Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home मौसम

ಮಾಹೆ ಮಣಿಪಾಲ್: ʼಕ್ಲಿನಿಕಲ್ ಲ್ಯಾಬೋರೇಟರಿ ಶಿಕ್ಷಣ ಮತ್ತು ಸಂಶೋಧನೆʼ ಕುರಿತು 4ನೇ ರಾಷ್ಟ್ರೀಯ ಸಮ್ಮೇಳನ..!!

• ‘ಉದ್ಯಮ-ಶೈಕ್ಷಣಿಕ-ಸಂಶೋಧನಾ ಸಮನ್ವಯತೆ ಮೂಲಕ ಹೊಸತನಕ್ಕೆ ಮುನ್ನುಡಿʼ ಎಂಬ ವಿಷಯದ ಕುರಿತು ಸಮ್ಮೇಳನದಲ್ಲಿ ಚರ್ಚೆ • ದೇಶದಾದ್ಯಂತ 27 ಸಂಸ್ಥೆಗಳ 240ಕ್ಕೂ ಹೆಚ್ಚು ಜನರು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು. • 7 ತಜ್ಞರು ʼಲ್ಯಾಬೋರೇಟರಿ ಮೆಡಿಸಿನ್‌ʼ ಕುರಿತು ವಿಷಯ ಹಂಚಿಕೊಂಡರು.

Dhrishya News by Dhrishya News
12/05/2025
in मौसम
0
0
SHARES
12
VIEWS
Share on FacebookShare on Twitter

ಮಣಿಪಾಲ, ಮೇ 12, 2025: ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನ ವಿಭಾಗ, ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ (MCHP) ಮತ್ತು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಜಂಟಿಯಾಗಿ ಆಯೋಜಿಸಿದ್ದ ‘ಉದ್ಯಮ – ಶೈಕ್ಷಣಿಕ – ಸಂಶೋಧನಾ ಸಮನ್ವಯತೆ ಮೂಲಕ ಹೊಸತನಕ್ಕೆ ಮುನ್ನುಡಿʼ ಎಂಬ ವಿಷಯ ಕುರಿತು ಕೇಂದ್ರೀಕೃತವಾದ ‘ಕ್ಲಿನಿಕಲ್ ಲ್ಯಾಬೋರೇಟರಿ ಶಿಕ್ಷಣ ಮತ್ತು ಸಂಶೋಧನ’ ಸಮ್ಮೇಳನ (NACCLER 2025) ಆಯೋಜಿಸಿದ್ದ, ಯಶಸ್ವಿಯಾಗಿ ನಡೆಸಿತು. ಈ ಸಮ್ಮೇಳನವು ವಾಗಿತ್ತು. 

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಮಾಹೆ, ಮಣಿಪಾಲ್ ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ರವಿರಾಜ ಎನ್.ಎಸ್., ‘ಕೌಶಲ್ಯ ಆಧಾರಿತ ತರಬೇತಿ ಎನ್ನುವುದು ಈಗ ಕೇವಲ ಒಂದು ವಿಚಾರವಾಗಿ ಉಳಿದಿಲ್ಲ, ಆರೋಗ್ಯ ಸಂಬಂಧಿತ ನುರಿತ ವೃತ್ತಿಪರರನ್ನು ಸೃಷ್ಟಿಸುವ ಅಡಿಪಾಯವಾಗಿದೆ. ಇಂದು ಶರ ವೇಗದಲ್ಲಿ ವಿಕಾಸಗೊಳ್ಳುತ್ತಿರುವ ಆರೋಗ್ಯ ಕ್ಷೇತ್ರದಲ್ಲಿ, ಶೈಕ್ಷಣಿಕ ಜ್ಞಾನ ಮತ್ತು ಉದ್ಯಮದ ಅಗತ್ಯಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ತಾಂತ್ರಿಕ ಪರಿಣತಿ ಮತ್ತು ಪ್ರಾಯೋಗಿಕ ಅನ್ವಯದ ನಡುವಿನ ಸಹಯೋಗ ಅತ್ಯಗತ್ಯ. ಈ ಸಮನ್ವಯವನ್ನು ಪ್ರೋತ್ಸಾಹಿಸುವಲ್ಲಿ ಮಾಹೆ ಬದ್ಧವಾಗಿದೆ. ನಮ್ಮಲ್ಲಿ ಓದಿದ ವಿದ್ಯಾರ್ಥಿಗಳು ಕೇವಲ ಡಿಗ್ರಿ ಪಡೆದವರಷ್ಟೇ ಆಗಿರದೆ, ಮೊದಲ ದಿನದಿಂದಲೇ ಆರೋಗ್ಯ ಕ್ಷೇತ್ರದ ಉನ್ನತಿಗಾಗಿ ಕೊಡುಗೆ ನೀಡಲು ಸಿದ್ದವಾಗಿರುವ ನುರಿತು ವೃತ್ತಿಪರರಾಗಿರುತ್ತಾರೆ’ ಎಂದರು. 

MCHP ಡೀನ್ ಡಾ. ಜಿ. ಅರುಣ್ ಮೈಯಾ, ‘ನೈಜ ಸವಾಲುಗಳನ್ನು ಎದುರಿಸುವ ಆರೋಗ್ಯಕ್ಷೇತ್ರದ ಪರಿಹಾರ ನೀಡುವುದು ಮುಂದುವರೆಸಲು ಉದ್ಯಮ-ಶೈಕ್ಷಣಿಕ ಪಾಲುದಾರಿಕೆ ಅತ್ಯಗತ್ಯ ಎನ್ನುವುದನ್ನು MCHP ನಂಬುತ್ತದೆ. ಶೈಕ್ಷಣಿಕ ಜ್ಞಾನವು ಪ್ರಾಯೋಗಿಕ ಆವಿಷ್ಕಾರಗಳಾಗಿ ಪರಿವರ್ತನೆಗೊಳ್ಳುವಲ್ಲಿ, ಸಂಶೋಧನೆಗಳು ಜನರಿಗೆ ಉಪಯೋಗವಾಗುವಲ್ಲಿ ಈ ರೀತಿಯ ಸಹಯೋಗಗಳು ನಿಕಟ ಪರಿಸರವನ್ನು ಸೃಷ್ಟಿಸುತ್ತವೆ’ ಎಂದು ಹೇಳಿದರು. 

ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಸರಿತಾ ಕಾಮತ್ ಯು. ಸ್ವಾಗತ ಕೋರಿದರು. ಸಮ್ಮೇಳನ ಸಂಘಟನಾ ಕಾರ್ಯದರ್ಶಿ ಡಾ. ಕಲೈವಾಣಿ ಎಂ. ಅವರು ಸಮ್ಮೇಳನದ ಅವಲೋಕನ ನೀಡಿದರು, ಸಹ-ಸಂಘಟನಾ ಕಾರ್ಯದರ್ಶಿ ಡಾ. ಅಂಜು ಎಂ. ಧನ್ಯವಾದ ಹೇಳಿದರು.

Previous Post

ಟೆಸ್ಟ್ ಕ್ರಿಕೆಟ್ ಗೆ ವಿರಾಟ್ ಕೊಹ್ಲಿ ನಿವೃತ್ತಿ ಘೋಷಣೆ ..!!

Next Post

ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಬ್ರಹ್ಮ ಕುಂಭಾಭಿಷೇಕ ಸಂಪನ್ನ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಬ್ರಹ್ಮ ಕುಂಭಾಭಿಷೇಕ ಸಂಪನ್ನ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಾರ್ಕಳ ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿಯ ಆಯ್ಕೆ ರದ್ದುಪಡಿಸಬೇಕು:ಶ್ರೀನಿವಾಸ್ ಕಾರ್ಲಾ..!

ಕಾರ್ಕಳ ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿಯ ಆಯ್ಕೆ ರದ್ದುಪಡಿಸಬೇಕು:ಶ್ರೀನಿವಾಸ್ ಕಾರ್ಲಾ..!

20/06/2026
ಮಾಹೆ ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಪತಿಯಾಗಿ ಮೇಜರ್ ಜನರಲ್ (ಡಾ.) ಮ್ಯಾಥ್ಯೂಸ್ ಜೇಕಬ್ ನೇಮಕ 

ಮಾಹೆ ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಪತಿಯಾಗಿ ಮೇಜರ್ ಜನರಲ್ (ಡಾ.) ಮ್ಯಾಥ್ಯೂಸ್ ಜೇಕಬ್ ನೇಮಕ 

20/06/2026
ಬ್ರಹ್ಮಾವರ : ಮೆಸ್ಕಾಂ ಖಾಸಗೀಕರಣಕ್ಕೆ ಆಕ್ಷೇಪ. ಮೆಸ್ಕಾಂ ನೌಕರರ ಸಂಘದ ವತಿಯಿಂದ ಮನವಿ

ಬ್ರಹ್ಮಾವರ : ಮೆಸ್ಕಾಂ ಖಾಸಗೀಕರಣಕ್ಕೆ ಆಕ್ಷೇಪ. ಮೆಸ್ಕಾಂ ನೌಕರರ ಸಂಘದ ವತಿಯಿಂದ ಮನವಿ

20/06/2026
ಜೂನ್ 21-ಗೀತಾ ಮಂದಿರದಲ್ಲಿ ಚಯರ್ ಯೋಗ

ಜೂನ್ 21-ಗೀತಾ ಮಂದಿರದಲ್ಲಿ ಚಯರ್ ಯೋಗ

19/06/2026

Recent News

ಕಾರ್ಕಳ ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿಯ ಆಯ್ಕೆ ರದ್ದುಪಡಿಸಬೇಕು:ಶ್ರೀನಿವಾಸ್ ಕಾರ್ಲಾ..!

ಕಾರ್ಕಳ ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿಯ ಆಯ್ಕೆ ರದ್ದುಪಡಿಸಬೇಕು:ಶ್ರೀನಿವಾಸ್ ಕಾರ್ಲಾ..!

20/06/2026
ಮಾಹೆ ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಪತಿಯಾಗಿ ಮೇಜರ್ ಜನರಲ್ (ಡಾ.) ಮ್ಯಾಥ್ಯೂಸ್ ಜೇಕಬ್ ನೇಮಕ 

ಮಾಹೆ ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಪತಿಯಾಗಿ ಮೇಜರ್ ಜನರಲ್ (ಡಾ.) ಮ್ಯಾಥ್ಯೂಸ್ ಜೇಕಬ್ ನೇಮಕ 

20/06/2026
ಬ್ರಹ್ಮಾವರ : ಮೆಸ್ಕಾಂ ಖಾಸಗೀಕರಣಕ್ಕೆ ಆಕ್ಷೇಪ. ಮೆಸ್ಕಾಂ ನೌಕರರ ಸಂಘದ ವತಿಯಿಂದ ಮನವಿ

ಬ್ರಹ್ಮಾವರ : ಮೆಸ್ಕಾಂ ಖಾಸಗೀಕರಣಕ್ಕೆ ಆಕ್ಷೇಪ. ಮೆಸ್ಕಾಂ ನೌಕರರ ಸಂಘದ ವತಿಯಿಂದ ಮನವಿ

20/06/2026
ಜೂನ್ 21-ಗೀತಾ ಮಂದಿರದಲ್ಲಿ ಚಯರ್ ಯೋಗ

ಜೂನ್ 21-ಗೀತಾ ಮಂದಿರದಲ್ಲಿ ಚಯರ್ ಯೋಗ

19/06/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved