ಉಡುಪಿ : ಜುಲೈ 20:ಉಡುಪಿ ನಗರ ಠಾಣೆಯ ಅನತಿ ದೂರದಲ್ಲಿರುವ ಕಂದಾಯ ಇಲಾಖೆಯ ವಸತಿ ಸಮುಚ್ಛಯದಲ್ಲಿ ಶನಿವಾರ ತಡರಾತ್ರಿಯಿಂದ ರವಿವಾರ ಮುಂಜಾನೆಯ ನಡುವೆ ಕಳ್ಳತನ ನಡೆದಿರುವ ಬಗ್ಗೆ ಪ್ರಕರಣ ದಾಖಲಾಗಿದೆ
ಸುಮಾರು 3 ಮನೆಗಳಿಗೆ ನುಗ್ಗಿರುವ ಕಳ್ಳರು ಸಾವಿರಾರು ಮೌಲ್ಯದ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವ ಸಾಧ್ಯತೆಗಳಿದ್ದು, ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ವರ್ಷದ ಹಿಂದೆಯಷ್ಟೇ ಈ ವಸತಿ ಸಮುಚ್ಚಯಕ್ಕೆ ಕಳ್ಳರು ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದರು. ಆ ಸಮಯದಲ್ಲಿ ಇಲ್ಲಿ ಸಿಸಿಟಿವಿಯೂ ಇರಲಿಲ್ಲ. ಬಳಿಕ ನಿವಾಸಿಗಳೇ ಸೇರಿ ಸಿಸಿಟಿವಿ ಅಳವಡಿಕೆ ಮಾಡಿದ್ದರು. ವರ್ಷದ ಹಿಂದಿನ ಕಳ್ಳತನದ ಆರೋಪಿಗಳ ಪತ್ತೆ ಇನ್ನೂ ನಡೆದಿಲ್ಲ.
ಸುಮಾರು 3 ರಿಂದ 4 ಮಂದಿಯ ಕಳ್ಳರ ತಂಡ ಈ ಕೃತ್ಯ ನಡೆಸಿರುವ ಬಗ್ಗೆ ಸಮುಚ್ಛಯದ ಸಿಸಿಟಿವಿಯಲ್ಲಿ ದ್ರಶ್ಯಾವಳಿಗಳು ದಾಖಲಾಗಿವೆ.
ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.




