ಧರ್ಮಸ್ಥಳ :ಜನವರಿ 17: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿವರ್ಷದಂತೆ ನೆರವೇರುವ ಉಚಿತ ಸಾಮೂಹಿಕ ವಿವಾಹವು ದಿನಾಂಕ 03-05-2025ನೇ ಶನಿವಾರದಂದು ಸಂಜೆ ಗಂಟೆ 6.48ಕ್ಕೆ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ ಜರುಗಲಿರುವುದು.
ಈ ಸಾಮೂಹಿಕ ವಿವಾಹ ಸಮಾರಂಭದಲ್ಲಿ ವಿವಾಹವಾಗಲಿಚ್ಛಿಸುವವರು ದಿನಾಂಕ 25-04-2025ನೇ ಶನಿವಾರದ ಒಳಗಾಗಿ ವಧೂ-ವರರ ಹೆಸರು ದಾಖಲು ಮಾಡಿಸುವುದು. ಬರುವಾಗ ಮಂಡಲ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಯಾ ಕಾರ್ಯದರ್ಶಿಯವರಿಂದ ವಧೂ-ವರರ ಹೆಸರು, ಪ್ರಾಯ, ಹಿರಿಯರ ಒಪ್ಪಿಗೆ ಹಾಗೂ ಅವಿವಾಹಿತನೆಂಬುದಕ್ಕೆ ಅವಶ್ಯ ದೃಢಪತ್ರಿಕೆ ಮತ್ತು ವಧೂ-ವರರ ಇತ್ತೀಚಿನ ಭಾವಚಿತ್ರ 1+1 (ಪಾಸ್‌ಪೋರ್ಟ್ ಅಳತೆ) ತರಬೇಕು. ವರನಿಗೆ ಧೋತಿ, ಶಾಲು, ವಧುವಿಗೆ ಸೀರೆ, ರವಿಕೆಕಣ ಮತ್ತು ಮಂಗಲಸೂತ್ರವನ್ನು ಕೊಡಲಾಗುವುದು.
ಮಾಹಿತಿಗೆ ದೂರವಾಣಿ ಸಂಖ್ಯೆ 08256 266644, ವಾಟ್ಸಾಪ್ 9663464648 ಸಂಪರ್ಕಿಸಬಹುದಾಗಿದೆ.
ಶ್ರೀ ಕ್ಷೇತ್ರ ಧರ್ಮಧಿಕಾರಿ ಡಾ.ಡಿ. ವೀರೇಂದ್ರ ಹೆಗಡೆಯವರು 1972 ರಲ್ಲಿ ವರದಕ್ಷಿಣೆ ಮತ್ತು ಮದುವೆ ದುಂದು ವೆಚ್ಚ ತಡೆಯಲು ಉಚಿತ ಸಾಮೂಹಿಕ ವಿವಾಹ ಆರಂಭಿಸಿದ್ದರು. ಇದುವರೆಗೆ 12,900 ಜೋಡಿಗಳು ಮದುವೆಯಾಗಿದ್ದಾರೆ ಎಂದು ಹೇಳಲಾಗಿದೆ.








