Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ನಿವೃತ್ತ ಗ್ರಂಥಪಾಲಕ ಕೆ. ಗೋವಿಂದ ರಾವ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ..!!

Dhrishya News by Dhrishya News
09/05/2025
in ಸುದ್ದಿಗಳು
0
0
SHARES
17
VIEWS
Share on FacebookShare on Twitter

ಕಾರ್ಕಳ : ಮೇ 09:ಇತ್ತೀಚೆಗೆ ನಿಧನರಾದ ಕಾರ್ಕಳದ ಗ್ರಂಥಾಲಯದ ನಿವೃತ್ತ ಗ್ರಂಥಪಾಲಕ ಕೆ. ಗೋವಿಂದ ರಾವ್ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವು ಹಿರಿಯಂಗಡಿಯ ದುರ್ಗಾಪರಮೇಶ್ವರಿ ದೇವಳದ ಸಭಾಂಗಣದಲ್ಲಿ ಜರಗಿತು. 

ನುಡಿನಮನ ಸಲ್ಲಿಸಿದ ಶಿಕ್ಷಕ ರಾಜೇಂದ್ರ ಭಟ್ ಕೆ ಅವರು ಗೋವಿಂದ ರಾವ್ ಅವರು ಕೇವಲ ಗ್ರಂಥಪಾಲಕ ಮಾತ್ರ ಆಗಿರದೇ ಗ್ರಂಥಾಲಯಕ್ಕೆ ಬಂದ ಹಿರಿಯ, ಕಿರಿಯ ಓದುಗರನ್ನು ಪ್ರೋತ್ಸಾಹಿಸುವ ಮತ್ತು ಮಾರ್ಗದರ್ಶನ ಮಾಡುವ ಕೆಲಸವನ್ನು ಮಾಡುತ್ತಿದ್ದರು. ನನ್ನ ಮತ್ತು ನನ್ನಂತಹ ನೂರಾರು ಓದುಗರ ಬಾಲ್ಯ, ಹದಿಹರೆಯ ಮತ್ತು ಯೌವ್ವನಗಳನ್ನು ಪುಸ್ತಕಗಳ ಓದಿನ ಮೂಲಕ 

ಶ್ರೀಮಂತಗೊಳಿಸಿದ ಕೀರ್ತಿಯು ಅವರಿಗೆ ಸಲ್ಲುತ್ತದೆ. ಅದೇ ರೀತಿ ಕಾರ್ಕಳದ ಗಾಂಧಿ ಮೈದಾನದ ವಿಸ್ತಾರವಾದ ಗ್ರಂಥಾಲಯದ ಕಟ್ಟಡ ನಿರ್ಮಾಣವಾಗಲು ಅವರು ಓದುಗರ ಮೂಲಕ ಕಾರ್ಡ್ ಚಳುವಳಿಯನ್ನು ಮಾಡಿದ್ದು ಪರೋಕ್ಷವಾಗಿ ಕಾರಣ ಆಗಿತ್ತು. ಹಾಗೆಯೇ ಅವಿಭಜಿತ ಕರಾವಳಿ ಜಿಲ್ಲೆಗಳ ಮಟ್ಟದ ಚೆಸ್ ಫೆಡರೇಶನ್ ಸ್ಥಾಪನೆ ಮಾಡಿ ಅಖಿಲಭಾರತ ಮಟ್ಟದ ಚೆಸ್ ಟೂರ್ನಿ ಸಂಘಟನೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು. 

ನಿವೃತ್ತ ಪ್ರಾಂಶುಪಾಲರಾದ ಮಿತ್ರಪ್ರಭಾ ಹೆಗ್ಡೆ ಅವರು ಮಾತಾಡಿ ನನಗೆ ಮತ್ತು ನನ್ನ ಕಾಲೇಜಿನ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಬೇಕಾಗುವ ನೂರಾರು ಪುಸ್ತಕಗಳನ್ನು ಒದಗಿಸಿ ಅವರು ಮಹದುಪಕಾರ ಮಾಡಿದ್ದಾರೆ ಎಂದರು. 

ಅದೇ ರೀತಿ ನಿವೃತ್ತ ಶಿಕ್ಷಕ ಮತ್ತು ಸಾಮಾಜಿಕ ಕಾರ್ಯಕರ್ತರಾದ ಬಿಪಿನಚಂದ್ರ ಪಾಲ್ ಅವರು ಮಾತಾಡಿ ತನ್ನ ಮತ್ತು ಗೋವಿಂದ ರಾಯರ ದೀರ್ಘಕಾಲದ ಒಡನಾಟವನ್ನು ಸ್ಮರಿಸಿ ಅವರು ನಿಜವಾದ ಅರ್ಥದಲ್ಲಿ ಒಬ್ಬ ಗ್ರಂಥ ಸೇವಕರಾಗಿದ್ದರು ಮತ್ತು ನನ್ನ ಪತ್ರಿಕೋದ್ಯಮಕ್ಕೆ ಬೇಕಾದ ಗ್ರಂಥಗಳನ್ನು ಹುಡುಕಿ ನನಗೆ ಕೊಡುತ್ತಿದ್ದರು ಎಂದರು. 

ಕಾಂಗ್ರೆಸ್ ನಾಯಕರಾದ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರು ಮಾತನಾಡಿ ಗೋವಿಂದರಾಯರು ಇಂದಿನ ಸಮಾಜಕ್ಕೆ ಉನ್ನತವಾದ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ಅವರ ಜ್ಞಾನಸತ್ರವನ್ನು ಅವರ ಮಕ್ಕಳು ಕ್ಷಮಾ ರಾವ್, ಶುಭದ್ ರಾವ್, ಡಾಕ್ಟರ್ ಶರದ್ ರಾವ್ ಅವರು ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದರು. ಮಾಜಿ ಸಚಿವರು ಮತ್ತು ಪೂರ್ವ ಸಂಸದರಾದ ಕೆ. ಜಯಪ್ರಕಾಶ್ ಹೆಗ್ಡೆ ಅವರು ಗೋವಿಂದರಾಯರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದರು. 

ಛತ್ರಪತಿ ಫೌಂಡೇಶನ್ ಅಧ್ಯಕ್ಷರಾದ ಗಿರೀಶ್ ರಾವ್ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿ ವಂದಿಸಿದರು.

Previous Post

ಶ್ರೀ ಮಾರಿಯಮ್ಮ ದೇವಸ್ಥಾನ ಕಾರ್ಕಳ: ವರ್ಷವಾಧಿ ಮಾರಿಪೂಜೆ..!!

Next Post

ಶಾಸಕ, ಸಂಸದ ವಿಶೇಷ ಪ್ರಯತ್ನ. ಕೇಂದ್ರ ಪ್ರವಾಸೋದ್ಯಮ ಸಚಿವರಿಂದ ಖುದ್ದು ವೀಕ್ಷಣೆ.!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಶಾಸಕ, ಸಂಸದ ವಿಶೇಷ ಪ್ರಯತ್ನ. ಕೇಂದ್ರ ಪ್ರವಾಸೋದ್ಯಮ ಸಚಿವರಿಂದ ಖುದ್ದು ವೀಕ್ಷಣೆ.!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಪೊಲೀಸ್ ಇಲಾಖೆಗೆ ಅರ್ಜಿ ಸಲ್ಲಿಸುವ ಮತ್ತು ಪರೀಕ್ಷಾ ವಿಧಾನದ ಬಗ್ಗೆ ಮಾಹಿತಿ ಕಾರ್ಯಾಗಾರ

ಪೊಲೀಸ್ ಇಲಾಖೆಗೆ ಅರ್ಜಿ ಸಲ್ಲಿಸುವ ಮತ್ತು ಪರೀಕ್ಷಾ ವಿಧಾನದ ಬಗ್ಗೆ ಮಾಹಿತಿ ಕಾರ್ಯಾಗಾರ

29/06/2026
ಆಯುಷ್ಮಾನ್ ಯೋಜನೆ ಅಸಮರ್ಪಕತೆ ಖಂಡಿಸಿ ಜಿಲ್ಲಾಧಿಕಾರಿಗೆ ಬಿಜೆಪಿ ಯುವಮೋರ್ಚಾದಿಂದ ಮನವಿ..!

ಆಯುಷ್ಮಾನ್ ಯೋಜನೆ ಅಸಮರ್ಪಕತೆ ಖಂಡಿಸಿ ಜಿಲ್ಲಾಧಿಕಾರಿಗೆ ಬಿಜೆಪಿ ಯುವಮೋರ್ಚಾದಿಂದ ಮನವಿ..!

29/06/2026
ಲಯನ್ಸ್ ಎಂದರೆ ಸೇವೆ ಮಾತ್ರವಲ್ಲ, ಅದು ವ್ಯಕ್ತಿತ್ವ ಬೆಳವಣಿಗೆ : ಲ. ಹರಿಪ್ರಸಾದ್ ರೈ

ಲಯನ್ಸ್ ಎಂದರೆ ಸೇವೆ ಮಾತ್ರವಲ್ಲ, ಅದು ವ್ಯಕ್ತಿತ್ವ ಬೆಳವಣಿಗೆ : ಲ. ಹರಿಪ್ರಸಾದ್ ರೈ

29/06/2026
‘Sparkle Like No Other’, (ಬೇರೆಲ್ಲೂ ಕಾಣದ ಹೊಳಪು) ಪ್ರಚಾರ ಬಿಡುಗಡೆಯ ಮೂಲಕ ಆದಿತ್ಯ ಬಿರ್ಲಾ ಜ್ಯುವೆಲ್ಲರಿ ಅವರ ಇಂದ್ರಿಯ ವಜ್ರದ ಹೊಳಪನ್ನು ಮುನ್ನೆಲೆಗೆ ತಂದಿದೆ

‘Sparkle Like No Other’, (ಬೇರೆಲ್ಲೂ ಕಾಣದ ಹೊಳಪು) ಪ್ರಚಾರ ಬಿಡುಗಡೆಯ ಮೂಲಕ ಆದಿತ್ಯ ಬಿರ್ಲಾ ಜ್ಯುವೆಲ್ಲರಿ ಅವರ ಇಂದ್ರಿಯ ವಜ್ರದ ಹೊಳಪನ್ನು ಮುನ್ನೆಲೆಗೆ ತಂದಿದೆ

29/06/2026

Recent News

ಪೊಲೀಸ್ ಇಲಾಖೆಗೆ ಅರ್ಜಿ ಸಲ್ಲಿಸುವ ಮತ್ತು ಪರೀಕ್ಷಾ ವಿಧಾನದ ಬಗ್ಗೆ ಮಾಹಿತಿ ಕಾರ್ಯಾಗಾರ

ಪೊಲೀಸ್ ಇಲಾಖೆಗೆ ಅರ್ಜಿ ಸಲ್ಲಿಸುವ ಮತ್ತು ಪರೀಕ್ಷಾ ವಿಧಾನದ ಬಗ್ಗೆ ಮಾಹಿತಿ ಕಾರ್ಯಾಗಾರ

29/06/2026
ಆಯುಷ್ಮಾನ್ ಯೋಜನೆ ಅಸಮರ್ಪಕತೆ ಖಂಡಿಸಿ ಜಿಲ್ಲಾಧಿಕಾರಿಗೆ ಬಿಜೆಪಿ ಯುವಮೋರ್ಚಾದಿಂದ ಮನವಿ..!

ಆಯುಷ್ಮಾನ್ ಯೋಜನೆ ಅಸಮರ್ಪಕತೆ ಖಂಡಿಸಿ ಜಿಲ್ಲಾಧಿಕಾರಿಗೆ ಬಿಜೆಪಿ ಯುವಮೋರ್ಚಾದಿಂದ ಮನವಿ..!

29/06/2026
ಲಯನ್ಸ್ ಎಂದರೆ ಸೇವೆ ಮಾತ್ರವಲ್ಲ, ಅದು ವ್ಯಕ್ತಿತ್ವ ಬೆಳವಣಿಗೆ : ಲ. ಹರಿಪ್ರಸಾದ್ ರೈ

ಲಯನ್ಸ್ ಎಂದರೆ ಸೇವೆ ಮಾತ್ರವಲ್ಲ, ಅದು ವ್ಯಕ್ತಿತ್ವ ಬೆಳವಣಿಗೆ : ಲ. ಹರಿಪ್ರಸಾದ್ ರೈ

29/06/2026
‘Sparkle Like No Other’, (ಬೇರೆಲ್ಲೂ ಕಾಣದ ಹೊಳಪು) ಪ್ರಚಾರ ಬಿಡುಗಡೆಯ ಮೂಲಕ ಆದಿತ್ಯ ಬಿರ್ಲಾ ಜ್ಯುವೆಲ್ಲರಿ ಅವರ ಇಂದ್ರಿಯ ವಜ್ರದ ಹೊಳಪನ್ನು ಮುನ್ನೆಲೆಗೆ ತಂದಿದೆ

‘Sparkle Like No Other’, (ಬೇರೆಲ್ಲೂ ಕಾಣದ ಹೊಳಪು) ಪ್ರಚಾರ ಬಿಡುಗಡೆಯ ಮೂಲಕ ಆದಿತ್ಯ ಬಿರ್ಲಾ ಜ್ಯುವೆಲ್ಲರಿ ಅವರ ಇಂದ್ರಿಯ ವಜ್ರದ ಹೊಳಪನ್ನು ಮುನ್ನೆಲೆಗೆ ತಂದಿದೆ

29/06/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved