ಉಡುಪಿ:ನವೆಂಬರ್ 20: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಕಾರು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ನಾವುಂದ NH66 ಫ್ಲೈಓವರ್ ಮೇಲೆ ಇಂದು (ನ 20) ಮಧ್ಯಾಹ್ನ ಸಂಭವಿಸಿದೆ

ಕುಂದಾಪುರದ ಕಟ್ಕೆರೆಯಿಂದ ಉಪ್ಪುಂದ ಕಡೆಗೆ ಕಾರು ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಕಾರು ಚಾಲಕ ನಿತೇಶ್ (31) ಮತ್ತು ಪ್ರಯಾಣಿಕರಾದ ಚಂದು (73) ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರು ಹೊತ್ತಿ ಉರಿಯುತ್ತಿದ್ದ ದಟ್ಟವಾದ ಹೊಗೆಯಿಂದಾಗಿ ಹೆದ್ದಾರಿಯಲ್ಲಿ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.
ಬೈಂದೂರು ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.facebook.com/share/r/17oe9t3zfa/








