- ತನ್ನ ಅತ್ಯಂತ ಶಕ್ತಿಶಾಲಿ ಟಿಪ್ಪರ್, ಪ್ರೈಮಾ 3540.K ಅನ್ನು ಬಿಡುಗಡೆ ಮಾಡಿದೆ; ಆಳವಾದ ಗಣಿಗಾರಿಕೆ ವಿಭಾಗಕ್ಕೆ ತನ್ನ ಪ್ರವೇಶವನ್ನು ಗುರುತಿಸುತ್ತದೆ
- ವಿಶ್ವಾಸಾರ್ಹ, ಆರ್ಥಿಕ ಮತ್ತು ಹೆಚ್ಚಿನ ಸಮಯದ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾದ ಸುಧಾರಿತ ಸಮುಚ್ಚಯಗಳನ್ನು ಪ್ರದರ್ಶಿಸುತ್ತದೆ
ಬೆಂಗಳೂರು, 9 ಡಿಸೆಂಬರ್ 2025: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಸಂಸ್ಥೆಯಾಗಿರು ಟಾಟಾ ಮೋಟಾರ್ಸ್, ದಕ್ಷಿಣ ಏಷ್ಯಾದ ಅತಿ ದೊಡ್ಡ ನಿರ್ಮಾಣ ಸಲಕರಣೆ ಪ್ರದರ್ಶನ ಎಕ್ಸ್ ಕಾನ್ 2025ರಲ್ಲಿ ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಮೂಲಸೌಕರ್ಯ ಮತ್ತು ನಿರ್ಮಾಣ ಕ್ಷೇತ್ರಕ್ಕೆ ನೆರವಾಗುವ ತನ್ನ ವಿವಿಧ ರೀತಿಯ ಅತ್ಯಾಧುನಿಕ ಉತ್ಪನ್ನಗಳನ್ನು ಪ್ರದರ್ಶಿಸಿದೆ.
ಈ ಕಾರ್ಯಕ್ರಮದಲ್ಲಿ ‘ಪ್ರೊಡಕ್ಟಿವಿಟಿ ಅನ್‌ಲೀಷ್ಡ್’ ಎಂಬ ಥೀಮ್ ಅಡಿಯಲ್ಲಿ ಕಂಪನಿಯು ಕಾರ್ಯಾಚರಣೆ ದಕ್ಷತೆ ಮತ್ತು ಲಾಭವನ್ನು ಹೆಚ್ಚಿಸುವ, ಕಠಿಣ ಕೆಲಸಕ್ಕೆ ಸಿದ್ಧವಾದ ಭವಿಷ್ಯದ ವಾಹನಗಳನ್ನು ಪರಿಚಯಿಸಿದೆ. ಅದರಲ್ಲೂ ಪ್ರಮುಖವಾಗಿ ಈ ಸಂದರ್ಭದಲ್ಲಿ ಟಾಟಾ ಮೋಟಾರ್ಸ್ ನ ಅತ್ಯಂತ ಶಕ್ತಿಶಾಲಿ ಟಿಪ್ಪರ್ ಆಗಿರುವ ಪ್ರೈಮಾ 3540.ಕೆ ಆಟೋಶಿಫ್ಟ್ ಅನ್ನು ಬಿಡುಗಡೆ ಮಾಡಲಾಗಿದೆ. ಗಣಿಗಾರಿಕೆ ವಿಭಾಗಕ್ಕಾಗಿಯೇ ಈ ಟಿಪ್ಪರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದರೊಂದಿಗೆ ಎಲೆಕ್ಟ್ರಿಕ್ ಪ್ರೈಮಾ ಇ.28ಕೆ ಮತ್ತು ಭಾರತದ ಮೊದಲ ಫ್ಯಾಕ್ಟರಿ-ಫಿಟ್ಟೆಡ್ ಸಿಎನ್‌ಜಿ ಟಿಪ್ಪರ್ ಸಿಗ್ನಾ 2820.ಟಿಕೆ ಸಿಎನ್‌ಜಿ ವಾಹನಗಳು ಬಿಡುಗಡೆಯಾಗಿದೆ. ಇದರ ಜೊತೆಗೆ ಕೈಗಾರಿಕಾ ಎಂಜಿನ್ ಗಳು, ಆಕ್ಸಲ್ ಗಳು, ಜೆನ್‌ಸೆಟ್ ಗಳಂತಹ ವಿವಿಧ ರೀತಿಯ ಸಮಗ್ರ ಘಟಕಗಳನ್ನು ಪ್ರದರ್ಶನ ಮಾಡಲಾಗಿದ್ದು, ಇದು ನಾವೀನ್ಯತೆ ಮತ್ತು ಸುಸ್ಥಿರತೆ ಕಡೆಗಿನ ಟಾಟಾ ಮೋಟಾರ್ಸ್ ನ ಬದ್ಧತೆಯನ್ನು ಸಾರಿದೆ.
*ಎಕ್ಸ್ ಕಾನ್ 2025ರಲ್ಲಿ ವಾಣಿಜ್ಯ ವಾಹನಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಟಾಟಾ ಮೋಟಾರ್ಸ್ ಲಿಮಿಟೆಡ್ ನ ಉಪಾಧ್ಯಕ್ಷರು ಮತ್ತು ಟ್ರಕ್ ವಿಭಾಗದ ವ್ಯವಹಾರ ಮುಖ್ಯಸ್ಥರಾದ ಶ್ರೀ ರಾಜೇಶ್ ಕೌಲ್* ಅವರು, “ಎಕ್ಸ್ ಕಾನ್ ಕಾರ್ಯಕ್ರಮವು ಟಾಟಾ ಮೋಟಾರ್ಸ್ ಗೆ ತನ್ನ ತಾಂತ್ರಿಕ ಪ್ರಗತಿ ಮತ್ತು ಗ್ರಾಹಕ ಕೇಂದ್ರಿತ ಉತ್ಪನ್ನಗಳನ್ನು ಪ್ರದರ್ಶಿಸುವ ಅತ್ಯಂತ ಪ್ರಮುಖ ವೇದಿಕೆಯಾಗಿದೆ. ದೇಶದಲ್ಲಿ ಮೂಲಸೌಕರ್ಯ ಕ್ಷೇತ್ರವು ಭಾರಿ ಬೆಳವಣಿಗೆ ಹೊಂದುತ್ತಿರುವ ಈ ವೇಳೆಯಲ್ಲಿ ಗ್ರಾಹಕರು ಕಾರ್ಯದಕ್ಷತೆ ಮತ್ತು ಲಾಭವನ್ನು ಹೆಚ್ಚಿಸುವಗ ಅತ್ಯಂತ ವಿಶ್ವಾಸಾರ್ಹ, ಹೆಚ್ಚು ಉತ್ಪಾದಕತೆಗೆ ಅನುವು ಮಾಡಿಕೊಡುವ ವಾಹನಗಳನ್ನು ಬಯಸುತ್ತಾರೆ. ಆ ಹಿನ್ನೆಲೆಯಲ್ಲಿ ನಾವು ನಮ್ಮ ಪ್ರಮುಖ ಪ್ರೈಮಾ 3540.ಕೆ ಟಿಪ್ಪರ್ ಅನ್ನು ಬಿಡುಗಡೆ ಮಾಡಿದ್ದು, ಈ ಮೂಲಕ ಅತ್ಯಂತ ಕಠಿಣ ಸ್ಥಿತಿಗಳಲ್ಲಿ ಕಾರ್ಯನಿರ್ವಹಿಸುವ ವಾಹನವನ್ನು ಒದಗಿಸಿ ಗಣಿಗಾರಿಕಾ ಕ್ಷೇತ್ರಕ್ಕೆ ನಾವು ಪ್ರವೇಶಿಸುತ್ತಿದ್ದೇವೆ. ಸುಸ್ಥಿರ ಸಾರಿಗೆ ಕಡೆಗಿನ ನಮ್ಮ ಬದ್ಧತೆಯನ್ನು ಮುಂದುವರಿಸುತ್ತಾ, ನಮ್ಮ ಮೊದಲ ಎಲೆಕ್ಟ್ರಿಕ್ ವಿದ್ಯುತ್ ಟಿಪ್ಪರ್ ಪ್ರೈಮಾ ಇ.28ಕೆ ಅನ್ನು ಕೂಡ ಬಿಡುಗಡೆ ಮಾಡಿದ್ದೇವೆ. ಇದು ಶೂನ್ಯ ಇಂಗಾಲ ಹೊರಸೂಸುವಿಕೆಯೊಂದಿಗೆ ವಿದ್ಯುತ್ ಮತ್ತು ಉತ್ಪಾದಕತೆಯಲ್ಲಿ ಯಾವುದೇ ರಾಜಿ ಮಾಡದೆ ಕಾರ್ಯನಿರ್ವಹಿಸುತ್ತದೆ” ಎಂದು ಹೇಳಿದರು.
ಟಾಟಾ ಮೋಟಾರ್ಸ್ ಸಂಸ್ಥೆಯು ತನ್ನ ಬಲಿಷ್ಠ ಎಂಜಿನಿಯರಿಂಗ್ ಮತ್ತು ಕಠಿಣ ಪರೀಕ್ಷೆಗಳ ಬಳಿಕ ಸಿದ್ಧಗೊಂಡ ತನ್ನ ವಿಶಾಲ ಘಟಕಗಳ ಶ್ರೇಣಿಯನ್ನು ಪ್ರದರ್ಶಿಸಿದೆ. ದೀರ್ಘಕಾಲಿಕ, ವಿಶ್ವಾಸಾರ್ಹ ಕಾರ್ಯಕ್ಷಮತೆಗಾಗಿ ವಿನ್ಯಾಸಗೊಂಡ ಈ ಘಟಕಗಳು ನಿರ್ಮಾಣ ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲಿನ ವಿವಿಧ ಯಂತ್ರೋಪಕರಣಗಳಿಗೆ ಬೆಂಬಲ ನೀಡುತ್ತವೆ.
ವಿವಿಧ ಘಟಕಗಳ (ಅಗ್ರಿಗೇಟ್ಸ್) ಶ್ರೇಣಿಯನ್ನು ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್ ಲಿಮಿಟೆಡ್ ನ ಸ್ಪೇರ್ಸ್ ಮತ್ತು ನಾನ್- ವೆಹಿಕಲ್ ವ್ಯವಹಾರ ಮುಖ್ಯಸ್ಥ ಶ್ರೀ ವಿಕ್ರಮ್ ಅಗ್ರವಾಲ್* ಅವರು, “ಎಕ್ಸ್ ಕಾನ್ 2025ರಲ್ಲಿ ನಮ್ಮ ವಿವಿಧ ಘಟಕಗಳ ಪ್ರದರ್ಶನ ಮಾಡಿದ್ದು, ಈ ಪ್ರದರ್ಶನವು ಕಠಿಣ, ವಿಶ್ವಾಸಾರ್ಹ ಮತ್ತು ಗ್ರಾಹಕ ಕೇಂದ್ರಿತ ಉತ್ಪನ್ನಗಳನ್ನು ನೀಡುವ ಟಾಟಾ ಮೋಟಾರ್ಸ್ ನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಉತ್ಪನ್ನಗಳು ನಿರ್ಮಾಣ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಸುಗಮ ಕಾರ್ಯಾಚರಣೆಗೆ ಸಹಾಯ ಮಾಡುತ್ತದೆ. ಹೊಸ 15 ಕೆವಿಎ ಮತ್ತು 35 ಕೆವಿಎ ಜೆನ್ ಸೆಟ್ ಗಳು ಹಾಗೂ ವಿಸ್ತೃತ ಸಿಇವಿ ಬಿಎಸ್ V ಕೈಗಾರಿಕಾ ಎಂಜಿನ್ ಗಳ ಶ್ರೇಣಿಯೊಂದಿಗೆ ನಾವು ಉತ್ತಮ ಕಾರ್ಯಕ್ಷಮತೆ, ಕಾರ್ಯನಿರ್ವಹಣಾ ಅವಧಿ ಮತ್ತು ಕಾರ್ಯಾಚರಣೆಯ ದಕ್ಷತೆಯ ಮೇಲೆ ಹೆಚ್ಚಿನ ಗಮನ ಹರಿಸಿದ್ದೇವೆ. ದಕ್ಷ, ಉತ್ಪಾದಕ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಉತ್ಪನ್ನಗಳ ಮೂಲಕ ನಾವು ನಿರಂತರವಾಗಿ ನಮ್ಮ ಉತ್ಪನ್ನ ವಿಭಾಗವನ್ನು ಬಲಪಡಿಸುತ್ತಾ ಹೋಗುತ್ತೇವೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡ ಟಾಟಾ ಮೋಟಾರ್ಸ್ ನ ಉತ್ಪನ್ನಗಳು
ವಾಣಿಜ್ಯ ವಾಹನಗಳು
ಟಾಟಾ ಪ್ರೈಮಾ 3540.ಕೆ ಆಟೋಶಿಫ್ಟ್:* ಕಮಿನ್ಸ್ 8.5ಲೀ ಎಂಜಿನ್ ನಿಂದ ಚಾಲಿತ, 375HP ಪವರ್ ಮತ್ತು 1800ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಈ ಟಿಪ್ಪರ್ ಆಳವಾದ ಗಣಿಗಾರಿಕೆ ವಿನ್ಯಾಸಗೊಂಡಿದೆ. ಅತ್ಯುತ್ತಮ ಇಂಧನ ದಕ್ಷತೆ ಮತ್ತು ವಿಶ್ವಾಸಾರ್ಹತೆ ಒದಗಿಸುತ್ತದೆ. 12 ಸ್ಪೀಡ್ ಎಎಂಟಿ, ಪ್ರೀಮಿಯಂ ಕ್ಯಾಬಿನ್ ಮತ್ತು ಸುಧಾರಿತ ಸುರಕ್ಷತಾ ಫೀಚರ್ ಗಳನ್ನು ಹೊಂದಿದ್ದು, ಕಠಿಣ ಹೆವಿ-ಹಾಲೇಜ್ ಕೆಲಸಗಳಿಗೆ ಸೂಕ್ತವಾಗಿದೆ.
· ಪ್ರೈಮಾ ಇ.28ಕೆ:* 28 ಟನ್ ಬ್ಯಾಟರಿ-ಎಲೆಕ್ಟ್ರಿಕ್ ಟಿಪ್ಪರ್ ಇದಾಗಿದ್ದು, ಗಣಿಗಾರಿಕೆ, ಖನಿಜ ಸಾಗಾಟ, ಬೃಹತ್ ಸರಕು ಸಾಗಾಟ, ಬಂದರು ಕಾರ್ಯಗಳಿಗೆ ಸೂಕ್ತವಾಗಿದೆ. ಶೂನ್ಯ ಇಂಗಾಲ ಹೊರಸೂಸುವಿಕೆ ಸಾಮರ್ಥ್ಯದೊಂದಿಗೆ ಹೆಚ್ಚು ಕಾರ್ಯನಿರ್ವಹಣಾ ಅವಧಿ ಒದಗಿಸುತ್ತದೆ.
ಸಿಗ್ನಾ 2820.ಟಿಕೆ ಸಿಎನ್‌ಜಿ:* 28-ಟನ್ ವಿಭಾಗದಲ್ಲಿ ಭಾರತದ ಮೊದಲ ಕಾರ್ಖಾನೆ-ಅಳವಡಿಸಲಾದ CNG ಟಿಪ್ಪರ್, ಕಡಿಮೆ TCO ಮತ್ತು ಹೆಚ್ಚಿನ ಲಾಭದಾಯಕತೆಯನ್ನು ನೀಡುತ್ತದೆ, ಸುಸ್ಥಿರ ನಿರ್ಮಾಣ ಕಾರ್ಯಾಚರಣೆಗಳಿಗೆ ಸೂಕ್ತವಾಗಿದೆ.
ಸಿಗ್ನಾ 4832.ಟಿಕೆ:* ದೇಶದ ಮೊದಲ 48 ಟನ್, 5-ಆಕ್ಸಲ್ ಟಿಪ್ಪರ್ ಇದಾಗಿದೆ. 32m³ ಲೋಡ್ ಬಾಡಿ ಹೊಂದಿದ್ದು, ಕಲ್ಲಿದ್ದಲು ಸಾಗಾಟಕ್ಕೆ ವಿನ್ಯಾಸಗೊಂಡಿದೆ ಮತ್ತು ಪ್ರತಿ ಪ್ರಯಾಣದಲ್ಲಿ ಅತಿ ಹೆಚ್ಚು ಸರಕು ಸಾಗಿಸುವ ಸಾಮರ್ಥ್ಯ ಹೊಂದಿದೆ.
ಪ್ರೈಮಾ 3532.ಟಿಕೆ: ತನ್ನ ವರ್ಗದಲ್ಲಿ ಅತಿ ದೊಡ್ಡ 26m³ ಘನ ಮೀಟರ್ ಲೋಡ್ ಬಾಡಿ ಹೊಂದಿರುವ ವಾಹನ ಇದಾಗಿದ್ದು, ನಿರ್ಮಾಣ ಘಟಕಗಳ ಮೇಲ್ಮೈ ಸಾಗಾಟಕ್ಕೆ ಉತ್ತಮವಾಗಿದೆ.·
ಪ್ರೈಮಾ ಇ.55ಎಸ್: ಸರಕು ಸಾಗಾಣಿಕಾ ಕಾರ್ಯಗಳನ್ನು ಕಾರ್ಬನ್- ರಹಿತಗೊಳಿಸಲು ಮಾಡಿದ ಬ್ಯಾಟರಿ- ಎಲೆಕ್ಟ್ರಿಕ್ ಪ್ರೈಮ್ ಮೂವರ್ ಇದಾಗಿದ್ದು, 350 ಕಿ.ಮೀ. ವರೆಗೆ ರೇಂಜ್ ಒದಗಿಸುತ್ತದೆ. 3 ಸ್ಪೀಡ್ ಇ- ಆಕ್ಸಲ್ ಮತ್ತು ಟ್ರಾಕ್ಷನ್ ಮೋಟಾರ್ ನೊಂದಿಗೆ ಉತ್ತಮ ಗ್ರೇಡೆಬಿಲಿಟಿ ಮತ್ತು ಕಾರ್ಯಕ್ಷಮತೆ ಒದಗಿಸುತ್ತದೆ.
ಅಗ್ರಿಗೇಟ್ ಗಳು ಮತ್ತು ಜೆನ್‌ಸೆಟ್‌ಗಳು

ಟಾಟಾ ಮೋಟಾರ್ಸ್ ಜೆನ್ ಸೆಟ್ ಗಳು: ದಕ್ಷ ಎಂಜಿನ್ ಗಳ ಮೇಲೆ ನಿರ್ಮಿತವಾದ ಹೊಸ 15 ಕೆವಿಎ ಮತ್ತು 35 ಕೆವಿಎ ಜೆನ್‌ಸೆಟ್‌ಗಳನ್ನು ಪರಿಚಯಿಸಲಾಗಿದ್ದು, ಪರೀಕ್ಷಿತ 125 ಕೆವಿಎ ಆಯ್ಕೆಯೊಂದಿಗೆ ವಿವಿಧ ಕೆಲಸಗಳಿಗೆ ನೆರವಾಗಲಿದೆ.
ಟಾಟಾ ಮೋಟಾರ್ಸ್ ಕೈಗಾರಿಕಾ ಎಂಜಿನ್‌ಗಳು: ಬ್ಯಾಕ್‌ಹೋ ಲೋಡರ್, ಸೆಲ್ಫ್- ಲೋಡಿಂಗ್ ಕಾಂಕ್ರೀಟ್ ಮಿಕ್ಸರ್ ಮತ್ತಿತರ ನಿರ್ಮಾಣ ಸಾಧನಗಳಿಗಾಗಿ ವಿನ್ಯಾಸಗೊಂಡ CEV BS V ಅನುಗುಣವಾದ ಎಂಜಿನ್ ಆಗಿದೆ.
ಟಾಟಾ ಮೋಟಾರ್ಸ್ ಲೈವ್ ಆಕ್ಸಲ್‌ಗಳು: ದೀರ್ಘ ಬಾಳಿಕೆ, ಹೆಚ್ಚು ತೂಕ ತಾಳುವ ಸಾಮರ್ಥ್ಯ ಮತ್ತು ಕಠಿಣ ಕೆಲಸಗಳಲ್ಲಿ ವಿಶ್ವಾಸಾರ್ಹ ಕಾರ್ಯಕ್ಷಮತೆ ಒದಗಿಸಲೆಂದೇ ವಿನ್ಯಾಸವಾಗಿರುವ ಉತ್ಪನ್ನವಿದು.
ಟಾಟಾ ಮೋಟಾರ್ಸ್ ಟ್ರೇಲರ್ ಆಕ್ಸಲ್ ಮತ್ತು ಘಟಕಗಳು: ಟ್ರೇಲರ್ ಆಕ್ಸಲ್, ಆಫ್ಟರ್- ಟ್ರೀಟ್‌ಮೆಂಟ್ ಮತ್ತು ಯೂರಿಯಾ ವ್ಯವಸ್ಥೆಗಳನ್ನೊಳಗೊಂಡ ಬಲಿಷ್ಠ ಶ್ರೇಣಿ ಇದಾಗಿದ್ದು, ಪ್ರೈಮ್ ಮೂವರ್‌ಗಳೊಂದಿಗೆ ಸುಗಮ ಸಂಯೋಜನೆಗಾಗಿ ಸಿದ್ಧಪಡಿಸಲಾಗಿದೆ.

ಟಾಟಾ ಮೋಟಾರ್ಸ್ ನ ವಾಣಿಜ್ಯ ವಾಹನಗಳು ಸಂಪೂರ್ಣ ಸೇವಾ 2.0 ಯೋಜನೆಯಡಿ ಬಲಿಷ್ಠ ಮೌಲ್ಯವರ್ಧಿತ ಸೇವೆಗಳನ್ನು ಹೊಂದಿವೆ. ಈ ಯೋಜನೆಯು ಗ್ರಾಹಕರಿಗೆ ಹೆಚ್ಚು ಕಾರ್ಯನಿರ್ವಹಣಾ ಅವಧಿ ಮತ್ತು ಹೆಚ್ಚು ದಕ್ಷತೆಯನ್ನು ಒದಗಿಸುವ ಸಮಗ್ರ ಜೀವನ ಚಕ್ರ ನಿರ್ವಹಣಾ ಸೌಲಭ್ಯ ಒದಗಿಸುತ್ತದೆ. ಟಾಟಾ ಮೋಟಾರ್ಸ್‌ನ ಮುಂದಿನ ತಲೆಮಾರಿನ ಡಿಜಿಟಲ್ ವೇದಿಕೆಯಾದ ಫ್ಲೀಟ್ ಎಡ್ಜ್ ಇದಕ್ಕೆ ಪೂರಕವಾಗಿ ನೆರವಾಗಲಿದ್ದು, ಸ್ಮಾರ್ಟ್ ವಾಹನ ನಿರ್ವಹಣೆ, ಉತ್ತಮ ಕಾರ್ಯನಿರ್ವಹಣಾ ಅವಧಿ ಒದಗಿಸುತ್ತದೆ ಮತ್ತು ಕಡಿಮೆ ಮಾಲೀಕತ್ವ ವೆಚ್ಚ ನೀಡುತ್ತದೆ. ಜೊತೆಗೆ ಭಾರತದ ಅತಿ ವಿಶಾಲ ಸೇವಾ ಜಾಲದಿಂದ 24×7 ಸಹಾಯ ಲಭ್ಯವಾಗುತ್ತದೆ.







