಯಂತ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.
ಏಜೆಂಟಿಕ್ ಎಐ ಈಗಾಗಲೇ ಸಾವಿರಾರು ಸರ್ವೀಸ್‌ನೌ ಗ್ರಾಹಕರಿಗೆ ದೊಡ್ಡ ಪ್ರಮಾಣದಲ್ಲಿ ಕೆಲಸದ ರೀತಿಯನ್ನು ಬದಲಾಯಿಸುತ್ತಿದೆ, ಪ್ರತಿಕ್ರಿಯೆ ಸಮಯವನ್ನು ವೇಗಗೊಳಿಸುತ್ತಿದೆ ಮತ್ತು ಹೆಚ್ಚು ಪ್ರಮಾಣದ ಉತ್ಪಾದಕತೆ ಲಾಭಗಳನ್ನು ಒದಗಿಸುತ್ತಿದೆ. ಸರ್ವೀಸ್‌ನೌನ ಒಳಗೆ, ಎಐ ಏಜೆಂಟ್‌ಗಳು ಈಗ ಐಟಿ ಮನವಿಗಳಲ್ಲಿ 90% ನಷ್ಟು ಮತ್ತು ಗ್ರಾಹಕ ಬೆಂಬಲ ಮನವಿಗಳಲ್ಲಿ 89% ರಷ್ಟನ್ನು ಅಟೋಮ್ಯಾಟಿಕ್ ಆಗಿ ಪರಿಹರಿಸುತ್ತವೆ, ಈ ಮೂಲಕ ಪರಿಹಾರ ಒದಗಿಸುವ ಸಮಯವನ್ನು ಏಳು ಪಟ್ಟು ಕಡಿಮೆ ಮಾಡುತ್ತವೆ.
ಮೂವ್‌ವರ್ಕ್ಸ್ ಈ ಅಡಿಪಾಯವನ್ನು ಇನ್ನಷ್ಟು ಗಟ್ಟಿಗೊಳಿಸಲಿದ್ದು, ಸರ್ವೀಸ್‌ನೌ ಈಗಾಗಲೇ ಮೂವ್‌ವರ್ಕ್ಸ್ ನ 100ಕ್ಕೂ ಹೆಚ್ಚು ತಾಂತ್ರಿಕ ಸೌಲಭ್ಯಗಳನ್ನು ಸಂಯೋಜಿಸಿಕೊಂಡಿದ್ದು, ಅದರ ಪ್ರಮುಖ ಎಐ ಅಸಿಸ್ಟೆಂಟ್, ಎಂಟರ್‌ಪ್ರೈಸ್ ಸರ್ಚ್ ಮತ್ತು ಏಜೆಂಟಿಕ್ ರೀಸನಿಂಗ್ ಎಂಜಿನ್ ಮೇಲೆ ಸೀಮೆನ್ಸ್, ಟೊಯೋಟಾ, ಯೂನಿಲಿವರ್ ಮುಂತಾದ ಪ್ರಮುಖ ಜಾಗತಿಕ ಎಂಟರ್‌ಪ್ರೈಸ್ ಗಳು ವಿಶ್ವಾಸ ಇಟ್ಟಿವೆ. 5.5 ಮಿಲಿಯನ್ ಉದ್ಯೋಗಿ ಬಳಕೆದಾರರು ಮತ್ತು ಸುಮಾರು 250 ಎರಡೂ ಕಂಪನಿಗಳ ಗ್ರಾಹಕರು ಈಗಾಗಲೇ ಎರಡೂ ತಂತ್ರಜ್ಞಾನಗಳನ್ನು ಬಳಸುತ್ತಿದ್ದು, ಸರ್ವೀಸ್‌ನೌ ಮತ್ತು ಮೂವ್‌ವರ್ಕ್ಸ್ ಸಂಸ್ಥೆಗಳು ಪ್ರತೀ ಉದ್ಯಮದ ಪ್ರತೀ ವಿಭಾಗದ ಉದ್ಯೋಗಿಗಳ ಕಾರ್ಯ ನಿರ್ವಹಣೆಯನ್ನು ಸುಲಭ ಮಾಡುವ ಏಜೆಂಟಿಕ್ ಎಐ ಅನ್ನು ತರುತ್ತಿವೆ. ಮೂವ್‌ವರ್ಕ್ಸ್ ಗ್ರಾಹಕರಲ್ಲಿ ಶೇಕಡಾ 90ರಷ್ಟು ಗ್ರಾಹಕರು ಸಂಸ್ಥೆಯ ತಂತ್ರಜ್ಞಾನವನ್ನು ತಮ್ಮ 100% ಉದ್ಯೋಗಿಗಳಿಗೆ ಅಳವಡಿಸಿದ್ದು, ಇದು ಎಂಟರ್‌ಪ್ರೈಸ್ ಗಳಲ್ಲಿನ ನಿಜವಾದ ಅಳವಡಿಕೆ ಪ್ರಮಾಣ ಮತ್ತು ಬಳಕೆಯನ್ನು ತೋರಿಸುತ್ತದೆ.
ಹೆಚ್ಚುವರಿಯಾಗಿ, ನೂರಾರು ಎಐ ತಜ್ಞರು ಸರ್ವೀಸ್‌ನೌಗೆ ಸೇರ್ಪಡೆಯಾಗುತ್ತಿರುವುದರಿಂದ, ಮೂವ್‌ವರ್ಕ್ಸ್ ಗಾಢವಾದ ತಜ್ಞತೆಯನ್ನು ತರುತ್ತದೆ. ಇದು ಹೊಸತನವನ್ನು ಇನ್ನಷ್ಟು ಹೆಚ್ಚಿಸುತ್ತದೆ ಮತ್ತು ಸರ್ವೀಸ್‌ನೌನ ಎಐ ರೋಡ್‌ಮ್ಯಾಪ್ ಅನ್ನು ವಿಸ್ತರಿಸುವ ಸಾಮರ್ಥ್ಯವನ್ನು ತೀವ್ರಗೊಳಿಸುತ್ತದೆ. ಒಟ್ಟಾರೆಯಾಗಿ, ಈ ಸ್ವಾಧೀನವು ಒಂದೇ ಹೊಂದಿಕೊಳ್ಳುವ, ವಿಸ್ತಾರ ಮಾಡಬಹುದಾದ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಾಂಪ್ಟ್ ಗಳ ಮೂಲಕ ಪ್ರತೀ ಉದ್ಯೋಗಿ ಮನವಿಯನ್ನು ಅರ್ಥಮಾಡಿಕೊಳ್ಳುವ, ಸರಿಯಾದ ಎಂಟರ್‌ಪ್ರೈಸ್ ಡೇಟಾ, ಎಐ ಏಜೆಂಟ್ ಅಥವಾ ಕಾರ್ಯನಿರ್ವಹಣಾ ವಿಭಾಗಕ್ಕೆ ಕನೆಕ್ಟ್ ಮಾಡುವ ಮತ್ತು ಐಟಿ, ಎಚ್‌ಆರ್ ಮುಂತಾದವುಗಳಾದ್ಯಂತ ಎಂಡ್-ಟು-ಎಂಡ್ ಡಿಜಿಟಲ್ ಕಾರ್ಯನಿರ್ವಹಣೆಗಳನ್ನು ಇನ್ನಷ್ಟು ವೇಗಗೊಳಿಸುವ ಮೂಕ ಅದ್ಭುತ ಅನುಭವಗಳನ್ನು ಒದಗಿಸುವ ಸಾಮರ್ಥ್ಯದ ಮೂಲಕ ಸರ್ವೀಸ್‌ನೌ ಎಐ ಪ್ಲಾಟ್‌ಫಾರ್ಮ್ ಅನ್ನು ಮತ್ತಷ್ಟು ಬಲಪಡಿಸುತ್ತದೆ.






