ಮಣಿಪಾಲ್ 24 ನವೆಂಬರ್ 2025: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆಯ ಕುಲಾಧಿಪತಿ ಡಾ. ರಾಮದಾಸ್ ಎಂ, ಪೈ ಅವರ 90ನೇ ಜನ್ಮದಿನದ ಪ್ರಯುಕ್ತ ಸ್ಮಾರಕ ಅಂಚೆ ಲಕೋಟೆಯನ್ನು ಮಾಹೆಯ 33ನೇ ಘಟಿಕೋತ್ಸವದಲ್ಲಿ ಬಿಡುಗಡೆಗೊಳಿಸಲಾಯಿತು.
ವಿಶ್ವದ ಉದ್ದಗಲಕ್ಕೂ ಮಾಹೆಯನ್ನು ಪರಿಚಯಿಸುವಲ್ಲಿ ದೂರದೃಷ್ಟಿಯುಳ್ಳ ನಾಯಕರಾದ ಡಾ. ಪೈ ಅವರ ಅವರ ಕೊಡುಗೆ ಈ ಮೂಲಕ ಅಂಚೆ ಇಲಾಖೆ ಗೌರವ ಸಲ್ಲಿಸಿದೆ.
ಮಣಿಪಾಲದ ಕೆ.ಎಂ.ಸಿ. ಗ್ರೀನ್ಸ್‌ನಲ್ಲಿ ನಡೆದ ಘಟಿಕೋತ್ಸವ ಸಮಾರಂಭದ ಮೊದಲ ದಿನದಂದು ಈ ಸ್ಮರಣೀಯ ಕಾರ್ಯಕ್ರಮ ಜರುಗಿತು.
ಸಮಾರಂಭದಲ್ಲಿ ವಿಶ್ವವಿದ್ಯಾಲಯದ ಹಿರಿಯ ನಾಯಕತ್ವ, ಅತಿಥಿಗಳು, ಅಧ್ಯಾಪಕರು, ಪದವೀಧರರು ಹಾಗೂ ಅವರ ಕುಟುಂಬದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗಳನ್ನು ಸಂಭ್ರಮಿಸುವ ಜೊತೆಗೆ ಕುಲಾಧಿಪತಿ ಅವರ ಅಸಾಧಾರಣ ಪರಂಪರೆಯನ್ನು ಈ ವೇಳೆ ಸ್ಮರಿಸಲಾಯಿತು.
ಈ ವಿಶೇಷ ಸ್ಮಾರಕ ಅಂಚೆ ಲಕೋಟೆಯನ್ನು ಉಡುಪಿ ವಿಭಾಗದ ಅಂಚೆ ಅಧೀಕ್ಷಕರಾದ ಶ್ರೀ. ರಮೇಶ್ ಪ್ರಭು ಅವರು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಾಹೆ ಟ್ರಸ್ಟ್‌ನ ಟ್ರಸ್ಟಿ ಶ್ರೀಮತಿ ವಸಂತಿ ಆರ್. ಪೈ, ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಮತ್ತು ಇತರ ಗಣ್ಯರು ಭಾಗಿಯಾಗಿದ್ದರು.
ಶಿಕ್ಷಣ, ಆರೋಗ್ಯ ಮತ್ತು ಸಮುದಾಯ ಅಭಿವೃದ್ಧಿಗಾಗಿ ಡಾ. ರಾಮದಾಸ್ ಪೈ ಅವರು ನೀಡಿರುವ ಅನನ್ಯ ಕೊಡುಗೆಯನ್ನು ಗೌರವಿಸಲು ಈ ಸ್ಮಾರಕ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು.
ಅನಾರೋಗ್ಯ, ಅನಕ್ಷರತೆ ಮತ್ತು ಬಡತನವನ್ನು ನಿವಾರಿಸುವ ಅವರ ಗುರಿಯು ಮಣಿಪಾಲದ ಬೆಳವಣಿಗೆಗೆ ಬುನಾದಿ ಹಾಕಿತು. ಡಾ. ರಾಮದಾಸ್ ಎಂ ಪೈ ಅವರ ನಾಯಕತ್ವದಲ್ಲಿ ಮಾಹೆಯು ಜಾಗತಿಕವಾಗಿ ಮಾನ್ಯತೆ ಪಡೆದ ಸಂಸ್ಥೆಯಾಗಿ ಬೆಳೆದಿದೆ. ಇದರ ಫಲವಾಗಿ, 2020ರಲ್ಲಿ ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆ ಎನ್ನುವ ಪ್ರತಿಷ್ಠಿತ ಗೌರವ ಸೇರಿದಂತೆ ಅನೇಕ ಪುರಸ್ಕಾರಗಳನ್ನು ಸಂಸ್ಥೆಯು ಗಳಿಸಿತು.
ಅಂಚೆ ಲಕೋಟೆ ಬಿಡುಗಡೆ ಮಾಡಿ ಮಾತನಾಡಿದ ಉಡುಪಿ ವಿಭಾಗದ ಅಂಚೆ ಅಧೀಕ್ಷಕರಾದ ಶ್ರೀ. ರಮೇಶ್ ಪ್ರಭು ಅವರು, “ಮಣಿಪಾಲದ ಮಹಾನ್ ವ್ಯಕ್ತಿತ್ವ ಮತ್ತು ಸುಧಾರಕರ 90ನೇ ಜನ್ಮ ದಿನಾಚರಣೆ ಸ್ಮರಣೆಯನ್ನು ಅಂಚೆ ಲಕೋಟೆ ಬಿಡುಗಡೆ ಮಾಡುವ ಮೂಲಕ ಸಂಭ್ರಮಿಸಿದ್ದು ನಮ್ಮ ಸೌಭಾಗ್ಯ. ಡಾ. ರಾಮದಾಸ್ ಎಂ ಪೈ ಅವರ ಕೊಡುಗೆಗಳಿಂದಾಗಿ ಮಣಿಪಾಲ ಮತ್ತು ಮಾಹೆ ರಾಷ್ಟ್ರೀಯ ಹಾಗೂ ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಿದೆ. ಈ ಐತಿಹಾಸಿಕ ಕ್ಷಣದ ಭಾಗವಾಗಿರುವುದು ಹೆಮ್ಮೆ ತಂದಿದೆ” ಎಂದು ಅಭಿಪ್ರಾಯಪಟ್ಟರು.

ಈ ಅಂಚೆ ಲಕೋಟೆ ಬಿಡುಗಡೆಯು, ಪರಂಪರೆಯನ್ನು ಗೌರವಿಸುವ, ಸಂಸ್ಥೆಯ ಅಸ್ಮಿತೆಯನ್ನು ಅಭಿವೃದ್ಧಿಪಡಿಸುವ ಹಾಗೂ ದೇಶಿಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತನ್ನ ಮಹತ್ವವನ್ನು ಹೆಚ್ಚಿಸುವ ಬಗ್ಗೆ ಮಾಹೆ ಹೊಂದಿರುವ ಬದ್ಧತೆಯನ್ನು ಒತ್ತಿಹೇಳುತ್ತದೆ. ಈ ಕಾರ್ಯಕ್ರಮವು ಸಂಸ್ಥೆಯ ಬೆಳವಣಿಗೆಗೆ ನಿರಂತರ ಪ್ರೇರಣೆಯಾಗಿರುವ ಉತ್ತಮ ಮೌಲ್ಯಗಳು, ಪರಂಪರೆ ಮತ್ತು ಶೇಷ್ಠ ನಾಯತ್ವದ ಸಂಕೇತವಾಗಿದೆ.
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಬಗ್ಗೆ:ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆಯಾಗಿದೆ. ಮಾಹೆ ಆರೋಗ್ಯ ವಿಜ್ಞಾನ (HS), ಮ್ಯಾನೇಜ್‌ಮೆಂಟ್, ಕಾನೂನು, ಮಾನವಿಕ ಮತ್ತು ಸಮಾಜ ವಿಜ್ಞಾನ (MLHS), ಮತ್ತು ತಂತ್ರಜ್ಞಾನ ಮತ್ತು ವಿಜ್ಞಾನ (T&S) ಸ್ಟ್ರೀಮ್‌ಗಳಾದ್ಯಂತ ಮಣಿಪಾಲ, ಮಂಗಳೂರು, ಬೆಂಗಳೂರು, ಜೆಮ್‌ಷೆಡ್‌ಪುರ ಮತ್ತು ದುಬೈನಲ್ಲಿರುವ ತನ್ನ ಘಟಕ ಘಟಕಗಳ ಮೂಲಕ 400 ವಿಶೇಷತೆಗಳನ್ನು ನೀಡುತ್ತದೆ. ಶೈಕ್ಷಣಿಕ, ಅತ್ಯಾಧುನಿಕ ಮೂಲಸೌಕರ್ಯ ಮತ್ತು ಸಂಶೋಧನೆಗೆ ಗಮನಾರ್ಹ ಕೊಡುಗೆಗಳಲ್ಲಿ ಗಮನಾರ್ಹವಾದ ದಾಖಲೆಯೊಂದಿಗೆ, MAHE ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಮತ್ತು ಮೆಚ್ಚುಗೆಯನ್ನು ಗಳಿಸಿದೆ. ಅಕ್ಟೋಬರ್ 2020ರಲ್ಲಿ, ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು ಮಾಹೆಗೆ ಪ್ರತಿಷ್ಠಿತ ಇನ್‌ಸ್ಟಿಟ್ಯೂಷನ್ ಆಫ್ ಎಮಿನೆನ್ಸ್ ಸ್ಥಾನಮಾನವನ್ನು ನೀಡಿತು. ಪ್ರಸ್ತುತ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನಲ್ಲಿ (NIRF) 3ನೇ ಸ್ಥಾನದಲ್ಲಿದೆ, ಮಾಹೆ ಪರಿವರ್ತಕ ಕಲಿಕೆಯ ಅನುಭವ ಮತ್ತು ಶ್ರೀಮಂತ ಕ್ಯಾಂಪಸ್ ಜೀವನವನ್ನು ಬಯಸುವ ವಿದ್ಯಾರ್ಥಿಗಳಿಗೆ ಆದ್ಯತೆಯ ಆಯ್ಕೆಯಾಗಿದೆ, ಹಾಗೆಯೇ ಉನ್ನತ ಪ್ರತಿಭೆಗಳನ್ನು ಹುಡುಕುತ್ತಿರುವ ರಾಷ್ಟ್ರೀಯ ಮತ್ತು ಬಹು-ರಾಷ್ಟ್ರೀಯ ಕಾರ್ಪೊರೇಟ್‌ಗಳೂ ಮಾಹೆಯೇ ಮೊದಲ ಶ್ರೇಣಿಯ ಆಯ್ಕೆಯಾಗಿದೆ.








