Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home मौसम

ನಾಡದೋಣಿ ದುರಂತ ದಲ್ಲಿ ನೀರುಪಾಲಗಿದ್ದ ಓರ್ವನ ಮೃತದೇಹ ಪತ್ತೆ..!!

Dhrishya News by Dhrishya News
16/07/2025
in मौसम, ಸುದ್ದಿಗಳು
0
ನಾಡದೋಣಿ ದುರಂತ ದಲ್ಲಿ ನೀರುಪಾಲಗಿದ್ದ ಓರ್ವನ ಮೃತದೇಹ ಪತ್ತೆ..!!
0
SHARES
38
VIEWS
Share on FacebookShare on Twitter

ಗಂಗೊಳ್ಳಿ:ಜುಲೈ 16:ಮೀನುಗಾರಿಕೆಗೆಂದು ನಾಡದೋಣಿಯೊಂದಿಗೆ ಸಮುದ್ರಕ್ಕೆ ತೆರಳಿದ್ದ ಮೀನುಗಾರರು ನೀರುಪಾಲಾದ ಘಟನೆಗೆ ಸಂಬಂಧಿಸಿದಂತೆ ಓರ್ವ ಮೀನುಗಾರನ ಮೃತದೇಹ ಬುಧವಾರ ಬೆಳಗಿನ ಜಾವ ಪತ್ತೆಯಾಗಿದೆ.

ನಾಡದೋಣಿಯೊಂದಿಗೆ ಮೀನುಗಾರಿಕೆಗೆಂದು ತೆರಳಿದ್ದ ವೇಳೆ ಗಂಗೊಳ್ಳಿಯ ಹಳೆ ಅಳಿವೆ ಪ್ರದೇಶದಲ್ಲಿ ದೋಣಿ ಮಗುಚಿ ಮೂವರು ಮೀನುಗಾರರು ನಾಪತ್ತೆಯಾಗಿದ್ದರು. ಇದೀಗ ನಾಪತ್ತೆಯಾಗಿದ್ದ ಗಂಗೊಳ್ಳಿ ಬೇಲಿಕೆರಿ ನಿವಾಸಿ ಲೋಹಿತ್ ಖಾರ್ವಿ (39) ಅವರ ಮೃತದೇಹ ಪತ್ತೆಯಾಗಿದೆ. ಅವರ ಮೃತದೇಹವನ್ನು ಬೆಳಗಿನ ಜಾವ 4:30ರ ವೇಳೆಗೆ ಮುಳುಗು ತಜ್ಞ ದಿನೇಶ್ ಖಾರ್ವಿ ಅವರ ತಂಡ ಕೋಡಿ ಕಡಲ ತೀರದಲ್ಲಿ ಪತ್ತೆ ಮಾಡಿದೆ.

ಜುಲೈ 15 ರ ಬೆಳಿಗ್ಗೆ ಗಂಗೊಳ್ಳಿಯ ಹಳೆಯ ಅಳಿವೆ ಪ್ರದೇಶದ ಬಳಿ ಈ ದುರಂತ ಸಂಭವಿಸಿದ್ದು, ನಾಲ್ವರು ಮೀನುಗಾರರಿದ್ದ ದೋಣಿ ತೂಫಾನ್‌ಗೆ ಸಿಲುಕಿ ಮಗುಚಿ ಬಿದ್ದಿತ್ತು. ಅವರಲ್ಲಿ, ಮಲ್ಯಾರಬೆಟ್ಟಿನ ಸಂತೋಷ ಖಾರ್ವಿ ಅವರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ.

ನಾಪತ್ತೆಯಾಗಿರುವ ಉಳಿದ ಇಬ್ಬರು ಮೀನುಗಾರರಾದ ಗಂಗೊಳ್ಳಿ ನಿವಾಸಿ ಸುರೇಶ್ ಖಾರ್ವಿ (48) ಮತ್ತು ಮಲ್ಯಾರುಬೆಟ್ಟಿನ ಜಗದೀಶ್ ಖಾರ್ವಿ (50) ಗಾಗಿ ಶೋಧ ಕಾರ್ಯ ಮುಂದುವರಿದಿದೆ. ನಿರಂತರ ಮಳೆ, ಬಿರುಗಾಳಿ ಮತ್ತು ಸಮುದ್ರದಲ್ಲಿನ ಅಲೆಗಳು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿವೆ.

ಜುಲೈ 15ರಂದು 8 – 10 ದೋಣಿಗಳು ಮೀನುಗಾರಿಕೆಗೆಂದು ತೆರಳಿತ್ತು. ದುರಂತಕ್ಕೀಡಾದ ದೋಣಿಯೂ ಬೆಳಗ್ಗೆ 6 ಗಂಟೆಗೆ ಮೀನುಗಾರಿಕೆಗೆ ಹೊರಟಿತ್ತು. ಆದರೆ ಸಮುದ್ರದಲ್ಲಿ ಭಾರೀ ತೂಫಾನ್ ಹಾಗೂ ಗಾಳಿಯ ಒತ್ತಡ ಹೆಚ್ಚಿದ್ದ ಕಾರಣ ಮೀನುಗಾರಿಕೆ ನಡೆಸದೆ ವಾಪಾಸ್ಸಾಗುತ್ತಿದ್ದರು. ಅವರು ಗಂಗೊಳ್ಳಿ ಹಳೆ ಅಳಿವೆ ಪ್ರದೇಶ ತಲುಪುತ್ತಿದ್ದಂತೆ, ಅವರ ದೋಣಿ ತೂಫಾನ್ ಗೆ ಸಿಲುಕಿ ಮಗುಚಿದೆ.

ಈ ವೇಳೆ ಒಬ್ಬರು ದೋಣಿಯಿಂದ ಬಿದ್ದಾಗ ಅವರನ್ನು ರಕ್ಷಿಸಲು ಇನ್ನೊಬ್ಬರು ನೀರಿಗೆ ಹಾರಿದರು. ರಕ್ಷಣೆ ಸಾಧ್ಯವಾಗದೆ ಇದ್ದಾಗ ಮತ್ತೊಬ್ಬರು ನೀರಿಗೆ ಧುಮುಕಿದ್ದಾರೆ. ದುರದೃಷ್ಟವಶಾತ್, ಮೂವರೂ ಕೊಚ್ಚಿ ಹೋಗಿದ್ದಾರೆ. ಸಂತೋಷ್ ಖಾರ್ವಿ ಅವರನ್ನು ಮಾತ್ರ ರಕ್ಷಿಸಲಾಯಿತು. ಗಾಳಿಯ ರಭಸದಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟಾಯಿತು.

Previous Post

ನಾಡದೋಣಿ ಮಗುಚಿ ಬಿದ್ದು ಮೀನುಗಾರರು ನೀರುಪಾಲು..!!

Next Post

ತನ್ನ ಊರಿನ ರಸ್ತೆ ಮಾಡಿಸಿಕೊಡುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ 8ನೇ ತರಗತಿ ವಿದ್ಯಾರ್ಥಿನಿ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ತನ್ನ ಊರಿನ ರಸ್ತೆ ಮಾಡಿಸಿಕೊಡುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ 8ನೇ ತರಗತಿ ವಿದ್ಯಾರ್ಥಿನಿ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಬೀಡಿ ಎಂಡ್ ಟೋಬ್ಯಾಕೊ ಲೇಬರ್ ಯೂನಿಯನ್ ಉಡುಪಿ (ಸಿಐಟಿಯು) ಇದರ 45 ವಾರ್ಷಿಕ ಮಹಾಸಭೆ..!

ಬೀಡಿ ಎಂಡ್ ಟೋಬ್ಯಾಕೊ ಲೇಬರ್ ಯೂನಿಯನ್ ಉಡುಪಿ (ಸಿಐಟಿಯು) ಇದರ 45 ವಾರ್ಷಿಕ ಮಹಾಸಭೆ..!

09/08/2026
ಕಾರ್ಕಳ ಸರಕಾರಿ ಆಸ್ಪತ್ರೆಯ ವ್ಯವಸ್ಥೆ ಸರಿಪಡಿಸಲು ಹಾಗೂ ಅರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸಲು ಸಚಿವರಿಗೆ ಕಾಂಗ್ರೆಸ್ ನಿಯೋಗ ಮನವಿ

ಕಾರ್ಕಳ ಸರಕಾರಿ ಆಸ್ಪತ್ರೆಯ ವ್ಯವಸ್ಥೆ ಸರಿಪಡಿಸಲು ಹಾಗೂ ಅರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸಲು ಸಚಿವರಿಗೆ ಕಾಂಗ್ರೆಸ್ ನಿಯೋಗ ಮನವಿ

09/08/2026
ಅಧಿವಕ್ತಪರಿಷತ್ ವತಿಯಿಂದ ಹಿರಿಯ ವಕೀಲ ಮಟ್ಟಾರು ರತ್ನಾಕರ ಹೆಗ್ಡೆ ಅವರಿಗೆ ಗುರುಪೂರ್ಣಿಮೆ ಅಂಗವಾಗಿ ಗುರುವಂದನೆ

ಅಧಿವಕ್ತಪರಿಷತ್ ವತಿಯಿಂದ ಹಿರಿಯ ವಕೀಲ ಮಟ್ಟಾರು ರತ್ನಾಕರ ಹೆಗ್ಡೆ ಅವರಿಗೆ ಗುರುಪೂರ್ಣಿಮೆ ಅಂಗವಾಗಿ ಗುರುವಂದನೆ

09/08/2026
ಅಜ್ಜರಕಾಡು ಮಹಿಳಾ ಕಾಲೇಜಿನಲ್ಲಿ ಎರಡು ದಿನಗಳ ಕೌಶಲ್ಯಾಭಿವೃದ್ಧಿ ಬೂಟ್‌ಕ್ಯಾಂಪ್‌ಗೆ ಚಾಲನೆ

ಅಜ್ಜರಕಾಡು ಮಹಿಳಾ ಕಾಲೇಜಿನಲ್ಲಿ ಎರಡು ದಿನಗಳ ಕೌಶಲ್ಯಾಭಿವೃದ್ಧಿ ಬೂಟ್‌ಕ್ಯಾಂಪ್‌ಗೆ ಚಾಲನೆ

09/08/2026

Recent News