Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ದೊಡ್ಡಣ್ಣ ಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಮೇ 1ರಂದು ಪಂಚಮುಖಿ ಗಾಯತ್ರಿ ದೇವಿ ಪ್ರತಿಷ್ಠಾಪನೆ ಹಾಗೂ ಮೇ 4ಕ್ಕೆ ಬ್ರಹ್ಮ ಕಲಶೋತ್ಸವ ಸಂಭ್ರಮ..!!

Dhrishya News by Dhrishya News
29/04/2025
in ಸುದ್ದಿಗಳು
0
0
SHARES
27
VIEWS
Share on FacebookShare on Twitter

ಉಡುಪಿ : ಏಪ್ರಿಲ್ 29:ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ಕಪಿಲ ಮಹರ್ಷಿಗಳ ದಿವ್ಯ ಸನ್ನಿಧಾನವಾದ ಗಾಯತ್ರಿ ಧ್ಯಾನಪೀಠದಲ್ಲಿ ನೂತನವಾಗಿ ರಚಿಸಲಾದ ಶಿಲಾಮಯ ಗುಡಿಯಲ್ಲಿ ಪಂಚಮುಖಿ ಗಾಯತ್ರಿ ದೇವಿಯ ಶಿಲಾಬಿಂಬ ಪ್ರತಿಷ್ಠಾಪನೆಯು ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ಶ್ರೀ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮಿ ನರಸಿಂಹ ಪೀಠ ಹರಿ ದಿವ್ಯ ಕ್ಷೇತ್ರ ಶ್ರೀ ಹರಿಹರಪುರ ಹಾಗೂ ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಯವರ ದಿವ್ಯ ಉಪಸ್ಥಿತಿಯಲ್ಲಿ ನೆರವೇರಲಿದೆ

 ಆ ಪ್ರಯುಕ್ತ ಇದೇ ತಿಂಗಳ ತಾರೀಕು ಮೂವತ್ತರ ಬುದವಾರ ಮೊದಲ್ಗೊಂಡು ಮೇ 4ರ ಭಾನುವಾರದ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ..

ತಾರೀಕು 30ರ ಬೆಳಿಗ್ಗೆ ಗಂಟೆ ಎಂಟರಿಂದ ಋತ್ವಿಜರ ಸ್ವಾಗತ ಸಾಮೂಹಿಕ ದೇವತಾ ಪ್ರಾರ್ಥನೆ, ಅರಣೀಮ ಥನ ತೋರಣಮುಹೂರ್ತ ಉಗ್ರಾಣಮಹೂರ್ತ ಆಲಯ ಪ್ರತಿಗ್ರಹ ಆದ್ಯ ಗಣಪತಿಯಾಗ ನವಗ್ರಹ ಯಾಗ ಮೃತ್ಯುಂಜಯ ಯಾಗ ಹಾಗೂ ಸಾಯಂಕಾಲ ಗಂಟೆ ಆರದಿಂದ ನೂತನ ಆಲಯದಲ್ಲಿ ಸಪ್ತಶುದ್ಧಿ ಪ್ರಸಾದ ಶುದ್ದಿ ಪಂಚಮೂರ್ತಿ ಆರಾಧನೆ ಸಹಿತ ವಿಪ್ರೋಚಿಷ್ಟ, ರತ್ನನ್ಯಾಸ ಭೂವರಹ ಮಂತ್ರ ಹೋಮ ಪ್ರಕ್ರಿಯೆ, ಅಷ್ಟಬಂಧ ಆಧಿವಾಸ ಪೀಠಾಧಿವಾ ಸ, ಸಪ್ತಾಧಿವಾಸ ಪೂಜೆ, ಅಷ್ಟಾವಧಾನ ಸೇವೆ, ತಾರೀಕು ಒಂದರ ಗುರುವಾರ ಬೆಳಿಗ್ಗೆ ಗಂಟೆ ಆರರಿಂದ ಪಂಚಗವ್ಯ ಪುಣ್ಯಾಹ ಸರ್ವ ಪ್ರಾಯಶ್ಚಿತ್ತ ಪವಮಾನ ಸೂಕ್ತ ಯಾಗ ಬೆಳಿಗ್ಗೆ ಏಳಕ್ಕೆ ದಿವ್ಯ ಕ್ಷೇತ್ರ ಶ್ರೀ ಹರಿಹರಪುರ ಕ್ಷೇತ್ರದ ಪೀಠಾಧಿಪತಿಗಳಿಗೆ ಸುಮಂಗಲಿ ಯರಿಂದ ಪೂರ್ಣ ಕುಂಭ ಸ್ವಾಗತ,

 ಪ್ರಾತಃಕಾಲ ಒದಗುವ ಎಂಟಕ್ಕೆ ಒದಗುವ ವೃಷಭ ಲಗ್ನ ಸುಮೂಹೂ ರ್ತದಲ್ಲಿ ಅಷ್ಟ ಬಂಧ ಸಹಿತ ಪಂಚಮುಖಿ ಗಾಯತ್ರಿ ದೇವಿಯ ಶಿಲಾ ಬಿಂಬ ಪ್ರತಿಷ್ಠೆ,ನ್ಯಾಸ ವಿಧಿ ಪ್ರತಿಜ್ಞಾವಿಧಿ ಮೇಧಾಸಿದ್ದಿ ಗಾಯತ್ರಿ ಯಾಗ ಪ್ರಸನ್ನ ಪೂಜೆ, ಪಲ್ಲ ಪೂಜೆ ಹಾಗೂ ಮಹಾ ಅನ್ನಸಂತರ್ಪಣೆ 

ಸಾಯಂಕಾಲ ಗಂಟೆ ಆರದಿಂದ ಗಾಯತ್ರಿ ಕಲ್ಪೋಕ್ತ ಪೂಜೆ,ವೇದ ಮಾರ್ಗಪ್ರದ ಗಾಯತ್ರಿ ಷಟ್ಚಕ್ರ ಆರಾಧನೆ,

ತಾರೀಕು ಎರಡರ ಶುಕ್ರವಾರದಂದು ಬೆಳಿಗ್ಗೆ ಗಂಟೆ ಎಂಟರಿಂದ ಕಲಾತತ್ವ ಹೋಮ ತತ್ವ ಕಲಶಾಭಿಷೇಕ ಶ್ರೀ ಗಾಯತ್ರಿ ಸಹಸ್ರನಾಮ ಮಹಾಯಾಗ ಮಹಾ ಅನ್ನಸಂತರ್ಪಣೆ 

ಸಾಯಂಕಾಲ ಗಂಟೆ ಆರರಿಂದ ಶ್ರೀ ಸಾವಿತ್ರಿ ಕಲ್ಪೋಕ್ತ ಪೂಜೆ ರಕ್ಷಾ ಪ್ರದಸಾವಿತ್ರಿ ಪೂಜೆ ಕಾಲಚಕ್ರ ನಿಯಾಮಕ ಸಾವಿತ್ರಿ ಆರಾಧನೆ, ಅಷ್ಟಾವಧಾನ ಸೇವೆ 

ತಾರೀಕು ಮೂರರ ಶನಿವಾರದಂದು ಬೆಳಿಗ್ಗೆ ಗಂಟೆ ಎಂಟರಿಂದ ಶಾಕಲಾ ಋಕ್ ಸಂಹಿತ ಪಾರಾಯಣ ಆಗ್ನೇಯಾಸ್ರ ಮಂತ್ರ ಯಾಗ,ಐಕ್ಯ ಮತ್ಯ ಭಾಗ್ಯ ಸೂಕ್ತ ಹೋಮ ಅನ್ನಸಂತರ್ಪಣೆ  

ಸಾಯಂಕಾಲ ಗಂಟೆ ಆರರಿಂದ ಸರಸ್ವತಿ ಕಲ್ಪೋಕ್ತ ಪೂಜೆ ಬಾಲ ಸರಸ್ವತಿ ಪೂಜೆ ಸರಸ್ವತಿ ಆರಾಧನೆ ಅಧಿವಾಸ ಹೋಮ ಪಂಚವಿಂಶತಿ ದ್ರವ್ಯ ಮೀಳಿತ ಏಕೋತ್ತರ ತ್ರಿಶತ ಬ್ರಹ್ಮಕಲಶಾ ಧಿವಾಸ,ತಾರೀಕು ನಾಲ್ಕರ ಭಾನುವಾರ ಬೆಳಿಗ್ಗೆ ಗಂಟೆ ಏಳರಿಂದ ಪಂಚಗವ್ಯ ಪುಣ್ಯಾಹ ಮಂಗಳ ಗಣಯಾಗ ಪಂಚಾಮೃತ ಅಭಿಷೇಕ, ಋಕ್ ಸಂಹಿತ ಅಭಿಮಂತ್ರಿತ ಮಧು ಅಭಿಷೇಕ,

ಬೆಳಿಗ್ಗೆ 8.40ಕ್ಕೆ ಒದಗುವ ವೃಷಭ ಲಗ್ನ ಸುಮಹೂರ್ತದಲ್ಲಿ ಪಂಚವಿ ವಿಂಶತಿ ದ್ರವ್ಯ ಮೀಳಿತ ಏಕೋತ್ತರ ತ್ರಿಶತ ಬ್ರಹ್ಮಕುಂಭಾಭಿಷೇಕ,, ಸೌರ ಸೂಕ್ತ ಹೋಮ ವ್ಯಾಸ ಪೂಜೆ ಮಹಾಪೂಜೆ, ಪಲ್ಲಪೂಜೆ ಮಹಾ ಅನ್ನಸಂತರ್ಪಣೆ ನೆರವೇರಲಿದೆ

ಮೇ ತಿಂಗಳ ತಾರೀಕು ಒಂದರಂದು ಗಾಯತ್ರಿ ಪ್ರತಿಷ್ಠೆಯ ಧಾರ್ಮಿಕ ಸಭಾ ಕಾರ್ಯಕ್ರಮವು ಬೆಳಿಗ್ಗೆ 11:30ಗೆ ಆರಂಭವಾಗಲಿದ್ದು ಪರಮ ಪೂಜ್ಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ 

ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಅಧ್ಯಕ್ಷತೆಯಲ್ಲಿ ನೆರವೇರಲಿರುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಬಸವರಮಾನಂದ ಸ್ವಾಮೀಜಿ ಶ್ರೀ ಸಿದ್ದಲಿಂಗೇಶ್ವರ ಮಠ ವನಕಲ್ಲು ನೆಲಮಂಗಲ ಬೆಂಗಳೂರು ಹಾಗೂ ಶ್ರೀ ಶ್ರೀ ವಾಸುದೇವ ಸದಾಶಿವ ಆಶ್ರಮ ಮಹಾಸ್ವಾಮಿಜಿ, ಶ್ರೀ ಬಾಳೇ ಕುದ್ರು ಮಠ ಹಂಗಾರಕಟ್ಟೆ ಇವರು ದಿವ್ಯ ಉಪಸ್ಥಿತಿಯನ್ನು ನೀಡಲಿದ್ದಾರೆ..

 ಉಡುಪಿಯ ಶಾಸಕರಾದ ಯಶ್ ಪಾಲ್ ಸುವರ್ಣ ಹಾಗೂ ಕಾಪು ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಕಲ್ಕೂರ ಪ್ರತಿಷ್ಠಾನ ರಿಜಿಸ್ಟರ್ಡ್ ಮಂಗಳೂರು ಇದರ ಅಧ್ಯಕ್ಷರಾದ ಪ್ರದೀಪ್ ಕಲ್ಕೂರ,ವಿಶ್ವ ಹಿಂದೂ ಪರಿಷತ್ ಉಡುಪಿ ಜಿಲ್ಲಾ ಸಹ ಕಾರ್ಯದರ್ಶಿ ವಿಕ್ಯಾತ್ ಭಟ್ ಅವರು ಮುಖ್ಯ ಅತಿಥಿಗಳಾಗಲಿದ್ದಾರೆ…

ತಾರೀಕು ನಾಲ್ಕರಂದು ನೆರವಿರಲಿರುವ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಚಿತ್ರಾಪುರ ಮಠದ ಶ್ರೀ ಶ್ರೀ ವಿದ್ಯೆಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ ಶ್ರೀ ಗುರೂಜಿಯವರ ಅಧ್ಯಕ್ಷತೆಯಲ್ಲಿ ನೆರವೇರಲಿರುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯರಾದ ಶ್ರೀ ಕೆ ಕೋಟ ಶ್ರೀನಿವಾಸ್ ಪೂಜಾರಿ ಮಾಜಿ ವಿಧಾನಸಭಾ ಸದಸ್ಯರಾದ ಶ್ರೀ ಕೆ ರಘುಪತಿ ಭಟ್ ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದಂತಹ ಶ್ರೀ ಜಯಕರ್ ಶೆಟ್ಟಿ ಇಂದ್ರಾಳಿ ಉಡುಪಿ ನಗರಸಭೆಯ ಅಧ್ಯಕ್ಷರಾದಂತಹ ಶ್ರೀ ಪ್ರಭಾಕರ್ ಪೂಜಾರಿ, ಶ್ರೀ ವಾದಿರಾಜ ಕೆ ಉಪಾಧ್ಯಾಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಕರ್ನಾಟಕ ಬ್ಯಾಂಕ್ ಉಡುಪಿ ಇವರುಗಳು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಈ ಧಾರ್ಮಿಕ ಸಭೆಯಲ್ಲಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಾಗೂ ಸಮಾಜಮುಖಿಯಾಗಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿರುತ್ತಾರೆ

Previous Post

ಪಾಕಿಸ್ತಾನದ 16 ಯೂಟ್ಯೂಬ್ ಚಾನಲ್ ಗಳನ್ನು ನಿಷೇದಿಸಿ ಕೇಂದ್ರ ಸರ್ಕಾರ ಅದೇಶ..!!

Next Post

ಮಲಬಾರ್ ಗೋಲ್ಡ್ ವತಿಯಿಂದ ‘ತನ್ವಿಕಾ’ ನೂತನಆಭರಣ ಸಂಗ್ರಹ ಅನಾವರಣ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಮಲಬಾರ್ ಗೋಲ್ಡ್ ವತಿಯಿಂದ ‘ತನ್ವಿಕಾ’ ನೂತನಆಭರಣ ಸಂಗ್ರಹ ಅನಾವರಣ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಮಾಹೆ–ಟೆನ್ವಿಕ್ ಸ್ಪೋರ್ಟ್ಸ್ ಸಹಯೋಗಕ್ಕೆ ಚಾಲನೆ : ಕ್ರೀಡಾ ಶಿಕ್ಷಣ ಹಾಗೂ ಹೈ-ಪರ್ಫಾರ್ಮೆನ್ಸ್ ಸೆಂಟರ್‌ಗಳ ಲೋಕಾರ್ಪಣೆ..!

ಮಾಹೆ–ಟೆನ್ವಿಕ್ ಸ್ಪೋರ್ಟ್ಸ್ ಸಹಯೋಗಕ್ಕೆ ಚಾಲನೆ : ಕ್ರೀಡಾ ಶಿಕ್ಷಣ ಹಾಗೂ ಹೈ-ಪರ್ಫಾರ್ಮೆನ್ಸ್ ಸೆಂಟರ್‌ಗಳ ಲೋಕಾರ್ಪಣೆ..!

29/04/2026
ಕುಸಿದುಬಿದ್ದ ಅಪರಿಚಿತ ಸಾವು; ಸೂಚನೆ..!

ಕುಸಿದುಬಿದ್ದ ಅಪರಿಚಿತ ಸಾವು; ಸೂಚನೆ..!

29/04/2026
ನಿಟ್ಟೆಯಲ್ಲಿ ಬ್ರಹ್ಮಕುಮಾರೀಸ್ ವತಿಯಿಂದ ಮಕ್ಕಳ ಬೇಸಿಗೆ ಶಿಬಿರ ಆರಂಭ..!!

ನಿಟ್ಟೆಯಲ್ಲಿ ಬ್ರಹ್ಮಕುಮಾರೀಸ್ ವತಿಯಿಂದ ಮಕ್ಕಳ ಬೇಸಿಗೆ ಶಿಬಿರ ಆರಂಭ..!!

29/04/2026
ಉಡುಪಿ: ಮೇ 01ರಂದು ವಿಶ್ವ ಕಾರ್ಮಿಕರ ದಿನಾಚರಣೆ; ಬ್ರಹತ್ ಮೆರವಣಿಗೆ..!

ಉಡುಪಿ: ಮೇ 01ರಂದು ವಿಶ್ವ ಕಾರ್ಮಿಕರ ದಿನಾಚರಣೆ; ಬ್ರಹತ್ ಮೆರವಣಿಗೆ..!

29/04/2026

Recent News

ಮಾಹೆ–ಟೆನ್ವಿಕ್ ಸ್ಪೋರ್ಟ್ಸ್ ಸಹಯೋಗಕ್ಕೆ ಚಾಲನೆ : ಕ್ರೀಡಾ ಶಿಕ್ಷಣ ಹಾಗೂ ಹೈ-ಪರ್ಫಾರ್ಮೆನ್ಸ್ ಸೆಂಟರ್‌ಗಳ ಲೋಕಾರ್ಪಣೆ..!

ಮಾಹೆ–ಟೆನ್ವಿಕ್ ಸ್ಪೋರ್ಟ್ಸ್ ಸಹಯೋಗಕ್ಕೆ ಚಾಲನೆ : ಕ್ರೀಡಾ ಶಿಕ್ಷಣ ಹಾಗೂ ಹೈ-ಪರ್ಫಾರ್ಮೆನ್ಸ್ ಸೆಂಟರ್‌ಗಳ ಲೋಕಾರ್ಪಣೆ..!

29/04/2026
ಕುಸಿದುಬಿದ್ದ ಅಪರಿಚಿತ ಸಾವು; ಸೂಚನೆ..!

ಕುಸಿದುಬಿದ್ದ ಅಪರಿಚಿತ ಸಾವು; ಸೂಚನೆ..!

29/04/2026
ನಿಟ್ಟೆಯಲ್ಲಿ ಬ್ರಹ್ಮಕುಮಾರೀಸ್ ವತಿಯಿಂದ ಮಕ್ಕಳ ಬೇಸಿಗೆ ಶಿಬಿರ ಆರಂಭ..!!

ನಿಟ್ಟೆಯಲ್ಲಿ ಬ್ರಹ್ಮಕುಮಾರೀಸ್ ವತಿಯಿಂದ ಮಕ್ಕಳ ಬೇಸಿಗೆ ಶಿಬಿರ ಆರಂಭ..!!

29/04/2026
ಉಡುಪಿ: ಮೇ 01ರಂದು ವಿಶ್ವ ಕಾರ್ಮಿಕರ ದಿನಾಚರಣೆ; ಬ್ರಹತ್ ಮೆರವಣಿಗೆ..!

ಉಡುಪಿ: ಮೇ 01ರಂದು ವಿಶ್ವ ಕಾರ್ಮಿಕರ ದಿನಾಚರಣೆ; ಬ್ರಹತ್ ಮೆರವಣಿಗೆ..!

29/04/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved