ಕಾರ್ಕಳ:ಡಿಸೆಂಬರ್ 08:ಶ್ರೀ ಕ್ಷೇತ್ರ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ದಿನಾಂಕ ಡಿಸೆಂಬರ್ 7 ರಂದು ರಾತ್ರಿ ಘಂಟೆ 8 ಸರಿಯಾಗಿ ಆನೆಕೆರೆ ವೃತ್ತದಿಂದ ಭವ್ಯ ಮೆರವಣಿಗೆ ಮೂಲಕ ನೂತನ ಚಂದ್ರಮಂಡಲ ರಥವನ್ನು ಬರಮಾಡಿ ಕೊಳ್ಳಲಾಯಿತು.


ದೇವಸ್ಥಾನದ ಆಡಳಿತ ಮೊಕ್ತೇಸರರು, ಅರ್ಚಕರು ಆಡಳಿತ ಮಂಡಳಿ ಅಧ್ಯಕ್ಷರು, ಸಮಿತಿಯ ಸರ್ವ ಸದಸ್ಯರು ಭಜಕರು ಭಕ್ತಾದಿಗಳು ಮೆರವಣಿಗೆಯಲ್ಲಿ ಭಾಗವಹಿಸಿದರು.







