ಉಡುಪಿ: ಖ್ಯಾತ ಮೇಕಪ್ ಆರ್ಟಿಸ್ಟ್ ಹಾಗೂ ತರಬೇತುದಾರ ಮನು ಮುರಳೀಧರ್ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಒಂದು ದಿನದ ವಿಶೇಷ ಬ್ರೈಡಲ್ ಮೇಕಪ್ ಸೆಮಿನಾರ್ನ ದಿನಾಂಕವನ್ನು ಮುಂದೂಡಲಾಗಿದ್ದು, ಇದೀಗ ನವೆಂಬರ್ 17ರಂದು ನಡೆಯಲಿದೆ.
ಉಡುಪಿಯ ಹೋಟೆಲ್ ಮಥುರಾ ಕಂಫರ್ಟ್ಸ್, ಶ್ರೀ ಕೃಷ್ಣ ಮಠ ಪಾರ್ಕಿಂಗ್ ಏರಿಯಾ ಇಲ್ಲಿ ಸೆಮಿನಾರ್ ಆಯೋಜಿಸಲಾಗಿದೆ.
ಈ ಒಂದು ದಿನದ ಪ್ರಾಯೋಗಿಕ ತರಬೇತಿಯಲ್ಲಿ ಸಂಪೂರ್ಣ ಬ್ರೈಡಲ್ ಮೇಕೋವರ್ ತಂತ್ರಗಳು, ಆರಂಭದಿಂದ ಅಂತಿಮ ಮೇಕಪ್ ಲುಕ್ವರೆಗೆ ಹಂತ ಹಂತದ ತರಬೇತಿ, HD ಜೊತೆಗೆ ಗ್ಲಾಸಿ ಫಿನಿಶ್ ಬ್ರೈಡಲ್ ಲುಕ್ ಹಾಗೂ ಅಚ್ಚುಕಟ್ಟಾದ ಸೀರೆ ಡ್ರೇಪಿಂಗ್ ತಂತ್ರಗಳನ್ನು ಕಲಿಸಿಕೊಡಲಾಗುತ್ತದೆ.
ಮೇಕಪ್ ಕ್ಷೇತ್ರದಲ್ಲಿ ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಬಯಸುವವರು ಹಾಗೂ ಬ್ರೈಡಲ್ ಮೇಕಪ್ನಲ್ಲಿ ಆಸಕ್ತಿ ಹೊಂದಿರುವವರಿಗೆ ಈ ಸೆಮಿನಾರ್ ಉಪಯುಕ್ತವಾಗಲಿದೆ. ಭಾಗವಹಿಸುವವರಿಗೆ ಪ್ರಮಾಣಪತ್ರವನ್ನು ನೀಡಲಾಗುವುದು.
ಸೆಮಿನಾರ್ ಶುಲ್ಕ: ₹2,000
ಸೀಮಿತ ಆಸನಗಳು ಮಾತ್ರ ಲಭ್ಯವಿದ್ದು, ಮುಂಗಡ ನೋಂದಣಿ ಅಗತ್ಯವಿದೆ.
ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 📞 9480115547 / 9980979363
ಆಯೋಜನೆ: Aura Creations, Events & Promotions








