ಕಟ್‌ಬೆಲ್ತೂರು: ನವೆಂಬರ್ 21:ದಲಿತ ಹಕ್ಕುಗಳ ಸಮಿತಿ ಕರ್ನಾಟಕ ರಾಜ್ಯ ಸಮಿತಿಯು ನೀಡಿದ ಕರೆಯ ಮೇರೆಗೆ ದಲಿತರ ವಸತಿ ಸಹಿತ ಇತರೆ ಹಕ್ಕುಗಳನ್ನು ಆಗ್ರಹಿಸಿ ರಾಜ್ಯದಾದ್ಯಂತ ಗ್ರಾಮ ಪಂಚಾಯಿತಿಗಳ ಮುಂದೆ ಬೇಡಿಕೆಗಳನ್ನು ಸಲ್ಲಿಸುವ ಕಾರ್ಯಕ್ರಮದ ಅಂಗವಾಗಿ ದಲಿತ ಹಕ್ಕುಗಳ ಸಮಿತಿ ಕಟ್‌ಬೆಲ್ತೂರು ಘಟಕದ ಸಂಚಾಲಕರಾದ ಶ್ರೀಮತಿ ಸಹಾನ ಮತ್ತು ದಲಿತ ಚಿಂತಕ ಶುಬಭಕರ ಇವರ ನಾಯಕತ್ವದಲ್ಲಿ ಹಾಗೂ ಇತರ ದಲಿತ ಸದಸ್ಯರ ನೇತೃತ್ವದಲ್ಲಿ ಇಂದು ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ವೈಶಾಲಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯವರಾದ ಶ್ರೀಮತಿ ರೇಖಾ ಇವರಿಗೆ ವಿವಿಧ ಬೇಡಿಕೆಗಳ ಬಗ್ಗೆ ಮನವಿಯನ್ನು ಅರ್ಪಿಸಲಾಯಿತು.
ದಲಿತರ ಬೇಡಿಕೆಗಳನ್ನು ಕಡೆಗಣಿಸಿದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಹಾಗೂ ಸಾಮಾಜಿಕ ಹೋರಾಟವನ್ನು ಡಿಎಚ್ ಎಸ್ ಮೂಲಕ ಸಂಘಟಿಸಲಾಗುವುದು ಎಂದು ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು ಹೇಳಿದರು.
ಸಂಜೀವ ಬಳ್ಕೂರ್ ರವರು ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ನೆರೆದ ಗ್ರಾಮ ಪಂಚಾಯಿತಿ ಸದಸ್ಯರಿಗೆ ದಲಿತರ ಹಕ್ಕುಗಳ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ರಾಮ ಶೆಟ್ಟಿ ಹಾಗೂ ಸದಸ್ಯರಾದ ಶರತ್ ಕುಮಾರ್ ಶೆಟ್ಟಿ ಶ್ರೀಮತಿ ವಿಮಲಾ ಅಶೋಕ ಬಳೆಗಾರ ಶಾರದಾ ಮುಂತಾದವರು ಉಪಸ್ಥಿತರಿದ್ದು ನಮ್ಮ ಬೇಡಿಕೆಗಳಿಗೆ ಮುಂದಿನ ದಿನಗಳಲ್ಲಿ ಸ್ಪಂದಿಸುವುದಾಗಿ ತಿಳಿಸಿದರು
ಈ ಹೋರಾಟದಲ್ಲಿ ಜಿಲ್ಲಾ ಕಾರ್ಯದರ್ಶಿಯವರಾದ ಶ್ರೀ ರವಿ ವಿಎಂ ಈ ಕಾರ್ಯಕ್ರಮದ ಬಗ್ಗೆ ವಿವರಿಸಿದ್ದರು. ಹಿರಿಯ ದಲಿತ ಮುಖಂಡರಾದ ಬಾಬು ಬಳ್ಕೂರ್ ರವರು ಅಲ್ಲಿ ನೆರೆದಿರುವ ಅವರ ಹಳೆಯ ಸ್ನೇಹಿತರನ್ನು ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಬೆಳೆಸಿ ಗಟ್ಟಿಗೊಳಿಸಲು ಸಹಕರಿಸುವಂತೆ ವಿನಂತಿಸಿದರು. ನಮ್ಮ ಘಟಕದ ಸಂಚಾಲಕರಾದ ಶ್ರೀಮತಿ ಸಹನಾ ಅವರು ನಮ್ಮ ಹಕ್ಕುತಾಯದ ಮನವಿಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರಿಗೆ ಹಸ್ತಾಂತರಿಸಿ ಇದಕ್ಕೆ ಸ್ಪಂದಿಸಿದ ಬಗ್ಗೆ ವಂದನಾರ್ಪಣೆಯನ್ನು ಸಲ್ಲಿಸಿದರು.
ಈ ಕಾರ್ಯಕ್ರಮದ ಮುಂದಿನ ಭಾಗವಾಗಿ ಮುಳ್ಳಿಕಟ್ಟೆಯ ಹೊಸಾಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಶೊಭ ರಮೇಶ್ ರವರನ್ನು ಜಿಲ್ಲಾ ನಾಯಕರಾದ ರವಿ ವಿಎಂ ಮತ್ತು ಬಾಬುಬಳ್ಕೂರು ಹಾಗೂ ಜಿಲ್ಲಾಧ್ಯಕ್ಷರಾದ ಸಂಜೀವ ಬಳ್ಕೂರು ಭೇಟಿ ಮಾಡಿ ಅಲ್ಲಿನ ನಿವಾಸಿ ಶ್ರೀ ಕೃಷ್ಣ ಇವರ ಮನೆಗೆ ಕೂಡಲೇ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿ ಕೊಡುವಂತೆ ವಿನಂತಿಸಿ ಮಾತುಕತೆ ನಡೆಸಿ ಅಭಿವೃದ್ಧಿ ಅಧಿಕಾರಿಗಳ ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿ ದ ನಂತರದಲ್ಲಿ ಶ್ರೀ ಕೃಷ್ಣ ಅವರಿಗೆ ಸಂಬಂಧಪಟ್ಟ ದಾಖಲೆಯನ್ನು ಕೂಡಲೇ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಒದಗಿಸುವಂತೆ ನಿರ್ದೇಶನ ನೀಡಲಾಯಿತು








