ಕಾರ್ಕಳ: ಅಕ್ಟೋಬರ್ 20:ಕೆನರಾ ಬ್ಯಾಂಕ್ ಕಾರ್ಕಳ ಶಾಖೆ ಮತ್ತು ಕುಕ್ಕುಂದೂರು ಗ್ರಾಮ ಪಂಚಾಯಿತಿ ಇವರ ಜಂಟಿ ಆಯೋಜನೆಯಲ್ಲಿ ಅಕ್ಟೋಬರ್ 18 ರಂದು ಗ್ರಾಮ ಪಂಚಾಯಿತಿ ಮಟ್ಟದ ಜನಸುರಕ್ಷ ಅಭಿಯಾನ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ನಡೆಯಿತು
ಈ ಅಭಿಯಾನದಲ್ಲಿ ಕೆನರಾ ಬ್ಯಾಂಕಿನ ಮಹಾಪ್ರಬಂಧಕರು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದರು
ಈ ಅಭಿಯಾನದಲ್ಲಿಜನ್ ಧನ್ ಖಾತೆ, PMJJBY, PMSBY, APY ಯೋಜನೆಗಳ ಬಗ್ಗೆ ಮಾಹಿತಿ ಮತ್ತು ನೋಂದಣಿ ಮಾಡಿಸಲಾಯಿತು
ಬ್ಯಾಂಕುಗಳಲ್ಲಿನ ನಿಷ್ಕ್ರಿಯ ಖಾತೆ ಸಕ್ರಿಯ ಗೊಳಿಸುವ ಬಗ್ಗೆ ಮಾಹಿತಿ ಮತ್ತು ಸ್ಥಳದಲ್ಲೇ ಸಕ್ರಿಯಗೊಳಿಸುವ ವ್ಯವಸ್ಥೆ
ಖಾತೆಗಳ KYC ನವೀಕರಣದ ಬಗ್ಗೆ ಮಾಹಿತಿ ಮತ್ತು ಸ್ಥಳದಲ್ಲೇ ನವೀಕರಿಸುವ ವ್ಯವಸ್ಥೆ
10 ವರ್ಷಕ್ಕೂ ಹೆಚ್ಚು ಕಾಲ ವ್ಯವಹಾರ ನಡೆಸದೆ ರಿಜರ್ವ್ ಬ್ಯಾಂಕಿಗೆ ವರ್ಗವಣೆಗೊಂಡ ಖಾತೆಗಳಲ್ಲಿನ ಹಣ (ಆನ್ ಕ್ಲೈಮೆಡ್ ಡಿಪಾಸಿಟ್) ವನ್ನು ಮತ್ತೆ ಹಿಂಪಡೆಯುವ ಬಗ್ಗೆ ಮಾಹಿತಿ
ಖಾತೆಗಳಲ್ಲಿ ನಾಮಿನೇಷನ್ನಿನ ಉಪಯೋಗದ ಬಗ್ಗೆ ಮಾಹಿತಿ ಮತ್ತು ಸ್ಥಳದಲ್ಲೇ ಮಾಡಿಸುವ ವ್ಯವಸ್ಥೆ
ಡಿಜಿಟಲ್ ಫ್ರಾಡ್ ಗಳ ಬಗ್ಗೆ ಮಾಹಿತಿ
ಗ್ರಾಹಕರಿಗೆ ಬ್ಯಾಂಕುಗಳಲ್ಲಿನ ಕುಂದುಕೊರತೆ ಮತ್ತು ದೂರುಗಳ ಪರಿಹಾರಕ್ಕಿರುವ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಲಾಯಿತು
ಈ ಅಭಿಯಾನದಲ್ಲಿ ಗ್ರಾಮದ ಎಲ್ಲಾ ಸಾರ್ವಜನಿಕರು ಭಾಗವಹಿಸಿ ಮೇಲೆ ತಿಳಿಸಿದ ಯೋಜನೆಗಳ ಉಪಯೋಗದ ಬಗ್ಗೆ ಮಾಹಿತಿ ಪಡೆದು ಎಲ್ಲಾ ಯೋಜನೆಗಳಲ್ಲಿ ನೋಂದಾಯಿಸಿಕೊಂಡರು








