Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಆರೋಗ್ಯ

ಮಾಹೆಯಿಂದ ‘ಮಣಿಪಾಲ್ ಹಾಸ್ಪೈಸ್ ಮತ್ತು ರೆಸ್ಪೈಟ್ ಕೇಂದ್ರ’ ಲೋಕಾರ್ಪಣೆ- ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆ..!!

ಭಿನ್ನ ಆಲೋಚನೆಯ ಈ ಕೇಂದ್ರವು ವಿಶ್ವವಿದ್ಯಾನಿಲಯದ ಬೋಧನಾ ಆಸ್ಪತ್ರೆಯೊಂದಿಗೆ ಕೈ ಜೋಡಿಸಿದೆ. ​ ಕರ್ನಾಟಕದಲ್ಲಿಯೇ ಅತಿ ದೊಡ್ಡ ಮತ್ತು ಭಾರತದಲ್ಲಿ ಎರಡನೇ ಅತಿ ದೊಡ್ಡ ಹಾಸ್ಪೈಸ್ ಮತ್ತು ರೆಸ್ಪೈಸ್ ಕೇಂದ್ರ 100% ಜನೋಪಕಾರಿ ಮತ್ತು ಎಲ್ಲರಿಗೂ ಉಚಿತ ಸೇವೆ ಪ್ರಮುಖ ಎರಡು ಸೇವೆಗಳನ್ನು ಇದು ನೀಡುತ್ತದೆ: ಹಾಸ್ಪೈಸ್ ಮತ್ತು ರೆಸ್ಪೈಟ್

Dhrishya News by Dhrishya News
30/04/2025
in ಆರೋಗ್ಯ, ಮುಖಪುಟ
0
0
SHARES
21
VIEWS
Share on FacebookShare on Twitter

ಮಣಿಪಾಲ – ಏಪ್ರಿಲ್ 30, 2025 : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE- ಮಾಹೆ) ಉಡುಪಿಯ ಹಾವಂಜೆ ಬಳಿ, ಇಂದು ಏಪ್ರಿಲ್ 30, 2025ರಂದು ‘ಮಣಿಪಾಲ್ ಹಾಸ್ಪೈಸ್ ಮತ್ತು ರೆಸ್ಪೈಟ್ ಸೆಂಟರ್’ (MHRC) ಅನ್ನು ಅನಾವರಣಗೊಳಿಸುವ ಮೂಲಕ ಭಾರತೀಯ ಆರೋಗ್ಯ ಕ್ಷೇತ್ರದಲ್ಲಿಯೇ ಒಂದು ಹೆಗ್ಗುರುತನ್ನು ಮೂಡಿಸಿದೆ. ದೇಶದಲ್ಲಿಯೇ ಉತ್ಕೃಷ್ಟವಾದ ಈ ಕೇಂದ್ರವನ್ನು ಆಂಧ್ರಪ್ರದೇಶದ ಘನತೆವೆತ್ತ ರಾಜ್ಯಪಾಲರು, ನಿವೃತ್ತ ನ್ಯಾಯಮೂರ್ತಿ ಶ್ರೀ ಸೈಯದ್ ಅಬ್ದುಲ್ ನಜೀರ್ ಅವರು ಉದ್ಘಾಟಿಸಿದರು.

ಎಂಎಚ್‌ಆರ್‌ಸಿ ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲರಾದ ಶ್ರೀ ಸೈಯದ್ ಅಬ್ದುಲ್ ನಜೀರ್, “ಮಾಹೆಯು MHRC ಯೋಜನೆಯ ಮೂಲಕ, ಗಂಭೀರ ಮತ್ತು ಜೀವನದ ಕೊನೆಯ ಹಂತದಲ್ಲಿರುವ ರೋಗಿಗಳ ಮತ್ತು ಅವರ ಕುಟುಂಬದವರ ನೋವು ನಿವಾರಿಸುವ ಮಾನವೀಯತೆಯ ಕೆಲಸವನ್ನು ಒಂದು ಮೂಲಭೂತ ಮಾನವ ಹಕ್ಕು ಎನ್ನುವಂತೆ ಪರಿಗಣಿಸಿರುವುದು ಶ್ಲಾಘನೀಯ’ ಎಂದರು.

ಕ್ಯಾನ್ಸರ್ ಪ್ರಕರಣಗಳ ಕುರಿತು ಆತಂಕಕಾರಿ ಅಂಕಿಅಂಶಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ರಾಜ್ಯಪಾಲರು, “2022ರಲ್ಲಿ 14 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ಭಾರತದಲ್ಲಿ ವರದಿಯಾಗಿದೆ. ಅದರಲ್ಲಿ ಶೇ 10 ರಷ್ಟು ಜನರಿಗೆ ಮಾತ್ರ ಆರೈಕೆ ಪಡೆಯುವ ಆರ್ಥಿಕ ಶಕ್ತಿ ಇದೆ. MHRC ಯೋಜನೆಯು ಒಂದು ಮಹತ್ವದ ಹೆಜ್ಜೆಯಾಗಿದ್ದು, ಇದು ಆಸ್ಪತ್ರೆ ಕೇಂದ್ರಿತ ಮಾದರಿಗಳಿಂದ ದೂರವಾಗಿ, ಆತ್ಮೀಯತೆಯ ಆರೈಕೆಯನ್ನು ಒದಗಿಸುತ್ತದೆ. ಇದರಿಂದಾಗಿ ಕುಟುಂಬಗಳ ಮೇಲಿನ ಭಾವನಾತ್ಮಕ ಮತ್ತು ಆರ್ಥಿಕ ಸಂಕಷ್ಟವನ್ನು ಬಹಳವಾಗಿ ಕಡಿಮೆ ಮಾಡುತ್ತದೆ” ಎಂದು ರಾಜ್ಯಪಾಲರು ಹೇಳಿದರು.

‘ಮಾಹೆಯ ಈ ಯೋಜನೆಯು ‘ಮಾನವ ಸೇವೆ ಮಾಧವ ಸೇವೆ’ ಎನ್ನುವ ಮಾತನ್ನು ನೆನಪಿಸಿತು. ವಿವಿಧ ನೆರವುಗಳ ಮೂಲಕ ಉಚಿತವಾದ, ವೈಯಕ್ತಿಕಗೊಳಿಸಿದ ಮತ್ತು ಗೌರವಾನ್ವಿತವಾಗಿ ಜೀವನದ ಕೊನೆಯ ಕ್ಷಣಗಳನ್ನು ಕಳೆಯಲು ಈ ಕೇಂದ್ರವು ಅನುವು ಮಾಡಿಕೊಡುತ್ತದೆ. ಇದು ದೇಶಕ್ಕೆ ಒಂದು ಮಾದರಿಯಾದ ಯೋಜನೆಯಾಗಿದೆ’ ಎಂದು ತಿಳಿಸಿದರು.

ಶ್ರೀಮತಿ ವಾಸಂತಿ ಆರ್ ಪೈ, ಟ್ರಸ್ಟಿ, ಮಾಹೆ ಟ್ರಸ್ಟ್, ಡಾ ರಂಜನ್ ಪೈ, ಮಾಹೆ ಟ್ರಸ್ಟ್ ಅಧ್ಯಕ್ಷರು ಮತ್ತು ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ(ಎಂಇಎಂಜಿ) ಮುಖ್ಯಸ್ಥರು, ಡಾ. ಅಶೋಕ್ ಪೈ, ಅಧ್ಯಕ್ಷರು ಟಿಎಂಎ ಪೈ ಫೌಂಡೇಶನ್, ಡಾ ಎಚ್.ಎಸ್. ಬಲ್ಲಾಳ್, ಪ್ರೊ ಚಾನ್ಸಲರ್ ಮಾಹೆ, ಲೆಫ್ಟಿನೆಂಟ್ ಜನರಲ್ (ಡಾ) ಎಂಡಿ ವೆಂಕಟೇಶ್, ವೈಸ್ ಚಾನ್ಸಲರ್, ಸಂಸದ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಶ್ರೀ ಯಶ್‌ಪಾಲ್ ಆನಂದ ಸುವರ್ಣ, ಮಾಜಿ ಶಾಸಕ ಅಭಯಚಂದ್ರ ಜೈನ್ ಮತ್ತಿತರ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಮಾಹೆ ಹಿರಿಯ ಅಧಿಕಾರಿಗಳಾದ ಡಾ ನಾರಾಯಣ ಸಭಾಹಿತ್, ಪ್ರೊ ವೈಸ್ ಚಾನ್ಸಲರ್ (ಟೆಕ್ನಾಲಾಜಿ & ಸೈನ್ಸ್), ಡಾ ಶರತ್ ಕೆ ರಾವ್, ಪ್ರೊ ವೈಸ್ ಚಾನ್ಸಲರ್ (ಹೆಲ್ತ್ ಸೈನ್ಸ್), ಡಾ ಮಧು ವೀರರಾಘವನ್, ಪ್ರೊ ವೈಸ್ ಚಾನ್ಸಲರ್ ಮಾಹೆ ಬೆಂಗಳೂರು, ಡಾ ದಿಲೀಪ್ ಜಿ ನಾಯ್ಕ್ ಪ್ರೊ ವೈಸ್ ಚಾನ್ಸಲರ್ ಮಂಗಳೂರು, ಡಾ ರವಿರಾಜ ಎನ್ ಎಸ್, ಸಿಒಒ- ಆಪರೇಷನ್ಸ್, ಡಾ ಪಿ ಗಿರಿಧರ್ ಕಿಣಿ, ರಿಜಿಸ್ಟ್ರಾರ್, ಮಾಹೆ, ಮಣಿಪಾಲ್, ಡಾ ಆನಂದ್ ವೇಣುಗೋಪಾಲ್ ಸಿಒಒ – ಟೀಚಿಂಗ್ ಹಾಸ್ಪಿಟಲ್ಸ್, ಮಾಹೆ, ಮಣಿಪಾಲ್, ಡಾ ಪದ್ಮರಾಜ್ ಹೆಗ್ಡೆ, ಡೀನ್ ಕೆಎಂಸಿ, ಮಣಿಪಾಲ್, ಡಾ ನವೀನ್ ಸಾಲಿನ್ಸ್ , ಅಸೋಸಿಯೇಟ್ ಡೀನ್ , ಪ್ರೊಫೆಸರ್ ಮತ್ತು ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಪ್ಯಾಲಿಯೇಟಿವ್ ಮೆಡಿಸಿನ್ ಮತ್ತು ಸಪೋರ್ಟ್ ಕೇರ್ ವಿಭಾಗದ ಮುಖ್ಯಸ್ಥರು.

ವಿಸ್ತೃತ ಹಸಿರು ಕ್ಯಾಂಪಸ್‌ನಲ್ಲಿ ಉಚಿತ ಪ್ಯಾಲಿಯೇಟಿವ್ ಆರೈಕೆ:

MHRCಯು ಮಣಿಪಾಲದ ಹೊರಭಾಗದಲ್ಲಿ, ಸ್ವರ್ಣಾ ನದಿಯ ಉದ್ದಕ್ಕೂ ಪ್ರಶಾಂತವಾದ 12-ಎಕರೆ ಕ್ಯಾಂಪಸ್‌ನಲ್ಲಿದೆ, ರೋಗ ಗುಣಪಡಿಸಲು ಅಗತ್ಯವಿರುವ ಶಾಂತ ವಾತಾವರಣ ನಿರ್ಮಿಸಲು 78% ನಷ್ಟು ಪ್ರದೇಶದಲ್ಲಿ ಹಸಿರನ್ನು ಕಾಪಿಟ್ಟುಕೊಳ್ಳಲಾಗಿದೆ. ಜೀವನವನ್ನು ಸೀಮಿತಗೊಳಿಸುವ ಕಾಯಿಲೆ ಇರುವ ರೋಗಿಗಳಿಗೆ ಸಮಗ್ರ ಮತ್ತು ರೋಗಿ ಕೇಂದ್ರಿತ ಆರೈಕೆ ನೀಡಬೇಕು ಎನ್ನುವುದನ್ನು ಉದ್ದೇಶದಿಂದ ಇದನ್ನು ನಿರ್ಮಿಸಲಾಗಿದೆ. ಈ ಸೇವೆ ಸಂಪೂರ್ಣ ಉಚಿತವಾಗಿದ್ದು, ಜೂನ್ 1, 2025 ರಂದು ಕಾರ್ಯಾರಂಭ ಮಾಡಲಿದೆ. ಮೊದಲು 35 ಹಾಸಿಗೆಗಳೊಂದಿಗೆ ಪ್ರಾಂಭವಾಗಲಿರುವ ಈ ಸೌಲಭ್ಯವು ನಂತರ 100 ಹಾಸಿಗೆಗಳಿಗೆ ವಿಸ್ತಾರಗೊಳ್ಳಲಿದೆ. ಮೆಡಿಕಲ್ ಕಾಲೇಜ್ ಮತ್ತು ಟೆರಿಟರಿ ಕೇರ್ ಹಾಸ್ಪಿಟಲ್ ಜೊತೆ ಸಂಯೋಜಿತವಾಗಿರುವ ದೊಡ್ಡ ಸೌಲಭ್ಯದ ಭಾರತದ ಏಕೈಕ ಹಾಸ್ಪೈಸ್ ಕೇಂದ್ರ ಇದಾಗಿದೆ. ಕ್ಯಾನ್ಸರ್ ಮತ್ತು ಕ್ಯಾನ್ಸರೇತರ ರೋಗಿಗಳಿಗೂ ಇಲ್ಲಿ ಆರೈಕೆ ನೀಡಲಾಗುವುದು.

ಎಂಎಚ್‌ಆರ್‌ಸಿ ಹಾಸ್ಪೈಸ್ ಮತ್ತು ರೆಸ್ಪೈಟ್ ಸೇವೆಯನ್ನು ಒಂದೇ ಸೂರಿನಡಿ ನೀಡುತ್ತದೆ. ಸಮಗ್ರ ನೋವು ಮತ್ತು ರೋಗಲಕ್ಷಣಗಳ ನಿರ್ವಹಣೆ, ಗಾಯ ಮತ್ತು ಸ್ಟೊಮಾ ಕೇರ್, ನರ್ಸಿಂಗ್ ಮತ್ತು ಪುನರ್ವಸತಿ ಸೇವೆಗಳು ಇಲ್ಲಿ ಲಭ್ಯವಿರುತ್ತದೆ. ವೈದ್ಯರು, ದಾದಿಯರು, ಸಮಾಲೋಚಕರು, ಮನಶ್ಶಾಸ್ತ್ರಜ್ಞರು, ಫಿಸಿಯೋಥೆರಪಿಸ್ಟ್, ಒಕ್ಕ್ಯುಪೇಶನಲ್ ಥೆರಪಿಸ್ಟ್ಸ್, ಸಾಮಾಜಿಕ ಕಾರ್ಯಕರ್ತರು ಮತ್ತು ಸ್ವಯಂಸೇವಕರನ್ನು ಒಳಗೊಂಡ ಬಹುಶಿಸ್ತೀಯ ತಂಡವು ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಸಮಗ್ರ ಆರೈಕೆಯನ್ನು ನೀಡಲಿದ್ದಾರೆ.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಬಗ್ಗೆ:

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಯು ಎಮಿನೆನ್ಸ್ ಡೀಮ್ಡ್-ಟು-ಬಿ ಯುನಿವರ್ಸಿಟಿಯ ಸಂಸ್ಥೆಯಾಗಿದೆ. MAHE ಆರೋಗ್ಯ ವಿಜ್ಞಾನ (HS), ಮ್ಯಾನೇಜ್‌ಮೆಂಟ್, ಕಾನೂನು, ಮಾನವಿಕ ಮತ್ತು ಸಮಾಜ ವಿಜ್ಞಾನ (MLHS), ಮತ್ತು ತಂತ್ರಜ್ಞಾನ ಮತ್ತು ವಿಜ್ಞಾನ (T&S) ಸ್ಟ್ರೀಮ್‌ಗಳಾದ್ಯಂತ ಮಣಿಪಾಲ, ಮಂಗಳೂರು, ಬೆಂಗಳೂರು, ಜಮ್ಷೆಡ್‌ಪುರ ಮತ್ತು ದುಬೈನಲ್ಲಿರುವ ತನ್ನ ಘಟಕ ಘಟಕಗಳ ಮೂಲಕ 400 ವಿಶೇಷತೆಗಳನ್ನು ನೀಡುತ್ತದೆ. ಶೈಕ್ಷಣಿಕ, ಅತ್ಯಾಧುನಿಕ ಮೂಲಸೌಕರ್ಯ ಮತ್ತು ಸಂಶೋಧನೆಗೆ ಗಮನಾರ್ಹ ಕೊಡುಗೆಗಳಲ್ಲಿ ಗಮನಾರ್ಹವಾದ ದಾಖಲೆಯೊಂದಿಗೆ, MAHE ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಮತ್ತು ಮೆಚ್ಚುಗೆಯನ್ನು ಗಳಿಸಿದೆ. ಅಕ್ಟೋಬರ್ 2020 ರಲ್ಲಿ, ಭಾರತ ಸರ್ಕಾರದ ಶಿಕ್ಷಣ ಸಚಿವಾಲಯವು MAHE ಗೆ ಪ್ರತಿಷ್ಠಿತ ಇನ್‌ಸ್ಟಿಟ್ಯೂಷನ್ ಆಫ್ ಎಮಿನೆನ್ಸ್ ಸ್ಥಾನಮಾನವನ್ನು ನೀಡಿತು. ಪ್ರಸ್ತುತ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟಿನಲ್ಲಿ (NIRF) 4 ನೇ ಸ್ಥಾನದಲ್ಲಿದೆ, MAHE ಪರಿವರ್ತಕ ಕಲಿಕೆಯ ಅನುಭವ ಮತ್ತು ಶ್ರೀಮಂತ ಕ್ಯಾಂಪಸ್ ಜೀವನವನ್ನು ಬಯಸುವ ವಿದ್ಯಾರ್ಥಿಗಳಿಗೆ ಆದ್ಯತೆಯ ಆಯ್ಕೆಯಾಗಿದೆ, ಹಾಗೆಯೇ ಉನ್ನತ ಪ್ರತಿಭೆಗಳನ್ನು ಹುಡುಕುತ್ತಿರುವ ರಾಷ್ಟ್ರೀಯ ಮತ್ತು ಬಹು-ರಾಷ್ಟ್ರೀಯ ಕಾರ್ಪೊರೇಟ್‌ಗಳಿಗೆ.ಕೂಡ ಆದ್ಯತೆಯ ಆಯ್ಕೆಯಾಗಿದೆ

Previous Post

ಶ್ರೀ ಬ್ರಹ್ಮ ಮುಗ್ಗೆರ್ಕಳ ದೈವಸ್ಥಾನದ ವರ್ಷಾವಧಿ ನೇಮೋತ್ಸವ ಸಂಪನ್ನ

Next Post

ಉಡುಪಿ :ಶ್ರೀ ಕೃಷ್ಣನಿಗೆ ಸುವರ್ಣಾಭಿಷೇಕ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಉಡುಪಿ :ಶ್ರೀ ಕೃಷ್ಣನಿಗೆ ಸುವರ್ಣಾಭಿಷೇಕ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿ: ಮಳೆ ಕಡಿಮೆ ಇರುವುದರಿಂದ ಉಡುಪಿ ಜಿಲ್ಲೆ ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇರುವುದಿಲ್ಲ : ಜಿಲ್ಲಾಧಿಕಾರಿ ಮಾಹಿತಿ…!!

26/06/2024

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಆರು ವರ್ಷಗಳ ಹೋರಾಟಕ್ಕೆ ಸುವರ್ಣ ಫಲ: ಯುಪಿಎಸ್‌ಸಿಯಲ್ಲಿ 11ನೇ ರ‍್ಯಾಂಕ್ – ಐಎಎಸ್ ಆಗಿ ಮೆರೆದ ನೂಪುರ್ ಗೋಯೆಲ್..!!

ಆರು ವರ್ಷಗಳ ಹೋರಾಟಕ್ಕೆ ಸುವರ್ಣ ಫಲ: ಯುಪಿಎಸ್‌ಸಿಯಲ್ಲಿ 11ನೇ ರ‍್ಯಾಂಕ್ – ಐಎಎಸ್ ಆಗಿ ಮೆರೆದ ನೂಪುರ್ ಗೋಯೆಲ್..!!

29/01/2026
ಕೆ.ಪಿ.ಎಸ್. ಪುಂಜಾಲಕಟ್ಟೆ ಪ್ರೌಢಶಾಲೆ: 9ನೇ ತರಗತಿ ವಿದ್ಯಾರ್ಥಿಗಳಿಗೆ “ಚಿಣ್ಣರ ವನದರ್ಶನ” ಪ್ರವಾಸ

ಕೆ.ಪಿ.ಎಸ್. ಪುಂಜಾಲಕಟ್ಟೆ ಪ್ರೌಢಶಾಲೆ: 9ನೇ ತರಗತಿ ವಿದ್ಯಾರ್ಥಿಗಳಿಗೆ “ಚಿಣ್ಣರ ವನದರ್ಶನ” ಪ್ರವಾಸ

28/01/2026
ಬೆಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಕಾರ್ಕಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಮಮತಾ ಅಂಚನ್ ಆಯ್ಕೆ

ಬೆಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಕಾರ್ಕಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಮಮತಾ ಅಂಚನ್ ಆಯ್ಕೆ

28/01/2026
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಫೆಬ್ರವರಿ 3, 2026 ರ ಮಂಗಳವಾರದಂದು ಮುಂದಿನ ಲಿವರ್ & ಲಿವರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಫೆಬ್ರವರಿ 3, 2026 ರ ಮಂಗಳವಾರದಂದು ಮುಂದಿನ ಲಿವರ್ & ಲಿವರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್

28/01/2026

Recent News

ಆರು ವರ್ಷಗಳ ಹೋರಾಟಕ್ಕೆ ಸುವರ್ಣ ಫಲ: ಯುಪಿಎಸ್‌ಸಿಯಲ್ಲಿ 11ನೇ ರ‍್ಯಾಂಕ್ – ಐಎಎಸ್ ಆಗಿ ಮೆರೆದ ನೂಪುರ್ ಗೋಯೆಲ್..!!

ಆರು ವರ್ಷಗಳ ಹೋರಾಟಕ್ಕೆ ಸುವರ್ಣ ಫಲ: ಯುಪಿಎಸ್‌ಸಿಯಲ್ಲಿ 11ನೇ ರ‍್ಯಾಂಕ್ – ಐಎಎಸ್ ಆಗಿ ಮೆರೆದ ನೂಪುರ್ ಗೋಯೆಲ್..!!

29/01/2026
ಕೆ.ಪಿ.ಎಸ್. ಪುಂಜಾಲಕಟ್ಟೆ ಪ್ರೌಢಶಾಲೆ: 9ನೇ ತರಗತಿ ವಿದ್ಯಾರ್ಥಿಗಳಿಗೆ “ಚಿಣ್ಣರ ವನದರ್ಶನ” ಪ್ರವಾಸ

ಕೆ.ಪಿ.ಎಸ್. ಪುಂಜಾಲಕಟ್ಟೆ ಪ್ರೌಢಶಾಲೆ: 9ನೇ ತರಗತಿ ವಿದ್ಯಾರ್ಥಿಗಳಿಗೆ “ಚಿಣ್ಣರ ವನದರ್ಶನ” ಪ್ರವಾಸ

28/01/2026
ಬೆಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಕಾರ್ಕಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಮಮತಾ ಅಂಚನ್ ಆಯ್ಕೆ

ಬೆಂಗಳೂರು ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಕಾರ್ಕಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ಮಮತಾ ಅಂಚನ್ ಆಯ್ಕೆ

28/01/2026
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಫೆಬ್ರವರಿ 3, 2026 ರ ಮಂಗಳವಾರದಂದು ಮುಂದಿನ ಲಿವರ್ & ಲಿವರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಫೆಬ್ರವರಿ 3, 2026 ರ ಮಂಗಳವಾರದಂದು ಮುಂದಿನ ಲಿವರ್ & ಲಿವರ್ ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್

28/01/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved