Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ದಂಪತಿ.ಕಾಮ್ ಉಚಿತ ನೋಂದಣಿ ಕಚೇರಿ ಉದ್ಘಾಟನೆ..!!

Dhrishya News by Dhrishya News
13/02/2025
in ಮುಖಪುಟ
0
0
SHARES
24
VIEWS
Share on FacebookShare on Twitter

ಉಡುಪಿ: ಫೆಬ್ರವರಿ 13: ಭಾರತ, ಅಮೆರಿಕಾ, ಕೆನಡಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಇತ್ಯಾದಿ ದೇಶಗಳಲ್ಲಿರುವ ಉಡುಪಿ ಶ್ರೀಪುತ್ತಿಗೆಮಠದ ಶಾಖೆಗಳ ವಿಸ್ತೃತ ಸೇವಾಪ್ರಕಲ್ಪ ಜಾಗತಿಕ ಹಿಂದೂ ವಿವಾಹ ವೇದಿಕೆ ದಂಪತಿ.ಕಾಮ್‌ಗೆ ಉಚಿತ ನೋಂದಣಿ ಕಚೇರಿಯನ್ನು ಪರ್ಯಾಯ ಪೀಠಾಧಿಪತಿಗಳಾದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಅವರ ಶಿಷ್ಯ ಶ್ರೀ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ತಮ್ಮ ಪರಮಗುರುಗಳಾದ ಮಹಾತಪಸ್ವಿ ಶತಾಯುಷಿ ಶ್ರೀ ಶ್ರೀ ಸುಧೀಂದ್ರತೀರ್ಥ ಶ್ರೀಪಾದರ ಆರಾಧನಾ ಮಹೋತ್ಸವದ ಪರ್ವಕಾಲದಲ್ಲಿ ಫೆ.12ರಂದು ಉದ್ಘಾಟಿಸಿದರು. 

ಉಡುಪಿ ಶ್ರೀಕೃಷ್ಣ ಮಠದ ಸಮೀಪವಿರುವ ಗೀತಾಮಂದಿರದ ಮುಂಭಾಗದಲ್ಲಿ ರಾಜಾಂಗಣಕ್ಕೆ ತಾಗಿಕೊಂಡಂತೆ ಇರುವ ನೂತನ ಕಚೇರಿಯಲ್ಲಿ ದೀಪ ಉರಿಸಿ ಶ್ರೀನಿವಾಸ-ಪದ್ಮಾವತಿಯರ ವಿಗ್ರಹಕ್ಕೆ ಆರತಿ ಬೆಳಗಿ ಆಶೀರ್ವಚನಗೈದರು. 

ಸನಾತನ ಹಿಂದೂ ಧರ್ಮದ ಉಳಿವಿಗಾಗಿ ಸಮಾನ ಸಂಸ್ಕೃತಿಯ ವಿವಾಹಗಳು ಈ ಕಾಲದ ತುರ್ತು ಅಗತ್ಯವಾಗಿದ್ದು ಇದಕ್ಕಾಗಿಯೇ ದಂಪತಿ.ಕಾಮ್ ಕಾರ್ಯತತ್ಪರವಾಗಿದೆ. 

ನೂತನ ವಧೂವರರ ಜಾಗತಿಕ ಮೇಳಾಮೇಳಿಗಾಗಿ ವಿನೂತನ ತಂತ್ರಜ್ಞಾನೀ ಮಾಧ್ಯಮವನ್ನು ಅಳವಡಿಸಿಕೊಂಡ ಈ ಉಚಿತ ಸೌಲಭ್ಯವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳುವಂತೆ ಅವರು ಕರೆ ನೀಡಿದರು.

ಶ್ರೀಮಠದ ದಿವಾನರಾದ ನಾಗರಾಜ ಆಚಾರ್ಯ, ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಪಾದರ ಆಪ್ತ ಕಾರ್ಯದರ್ಶಿ ರತೀಶ್ ತಂತ್ರಿ, ದಂಪತಿ.ಕಾಮ್‌ನ ಅಖಿಲ ಭಾರತ ಸಂಚಾಲಕ ಕೆ. ವಿ. ರಮಣಾಚಾರ್ಯ, ತಾಂತ್ರಿಕ ವಿಭಾಗದ ರಾಮಪ್ರಿಯ, ನಿರ್ವಾಹಕ ಬಳಗದ ವಿಕ್ರಂ ಕುಂಟಾರ್, ರವೀಂದ್ರ, ಅಂತರ್ಯಾಮಿಯ ಪ್ರಮೋದ್, ಶ್ರೀನಿವಾಸ್ ರಾವ್, ಸಾಂಸ್ಕೃತಿಕ ಸಮಿತಿಯ ಪ್ರಮುಖ ರಮೇಶ್ ಭಟ್, ಸುಗುಣಮಾಲಾ ಸಂಪಾದಕ ಮಹಿತೋಷ ಆಚಾರ್ಯ, ಕಚೇರಿ ಸಿಬ್ಬಂದಿ ಸುಷ್ಮಿತಾ, ಅಕ್ಷಯ ಮತ್ತಿತರರು ಉಪಸ್ಥಿತರಿದ್ದರು. 

ಕಚೇರಿಯು ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ತೆರೆದಿರಲಿದ್ದು ಆಸಕ್ತ ಹಿಂದೂ ವಿವಾಹಾಪೇಕ್ಷಿಗಳು ಉಚಿತ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

Previous Post

ಉಡುಪಿ : ಮತ್ಸ್ಯಸಂಪದ ಯೋಜನೆ : ಸಹಾಯಧನಕ್ಕಾಗಿ ಅರ್ಹ ಮೀನುಗಾರರಿಂದ ಅರ್ಜಿ ಆಹ್ವಾನ..!!

Next Post

ಸಾಲಿಗ್ರಾಮ ದೇವಸ್ಥಾನದ ಬಳಿಯ  ಪ್ರಾಣಿ ಪಾಲನಾ ಕೇಂದ್ರಕ್ಕೆ ದಾಳಿ ನಡೆಸಿದ ಅಧಿಕಾರಿಗಳು :ಪ್ರಾಣಿ ಪಕ್ಷಿಗಳ ಸ್ಥಳಾಂತರ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಸಾಲಿಗ್ರಾಮ ದೇವಸ್ಥಾನದ ಬಳಿಯ  ಪ್ರಾಣಿ ಪಾಲನಾ ಕೇಂದ್ರಕ್ಕೆ ದಾಳಿ ನಡೆಸಿದ ಅಧಿಕಾರಿಗಳು :ಪ್ರಾಣಿ ಪಕ್ಷಿಗಳ ಸ್ಥಳಾಂತರ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಉಡುಪಿ: ಬನ್ನಂಜೆ ಬಸ್ ನಿಲ್ದಾಣದಲ್ಲಿ ಐದು ವರ್ಷದ ಮಗುವಿನ ರಕ್ಷಣೆ..!

ಉಡುಪಿ: ಬನ್ನಂಜೆ ಬಸ್ ನಿಲ್ದಾಣದಲ್ಲಿ ಐದು ವರ್ಷದ ಮಗುವಿನ ರಕ್ಷಣೆ..!

20/03/2026
ಟಿಪ್ಪರ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು…!

ಟಿಪ್ಪರ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು…!

20/03/2026
ಕೊನೆಗೂ ಎಚ್ಚೆತ್ತ ಹೆದ್ದಾರಿ ಇಲಾಖೆ; ಪೈಪ್‌ಲೈನ್ ದುರಸ್ತಿ ಪೂರ್ಣ…!

ಕೊನೆಗೂ ಎಚ್ಚೆತ್ತ ಹೆದ್ದಾರಿ ಇಲಾಖೆ; ಪೈಪ್‌ಲೈನ್ ದುರಸ್ತಿ ಪೂರ್ಣ…!

20/03/2026
ರಾಮೋತ್ಸವ ಸಂಭ್ರಮದಲ್ಲಿ ರಾಜಾಂಗಣದಲ್ಲಿ ‘ಮೇಘಶ್ಯಾಮ’ ಭರತನಾಟ್ಯ ಮೆರಗು…!

ರಾಮೋತ್ಸವ ಸಂಭ್ರಮದಲ್ಲಿ ರಾಜಾಂಗಣದಲ್ಲಿ ‘ಮೇಘಶ್ಯಾಮ’ ಭರತನಾಟ್ಯ ಮೆರಗು…!

20/03/2026

Recent News

ಉಡುಪಿ: ಬನ್ನಂಜೆ ಬಸ್ ನಿಲ್ದಾಣದಲ್ಲಿ ಐದು ವರ್ಷದ ಮಗುವಿನ ರಕ್ಷಣೆ..!

ಉಡುಪಿ: ಬನ್ನಂಜೆ ಬಸ್ ನಿಲ್ದಾಣದಲ್ಲಿ ಐದು ವರ್ಷದ ಮಗುವಿನ ರಕ್ಷಣೆ..!

20/03/2026
ಟಿಪ್ಪರ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು…!

ಟಿಪ್ಪರ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು…!

20/03/2026
ಕೊನೆಗೂ ಎಚ್ಚೆತ್ತ ಹೆದ್ದಾರಿ ಇಲಾಖೆ; ಪೈಪ್‌ಲೈನ್ ದುರಸ್ತಿ ಪೂರ್ಣ…!

ಕೊನೆಗೂ ಎಚ್ಚೆತ್ತ ಹೆದ್ದಾರಿ ಇಲಾಖೆ; ಪೈಪ್‌ಲೈನ್ ದುರಸ್ತಿ ಪೂರ್ಣ…!

20/03/2026
ರಾಮೋತ್ಸವ ಸಂಭ್ರಮದಲ್ಲಿ ರಾಜಾಂಗಣದಲ್ಲಿ ‘ಮೇಘಶ್ಯಾಮ’ ಭರತನಾಟ್ಯ ಮೆರಗು…!

ರಾಮೋತ್ಸವ ಸಂಭ್ರಮದಲ್ಲಿ ರಾಜಾಂಗಣದಲ್ಲಿ ‘ಮೇಘಶ್ಯಾಮ’ ಭರತನಾಟ್ಯ ಮೆರಗು…!

20/03/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved