ಉಡುಪಿ : ಜುಲೈ 30:ಉಡುಪಿ ಜಿಲ್ಲಾ ಮಾಜಿ ಸೈನಿಕರ ವಿವಿದೋದ್ದೇಶ ಸಹಕಾರ ಸಂಘದ 2024-2025ರ 37ನೇ ವರ್ಷದ ವಾರ್ಷಿಕ ಮಹಾಸಭೆಯು ಡಾ ಬಿ ಆರ್ ಅಂಬೇಡ್ಕರ್ ಸಮುದಾಯ ಭವನ ಆದಿ ಉಡುಪಿ ಇದರಲ್ಲಿ ಸಂಘದ ಅಧ್ಯಕ್ಷರಾದ ಕರ್ನಲ್ ಡಾಕ್ಟರ್ ಎಫ್ ಇ ಎ ರಾಡ್ರಿಗಸ್ ಇವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು

ಸಂಘದ ಅಧ್ಯಕ್ಷರು ಮಾತನಾಡಿ ಸಂಘವು , 31. 3.2025ರ ವರ್ಷದಲ್ಲೂ ಎ ವರ್ಗದ ಆಡಿಟಿಂಗ್ ವರ್ಗೀಕರಣ ಪಡೆದಿದ್ದು 20204 25ರ ಸಾಲಿನಲ್ಲಿ ಒಟ್ಟು 346 ಕೋಟಿ ವಾರ್ಷಿಕ ವ್ಯವಹಾರ ನಡೆಸಿ 35. 64 ಕೋಟಿ ಸಾಲವನ್ನು ವಿತರಿಸಿ 99% ಸಾಲವನ್ನು ಮಸೂಲಾತಿ ಸಾಧನೆ ಮಾಡಿ ರೂಪಾಯಿ 1,55,55,555/- ನಿವ್ವಳ ಲಾಭವನ್ನು ಗಳಿಸಿ ಸದಸ್ಯರಿಗೆ 2024 – 25 ರಲ್ಲಿ ಶೇಕಡ 22 ಡಿವಿಡೆಂಟ್ ಘೋಷಿಸಲಾಯಿತು . ಸಂಘದಿಂದ ತ್ವರಿತ ಸೇವೆಯ ಮೂಲಕ ಸದಸ್ಯರ ಹಾಗೂ ಗ್ರಾಹಕರ ಅಶೋತ್ತರಗಳಿಗೆ ಸದಾ ಸ್ಪಂದಿಸುತ್ತದೆ ಎಂದು ತಿಳಿಸಿದರು

ಸಂಘದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಯಾದ ಪರಮಶಿವ ಇವರು ಸಂಘದ 2024 – 25 ನೇ ಸಾಲಿನ ವರದಿಯನ್ನು ಮಂಡಿಸಿದರು


2024 25 ನೇ ಸಾಲಿನಲ್ಲಿ ಸಂಘ ಹಾಗೂ ವೇದಿಕೆಯ ವತಿಯಿಂದ ಹಿರಿಯ ಮಾಜಿ ಸೈನಿಕರ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು ನೀಡಿ ಸರ್ವ ಸದಸ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು

90% ಅಂಕಗಳಿಸಿದ ಮಾಜಿ ಸೈನಿಕರ ಸದಸ್ಯರ ಮಕ್ಕಳ ಪ್ರತಿಬಿಂಬ ಗುರುತಿಸಿ ಅವರಿಗೆ ವಿದ್ಯಾರ್ಥಿ ವೇತನ ನೀಡಿ ಸನ್ಮಾನಿಸಲಾಯಿತು ಆಪತ್ಬಾಂಧವ ಮುಳುಗು ತಜ್ಞ ಈಶ್ವರ ಮಲ್ಪೆ ಅವರಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು
ಜನಪ್ರಿಯ ಲೋಕಸಭಾ ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿಯವರು ಮಾಜಿ ಸೈನಿಕರ ಸದಸ್ಯರುಗಳ ಕುಂದು ಕೊರತೆ ಹಾಗೂ ವೈದ್ಯಕೀಯ ವಿಚಾರದಲ್ಲಿ ಮಾಜಿ ಸೈನಿಕರ ತುರ್ತು ಸಮಸ್ಯೆಗೆ ಸ್ಪಂದಿಸಿ ಮಹಾಸಬೆಗೆ ಭೇಟಿ ಇತ್ತು ಮಾಜಿ ಸೈನಿಕ ಸದಸ್ಯರುಗಳ ಕೊರತೆಯನ್ನು ಆಲಿಸಿ ಸಮಸ್ಯೆಯನ್ನು ಬಗೆಹರಿಸಲು ಸಂಪೂರ್ಣ ಪ್ರಯತ್ನ ಮಾಡುವುದಾಗಿ ಮಹಾಸಭೆಯಲ್ಲಿ ಸದಸ್ಯರಿಗೆ ತಿಳಿಸಿದರು

ಉಡುಪಿ ಜಿಲ್ಲೆಯ ಶಾಸಕರಾದ ಯಶ್ಪಾಲ್ ಸುವರ್ಣ ಅವರು ಸಭೆಗೆ ಭೇಟಿ ಇತ್ತು ಸಂಘದ ಅತ್ಯುತ್ತಮ ಕಾರ್ಯಗಳಿಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ರು.

ಲೋಕಸಭಾ ಸದಸ್ಯರು ಹಾಗೂ ಶಾಸಕರಿಗೆ ಸಂಘ ಹಾಗೂ ವೇದಿಕೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು










