ಕಾರ್ಕಳ :ಡಿಸೆಂಬರ್ 09:ಬ್ಲಾಕ್ ಕಾಂಗ್ರೆಸ್ ಕಾರ್ಕಳ ಮಾರ್ಗದರ್ಶನದಲ್ಲಿ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ಆಳ್ವಾಸ್ ಹೆಲ್ತ್ ಸೆಂಟರ್, ಆಳ್ವಾಸ್ ಆಯುರ್ವೇದ ಆಸ್ಪತ್ರೆ, ಆಳ್ವಾಸ್ ಪಿಸಿಯೋಥೆರಪಿ ಕಾಲೇಜು, ನೋವಾ ಐವಿಎಫ್ ಫರ್ಟಿಲಿಟಿ ಮಂಗಳೂರು ಹಾಗೂ ಪ್ರಸಾದ್ ನೇತ್ರಾಲಯದ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ದಿನಾಂಕ ಡಿಸೆಂಬರ್ 13 ಶನಿವಾರ ಬೆಳಿಗ್ಗೆ 9 ರಿಂದ1:30 ವರಗೆ ಕಾರ್ಕಳ ಬಿಲ್ಲವ ಸಂಘದ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಶಿಬಿರದಲ್ಲಿ ಗರ್ಭಕೋಶದ ಅರ್ಬುದ ಕಾಯಿಲೆ ತಪಾಸಣೆ, ಬಂಜೆತನ ತಪಾಸಣೆ, ವಿಶೇಷ ಫಿಜಿಯೋಥೆರಪಿ ಚಿಕಿತ್ಸೆ, ನೇತ್ರ ತಪಾಸಣೆ, ಇಸಿಜಿ, ರಕ್ತದಾನ, ರಕ್ತದಲ್ಲಿ ಸಕ್ಕರೆ ಅಂಶ ತಪಾಸಣೆ ಹಾಗೂ ಎಲ್ಲಾ ಸ್ರೀರೋಗ ಮತ್ತು ಪ್ರಸೂತಿ ಸಂಬಂಧಿಸಿದ ಸಮಸ್ಯೆಗಳಿಗೆ ಸಮಾಲೋಚನೆ ಮೊದಲಾದ ಸೇವೆಯನ್ನು ಉಚಿತವಾಗಿ ನಡೆಸಲಾಗುವುದು.
ತಜ್ಞ ವೈದ್ಯರುಗಳಾದ ಡಾ.ಹಾನಾ ಶೆಟ್ಟಿ, ಡಾ. ಶವೀಝ್ ಫೈಝಿ, ಡಾ.ಅರ್ಜುನ್ ಬಲ್ಲಾಳ್, ಡಾ.ಹರ್ಷಿತ್ ಜಿ.ಸಿ, ಡಾ.ಶ್ರಾವ್ಯ ಆಳ್ವಾ, ಡಾ.ಐಶ್ವರ್ಯ, ಡಾ.ಶ್ವೇತ ಸಿ. ಪೂಜಾರಿ, ಡಾ. ರೀನಝ್ ಬೇಗಂ ಮೊದಲಾದವರ ಸೇವೆಯು ಶಿಬಿರದ ಲಭ್ಯವಿರುತ್ತದೆ.
ಕಾರ್ಯಕ್ರಮವನ್ನು ಆಳ್ವಾಸ್ ಸಂಸ್ಥೆಯ ಡಾ. ಹಾನಾ ಶೆಟ್ಟಿ ಉದ್ಘಾಟಿಸಲಿದ್ದು ಕಾಂಗ್ರೆಸ್ ಮುಖಂಡರಾದ ಉದಯ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಲಿದ್ದಾರೆ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಶ್ರೀ ನಾರಾಯಣ ಗುರು ಅಭಿವೃದ್ಧಿ ಪ್ರಾಧಿಕಾರ ಅದ್ಯಕ್ಷರಾದ ಮಂಜುನಾಥ್ ಪೂಜಾರಿ, ಆಳ್ವಾಸ್ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ವಿನಯ್ ಆಳ್ವಾ, ಬ್ಲಾಕ್ ಅದ್ಯಕ್ಷರಾದ ಶುಭದರಾವ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜೋತಿ ಹೆಬ್ಬಾರ್ ಕಾರ್ಕಳ ಮಹಿಳಾ ಕಾಂಗ್ರೆಸ್ ಅದ್ಯಕ್ಷರಾದ ಭಾನು ಬಾಸ್ಕರ್ ಫೂಜಾರಿ ಹಾಗೂ ಪಕ್ಷದ ಹಿರಿಯ ಮುಂಡರುಗಳು ಭಾಗವಹಿಸಲಿದ್ದಾರೆ. ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದರಾವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








