Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ವಿಚಾರಣೆಗೆ ಮುನ್ನ ಬಂಧನ ಶಿಕ್ಷೆಯಂತೆ: ಮಣಿಪಾಲ್ ಲಾ ಸ್ಕೂಲ್‌ನಲ್ಲಿ ನ್ಯಾಯಮೂರ್ತಿ ಅಭಯ್ ಎಸ್. ಓಕಾ

Dhrishya News by Dhrishya News
16/03/2026
in ಮುಖಪುಟ
0
ವಿಚಾರಣೆಗೆ ಮುನ್ನ ಬಂಧನ ಶಿಕ್ಷೆಯಂತೆ: ಮಣಿಪಾಲ್ ಲಾ ಸ್ಕೂಲ್‌ನಲ್ಲಿ ನ್ಯಾಯಮೂರ್ತಿ ಅಭಯ್ ಎಸ್. ಓಕಾ
0
SHARES
4
VIEWS
Share on FacebookShare on Twitter

ಬೆಂಗಳೂರು,:‘ಯಾವುದೇ ಆರೋಪಿಗೂ ಜಾಮೀನು ಪಡೆಯುವ ಹಕ್ಕಿದೆ. ವಿಚಾರಣೆ ಆರಂಭವಾಗುವ ಮೊದಲು ಯಾರನ್ನಾದರೂ ಜೈಲಿನಲ್ಲಿ ಇರಿಸುವುದು, ಇನ್ನೂ ಸಾಬೀತಾಗದ ಅಪರಾಧಕ್ಕೆ ಶಿಕ್ಷೆ ನೀಡಿದಂತೆʼ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಭಯ್ ಎಸ್. ಓಕಾ ಅವರು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆ, ಬೆಂಗಳೂರು ಕ್ಯಾಂಪಸ್‌ನ ಅಂಗ ಸಂಸ್ಥೆಯಾದ ಮಣಿಪಾಲ್‌ ಲಾ ಸ್ಕೂಲ್‌ನಲ್ಲಿ ನಡೆದ ವಾರ್ಷಿಕ ಕಾನೂನು ಉಪನ್ಯಾಸದಲ್ಲಿ ಹೇಳಿದರು.

‘ಜಾಮೀನು ನ್ಯಾಯಶಾಸ್ತ್ರದಲ್ಲಿ ವೈಯಕ್ತಿಕ ಸ್ವಾತಂತ್ರ್ಯದ ಮಹತ್ವ ಏಕೆ?ʼ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ಜಾಮೀನು ನಿರ್ಧಾರಗಳಲ್ಲಿ ವೈಯಕ್ತಿಕ ಸ್ವಾತಂತ್ರ್ಯವು ಪ್ರಮುಖವಾಗಬೇಕು ಎಂದು ಅವರು ಒತ್ತಿಹೇಳಿದರು. ವಿಚಾರಣೆಗೆ ಮುನ್ನ ಆರೋಪಿಗಳನ್ನು ದೀರ್ಘಕಾಲ ಬಂಧನದಲ್ಲಿಡುವ ಪ್ರಕ್ರಿಯೆ ಕ್ರಮೇಣ ಏಕಪಕ್ಷೀಯ ಶಿಕ್ಷೆಯ ಸಾಧನವಾಗಿ ಬಳಸಲಾಗುತ್ತಿದೆ ಎಂಬುದಾಗಿ ಅವರು ಎಚ್ಚರಿಸಿದರು.

State of Rajasthan V. Balchand (1977) ಎಂಬ ಮಹತ್ವದ ತೀರ್ಪನ್ನು ಉಲ್ಲೇಖಿಸಿದ ಅವರು, ‘ಜಾಮೀನು ನಿಯಮ, ಜೈಲು ಆಕ್ಷೇಪಣೆ” ಎಂಬ ದೀರ್ಘಕಾಲದಿಂದಲೂ ಮಾನ್ಯವಾಗಿರುವ ತತ್ವವನ್ನು ಪುನರುಚ್ಚರಿಸಿದರು. ಕ್ರಿಮಿನಲ್ ಕಾನೂನಿನಲ್ಲಿ ನಿರ್ದೋಷಿತ್ವದ ಪೂರ್ವಾನುಮಾನವು ಪ್ರಮುಖ ಬುನಾದಿಯಾಗಿದ್ದು, ಜಾಮೀನು ನಿರಾಕರಣೆ ಎಂದಿಗೂ ವಿಚಾರಣೆಗೆ ಮುನ್ನ ನೀಡುವ ಶಿಕ್ಷೆಯ ರೂಪವಾಗಬಾರದುʼ ಎಂದು ಅವರು ಹೇಳಿದರು.

ಜಾಮೀನು ಸಂಬಂಧಿತ ತೀರ್ಮಾನಗಳನ್ನು ಕೇವಲ ಕಾನೂನು ನಿಯಮಗಳ ಆಧಾರದಲ್ಲಿ ಮಾತ್ರವಲ್ಲದೆ, ಸಂವಿಧಾನದ 14, 19 ಮತ್ತು 21 ವಿಧಿಗಳ ಮೂಲಕವೂ ಪರಿಶೀಲಿಸಬೇಕು ಎಂದು ನ್ಯಾಯಮೂರ್ತಿ ಓಕಾ ಅಭಿಪ್ರಾಯಪಟ್ಟರು. ಪ್ರತಿಯೊಬ್ಬ ನಾಗರಿಕನ ಸ್ವಾತಂತ್ರ್ಯವನ್ನು ಸಂವಿಧಾನ ರಕ್ಷಿಸುತ್ತದೆ ಎಂಬುದನ್ನು ಎಲ್ಲಾ ನ್ಯಾಯಾಧೀಶರು ನೆನಪಿನಲ್ಲಿಟ್ಟುಕೊಳ್ಳಬೇಕು ಮತ್ತು ಜಾಮೀನು ನಿರ್ಧಾರಗಳಿಗೆ ಅದೇ ಮಾರ್ಗದರ್ಶಿಯಾಗಬೇಕು ಎಂದರು.

ವ್ಯವಸ್ಥೆಯ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು, ‘ಅನೇಕ ವಿಚಾರಣಾಧೀನ ಕೈದಿಗಳು ತಮ್ಮ ವಿಚಾರಣೆ ಪ್ರಾರಂಭವಾಗುವುದಕ್ಕೂ ಮುನ್ನವೇ ವರ್ಷಗಳ ಕಾಲ ಜೈಲಿನಲ್ಲಿ ಕಾಲ ಕಳೆಯುವ ಪರಿಸ್ಥಿತಿ ಇದೆ. ಈ ರೀತಿ ದೀರ್ಘಕಾಲದ ಬಂಧನವು ಆರೋಪಿಗಳಿಗೆ ಮಾತ್ರವಲ್ಲ, ಅವರ ಕುಟುಂಬಗಳಿಗೂ ಅನ್ಯಾಯ ಮಾಡಿದಂತಾಗುತ್ತದೆ. Union of India v. K.A. Najeeb ಎಂಬ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ, ವಿಚಾರಣೆಗೆ ಮುನ್ನ ದೀರ್ಘಕಾಲ ಬಂಧನದಲ್ಲಿಡುವುದು ನ್ಯಾಯತತ್ವಗಳನ್ನು ದುರ್ಬಲಗೊಳಿಸುವ ಸಾಧ್ಯತೆ ಇದೆʼ ಎಂದು ಹೇಳಿದರು.

‘ಜಾಮೀನು ಮೊತ್ತವನ್ನು ಹೆಚ್ಚು ನಿಗದಿಪಡಿಸುವುದು ಆರ್ಥಿಕವಾಗಿ ಹಿಂದುಳಿದ ಆರೋಪಿಗಳನ್ನು ಜೈಲಿನಲ್ಲೇ ಉಳಿಯುವಂತೆ ಮಾಡುತ್ತದೆ. ಜೊತೆಗೆ ನಿರಂತರ ಡಿಜಿಟಲ್ ಸ್ಥಳ ಮಾಹಿತಿಯನ್ನು ಹಂಚಿಕೊಳ್ಳುವಂತಹ ಅತಿಕ್ರಮಣಕಾರಿ ಷರತ್ತುಗಳನ್ನು ವಿಧಿಸುವುದರ ವಿರುದ್ಧವೂ ಅವರು ಎಚ್ಚರಿಕೆ ನೀಡಿದರು. ಇಂತಹ ಕ್ರಮಗಳು ಸಂವಿಧಾನದ 21ನೇ ವಿಧಿ ಅಡಿಯಲ್ಲಿ ರಕ್ಷಿಸಿರುವ ಗೌಪ್ಯತೆ ಮತ್ತು ಮಾನವ ಗೌರವದ ಹಕ್ಕುಗಳನ್ನು ಉಲ್ಲಂಘಿಸುವ ಸಾಧ್ಯತೆ ಇದೆʼ ಎಂದು ತಿಳಿಸಿದರು.

ಸಂವಿಧಾನಾತ್ಮಕ ಸ್ವಾತಂತ್ರ್ಯಗಳನ್ನು ಕಾಪಾಡಲು ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸಲು ಶಿಕ್ಷಿತರು ತಮ್ಮ ಹಕ್ಕುಗಳನ್ನು ಅರಿತುಕೊಂಡು ಸಕ್ರಿಯವಾಗಿ ಮುಂದಾಗಬೇಕು ಎಂದು ಅವರು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಮಾಹೆ ಬೆಂಗಳೂರು ಕ್ಯಾಂಪಸ್‌ನ ಸಹ ಕುಲಪತಿ ಡಾ. ಮಧು ವೀರರಾಘವನ್ ಹಾಗೂ ಮಣಿಪಾಲ್ ಲಾ ಸ್ಕೂಲ್‌, ಮಾಹೆ ಬೆಂಗಳೂರು ನಿರ್ದೇಶಕಿ ಡಾ. ಸರಸು ಎಸ್ಟರ್ ಥಾಮಸ್ ಉಪಸ್ಥಿತರಿದ್ದರು. ಕಾರ್ಯಕ್ರಮದ ವೇಳೆ ರಾಷ್ಟ್ರೀಯ ಸಂವಿಧಾನ ದಿನದ ಅಂಗವಾಗಿ ನಡೆದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು.

Previous Post

ಹಣಕ್ಕಾಗಿ ಯುವತಿಗೆ ಪೀಡನೆ: ₹14 ಲಕ್ಷ ಪಡೆದು ಜೀವ ಬೆದರಿಕೆ; ಪ್ರಕರಣ ದಾಖಲು….!

Next Post

ಭಾರತಾದ್ಯಂತ 5,000ಕ್ಕೂ ಹೆಚ್ಚು ಬಸ್‌ಗಳ ಆರ್ಡರ್ ಪಡೆದ ಟಾಟಾ ಮೋಟಾರ್ಸ್

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post
ಭಾರತಾದ್ಯಂತ 5,000ಕ್ಕೂ ಹೆಚ್ಚು ಬಸ್‌ಗಳ ಆರ್ಡರ್ ಪಡೆದ ಟಾಟಾ ಮೋಟಾರ್ಸ್

ಭಾರತಾದ್ಯಂತ 5,000ಕ್ಕೂ ಹೆಚ್ಚು ಬಸ್‌ಗಳ ಆರ್ಡರ್ ಪಡೆದ ಟಾಟಾ ಮೋಟಾರ್ಸ್

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ. ಶ್ಯಾಮ್ ಕೃಷ್ಣನ್ ಅಶೋಕ್ ಸೇರ್ಪಡೆ..!

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ. ಶ್ಯಾಮ್ ಕೃಷ್ಣನ್ ಅಶೋಕ್ ಸೇರ್ಪಡೆ..!

16/03/2026
ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು: 13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾಗೆ ದಯಾಮರಣಕ್ಕೆ ಅನುಮತಿ

ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು: 13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾಗೆ ದಯಾಮರಣಕ್ಕೆ ಅನುಮತಿ

16/03/2026
ಆರೋಗ್ಯದ ಅಮೃತ ‘ಅಮೃತಬಳ್ಳಿ’: ಅನೇಕ ಕಾಯಿಲೆಗಳಿಗೆ ನೈಸರ್ಗಿಕ ಔಷಧ 🌿

ಆರೋಗ್ಯದ ಅಮೃತ ‘ಅಮೃತಬಳ್ಳಿ’: ಅನೇಕ ಕಾಯಿಲೆಗಳಿಗೆ ನೈಸರ್ಗಿಕ ಔಷಧ 🌿

16/03/2026
ಉಡುಪಿ: ಗ್ಯಾಸ್ ಕೊರತೆ ಹೊಟೇಲ್‌ಗಳಿಗೆ ಸಂಕಷ್ಟ, ಶಾಲಾ ಬಿಸಿಯೂಟಕ್ಕೆ ಆದ್ಯತೆ..!

ಉಡುಪಿ: ಗ್ಯಾಸ್ ಕೊರತೆ ಹೊಟೇಲ್‌ಗಳಿಗೆ ಸಂಕಷ್ಟ, ಶಾಲಾ ಬಿಸಿಯೂಟಕ್ಕೆ ಆದ್ಯತೆ..!

16/03/2026

Recent News

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ. ಶ್ಯಾಮ್ ಕೃಷ್ಣನ್ ಅಶೋಕ್ ಸೇರ್ಪಡೆ..!

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ. ಶ್ಯಾಮ್ ಕೃಷ್ಣನ್ ಅಶೋಕ್ ಸೇರ್ಪಡೆ..!

16/03/2026
ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು: 13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾಗೆ ದಯಾಮರಣಕ್ಕೆ ಅನುಮತಿ

ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪು: 13 ವರ್ಷಗಳಿಂದ ಕೋಮಾದಲ್ಲಿದ್ದ ಹರೀಶ್ ರಾಣಾಗೆ ದಯಾಮರಣಕ್ಕೆ ಅನುಮತಿ

16/03/2026
ಆರೋಗ್ಯದ ಅಮೃತ ‘ಅಮೃತಬಳ್ಳಿ’: ಅನೇಕ ಕಾಯಿಲೆಗಳಿಗೆ ನೈಸರ್ಗಿಕ ಔಷಧ 🌿

ಆರೋಗ್ಯದ ಅಮೃತ ‘ಅಮೃತಬಳ್ಳಿ’: ಅನೇಕ ಕಾಯಿಲೆಗಳಿಗೆ ನೈಸರ್ಗಿಕ ಔಷಧ 🌿

16/03/2026
ಉಡುಪಿ: ಗ್ಯಾಸ್ ಕೊರತೆ ಹೊಟೇಲ್‌ಗಳಿಗೆ ಸಂಕಷ್ಟ, ಶಾಲಾ ಬಿಸಿಯೂಟಕ್ಕೆ ಆದ್ಯತೆ..!

ಉಡುಪಿ: ಗ್ಯಾಸ್ ಕೊರತೆ ಹೊಟೇಲ್‌ಗಳಿಗೆ ಸಂಕಷ್ಟ, ಶಾಲಾ ಬಿಸಿಯೂಟಕ್ಕೆ ಆದ್ಯತೆ..!

16/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved