Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಮೊದಲ ಬಾರಿಗೆ ಆನ್‌ ಲೈನ್‌ ಪದವೀಧರರಿಗಾಗಿ ಘಟಿಕೋತ್ಸವ :ಡಿಜಿಟಲ್ ಶಿಕ್ಷಣದಲ್ಲಿ ಮಾಹೆ ಮೈಲಿಗಲ್ಲು..!!

Dhrishya News by Dhrishya News
12/02/2025
in ಸುದ್ದಿಗಳು
0
0
SHARES
17
VIEWS
Share on FacebookShare on Twitter

ಮಣಿಪಾಲ ಫೆಬ್ರವರಿ 12, 2025: ಇದೇ ಮೊದಲ ಬಾರಿಗೆ ಆನ್‌ಲೈನ್ ಪದವೀಧರರಿಗಾಗಿ ಫೆಬ್ರವರಿ 8 ರಂದು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಘಟಿಕೋತ್ಸವವನ್ನು ಆಯೋಜಿಸಿದ್ದು, ಸ್ನಾತಕೋತ್ತರ ಶಿಕ್ಷಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ 426 ವಿದ್ಯಾರ್ಥಿಗಳ ಸಾಧನೆಗಳನ್ನು ಆಚರಿಸಿದೆ. ಎಂಬಿಎ (ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್), ಮಾಸ್ಟರ್ ಆಫ್ ಸೈನ್ಸ್ (ಎಂಎಸ್ಸಿ) ಇನ್ ಬಿಸಿನೆಸ್ ಅನಾಲಿಟಿಕ್ಸ್, ಡಾಟಾ ಸೈನ್ಸ್ ನಲ್ಲಿ ಎಂಎಸ್ಸಿ, ಬ್ಯುಸಿನೆಸ್‌ ಅನಾಲಿಟಿಕ್ಸ್ ನಲ್ಲಿ ಪೋಸ್ಟ್ ಗ್ರಾಜ್ಯುಯೇಟ್ ಸರ್ಟಿಫಿಕೇಟ್ (ಪಿಜಿಸಿಪಿ), ಮತ್ತು ಲಾಜಿಸ್ಟಿಕ್ಸ್ ಮತ್ತು ಸಪ್ಲೈ ಚೈನ್ ಮ್ಯಾನೇಜ್ ಮೆಂಟ್ ನಲ್ಲಿ ಪಿಜಿಸಿಪಿ ಮೂಲಕ ಸಂಪೂರ್ಣ ಆನ್‌ಲೈನ್ ಕಲಿಕೆಯ ಅನುಭವ ಒದಗಿಸಿದೆ.  

ಜಗತ್ತಿನಾದ್ಯಂತ 22 ವಿವಿಧ ದೇಶಗಳ ವಿದ್ಯಾರ್ಥಿಗಳು ಆನ್‌ಲೈನ್‌ ತರಗತಿಗಳಿಗೆ ಹಾಜರಾಗಿದ್ದರು. ದಕ್ಷಿಣ ಸುಡಾನ್, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ ಮತ್ತು ಉಗಾಂಡಾ ದೇಶಗಳ ವಿದ್ಯಾರ್ಥಿಗಳು ತಮ್ಮ ಪದವಿಗಳನ್ನು ಪಡೆಯಲು ವೈಯಕ್ತಿಕವಾಗಿ ಹಾಜರಾಗಿದ್ದರು. ಇದು ಮಾಹೆಯ ಆನ್‌ಲೈನ್ ಶಿಕ್ಷಣ ಕಾರ್ಯಕ್ರಮಗಳ ದೂರಗಾಮಿ ಪರಿಣಾಮವನ್ನು ಎತ್ತಿ ತೋರಿಸಿದೆ. ಮಾಹೆಯ ಆನ್‌ಲೈನ್ ಶಿಕ್ಷಣ ಉಪಕ್ರಮವು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪಾಲುದಾರಿಕೆಯೊಂದಿಗೆ ಆಫ್ರಿಕನ್ ಯುವಕರಿಗೆ ಉನ್ನತ ಶಿಕ್ಷಣವನ್ನು ಪ್ರವೇಶಿಸಲು ಸಹಾಯ ಮಾಡುತ್ತದೆ. ಆನ್‌ಲೈನ್ ಶಿಕ್ಷಣದ ಮೊದಲ ಘಟಿಕೋತ್ಸವದಲ್ಲಿ ಸುಮಾರು 204 ಆಫ್ರಿಕನ್ ವಿದ್ಯಾರ್ಥಿಗಳು ಇ-ವಿದ್ಯಾ ಭಾರತಿ ಪ್ಯಾನ್-ಆಫ್ರಿಕನ್ ಸ್ಕಾಲರ್‌ಶಿಪ್ ಪ್ರಾಜೆಕ್ಟ್ ಅಡಿಯಲ್ಲಿ ತಮ್ಮ ಪದವಿಗಳನ್ನು ಪಡೆದರು.

ಆನ್‌ಲೈನ್ ಶಿಕ್ಷಣದ ವಿಶ್ವಾಸಾರ್ಹತೆ ಬಲಪಡಿಸುವ ಯುಜಿಸಿ ಮಾರ್ಗಸೂಚಿಗಳು, “ಆನ್‌ಲೈನ್ ಪದವಿಯನ್ನು ಕ್ಯಾಂಪಸ್‌ಗಳಲ್ಲಿ ನೀಡಲಾಗುವ ಸಾಂಪ್ರದಾಯಿಕ ಪದವಿಗಳಿಗೆ ಸಮಾನವೆಂದು ಗುರುತಿಸಿವೆ ಮತ್ತು ವಿದ್ಯಾರ್ಥಿಗಳು ತಮ್ಮ ಅರ್ಹತೆಗೆ ಅನುಗುಣವಾಗಿ ಎಲ್ಲ ಉದ್ಯೋಗಾವಕಾಶಗಳು ಮತ್ತು ಉನ್ನತ ಶಿಕ್ಷಣಕ್ಕಾಗಿ ಅರ್ಜಿ ಸಲ್ಲಿಸಬಹುದು.” ಎಂದು ಹೇಳಿವೆ ಮಾಹೆ ತನ್ನ ಆನ್‌ಲೈನ್ ಪದವಿ ಕಾರ್ಯಕ್ರಮಗಳನ್ನು ಸೆಪ್ಟೆಂಬರ್ 2022 ರಲ್ಲಿ ಪ್ರಾರಂಭಿಸಿದ್ದು, ಈ ಕಲಿಕೆಯು ಭೌಗೋಳಿಕ ಗಡಿಗಳನ್ನು ಮೀರಿ ಭವಿಷ್ಯವನ್ನು ರೂಪಿಸಿದೆ.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಪ್ರೊ-ಚಾನ್ಸೆಲರ್ ಡಾ. ಎಚ್.ಎಸ್.ಬಲ್ಲಾಳ್ ಅವರು ಘಟಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್, ಮಾಹೆಯ ಪ್ರೊ ವೈಸ್ ಚಾನ್ಸೆಲರ್ (ತಂತ್ರಜ್ಞಾನ ಮತ್ತು ವಿಜ್ಞಾನ) ಡಾ.ನಾರಾಯಣ ಸಭಾಹಿತ್, ಪ್ರೊ ವೈಸ್ ಚಾನ್ಸೆಲರ್ (ಆರೋಗ್ಯ ವಿಜ್ಞಾನ)ದ ಡಾ. ಶರತ್ ಕೆ ರಾವ್ ಪ್ರೊ ವೈಸ್‌ ಚಾನ್ಸೆಲರ್ ಡಾ. ದಿಲೀಪ್ ಜಿ.ನಾಯಕ್, ಪ್ರೊ ವೈಸ್ ಚಾನ್ಸೆಲರ್ (MLHS & ಹೆಡ್ – MAHE ಬೆಂಗಳೂರು ಕ್ಯಾಂಪಸ್)ನ ಡಾ.ಮಧು ವೀರ ರಾಘವನ್, ರಿಜಿಸ್ಟ್ರಾರ್ ಡಾ. ಗಿರಿಧರ್ ಪಿ ಕಿಣಿ, ರಿಜಿಸ್ಟ್ರಾರ್ (ಮೌಲ್ಯಮಾಪನ) ಡಾ ವಿನೋದ್ ವಿ ಥಾಮಸ್ ಮತ್ತು ಆನ್‌ಲೈನ್ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಾದ ಡಾ. ಮನೋಜಕುಮಾರ್ ನಾಗಸಂಪಿಗೆ, ಗೌರವ ಅತಿಥಿಯಾಗಿ ಯುನೆಕ್ಸ್ಟ್ ಲರ್ನಿಂಗ್‌ನ ಸಿಇಒ ಶ್ರೀ ಅಂಬ್ರಿಶ್ ಸಿನ್ಹಾ ಅವರು ಉಪಸ್ಥಿತರಿದ್ದರು. 

 

ಡಾ. ಎಚ್ ಎಸ್ ಬಲ್ಲಾಳ್, ಪ್ರೊ-ಚಾನ್ಸಲರ್, ಮಾಹೆ ಅವರು ಮಾತನಾಡಿ, “ಆನ್‌ಲೈನ್ ಪದವೀಧರರಿಗೆ ಘಟಿಕೋತ್ಸವದ ಮೂಲಕ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮಹತ್ವದ ಮೈಲಿಗಲ್ಲನ್ನು ಸಾಧಿಸುವುದರೊಂದಿಗೆ ವಿದ್ಯಾರ್ಥಿಗಳ ಜೀವನದ ಮೇಲೆ ಉತ್ತಮ ರೀತಿಯಲ್ಲಿ ಪರಿಣಾಮ ಬೀರುವ ಜೊತೆಗೆ ಅಂತಾರರಾಷ್ಟ್ರೀಯ ದೇಶಗಳೊಂದಿಗೆ ಉತ್ತಮ ಬಾಂಧವ್ಯವನ್ನು ಬಲಪಡಿಸುವ ಮತ್ತು ನಿರ್ವಹಿಸುವುದನ್ನು ಎತ್ತಿ ತೋರಿಸುತ್ತದೆ. ಈ ಮಹತ್ವದ ಸಂದರ್ಭ ನಮ್ಮ ಪದವೀಧರರಿಗೆ ನಿರ್ಣಾಯಕ ಮೈಲಿಗಲ್ಲು ಮಾತ್ರವಲ್ಲದೆ ಮಾಹೆ ಪರಂಪರೆಯಲ್ಲಿ ಮಹತ್ವದ ಅಧ್ಯಾಯವಾಗಿದೆ, ಏಕೆಂದರೆ ನಾವು ವಿಕಾಸಗೊಳ್ಳುತ್ತಿರುವ ಜಗತ್ತಿನಲ್ಲಿ ಶಿಕ್ಷಣಕ್ಕಿರುವ ಭವಿಷ್ಯವನ್ನು ಸ್ವೀಕರಿಸುತ್ತೇವೆ ಎಂದರು.

ಲೆಫ್ಟಿನೆಂಟ್ ಜನರಲ್ ಡಾ. ಎಂ.ಡಿ. ವೆಂಕಟೇಶ್ ವಿಎಸ್‌ಎಂ, (ನಿವೃತ್ತ) ಉಪಕುಲಪತಿ, ಮಾಹೆ ಮಾತನಾಡಿ, “ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಉಪಕ್ರಮವು ಪ್ರಪಂಚದಾದ್ಯಂತದ ವಿದ್ಯಾರ್ಥಿಗಳ ಶಿಕ್ಷಣವನ್ನು ರೂಪಿಸುತ್ತಿದೆ. ಆನ್‌ಲೈನ್ ಪದವೀಧರರಿಗಾಗಿ ನಡೆದ ಮೊದಲ ಘಟಿಕೋತ್ಸವವು ಭವಿಷ್ಯದ ಶಿಕ್ಷಣವನ್ನು ಅಳವಡಿಸಿಕೊಳ್ಳುವಲ್ಲಿ ಮಾಹೆಯ ಪರಂಪರೆಯನ್ನು ಎತ್ತಿ ತೋರಿಸುತ್ತದೆ. ಸೆಪ್ಟೆಂಬರ್ 2022ರಲ್ಲಿ ಯುಜಿಸಿ ಮಾರ್ಗಸೂಚಿಗಳ ಅಡಿಯಲ್ಲಿ ಪ್ರಾರಂಭವಾದಾಗಿನಿಂದ ಮಾಹೆ ಆನ್‌ಲೈನ್ ಶಿಕ್ಷಣ ಕಾರ್ಯಕ್ರಮಗಳ ಕ್ಷೇತ್ರದಲ್ಲಿ ಪ್ರವರ್ತಕನಾಗಿದೆ. ಘಟಿಕೋತ್ಸವ ಕಾರ್ಯಕ್ರಮವು ಕೈಗಾರಿಕೆಗಳಲ್ಲಿ ಕೆಲಸ ಮಾಡುವ ವೃತ್ತಿಪರರನ್ನು ಒಟ್ಟಿಗೆ ಸೇರಿಸುವ ಮೂಲಕ ಅನೇಕರಿಗೆ ಪ್ರೇರಣೆಯಾಗಿದೆ ಎಂದರು.

Previous Post

ಮಂದಾರ್ತಿ ಜಾತ್ರಾ ಮಹೋತ್ಸವ:ಇಂದಿನಿಂದ ಫೆಬ್ರವರಿ 15 ಮದ್ಯ ಮಾರಾಟ ನಿಷೇಧ..!!

Next Post

ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಜಾನಪದ ಕೋಗಿಲೆ ‘ಸುಕ್ರಿ ಬೊಮ್ಮಗೌಡ’ ನಿಧನ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಪದ್ಮಶ್ರೀ' ಪ್ರಶಸ್ತಿ ಪುರಸ್ಕೃತ ಜಾನಪದ ಕೋಗಿಲೆ 'ಸುಕ್ರಿ ಬೊಮ್ಮಗೌಡ' ನಿಧನ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಾರ್ಕಳ ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿಯ ಆಯ್ಕೆ ರದ್ದುಪಡಿಸಬೇಕು:ಶ್ರೀನಿವಾಸ್ ಕಾರ್ಲಾ..!

ಕಾರ್ಕಳ ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿಯ ಆಯ್ಕೆ ರದ್ದುಪಡಿಸಬೇಕು:ಶ್ರೀನಿವಾಸ್ ಕಾರ್ಲಾ..!

20/06/2026
ಮಾಹೆ ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಪತಿಯಾಗಿ ಮೇಜರ್ ಜನರಲ್ (ಡಾ.) ಮ್ಯಾಥ್ಯೂಸ್ ಜೇಕಬ್ ನೇಮಕ 

ಮಾಹೆ ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಪತಿಯಾಗಿ ಮೇಜರ್ ಜನರಲ್ (ಡಾ.) ಮ್ಯಾಥ್ಯೂಸ್ ಜೇಕಬ್ ನೇಮಕ 

20/06/2026
ಬ್ರಹ್ಮಾವರ : ಮೆಸ್ಕಾಂ ಖಾಸಗೀಕರಣಕ್ಕೆ ಆಕ್ಷೇಪ. ಮೆಸ್ಕಾಂ ನೌಕರರ ಸಂಘದ ವತಿಯಿಂದ ಮನವಿ

ಬ್ರಹ್ಮಾವರ : ಮೆಸ್ಕಾಂ ಖಾಸಗೀಕರಣಕ್ಕೆ ಆಕ್ಷೇಪ. ಮೆಸ್ಕಾಂ ನೌಕರರ ಸಂಘದ ವತಿಯಿಂದ ಮನವಿ

20/06/2026
ಜೂನ್ 21-ಗೀತಾ ಮಂದಿರದಲ್ಲಿ ಚಯರ್ ಯೋಗ

ಜೂನ್ 21-ಗೀತಾ ಮಂದಿರದಲ್ಲಿ ಚಯರ್ ಯೋಗ

19/06/2026

Recent News

ಕಾರ್ಕಳ ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿಯ ಆಯ್ಕೆ ರದ್ದುಪಡಿಸಬೇಕು:ಶ್ರೀನಿವಾಸ್ ಕಾರ್ಲಾ..!

ಕಾರ್ಕಳ ಅಂಬೇಡ್ಕರ್ ಭವನ ನಿರ್ವಹಣಾ ಸಮಿತಿಯ ಆಯ್ಕೆ ರದ್ದುಪಡಿಸಬೇಕು:ಶ್ರೀನಿವಾಸ್ ಕಾರ್ಲಾ..!

20/06/2026
ಮಾಹೆ ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಪತಿಯಾಗಿ ಮೇಜರ್ ಜನರಲ್ (ಡಾ.) ಮ್ಯಾಥ್ಯೂಸ್ ಜೇಕಬ್ ನೇಮಕ 

ಮಾಹೆ ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಪತಿಯಾಗಿ ಮೇಜರ್ ಜನರಲ್ (ಡಾ.) ಮ್ಯಾಥ್ಯೂಸ್ ಜೇಕಬ್ ನೇಮಕ 

20/06/2026
ಬ್ರಹ್ಮಾವರ : ಮೆಸ್ಕಾಂ ಖಾಸಗೀಕರಣಕ್ಕೆ ಆಕ್ಷೇಪ. ಮೆಸ್ಕಾಂ ನೌಕರರ ಸಂಘದ ವತಿಯಿಂದ ಮನವಿ

ಬ್ರಹ್ಮಾವರ : ಮೆಸ್ಕಾಂ ಖಾಸಗೀಕರಣಕ್ಕೆ ಆಕ್ಷೇಪ. ಮೆಸ್ಕಾಂ ನೌಕರರ ಸಂಘದ ವತಿಯಿಂದ ಮನವಿ

20/06/2026
ಜೂನ್ 21-ಗೀತಾ ಮಂದಿರದಲ್ಲಿ ಚಯರ್ ಯೋಗ

ಜೂನ್ 21-ಗೀತಾ ಮಂದಿರದಲ್ಲಿ ಚಯರ್ ಯೋಗ

19/06/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved