ಮಣಿಪಾಲ, ಜೂ. 28: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ಗೆ ಸೇರಿರುವ ಪ್ರಖ್ಯಾತ ಘಟಕವಾದ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂ ಐ ಟಿ) ಯ ವಿದ್ಯಾರ್ಥಿಗಳ ರಾಕೆಟ್ ತಂಡ ತ್ರಸ್ಟ್ ಎಂಐಟಿ ಅಂತರಾಷ್ಟ್ರೀಯ ರಾಕೆಟ್ ಎಂಜಿನಿಯರಿಂಗ್ ಸ್ಪರ್ಧೆ (IREC) 2025ರಲ್ಲಿ ಅತ್ಯುನ್ನತ ಸಾಧನೆಯನ್ನು ಮಾಡಿ ಸಂಸ್ಥೆಗೆ ಅಭಿಮಾನವನ್ನು ತಂದಿದೆ.
ಈ ಸ್ಪರ್ಧೆ ಟೆಕ್ಸಾಸ್‌ನ ಮಿಡ್‌ಲ್ಯಾಂಡ್‌ನಲ್ಲಿ ಜೂನ್ 9 ರಿಂದ 14ರವರೆಗೆ ಜರಗಿತು.
ಕಟ್ಟುನಿಟ್ಟಾದ ಫ್ಲೈಟ್ ಸುರಕ್ಷತಾ ವಿಮರ್ಶೆಯನ್ನು ಯಶಸ್ವಿಯಾಗಿ ಎದುರಿಸಿ ಉತ್ತೀರ್ಣಗೊಂಡು 138 ಅಂತಾರಾಷ್ಟ್ರೀಯ ತಂಡಗಳ ನಡುವೆ ಸ್ಪರ್ಧಿಸಿ, ತ್ರಸ್ಟ್ ಎಂಐಟಿ ತಂಡವು ಎಸ್ ಡಿ ಎಲ್ ಪೇಲೋಡ್ ಚಾಲೆಂಜ್ ವಿಭಾಗದಲ್ಲಿ 2ನೇ ಸ್ಥಾನ ಪಡೆದಿದೆ. 750 ಯು ಎಸ್ ಡಾಲರ್ ಅನ್ನು ನಗದು ಬಹುಮಾನವಾಗಿ ಗೆದ್ದು ಸಂಸ್ಥೆಗೆ ಅಂತರರಾಷ್ಟ್ರೀಯ ಮಾನ್ಯತೆಯನ್ನು ತಂದಿದೆ.
ಅತೀ ಸ್ಪರ್ಧಾತ್ಮಕವಾದ 30K COTS (ಕಮರ್ಶಿಯಲ್ ಆಫ್ ದ ಶೆಲ್ಫ್) ಉಡಾವಣೆ ವಿಭಾಗದಲ್ಲಿ ಪಾಲ್ಗೊಂಡು, ತಂಡದ ವಾಯು ವೇಗ ರಾಕೆಟ್ ಸ್ಪರ್ಧೆಯ ಆರಂಭದ ಎರಡು ದಿನಗಳಲ್ಲಿ ಎಲ್ಲ ಸುರಕ್ಷತಾ ಶಿಷ್ಟಾಚಾರಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು.
ಅವರ ಪರಿಶ್ರಮದ ಕಠಿನ ಅವಧಿ ಜೂ. 12, 2025 ರಂದು ಬಂದಿತು. ಆ ದಿನ ವಾಯುವೇಗವನ್ನು ಗುರಿಯ ಎತ್ತರಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು ಮತ್ತು ಪ್ಯಾರಾಚ್ಯೂಟ್ ಬಿಡುಗಡೆ ವ್ಯವಸ್ಥೆಗಳನ್ನು ಉಪಯೋಗಿಸಿ ತೊಂದರೆರಹಿತ ಇಳಿಕೆಯನ್ನು ಸಾಧಿಸಿತು. ತ್ರಸ್ಟ್ ಎಂಐಟಿ ರಿಕವರಿ ತಂಡವು ಜಿಪಿಎಸ್ ಸ್ಥಳಾಂಕಗಳನ್ನು ಉಪಯೋಗಿಸಿ ರಾಕೆಟ್ ಅನ್ನು ಯಶಸ್ವಿಯಾಗಿ ಪತ್ತೆಹಚ್ಚುವ ಮೂಲಕ ತಮ್ಮ ತಾಂತ್ರಿಕ ನಿಪುಣತೆಯನ್ನು ಪ್ರದರ್ಶಿಸಿತು. ರಿಕವರಿಯಾದ ವಾಹನವನ್ನು ಅಂತಾರಾಷ್ಟ್ರೀಯ ರಾಕೆಟ್ ಇಂಜಿನಿಯರಿಂಗ್ ಸ್ಪರ್ಧೆಯ ರಿಕವರಿ ತಂಡದಿಂದ ಪರಿಶೀಲಿಸಿ ಅನುಮೋದಿಸಲಾಯಿತು.
ಅಂತರಾಷ್ಟ್ರೀಯ ರಾಕೆಟ್ ಇಂಜಿನಿಯರಿಂಗ್ ಸ್ಪರ್ಧೆ ವಿಶ್ವದ ಅತ್ಯಂತ ಕಠಿಣವಾದ ವಿದ್ಯಾರ್ಥಿ ವಿಮಾನೋತ್ಸಾಹ ವೇದಿಕೆಯಾಗಿದ್ದು, ಈ ಸಾಧನೆಯ ಮೂಲಕ MIT ಮಣಿಪಾಲಿನ ವಿದ್ಯಾರ್ಥಿಗಳ ಸಂಶೋಧನಶೀಲತೆ, ತಾಂತ್ರಿಕ ಜ್ಞಾನ, ಮತ್ತು ವೈಜ್ಞಾನಿಕ ನವೋದ್ಯಮಕ್ಕೆ ನೀಡುತ್ತಿರುವ ಪ್ರೋತ್ಸಾಹವನ್ನು ತೋರಿಸುತ್ತದೆ.
ಮಾಹೆ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ. ಡಿ. ವೆಂಕಟೇಶ್, ವಿ ಎಸ್ ಎಂ(ನಿವೃತ್ತ) ಅವರು ವಿದ್ಯಾರ್ಥಿಗಳ ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿ
ತ್ರಸ್ಟ್ ಎಂಐಟಿ ತಂಡದ ಅಸಾಧಾರಣ ಸಾಧನೆ ಮಾಹೆಯ ವಿಶ್ವ ಮಟ್ಟದ ವೃತ್ತಿಪರರನ್ನು ರೂಪಿಸುವ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಈ ಸಾಧನೆಯು ನಮ್ಮ ವಿದ್ಯಾರ್ಥಿಗಳ ತಾಂತ್ರಿಕ ಮೇರುಮಟ್ಟ ಮತ್ತು ನವೋದ್ಯಮ ಮನೋಭಾವನೆಯನ್ನು ಪ್ರದರ್ಶಿಸುತ್ತದೆ.”
ಎಂಐಟಿ ಮಣಿಪಾಲದ ಡೆವಲಪ್ಮೆಂಟ್ ವಿಭಾಗದ ಸಹ ನಿರ್ದೇಶಕರಾದ ಡಾ. ವಿ. ರಾಮಚಂದ್ರ ಮೂರ್ತಿ ವಿದ್ಯಾರ್ಥಿಗಳನ್ನು ಅಭಿನಂದಿಸಿ
“ಎಸ್ ಡಿ ಎಲ್ ಪೇಲೋಡ್ ಚಾಲೆಂಜ್‌ನಲ್ಲಿ 2ನೇ ಸ್ಥಾನ ಪಡೆಯುವುದು ಮತ್ತು ವಾಯು ವೇಗ ದ ಯಶಸ್ವಿ ಉಡಾವಣೆಯನ್ನು ನಿರ್ವಹಿಸಿರುವುದು ನಮ್ಮ ವಿದ್ಯಾರ್ಥಿಗಳ ಸಾಮರ್ಥ್ಯ ಮತ್ತು ಶಿಕ್ಷಣದ ಮಟ್ಟವನ್ನು ತೋರಿಸುತ್ತದೆ. ಇಂತಹ ಸಾಧನೆಗಳು ವಿದ್ಯಾರ್ಥಿಗಳನ್ನು ಭವಿಷ್ಯದ ವಿಮಾನೋತ್ಸಾಹ ನಾಯಕರನ್ನಾಗಿ ರೂಪಿಸುತ್ತವೆ ಎಂದರು.
ಈ ಅಂತರಾಷ್ಟ್ರೀಯ ಸಾಧನೆ ಎಂಐಟಿ ಮಣಿಪಾಲವನ್ನು ಭಾರತದಲ್ಲಿ ಹಾಗು ಜಾಗತಿಕ ಮಟ್ಟದಲ್ಲಿ ವೈಮಾನಿಕ ಎಂಜಿನಿಯರಿಂಗ್ ಶಿಕ್ಷಣದ ಪ್ರಮುಖ ಕೇಂದ್ರವನ್ನಾಗಿ ಪರಿಗಣಿಸುತ್ತಿದೆ.