ಉಡುಪಿ:ಸೆಪ್ಟೆಂಬರ್ 16 :ಜಿಲ್ಲಾ ನಾಗರೀಕ ಸಮಿತಿಯ ವತಿಯಿಂದ ವೃಂದಾವನಸ್ಥರಾಗಿರುವ ಶಿರೂರು ಮಠದ ಶ್ರೀಲಕ್ಷ್ಮೀವರತೀರ್ಥ ಸ್ವಾಮೀಜಿ ಸ್ಮರಣಾರ್ಥ ಶ್ರೀಕೃಷ್ಣ ಜನ್ಮಾಷ್ಟಮಿ ವಿಟ್ಲಪಿಂಡಿ ಆಚರಣೆಯ ಪ್ರಯುಕ್ತ ಭಕ್ತಾಧಿಗಳಿಗೆ ಹತ್ತು ಸಾವಿರ ಚಕ್ಕುಲಿಗಳನ್ನು ನಗರದ ಮಾರುಥಿ ವೀಥಿಕಾದ ಸ್ವದೇಶ್ ಹೋಟೆಲ್ ಎದುರಿನಲ್ಲಿ ವಿತರಿಸಲಾಯಿತು.
ಉಡುಪಿ ಡಿವೈಎಸ್‌ಪಿ ಪ್ರಭು ಡಿ.ಟಿ., ಬಡುಗುಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಲಕ್ಷ್ಮೀವರ ತೀರ್ಥ ಸ್ವಾಮೀಜಿಯ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ, ವಿಕಾಸ್ ಶೆಟ್ಟಿ, ನಾಗಭೂಷಣ್ ಶೇಟ್ ಒಳಕಾಡು, ಸಮಾಜ ಸೇವಕರಾದ ಭಾಸ್ಕರ ಶೇರಿಗಾರ್, ನಿತ್ಯಾನಂದ ಒಳಕಾಡು, ಶಂಕರ್ ಶೆಟ್ಟಿ ಚಿತ್ಪಾಡಿ, ಉದ್ಯಮಿ ನಾಗೇಶ್ ಹೆಗ್ಡೆ, ವಾಸು ಪ್ರಿಂಟರ್ಸ್‌ನ ವಾಸುದೇವ್ ಚಿಟ್ಪಾಡಿ, ನಾಗರೀಕ ಸಮಿತಿಯ ಪದಾಧಿಕಾರಿಗಳು, ತೈಲ ಖಾದ್ಯತಜ್ಞ ಶಂಕರ್ ನಾಯ್ಕ್ ಉಪಸ್ಥಿತರಿದ್ದರು.








