ಉಡುಪಿ: ಅಕ್ಟೋಬರ್ 16:ಇತ್ತೀಚಿಗಷ್ಟೇ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು ಅದರ ಉದ್ಘಾಟನೆ ಕೂಡ ನಡೆದಿದೆ ಸುಗಮ ಸಂಚಾರಕ್ಕೆ ಇದರಿಂದ ಅನುಕೂಲವಾಗಿದೆ ಆದರೆ ಇದೀಗ ಸಾರ್ವಜನಿಕರ ಸುರಕ್ಷತೆಗಾಗಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಸಾಮಾಜಿಕ ಕಾರ್ಯಕರ್ತರಾದ ಗಣೇಶ್ ರಾಜ್ ಸರಳೇಬೆಟ್ಟು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಉಡುಪಿಯ ರೈಲ್ವೆ ನಿಲ್ದಾಣ ಹಾಗೂ ಇಂದ್ರಾಳಿ ಪ್ರದೇಶವನ್ನು ಸಂಪರ್ಕಿಸುವ ಈ ಸೇತುವೆ ಮೂಲಕ ದಿನನಿತ್ಯ ಶಾಲಾ ಮಕ್ಕಳು, ಮಹಿಳೆಯರು ಹಾಗೂ ರೈಲ್ವೆ ಪ್ರಯಾಣಿಕರು ಸಂಚರಿಸುತ್ತಿದ್ದು, ರಸ್ತೆ ದಾಟುವ ಸಂದರ್ಭ ಸುರಕ್ಷತೆಗಾಗಿ ಮೆಟ್ಟಲು ಹಾಗೂ ಗ್ರಿಲ್ ನಿರ್ಮಾಣ ಅಗತ್ಯವಾಗಿದೆ
ಅದರ ಜೊತೆಗೆ ಪಾದಚಾರಿಗಳಿಗೆ ಅನುಕೂಲವಾಗುವಂತೆ ಜೀಬ್ರಾ ಕ್ರಾಸಿಂಗ್ ಹಾಕಬೇಕು, ಸೇತುವೆ ಎರಡೂ ಬದಿಗಳಲ್ಲಿ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಟ್ರಾಫಿಕ್ ನಿಯಮದಂತೆ ವೇಗ ಮಿತಿಯ ಬೋರ್ಡುಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಲಾಗಿದೆ.








