ಉಡುಪಿ :ನವೆಂಬರ್ 12:ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಹೆದ್ದಾರಿಯ ವೆಹಿಕಲ್ ಓವರ್ ಪಾಸ್ ಕಾಮಗಾರಿಯು ಸುಸೂತ್ರವಾಗಿ ನಡೆಸುವ ಸಲುವಾಗಿ ಕೇಂದ್ರ ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಾಮವಳಿಗಳು 1989ರ ಕಲಂ 221(ಎx2) & (5) ರನ್ನಯ, ರಾಷ್ಟ್ರೀಯ ಹೆದ್ದಾರಿ 66 ರ ಕಟಪಾಡಿ ಜಂಕ್ಷನ್ ನಲ್ಲಿ ವೆಹಿಕಲ್ ಓವರ್ ಪಾಸ್ (Vehicle Overpass) ನಿರ್ಮಾಣ ಕಾಮಗಾರಿಯು ಪೂರ್ಣಗೊಳ್ಳುವವರೆಗೆ ಸದ್ರಿ ರಾಷ್ಟ್ರೀಯ ಹೆದ್ದಾರಿಯ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಈ ಕೆಳಕಂಡ ಪರ್ಯಾಯ ಮಾರ್ಗದ ರಸ್ತೆಯ ಮೂಲಕ ಸಂಚರಿಸಲು ವ್ಯವಸ್ಥೆ ಮಾಡಿ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಆದೇಶಿಸಿರುತ್ತಾರೆ..
ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುವ ಘನ ಹಾಗೂ ಇತರ ಸರಕು ಸಾಗಾಟ ವಾಹನಗಳು ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ನಿಗದಿಪಡಿಸಿದ ಟ್ರಾಕ್ ನಲ್ಲಿ ಸಾಗುವುದು.
ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸಾಗುವ ಘನ ಹಾಗೂ ಇತರ ಸರಕು ಸಾಗಾಟ ವಾಹನಗಳು ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ನಿಗದಿಪಡಿಸಿದ ಟ್ಯಾಕ್ ನಲ್ಲಿ. ಸಾಗುವುದು.
ಮಂಗಳೂರಿನಿಂದ ಉಡುಪಿ ಕಡೆಗೆ ಸಾಗುವ ಎಕ್ಸ್ಪ್ರೆಸ್ ಹಾಗೂ ಶಟಲ್ ಬಸ್ಗಳು, ಇತರ ಖಾಸಗಿ ವಾಹನಗಳು ಮತ್ತು ಸಾರ್ವಜನಿಕ ವಾಹನಗಳು ಕಲ್ಲಾಪು ಮೂಲಕ ಕಟಪಾಡಿ ಪೇಟೆಗೆ ಬಂದು ಜನರನ್ನು ಇಳಿಸಿ/ಹತ್ತಿಸಿಕೊಂಡು ಫಾರೆಸ್ಟ್ ಗೇಟ್ ಮೂಲಕ ರಾಷ್ಟ್ರೀಯ ಹೆದ್ದಾರಿ 66 ನ್ನು ಸೇರುವುದು.
ಶಿರ್ವದಿಂದ ಉಡುಪಿ ಕಡೆಗೆ ಸಂಚರಿಸುವ ಘನ ವಾಹನಗಳು/ಟ್ರಕ್ ಗಳು ಮೂಡುಬೆಳ್ಳಿ-ದೆಂದೂರುಕಟ್ಟೆ-ಅಲೆವೂರು ಮಾರ್ಗವಾಗಿ ಉಡುಪಿಯನ್ನು ಸೇರಿಕೊಳ್ಳುವುದು.
ಶಿರ್ವದಿಂದ ಉಡುಪಿ ಕಡೆಗೆ ಸಂಚರಿಸುವ ದಿಚಕ್ರ. ತ್ರಿಚಕ್ರ ಮತ್ತು ಲಘು ವಾಹನಗಳು ಉಡುಪಿ-ಮಂಗಳೂರು ಸರ್ವೀಸ್ ರಸ್ತೆಯಲ್ಲಿ ಸಾಗಿ ಮುಂದೆ ರಾಷ್ಟ್ರೀಯ ಹೆದ್ದಾರಿಯ ಮಂಗಳೂರು-ಉಡುಪಿ ರಸ್ತೆ ಸೇರಲು ತೆರೆಯುವ ಮೀಡಿಯನ್ ನಲ್ಲಿ ಹೆದ್ದಾರಿ ಪ್ರವೇಶಿಸಿ ಉಡುಪಿಗೆ ತೆರಳುವುದು.
ಮಟ್ಟು ಕಡೆಯಿಂದ ಉಡುಪಿ ಕಡೆಗೆ ಸಾಗುವ ಲಘು ವಾಹನಗಳು ಕಟಪಾಡಿ ಹಳೇ ಮೂಲಕ ಫಾರೆಸ್ಟ್ ಗೇಟ್ ಬಳಿ ತಲುಪಿ ಮಂಗಳೂರು-ಉಡುಪಿ ಹೆದ್ದಾರಿಯನ್ನು ಸ ಉಡುಪಿ ಕಡೆಗೆ ತೆರಳುವುದು.
ಮಟ್ಟು ಕಡೆಯಿಂದ ಮಂಗಳೂರು ಕಡೆಗೆ ಸಾಗುವ ಲಘು ವಾಹನಗಳು ಕಟಪಾಡಿ ಹಳೇ ರಸ್ತೆ ಮೂಲಕವಾಗಿ ಫಾರೆಸ್ಟ್ ಗೇಟ್ ಬಳಿ ತಲುಪಿ ಇಲ್ಲಿ ತೆರೆದಿರುವ ಮೀಡಿಯನ್ ಮೂಲಕ ಉಡುಪಿ-ಮಂಗಳೂರು ಹೆದ್ದಾರಿ ಸರ್ವೀಸ್ ರಸ್ತೆಯನ್ನು ಸೇರಿ ಮಂಗಳೂರು ಕಡೆಗೆ ತೆರಳುವುದು.
ಮಂಗಳೂರು ವಿಮಾನ ನಿಲ್ದಾಣಕ್ಕೆ ತುರ್ತು ಹೋಗುವ ವಾಹನಗಳು ಕಟಪಾಡಿ ಮಾರ್ಗವನ್ನು ಹೊರತುಪಡಿಸಿ ಬೇರೆ ರಸ್ತೆ ಮಾರ್ಗದಲ್ಲಿ ಸಾಗುವುದಕ್ಕೆ ಪ್ರಾಶಸ್ತ್ರ ನೀಡುವುದು.
ಕಾಮಗಾರಿ ನಡೆಯುವ ಸ್ಥಳದಿಂದ ಮಂಗಳೂರು ರಸ್ತೆ. ಉಡುಪಿ ರಸ್ತೆ. ಮಟ್ಟು ರಸ್ತೆ ಹಾಗೂ ಶಿರ್ವಾ ರಸ್ತೆಯಲ್ಲಿ 100 ಮೀಟರ್ ದೂರದವರೆಗೆ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.








