ಸುರತ್ಕಲ್ :ಫೆಬ್ರವರಿ 14: ಇಳಿಜಾರಿನಲ್ಲಿ ನಿಲ್ಲಿಸಲಾದ ಟ್ಯಾಂಕರ್ ಒಂದು ಚಾಲಕನಿಲ್ಲದೆ ಚಲಿಸಿ ಸರಣಿ ಅಪಘಾತ ಸಂಭವಿಸಿದ ಘಟನೆ ಕುಳಾಯಿ ಜಂಕ್ಷನ್‌ನಲ್ಲಿ ಗುರುವಾರ ರಾತ್ರಿ 7.45 ಗಂಟೆಗೆ ಸಂಭವಿಸಿದೆ.
ನಾಗಾಲ್ಯಾಂಡ್ ನೋಂದಣಿ ಹೊಂದಿದ್ದ ಟ್ಯಾಂಕರ್ ಹೈಡ್ರೋಜನ್ ಪೆರಾಕ್ಸೈಡ್ ಲೋಡಿಂಗ್‌ಗಾಗಿ ಬಂದಿತ್ತು ಎನ್ನಲಾಗಿದೆ ಅಪಘಾತದಲ್ಲಿ ಒಂದು ಸ್ಕೂಟರ್, ಕಾರು, ಎರಡು ರಿಕ್ಷಾ ಜಖಂಗೊಂಡಿದ್ದು ಸಮೀಪದ ಕ್ಲಿನಿಕ್ ಹಾಗೂ ಮನೆಯೊಂದರ ಮುಂಭಾಗದ ಶೀಟ್‌ಗೆ ಹಾನಿಯಾಗಿದೆ.
ವಿದ್ಯಾನಗರ ಒಳ ರಸ್ತೆಯ ಮೇಲಿನಿಂದ ಇಳಿಜಾರಿನಲ್ಲಿ ನೇರವಾಗಿ ಹೆದ್ದಾರಿಗೆ ಇಳಿದ ಟ್ಯಾಂಕರ್ ಗಂಟೆಗೆ 40 ಕಿ.ಮೀ. ವೇಗದಲ್ಲಿ ಮುನ್ನುಗ್ಗಿ ಸಮೀಪದ ರಿಕ್ಷಾ ನಿಲ್ದಾಣಕ್ಕೆ ನುಗ್ಗಿತಲ್ಲದೆ ವಿದ್ಯುತ್ ಕಂಬಕ್ಕೆ ಒರಸಿಕೊಂಡು ಹೋಗಿದೆ. ಢಿಕ್ಕಿ ಹೊಡೆದಿದ್ದಲ್ಲಿ ಮತ್ತೂಂದು ಅನಾಹುತಕ್ಕೆ ಕಾರಣವಾಗುತ್ತಿತ್ತು. ಸಮೀಪದಲ್ಲಿದ್ದ ವೈದ್ಯರ ಕ್ಲಿನಿಕ್‌ನಲ್ಲಿ ರೋಗಿಗಳು ಕುಳಿತುಕೊಂಡಿದ್ದು ಯಾವುದೇ ಅಪಾಯವಾಗಿಲ್ಲ. ರಿಕ್ಷಾ ಚಾಲಕರು ಓಡಿ ತಪ್ಪಿಸಿಕೊಂಡರು. ಸಮೀಪದಲ್ಲೇ ಇದ್ದ ಕುಳಾಯಿ ಜಂಕ್ಷನ್ ಟ್ರಾಫಿಕ್ ಸಿಗ್ನಲ್ ಕಂಬ ಕುಸಿದು ಬಿದ್ದಿದೆ.
ಇಲ್ಲಿನ ಸಿಗ್ನಲ್ ಕಂಬಕ್ಕೆ ಹೆದ್ದಾರಿ ಯಲ್ಲಿ ಸಾಗುವ ವಾಹನಗಳು ಪದೇಪದೆ ಢಿಕ್ಕಿ ಹೊಡೆದು ಉರುಳುತ್ತಿರುವುದು ಎರಡನೇ ಬಾರಿ. ಇದರಲ್ಲಿದ್ದ ಎಲೆಕ್ಟ್ರಾನಿಕ್ ಉಪಕರಣಗಳು ಹಾನಿಗೊಂಡರೆ, ಸುರತ್ಕಲ್ ಪೊಲೀಸ್ ಠಾಣೆಯ ವತಿ ಯಿಂದ ಸುರಕ್ಷೆ ನಿಟ್ಟಿನಲ್ಲಿ ಹಾಕಲಾದ ಸಿಸಿಟಿವಿ ಹಾನಿಗೊಂಡಿದೆ. ಸುದ್ದಿ ತಿಳಿಯುತ್ತಿದ್ದಂತೆ ತಂಡ ತಂಡವಾಗಿ ನೋಡಲು ಬರುವ ಜನರನ್ನು ತಡೆಯುವುದೇ ಪೊಲೀಸರಿಗೆ ಕಷ್ಟ ವಾಯಿತು. ಇತ್ತ ಟ್ಯಾಂಕರ್ ಅಪಘಾ ತವಾದರೂ ಚಾಲಕನ ಸುಳಿವೇ ಇರಲಿಲ್ಲ. ಎಸಿಪಿ ನಜ್ಮಾ ಫಾರೂಕಿ, ಸಿಐ ಮಹೇಶ್ ಪ್ರಸಾದ್, ಟ್ರಾಫಿಕ್ ಪೊಲೀ ಸರು ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.