ಉಡುಪಿ: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ನಿಯೋಗವು ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ರವರನ್ನು ಭೇಟಿ ಮಾಡಿತು.
ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿಯವರನ್ನು ಸ್ವಾಗತಿಸಲಾಯಿತು. ನಂತರ ಕೊರಗ ಸಮುದಾಯದ ಪ್ರಮುಖ ಬೇಡಿಕೆಗಳಾದ ಕೃಷಿ ಯೋಗ್ಯ ಭೂಮಿ, ಯುವಜನರಿಗೆ ಉದ್ಯೋಗ, ಆರೋಗ್ಯಕ್ಕಾಗಿ ವೈದ್ಯಕೀಯ ವೆಚ್ಚ ಪಾವತಿ, ಪೌಷ್ಟಿಕ ಆಹಾರದ ಸಮರ್ಪಕ ಪೂರೈಕೆ ಮತ್ತು ಅಜಲು ಅಸ್ಪೃಶ್ಯತೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಮುಂತಾದ ಅನೇಕ ಸಮಸ್ಯೆಗಳ ಕುರಿತು ಚರ್ಚಿಸಿ ಮನವಿ ನೀಡಲಾಯಿತು.
Oಜಿಲ್ಲಾಧಿಕಾರಿಯವರು ಒಕ್ಕೂಟದ ಮನವಿಗೆ ಸ್ಪಂದಿಸಿ ಶೀಘ್ರವೇ ಸಮುದಾಯಗಳ ಬೇಡಿಕೆಗಳನ್ನು ಪೂರೈಸಲು ಹಂತ ಹಂತವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಒಕ್ಕೂಟದ ನಿಯೋಗದಲ್ಲಿ ಅಧ್ಯಕ್ಷರಾದ ಸುಶೀಲ ನಾಡ, ಸಂಯೋಜಕರಾದ ಕೆ. ಪುತ್ರನ್ ಹೆಬ್ರಿ, ಬೊಗ್ರ ಕೊಕ್ಕರ್ಣೆ, ಶೀನ ಬೆಳ್ಮಣ್, ನರಸಿಂಹ ಪೆರ್ಡೂರು, ಪ್ರೀತಿ ಹೆಬ್ರಿ, ಸುನೀತಾ ಶಿರ್ವ, ಪದ್ಮ ಪದವು, ಸುಪ್ರಿತ ಮುಂಡ್ಕೂರು, ಲಾವಣ್ಯ ಹೆಬ್ರಿ, ಪುಷ್ಪ ಹೆಬ್ರಿ, ಚಂದ್ರಾವತಿ ಹೆಬ್ರಿ, ವಾಸು ಮಣಿಪಾಲ, ನಿಖಿತಾ ಪೆರ್ಡೂರು, ಹರೀಶ ಬೆಳ್ಮಣ್ ಮತ್ತಿತರರು ಇದ್ದರು.