ಉಡುಪಿ :ಉಡುಪಿಯ ಪುತ್ತೂರು ನಿವಾಸಿ ಸಚಿನ್ ರಾವ್ ಹಾಗೂ ಅಶ್ವಿನಿ ರಾವ್ ರವರ ಪುತ್ರಿಯಾದ ಸಚಿತ ರಾವ್ ನವೆಂಬರ್ 15 ರಂದು ಬೆಂಗಳೂರಿನ ಆರ್ ಆರ್ ನಗರದಲ್ಲಿ तवं National Level Beauty Pageant ವಿನ್ನರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ

ಹಾಗೂ ನವೆಂಬರ್ 16 ರಂದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನಡೆದ ರಾಜ್ಯ ಮಟ್ಟದ ಮಿಸ್ ಮಲೆನಾಡು 2025ರ ಬ್ಯೂಟಿ ಕಾಂಟೆಸ್ಟ್‌ನಲ್ಲಿ ಮೊದಲ ರನ್ನರ್ ಅಪ್ ಪ್ರಶಸ್ತಿಯನ್ನು ಸಚಿತ ರಾವ್ ಪಡೆದುಕೊಂಡಿರುತ್ತಾರೆ.
ಸಚಿತ ರಾವ್ ಉಡುಪಿಯ ಸಿಲಸ್ ಇಂಟರ್‌ನ್ಯಾಷನಲ್ ಶಾಲೆಯ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಉಡುಪಿಯ ಟಾಪ್ ಮಾಡಲ್ ಆಗಿರುವ ಸ್ಪೂರ್ತಿ ಶೆಟ್ಟಿಯವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ.
ಈ ಬ್ಯೂಟಿ ಕಾಂಟೆಸ್ಟ್‌ನ ಕಾರ್ಯಕ್ರಮದಲ್ಲಿ ಡ್ರೆಸ್ಸಿಂಗ್ ವಿಭಾಗದಲ್ಲಿ ಉಡುಪಿಯ ಗೀತಾಂಜಲಿ ಸಿಲ್ಕ್ ಹಾಗೂ ಉಡುಪಿಯ ಖ್ಯಾತ ಮೇಕಪ್ ಆರ್ಟಿಸ್ಟ್ ನಾಗಶ್ರೀ ಆರ್ ಆಚಾರ್ಯ ರವರು ಸಹಕಾರವನ್ನು ಕೊಟ್ಟಿರುತ್ತಾರೆ.








