ಬಾರ್ಕೂರು: ನವೆಂಬರ್ 12: ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠದ ವತಿಯಿಂದ ಉಡುಪಿಯಲ್ಲಿ ನವೆಂಬರ್ 28 ರಂದು ನಡೆಯಲಿರುವ ಲಕ್ಷಕಂಠ ಗೀತಾ ಪಾರಾಯಣ ಹಾಗೂ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಬರುವ ಕಾರ್ಯಾಲಯಕ್ಕೆ ಬಾರ್ಕೂರು ಶ್ರೀ ವೇಣುಗೋಪಾಲ ಕೃಷ್ಣ ದೇವಸ್ಥಾನ ಸೋಮಕ್ಷತ್ರಿಯ ಸಮಾಜದಿಂದ 1000 ಜನ ಭಾಗವಹಿಸಲಿದ್ದಾರೆ ಎಂದು ಬೃಹತ್ ಗೀತೋತ್ಸವ, ಲಕ್ಷಕಂಠ ಗೀತಾ ಪಾರಾಯಣದ ಸಂಚಾಲಕರಾದ ಬೈಕಾಡಿ ಸುಪ್ರಸಾದ ಶೆಟ್ಟಿ ತಿಳಿಸಿದ್ದಾರೆ.
ಶ್ರೀ ವೇಣುಗೋಪಾಲ ಕೃಷ್ಣ ದೇವಸ್ಥಾನ ಬಾರ್ಕೂರು ಇದರ ದೀಪೋತ್ಸವ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಲಕ್ಷ ಕಂಠ ಗೀತಾ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಪುತ್ತಿಗೆ ಮಠದ ಪ್ರತಿನಿಧಿಯಾಗಿ ವಿಕ್ರಮ್ ಕುಂಟಾರು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಸೋಮಕ್ಷತ್ರಿಯ ಸಮಾಜದ ಅಧ್ಯಕ್ಷರಾದ ಉದಯ ಕುಮಾರ್ ಸಮಾಜದಿಂದ ಸಾವಿರಕ್ಕೂ ಮಿಕ್ಕ ಬಾಂಧವರು ಭಾಗವಹಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಸೋಮಕ್ಷತ್ರಿಯ ಸಮಾಜದ ಪ್ರಮುಖರಾದ ನೀಲಾವರ ಸಂಜೀವ ರಾವ್, ವಾಸುದೇವ ರಾವ್, ಸೂರ್ಯನಾರಯಣ ಗಾಣಿಗ, ವಿಶ್ವಾಸ್ ದಾಸ್ ಕುಮಾರ್, ರಾಮಕೃಷ್ಣ ಗಾಣಿಗ, ರಾಜೇಶ ಗಾಣಿಗ ಅಬ್ಬಾಡಿ, ಜಯರಾಂ ಜಿ. ನಾಗರಾಜ್ ಗಾಣಿಗ, ರಘುರಾಮ ಗಾಣಿಗ, ವಿಜಯ ಕುಮಾರ್, ಜಯಂತಿ ವಾಸುದೇವ, ಗಣೇಶ ಚಲ್ಲಮಕ್ಕಿ ಮತ್ತಿತರರು ಉಪಸ್ಥಿತರಿದ್ದರು.








