ಕಾರ್ಕಳ:ಡಿಸೆಂಬರ್ 09:ಕರ್ನಾಟಕ ಸರಕಾರ , ಶಾಲಾ ಶಿಕ್ಷಣ ಸಂಸ್ಥೆ ಮತ್ತು ಸಾಕ್ಷರತಾ ಇಲಾಖೆ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಮತ್ತು ಸಮೂಹ ಸಂಪನ್ಮೂಲ ಕೇಂದ್ರ ಜಯಂತಿನಗರಶ್ರೀ ಮಹಾಲಿಂಗೇಶ್ವರ ಎಜ್ಯುಕೇಷನಲ್ ಟ್ರಸ್ಟ್(ರಿ) ನಕ್ರೆ ಶ್ರೀ ಮಹಾಲಿಂಗೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ನಕ್ರೆ , ಚೇತನ್ ಫ್ರೆಂಡ್ಸ್ ಕ್ಲಬ್ (ರಿ) ನಕ್ರೆ ಇದರ ಸಹಯೋಗದಲ್ಲಿ ಪ್ರತಿಭಾ ಕಾರಂಜಿ – ಕಲೋತ್ಸವ-2025-26 ಸಾಲಿನ ಕಾರ್ಯಕ್ರಮವು ಶ್ರೀ ಮಹಾಲಿಂಗೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ನಕ್ರೆ ಇಲ್ಲಿ ದಿನಾಂಕ 8/12/2025ರ ಸೋಮವಾರದಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಉಷಾ, ಅಧ್ಯಕ್ಷರು ಗ್ರಾಮ ಪಂಚಾಯತ್ ಕುಕ್ಕುಂದೂರು, ಶ್ರೀಯುತ ವೈ ಸುಂದರ ಹೆಗ್ಡೆ ನಿವೃತ್ತ ಮುಖ್ಯ ಶಿಕ್ಷಕರು ಶ್ರೀ ಮಹಾಲಿಂಗೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ನಕ್ರೆ ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಸಂದೇಶವನ್ನು ನೀಡಿದರು.
ಶ್ರೀಯುತ ಉಮೇಶ್ ಕೆ.ಎಸ್ ಕ್ಷೇತ್ರ ಸಂಪನ್ಮೂಲ ವ್ಯಕ್ತಿ, ಸಂಪನ್ಮೂಲ ಕೇಂದ್ರ ಕಾರ್ಕಳ ಇವರು ಕಾರ್ಯಕ್ರಮದ ಕುರಿತಾಗಿ ಪ್ರಸ್ತಾವನೆಗೈದರು ; ಶ್ರೀಮತಿ ಪ್ರೇಮಾಕುಮಾರಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜಯಂತಿನಗರ ಕ್ಲಸ್ಟರ್ ಇವರು ಸ್ಪರ್ಧೆಗಳ ಕುರಿತಾದ ವಿವರವನ್ನು ಸ್ಪರ್ಧಾಳುಗಳಿಗೆ ವಿವರಿಸಿದರು.
ವೇದಿಕೆಯಲ್ಲಿ ಎನ್ ಪ್ರಕಾಶ್ ಹೆಗ್ಡೆ ಸಂಚಾಲಕರು ಶ್ರೀ ಮಹಾಲಿಂಗೇಶ್ವರ ಎಜ್ಯುಕೇಷನಲ್ ಟ್ರಸ್ಟ್ (ರಿ) ನಕ್ರೆ, ಶ್ರೀಮತಿ ಸುನೀತಾ ಎಸ್.ಡಿ.ಎಂ.ಸಿ ಅಧ್ಯಕ್ಷರು ಶ್ರೀ ಮ.ಅ..ಹಿ.ಪ್ರಾ ಶಾಲೆ ನಕ್ರೆ. ಶ್ರೀಯುತ ಆಂತೋನಿ ಡಿಸೋಜ ಗ್ರಾಮ ಪಂಚಾಯತ್ ಸದಸ್ಯರು, ಶ್ರೀ ಮಧುಕರ್ ಸುವರ್ಣ ಶಮಾ ಎಂಟರ್ ಪ್ರೈಸಸ್ , ಶ್ರೀಯುತ ಅರುಣ ಕುಮಾರ್ ಶೆಟ್ಟಿ ಗುರುವೈನ್ಸ್ ನಕ್ರೆ, ಶ್ರೀಮತಿ ಕ್ಯಾಥರಿನಾ ಫೆರ್ನಾಂಡಿಸ್ ಗಾಮ ಪಂಚಾಯತ್ ಸದಸ್ಯರು, ಶ್ರೀಯುತ ರಮೇಶ್ ಪೂಜಾರಿ ಗ್ರಾಮ ಪಂಚಾಯತ್ ಸದಸ್ಯರು , ಶ್ರೀಯುತ ಆನಂದ ಪೂಜಾರಿ ನಿರ್ದೇಶಕರು ಟೀಚರ್ಸ್ ಕೊ- ಅಪರೇಟಿವ್ ಸೊಸೈಟಿ ಉಡುಪಿ, ಶ್ರೀಮತಿ ರತಿ ಶೆಟ್ಟಿ ಮೇಲ್ವಿಚಾರಕರು ಮಹಿಳಾ ಮತ್ತು ಮಕ್ಕಳ ಇಲಾಖೆ, ಕಾರ್ಕಳ, ಶ್ರೀಯುತ ಯೋಗೀಶ್ ಕಿಣಿ, ಶ್ರೀಯುತ ಸಂತೋಷ್ ಕುಮಾರ್ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಶ್ರೀಮತಿ ಶಶಿಕಲಾ ಸಂತೋಷ್ ಅಧ್ಷಕ್ಷತೆಯನ್ನು ವಹಿಸಿದ್ದರು, ಶ್ರಿಯುತ ಜಾರ್ಜ್ ಕ್ಯಾಸ್ಟಲಿನೋ ರಾಷ್ಟ್ರಪ್ರಶಸ್ತಿ ಪುರಸ್ಕೃತ ವಿಶ್ರಾಂತ ಮುಖ್ಯಶಿಕ್ಷಕರು ಶ್ರೀ ಮಹಾಲಿಂಗೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ನಕ್ರೆ ಇವರು ಸ್ಪರ್ಧೆಯಲ್ಲಿ ವಿಜೇತ ರಾದ ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು, ಶ್ರೀಯುತ ಸಂಪತ್ ಸುವರ್ಣ ಅಧ್ಯಕ್ಷರು ಚೇತನ್ ಫ್ರೆಂಡ್ಸ್ ಕ್ಲಬ್ (ರಿ) ನಕ್ರೆ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶ್ರೀಮತಿ ಪ್ರೀತಿವಾತ್ಸಲ್ಯ ಶ್ರೀ ಮ.ಅ.ಹಿ.ಪ್ರಾ.ಶಾಲೆ ನಕ್ರೆ ಇವರು ಸ್ವಾಗತಿಸಿದರು, ಶ್ರೀಯುತ ಶಂಕರ್ ಪೂಜಾರಿ , ಶ್ರೀಮತಿ ಶಶಿಮಣಿ ಸಂಪತ್ ಸುವರ್ಣ ಕಾರ್ಯಕ್ರಮವನ್ನು ನಿರೂಪಿಸಿದರು.
ಶ್ರೀಮತಿ ವರ್ಷಿಣಿ ,ಶ್ರೀಮತಿ ಯೋಗಿತಾ ಧನ್ಯವಾದಗೈದರು ಅಂದಿನ ಕಾರ್ಯಕ್ರಮವು ಬಹುಮಾನ ವಿತರಣೆಯೊಂದಿಗೆ ಸಂಪನ್ನಗೊಂಡಿತು









