ಮಣಿಪಾಲ: ಡಿಸೆಂಬರ್ 09:ಭಾರತೀಯ ಕೈಗಾರಿಕಾ ಒಕ್ಕೂಟದ (Confederation of Indian Industry -CII) ಪ್ರತಿಷ್ಠಿತ ಉದ್ದಿಮೆ-ಶೈಕ್ಷಣಿಕ ಪಾಲುದಾರಿಕೆ ಪ್ರಶಸ್ತಿಗೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಪಾತ್ರವಾಗಿದೆ. ನವದೆಹಲಿಯಲ್ಲಿ ಡಿಸೆಂಬರ್ 5 ರಂದು ನಡೆದ ಒಕ್ಕೂಟದ ಕೈಗಾರಿಕೆ-ಶೈಕ್ಷಣಿಕ ಪಾಲುದಾರಿಕೆ ಶೃಂಗಸಭೆಯಲ್ಲಿ, ಮಾಹೆ ಸಂಸ್ಶೆಯ ಕಾರ್ಪೋರೇಟ್ ಸಂಬಂಧಗಳ ನಿರ್ದೇಶಕ ಡಾ| ಹರೀಶ್ ಕುಮಾರ್, ವಿಶ್ವವಿದ್ಯಾಲಯದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಭಾರತೀಯ ಕೈಗಾರಿಕಾ ಒಕ್ಕೂಟ (CII) ಆಯೋಜಿಸಿದ ಈ ಶೃಂಗಸಭೆಯು ಕೈಗಾರಿಕೆ, ಶೈಕ್ಷಣಿಕ, ಸರ್ಕಾರಿ ಸಂಸ್ಥೆಗಳು, ನವೋದ್ಯಮಗಳು, ತಂತ್ರಜ್ಞಾನ ಶೋಧಕರು, ಸಾಹಸೋದ್ಯಮ ಬಂಡವಾಳ ಸಮುದಾಯಗಳನ್ನು ಆಕರ್ಷಿಸಿತ್ತು. ವಿಜ್ಞಾನ ನಾಯಕರು, ವ್ಯಾಪಾರ ಪ್ರವರ್ತಕರು, ನೀತಿ ನಿರೂಪಕರು ಮತ್ತು ಉದಯೋನ್ಮುಖ ಉದ್ಯಮಿಗಳು ಹೆಚ್ಚಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಉದ್ದಿಮೆ ಹಾಗೂ ಶಿಕ್ಷಣ ಪಾಲುದಾರಿಕೆ 2025 ವಿಶೇಷ ಯೋಜನೆಯಡಿ ಆಯೋಜಿಸಿರುವ ಒಕ್ಕೂಟದ ಜಾಗತಿಕ ಕೈಗಾರಿಕಾ ಶೃಂಗಸಭೆಯು
CII ಜಾಗತಿಕ ಕೈಗಾರಿಕೆ ಶೃಂಗಸಭೆ – ಶೈಕ್ಷಣಿಕ ಪಾಲುದಾರಿಕೆ 2025
ಶೈಕ್ಷಣಿಕ, ಉದ್ಯಮ ಮತ್ತು ಸರ್ಕಾರದ ನಡುವಿನ ಸಹಯೋಗವನ್ನು ಬಲಪಡಿಸುವ ಗುರಿಯನ್ನು ಬಲಪಡಿಸಲು ಒಕ್ಕೂಟವು 2025 ಸಾಲಿನಲ್ಲಿ ಉದ್ದಿಮೆ ಹಾಗೂ ಶಿಕ್ಷಣ ಪಾಲುದಾರಿಕೆ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಮಾತ್ರವಲ್ಲದೇ, ಉದ್ಯಮ-ಕೇಂದ್ರಿತ ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ಶ್ರೇಷ್ಠತೆಯನ್ನು ಪ್ರದರ್ಶಿಸುವ ಸಂಸ್ಥೆಗಳನ್ನು ಒಕ್ಕೂಟವು ಗುರುತಿಸುತ್ತಿದೆ.
ಮಾಹೆಗೆ ಒಲಿದಿರುವ ಒಕ್ಕೂಟದ ಪ್ರತಿಷ್ಠಿತ ಪ್ರಶಸ್ತಿಯ ಕುರಿತು ಮಾಹೆ ಉಪಕುಲಪತಿ ಲೆ.ಜ. (ಡಾ|) ಎಂ.ಡಿ. ವೆಂಕಟೇಶ್, ವಿಎಸ್ಎಂ (ನಿ) ಅವರು ಸಂತಸ ವ್ಯಕ್ತಪಡಿಸಿ, “ಈ ಪ್ರತಿಷ್ಠಿತ ಮನ್ನಣೆಯನ್ನು ಪಡೆದಿರುವುದು ನಮಗೆ ಅತ್ಯಂತ ಗೌರವ ತಂದಿದೆ. ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಉದ್ಯಮ ಪಾಲುದಾರರು ನಿರಂತರವಾಗಿ ಒಟ್ಟಾಗಿ ಕೆಲಸ ಮಾಡುವ ಮತ್ತು ಜ್ಞಾನ ಮತ್ತು ನಾವೀನ್ಯತೆಯ ಗಡಿಗಳನ್ನು ನಿರಂತರವಾಗಿ ವಿಸ್ತರಿಸುತ್ತಿದ್ದಾರೆ. ಆ ಮೂಲಕ ನಮ್ಮ ಬದ್ಧತೆಯನ್ನು ಇದು ನಿಜವಾಗಿಯೂ ಪುನರುಚ್ಚರಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸಮಾಜದ ಧನಾತ್ಮಕ ಪರಿವರ್ತನೆಯ ಆಶಾದಾಯಕ ಫಲಿತಾಂಶಗಳತ್ತ ಕೊಡುಗೆ ನೀಡಬಹುದು” ಎಂದು ಹೇಳಿದರು.
ಈ ಪ್ರಶಸ್ತಿಯ ಕುರಿತು ಮಾತನಾಡಿದ ಮಾಹೆ ಕಾರ್ಪೊರೇಟ್ ಸಂಬಂಧಗಳ ನಿರ್ದೇಶಕ ಡಾ. ಹರೀಶ್ ಕುಮಾರ್ ಎಸ್, “ವಾಸ್ತವ ಪ್ರಪಂಚದ ಸವಾಲುಗಳಿಗೆ ಪರಿಹಾರಗಳನ್ನು ಕಂಡು ಹಿಡಿಯುವ ಪ್ರಯತ್ನಕ್ಕೆ ಸಂದ ಪ್ರಶಸ್ತಿ ಇದಾಗಿದೆ. ರಾಷ್ಟ್ರೀಯ ಪ್ರಗತಿಗಾಗಿ ಸಂಶೋಧನೆ, ನಾವೀನ್ಯತೆ ಮತ್ತು ಪ್ರತಿಭೆಗಳ ಅಭಿವೃದ್ಧಿಗಾಗಿ ವೇಗವರ್ಧಕ ಪಾಲುದಾರಿಕೆಗಳನ್ನು ಬೆಳೆಸಲು ಮಾಹೆ ಬದ್ಧವಾಗಿದೆ ಎಂದು ಅವರು ಹೇಳಿದರು.
ಈ ಮೈಲಿಗಲ್ಲು ಬಲವಾದ, ಭವಿಷ್ಯಕ್ಕೆ ಸಿದ್ಧವಾಗಿರುವ ಉದ್ಯಮ ಸಂಪರ್ಕಗಳನ್ನು ನಿರ್ಮಿಸಲು ಮತ್ತು ಭಾರತದ ನಾವೀನ್ಯತೆ ಪರಿಸರ ವ್ಯವಸ್ಥೆಗೆ ಅರ್ಥಪೂರ್ಣವಾಗಿ ಕೊಡುಗೆ ನೀಡಲು ಮಾಹೆಯ ನಿರಂತರ ಪ್ರಯತ್ನಗಳನ್ನು ಬಲಪಡಿಸುತ್ತದೆ.








