Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home मौसम

ಉಡುಪಿ :ಮಲ್ಪೆಯ ಮೀನುಗಾರಿಕಾ ಬೋಟ್ ಸಮುದ್ರ ಮಧ್ಯದಲ್ಲಿ ಮುಳುಗಡೆ; ಐವರು ಮೀನುಗಾರರ ರಕ್ಷಣೆ..!!

ಮೀನಿನ ಬಲೆಗಳು ಸೇರಿದಂತೆ ಇತರ ಸಲಕರಣೆಗಳು ಸಮುದ್ರಪಾಲು ಲಕ್ಷಾಂತರ ರೂ. ನಷ್ಟ

Dhrishya News by Dhrishya News
21/11/2025
in मौसम
0
0
SHARES
47
VIEWS
Share on FacebookShare on Twitter

ಉಡುಪಿ, ನವೆಂಬರ್ 21: ಮೀನುಗಾರಿಕಾ ಬೋಟ್ ಸಮುದ್ರ ಮಧ್ಯದಲ್ಲಿ ಮುಳುಗಡೆಯಾಗಿದ್ದು, ಅದರಲ್ಲಿದ್ದ ಐವರು ಮೀನುಗಾರರನ್ನು ರಕ್ಷಿಸಲಾಗಿದೆ. ಈ ಘಟನೆಯಲ್ಲಿ ಮೀನು, ಮೀನಿನ ಬಲೆಗಳು ಸೇರಿದಂತೆ ಇತರ ಸಲಕರಣೆಗಳು ಸಮುದ್ರಪಾಲಾಗಿ ಲಕ್ಷಾಂತರ ರೂ. ನಷ್ಟವಾಗಿದೆ.

ಸಾಸ್ತಾನಾ ಕೋಡಿಕನ್ಯಾನದ ರವೀಂದ್ರ ಎನ್. ಪೂಜಾರಿ ಅವರಿಗೆ ಸೇರಿದ ‘ವೀರಕಲ್ಕುಡ’ ಎಂಬ ಹೆಸರಿನ ಬೋಟು, ನವೆಂಬರ್ 17ರ ಸಂಜೆ ತಂಡೇಲ್ (ಮುಖಂಡ) ಮತ್ತು ನಾಲ್ವರು ಮೀನುಗಾರರೊಂದಿಗೆ ಮಲ್ಪೆ ಬಂದರಿನಿಂದ ಹೊರಟಿತ್ತು. ಅವರು ಪಣಂಬೂರು ಎನ್‌ಎಂಪಿಎ ಬಂದರು ಮತ್ತು ತಣ್ಣೀರುಬಾವಿ ಮಾರ್ಗದ ಮೂಲಕ ಮೀನುಗಾರಿಕೆ ನಡೆಸುತ್ತ, ನವೆಂಬರ್ 18ರಂದು ಸಮುದ್ರದಲ್ಲಿಯೇ ಇದ್ದು, ನಂತರ ಮಂಗಳೂರಿನಿಂದ ಪಶ್ಚಿಮಕ್ಕೆ ಸುಮಾರು 17 ನಾಟಿಕಲ್ ಮೈಲಿ ದೂರದಲ್ಲಿ ಈ ಬೋಟ್ ಮೀನುಗಾರಿಕೆ ನಡೆಸುತ್ತಿತ್ತು ಎನ್ನಲಾಗಿದೆ.

ನವೆಂಬರ್ 19 ರಂದು ಮೀನುಗಾರಿಕೆ ನಡೆಸುತ್ತಿದ್ದಾಗ, ಸಮುದ್ರ ಅಲೆಗಳ ಹೊಡೆತಕ್ಕೆ ಬೋಟಿನ ಕೆಳಭಾಗದ ಫೈಬರ್ ರಚನೆಗೆ ಹಾನಿಯಾಗಿದ್ದು, ನೀರು ರಭಸವಾಗಿ ಒಳನುಗ್ಗಿದೆ ಎನ್ನಲಾಗಿದೆ. ಬೋಟ್ ಮುಳುಗಲು ಪ್ರಾರಂಭಿಸುತ್ತಿದ್ದಂತೆಯೇ, ಸಮೀಪದಲ್ಲಿದ್ದ ‘ವೀರ ಮಾರುತಿ’ ಎಂಬ ಇನ್ನೊಂದು ಮೀನುಗಾರಿಕಾ ಬೋಟಿನ ಮೀನುಗಾರರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಐವರನ್ನೂ ರಕ್ಷಿಸಿ ಸುರಕ್ಷಿತವಾಗಿ ದಡಕ್ಕೆ ತಂದರು.

ಈ ಘಟನೆಯಲ್ಲಿ ಬೋಟ್ ಸಂಪೂರ್ಣವಾಗಿ ಮುಳುಗಿದ್ದು, ಇದರೊಂದಿಗೆ 10 ಮೀನುಗಾರಿಕಾ ಬಲೆಗಳು, ಡೀಸೆಲ್, ಐಸ್ ಬ್ಲಾಕ್‌ಗಳು, ಸುಮಾರು 60,000 ರೂ. ಮೌಲ್ಯದ ಮೀನುಗಳು, ಜಿಪಿಎಸ್ ಮತ್ತು ಇತರೆ ಎಲೆಕ್ಟ್ರಾನಿಕ್ ಉಪಕರಣಗಳು, ಹಾಗೂ ಐದು ಮೊಬೈಲ್ ಫೋನ್‌ಗಳು ಸಮುದ್ರ ಪಾಲಾಗಿವೆ. ಒಟ್ಟಾರೆ ಸುಮಾರು 35 ಲಕ್ಷ ರೂ. ಎಂದು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಂಗಳೂರು ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Previous Post

ಬೈಂದೂರು: ಫ್ಲೈಓವರ್ ಮೇಲೆ ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ; ಪ್ರಯಾಣಿಕರು ಅಪಾಯದಿಂದ ಪಾರು..!!

Next Post

ಕಟ್‌ಬೆಲ್ತೂರು: ದಲಿತರ ಬೇಡಿಕೆಗಳ ಬಗ್ಗೆ ಡಿಎಚ್ ಎಸ್ ಹಕ್ಕೊತ್ತಾಯ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಕಟ್‌ಬೆಲ್ತೂರು: ದಲಿತರ ಬೇಡಿಕೆಗಳ ಬಗ್ಗೆ ಡಿಎಚ್ ಎಸ್ ಹಕ್ಕೊತ್ತಾಯ..!!

ಕಟ್‌ಬೆಲ್ತೂರು: ದಲಿತರ ಬೇಡಿಕೆಗಳ ಬಗ್ಗೆ ಡಿಎಚ್ ಎಸ್ ಹಕ್ಕೊತ್ತಾಯ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಕೃತಿ ಬಂಗೇರಾ ಆತ್ಮಹತ್ಯೆ..!

ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಕೃತಿ ಬಂಗೇರಾ ಆತ್ಮಹತ್ಯೆ..!

07/08/2026
ಉಡುಪಿ: ಆಸ್ಪತ್ರೆಯ ಪಾರ್ಕಿಂಗ್‌ ನಲ್ಲಿ ನಿಲ್ಲಿಸಿದ್ದ ಬೈಕ್ ಕಳವು..!

ಉಡುಪಿ: ಆಸ್ಪತ್ರೆಯ ಪಾರ್ಕಿಂಗ್‌ ನಲ್ಲಿ ನಿಲ್ಲಿಸಿದ್ದ ಬೈಕ್ ಕಳವು..!

07/08/2026
ಫೀನಿಕ್ಸ್ ಶ್ರೀ ವೆಂಕಟಕೃಷ್ಣ ಮಂದಿರಕ್ಕೆ ಶ್ರೀ ಪದ್ಮಾವತಿ ದೇವಿಗೆ ₹2 ಕೋಟಿ ಮೌಲ್ಯದ ಸ್ವರ್ಣ ಕಿರೀಟ ಸಮರ್ಪಣೆ

ಫೀನಿಕ್ಸ್ ಶ್ರೀ ವೆಂಕಟಕೃಷ್ಣ ಮಂದಿರಕ್ಕೆ ಶ್ರೀ ಪದ್ಮಾವತಿ ದೇವಿಗೆ ₹2 ಕೋಟಿ ಮೌಲ್ಯದ ಸ್ವರ್ಣ ಕಿರೀಟ ಸಮರ್ಪಣೆ

06/08/2026
ಚೇತನಾ ಪ್ರೌಢಶಾಲೆ ಹಂಗಾರಕಟ್ಟೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ

ಚೇತನಾ ಪ್ರೌಢಶಾಲೆ ಹಂಗಾರಕಟ್ಟೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ

06/08/2026

Recent News