ಕಾರ್ಕಳ: ಅಕ್ಟೋಬರ್ 22 :ವಿಶ್ವಕರ್ಮ ಸಮಾಜದ ಹಿರಿಯರಾದ ವಸಂತ್ ಆಚಾರ್ಯ ಅಕ್ಟೋಬರ್ 21ರಂದು ರಾತ್ರಿ ನಿಧನರಾದರು . ಕಾರ್ಕಳದ ವಿಶ್ವಕರ್ಮ ಸಮಾಜದ ಸಂಘಟನೆಯಲ್ಲಿ ವಸಂತ ಆಚಾರ್ಯರು ಪ್ರಸಿದ್ಧರಾಗಿದ್ದರು.
ಯಕ್ಷಗಾನ ಮತ್ತು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಕನ್ನಡ ತುಳು ಚಲನಚಿತ್ರದ ನಟರಾಗಿ , ಕರ್ನಾಟಕ ಸರಕಾರದ ದಕ್ಷಿಣ ಕನ್ನಡ ಜಿಲ್ಲೆಯ ಹಲವು ತಾಲೂಕು ಕೇಂದ್ರ ಗಳಲ್ಲಿ ಉಪ ತಹಶೀಲ್ದಾರರಾಗಿ ಇವರು ಸೇವೆ ಸಲ್ಲಿಸಿ ಪ್ರಸಿದ್ಧರಾಗಿದ್ದರು.








