ನವದೆಹಲಿ: ಆಗಸ್ಟ್ 06:ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಈಗಾಗಲೇ ತಮ್ಮ ನಟನಾ ಪ್ರತಿಭೆಯಿಂದ ದೇಶಾದ್ಯಂತ ಅಭಿಮಾನಿಗಳನ್ನು ಗಳಿಸಿರುವ ನಟಿ
ದೀಪಿಕಾ ಈಗ ಸಾಮಾಜಿಕ ಮಾಧ್ಯಮದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ದೀಪಿಕಾ ಪಡುಕೋಣೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ರೀಲ್ 190 ಕೋಟಿ (1.9 ಬಿಲಿಯನ್) ವೀಕ್ಷಣೆಗಳನ್ನು ಗಳಿಸಿದ್ದು, ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ರೀಲ್ ಇದಾಗಿದೆ.
ಇತ್ತೀಚೆಗೆ, ಅಂತರರಾಷ್ಟ್ರೀಯ ಹೋಟೆಲ್ ಉದ್ಯಮದ ಜಾಗತಿಕ ಬ್ರಾಂಡ್ ರಾಯಭಾರಿಯಾಗಿ ದೀಪಿಕಾ ಪಡುಕೋಣೆ ‘ಇಟ್ ಮ್ಯಾಟರ್ಸ್ ವೇರ್ ಯು ಸ್ಟೇ’ ಎಂಬ ಅಭಿಯಾನದ ಭಾಗವಾಗಿ ಒಂದು ರೀಲ್ ಅನ್ನು ಪೋಸ್ಟ್ ಮಾಡಿದ್ದಾರೆ. ಈ ರೀಲ್ ಕೇವಲ ಎಂಟು ವಾರಗಳಲ್ಲಿ 190 ಕೋಟಿ ವೀಕ್ಷಣೆಗಳನ್ನು ದಾಟಿದೆ. ಬ್ರ್ಯಾಂಡ್ ಪ್ರಚಾರಗಳು ಇಷ್ಟೊಂದು ದೊಡ್ಡ ಸಂಖ್ಯೆಯ ವೀಕ್ಷಣೆಗಳನ್ನು ಪಡೆಯುವುದು ಬಹಳ ಅಪರೂಪ. ಇದರಿಂದ ದೀಪಿಕಾ ಪಡುಕೋಣೆ ಅವರ ಸ್ಟಾರ್ ಡಮ್ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಹೆಚ್ಚಾಗಿದೆ. ದೀಪಿಕಾ ಪಡುಕೋಣೆ ಇನ್‌ಸ್ಟಾಗ್ರಾಮ್‌ನಲ್ಲಿ 80 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
ಈ ದಾಖಲೆಯೊಂದಿಗೆ ದೀಪಿಕಾ ಪಡುಕೋಣೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ (1.6 ಬಿಲಿಯನ್ ವೀಕ್ಷಣೆಗಳು) ಮತ್ತು ಫುಟ್‌ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ (500 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳು) ಅವರನ್ನು ಹಿಂದಿಕ್ಕಿದ್ದಾರೆ. ಅಲ್ಲದೇ ಈ ದಾಖಲೆ ಬರೆದಮೊದಲ ಭಾರತೀಯ ನಟಿ ದೀಪಿಕಾ ಪಡುಕೋಣೆ ಆಗಿದ್ದಾರೆ.








