ಕಾರ್ಕಳ : ಅಕ್ಟೋಬರ್ 24: ಪುರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಪ್ಲಾಸ್ಟಿಕ್ ಫ್ಲಕ್ಸ್ ಬ್ಯಾನರ್ ನಿಯಂತ್ರಿಸಲು ಕಟ್ಟು ನಿಟ್ಟಿನ ಕ್ರಮ ವಹಿಸಬೇಕೆಂದು ಪುರಸಭೆ ಅಧ್ಯಕ್ಷ ಯೋಗೀಶ್ ದೇವಾಡಿಗ ಅಧಿಕಾರಿಗಳಿಗೆ ಸೂಚಿಸಿದರು.
ಅಕ್ಟೋಬರ್ 23 ಗುರುವಾರ ಜರುಗಿದ ಪುರಸಭೆ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು ಸ್ವಂತ ವಿಷಯ ಪ್ರಸ್ತಾಪಿಸಿ ಕಾರ್ಕಳ ಆನೆಕೆರೆ ಮತ್ತು ಕೃಷ್ಣಮಂದಿರದ ಪರಿಸರದಲ್ಲಿ ದೊಡ್ಡ ಬ್ಯಾನರ್ ಅಳವಡಿಸಿದ್ದಾರೆ ಬ್ಯಾನರ್ ಫ್ಲೆಕ್ಸ್ ಪರಿಣಾಮ ಅಪಘಾತಗಳು ಸಂಭವಿಸುತ್ತಿದೆ. ಈ ಬಗ್ಗೆ ಪರಿಸರ ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮ ವಹಿಸಬೇಕು ಅನುಮತಿ ಇಲ್ಲದ ಬ್ಯಾನರ್ ಗಳನ್ನು ಕೂಡಲೇ ತೆರವು ಕೆಲವು ಗೊಳಿಸಬೇಕೆಂದು ಸೂಚಿಸಿದರು.
ಸರಕಾರ ಪ್ಲಾಸ್ಟಿಕ್ ಬ್ಯಾನರ್ ನಿಷೇಧಿಸಿದ್ದು ಬಟ್ಟೆ ಬ್ಯಾನರ್ ಗಳಿಗೆ ಅನುಮತಿ ನೀಡಬೇಕು ಪರಿಸರ ಸಂರಕ್ಷಣೆ ನಗರದ ಸ್ವಚ್ಛತೆ ದೃಷ್ಟಿಯಿಂದ ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದು ವಿವೇಕಾನಂದ ಶೇನೋಯ್ ಶಿವಾಜಿ ರಾವ್ ಇನ್ನಿತರರು ಸದಸ್ಯರು ಧ್ವನಿಗೂಡಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಮಸ್ಯೆ ಹೆಚ್ಚಾಗುತ್ತಿದ್ದು ಪುರಸಭೆ ಕ್ರಮವಹಿಸುವುದಿಲ್ಲ ಎಂದು ಸದಸ್ಯ ರೆಹೇಮತ್, ಶುಭದ ರಾವ್ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿರುದ ಪಕ್ಷದ ನಾಯಕ ಶುಭದರಾವ್ ಮಾತನಾಡಿದ ಅವರು ಇಂದಿನ ಸಭೆ ಕೊನೆ ಸಭೆ ಯಾಗಿದ್ದು ಪುರಸಭೆಯ ಅವಧಿ ಇನ್ನು ಕೇವಲ ಮೂರು ದಿನಗಳು ಮಾತ್ರ ಆದರೆ ಐದು ವರ್ಷಗಳಲ್ಲಿ ಆಡಳಿತ ಪಕ್ಷದ ಕೆಲಸ ಕಾರ್ಯಗಳು ಶೂನ್ಯವಾಗಿದೆ ಇದು ತುಂಬಾ ಬೇಸರದಿಂದ ಹೇಳಬೇಕಾಗುತ್ತದೆ ಎಂದು ಹೇಳಿದರು.

ಅನಂತಶಯನ ತೇಳ್ಳರು ರಸ್ತೆ ಮೆಸ್ಕಾಂ ರಸ್ತೆ ಸಹಿತ ವಿವಿಧ ಮಾರ್ಗದಲ್ಲಿನ ರಸ್ತೆ ಅವ್ಯವಸ್ಥೆ ಮತ್ತು ಕಾಬೆಟ್ಟು ಬಂಡಿಮಠ ಯುಜಿಡಿ ಸಮಸ್ಯೆ ಬಗ್ಗೆ ಸದಸ್ಯರಾದ ಸುಮಕೇಶವ, ರೆಹಮತ್, ಹರೀಶ್ ಶಿವಾಜಿ ರಾವ್ ಮೊದಲಾದ ಸದಸ್ಯರು ಗಮನ ಸೆಳೆದರು.
ಅಮೃತ ಯೋಜನೆಯನ್ನು ಕಾದು ಕುಳಿತರೆ ರಸ್ತೆ ದುರಸ್ತಿ ಆಗುವುದಿಲ್ಲ ಪುರಸಭೆಯಿಂದಲೇ ರಸ್ತೆರಿಪೇರಿ ಮಾಡಿಸಿ ಎಂದು ಸದಸ್ಯರು ಆಗ್ರಹಿಸಿದರು.
ಯುಜೆ ಡಿ ಚೆಬರ್ ಕುಸಿದು ಆಗುತ್ತಿರುವ ಆವಾಂತರಗಳ ಬಗ್ಗೆ ಸಭೆಯ ಗಮನ ಸೆಳೆದರು.ಬಸ್ಸು ನಿಲ್ದಾಣ ಸಮೀಪ ಸುತ್ತಮುತ್ತ ಕೆಲವು ಹೂ ವ್ಯಾಪಾರ ಮಾಡು ಅಂಗಡಿಗಳು ಪುರಸಭೆಯಿಂದ ಪರವಾನಿಗೆ ಪಡೆಯದೆ ಅದಲ್ಲದೆ ಅನಧಿಕೃತವಾಗಿ ಶೆಡ್ ಗಳನ್ನು ಹಾಕಿ
ವ್ಯಾಪಾರ ನಡೆಸುತ್ತಿರುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಶುಭದರಾವ್ ಮತ್ತು ವಿವೇಕ ನಂದ ಶೇನೋಯ್ ಆಗ್ರಿಸಿದರು.
ಸಭೆಯಲ್ಲಿ ಪುರಸಭೆ ಅಧ್ಯಕ್ಷರಾದ ಯೋಗೇಶ್ ದೇವಾಡಿಗ, ಉಪಾಧ್ಯಕ್ಷರಾದ ಪ್ರಶಾಂತ್ ಕೋಟಿಯನ್, ಪುರಸಭಾ ಅಧಿಕಾರಿಯದ ಲೀನಾ ಬ್ರಿಟೊ ಉಪಸ್ಥಿತರಿದ್ದರು.
ವರದಿ ಅರುಣ್ ಭಟ್ ಕಾರ್ಕಳ








