ಉಡುಪಿ : ಜನವರಿ 21:ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ ಉಡುಪಿ ಆಶ್ರಯದಲ್ಲಿ ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಉಡುಪಿ ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿ ಇವರ ಸಹಭಾಗಿತ್ವದಲ್ಲಿ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಹಾಗೂ ಮಹಿಳಾ ವೈದ್ಯರ ಘಟಕ ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಹಾಗೂ ಎ.ಜೆ ಇನ್ಸಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ಇಲ್ಲಿನ ತಜ್ಞ ವೈದ್ಯರುಗಳ ಸಮ್ಮಿಲನದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕಾಂಶ ಆಹಾರದ ಅಗತ್ಯತೆ – ಮಾಹಿತಿ ಕಾರ್ಯಗಾರ ದಿನಾಂಕ 26.01.2025 ರವಿವಾರ ಸಮಯ: ಬೆಳಗ್ಗೆ 8:00 ರಿಂದ 1:00 ರವರೆಗೆ ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿದೆ
ಎಲ್ಲಾ ತರಹದ ಅರೋಗ್ಯ, ದಂತ, ಕಣ್ಣಿನ ತಪಾಸಣೆ, ಮಧುಮೇಹ, ರಕ್ತದೊತ್ತಡ ಪರೀಕ್ಷೆ, ಗರ್ಭಕಂಠದ ಸ್ಮಿಯರ್ ಪರೀಕ್ಷೆ, ಎಲುಬಿನ ಸಾಂದ್ರತೆ ಪರೀಕ್ಷೆ ಗಳನ್ನು ತಜ್ಞ ವೈದ್ಯರಿಂದ ನಡೆಸಲಾಗುವುದು.
ಸಾರ್ವಜನಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕಾಗಿ ಪ್ರಕಟಣೆ ತಿಳಿಸಿದೆ .