ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ : ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮ..!!
ಕಾರ್ಕಳ:ಜನವರಿ 17 : ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ ಜಿಲ್ಲಾ ಗವರ್ನರ್ ಅಧಿಕೃತ ಭೇಟಿಯ ಕಾರ್ಯಕ್ರಮವು 15.01.2025 ಬುಧವಾರ ನಡೆಯಿತು. ಬೆಳಗ್ಗೆ 10.30ಕ್ಕೆ ಪ್ರಾರಂಭವಾಗಿ ಜಾರ್ಕಳ ಬಸ್ರಿ, ಬೈಲೂರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 50 ಪ್ಲಾಸ್ಟಿಕ್ ಕುರ್ಚಿಗಳನ್ನು ಹಸ್ತಾಂತರಿಸಲಾಯ್ತು. ಸರಕಾರಿ ಪಾಲಿಟೆಕ್ನಿಕ್ ಕಾಬೆಟ್ಟು, ಕಾರ್ಕಳ, Sanitary pad burning machine ಹಸ್ತಾಂತರ ಹಾಗು ಕಾಲೇಜು ವಿದ್ಯಾಾರ್ಥಿಗಳಿಗೆ CPR Training program ಕೆಎಂಸಿ ಮಣಿಪಾಲ ಇಲ್ಲಿನ ಪರಿಣಿತ ವೈದ್ಯರ ತಂಡದಿಂದ ಆಯೋಜಿಸಲಾಯ್ತು.
ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆ, ಸಾಲ್ಮರ, ಕಾರ್ಕಳ, ಇಲ್ಲಿನ ಶಾಲಾ ವಿದ್ಯಾರ್ಥಿಗಳಿಗೆ ಕೈ ತೊಳೆಯಲು 7 Tap Wash Basin ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಸರಕಾರಿ ಪ್ರೌಢ ಶಾಲೆ, ಬೋರ್ಡ್ ಹೈಸ್ಕೂಲ್ – ಆಡುಗೆ ಕೊಣೆಯ ಅಂಗಳ ಕಾಂಕ್ರೀಟ್ ಅಳವಡಿಕೆ,
ಕಾರ್ಕಳ ಸರಕಾರಿ ಆಸ್ಪತ್ರೆ ಔಷಧಗಳನ್ನು ಇಡಲು ಮರದ ಕಪಾಟು ಹಸ್ತಾಂತರ,
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಪಡಿಬೆಟ್ಟು ಇಲ್ಲಿನ ಶಾಲೆಯ ಅಡುಗೆ ಕೊಠಡಿಯ ಮುಂಬಾಗಕ್ಕೆ ತಗಡು ಚಪ್ಪರ ಅಳವಡಿಕೆ ಈ ಎಲ್ಲ ಕಾರ್ಯಕ್ರಮಗಳನ್ನು ರೋಟರಿ ಜಿಲ್ಲಾ ಗವರ್ನರ್ Rtn Major Donar CA Dev Anand ಅವರು ಉದ್ಘಾಟಿಸಿದರು. ಮಿಯ್ಯಾರು ಕೈಗಾರಿಕಾ ಪ್ರದೇಶ ಹತ್ತಿರ ಕೆರೆಯ ಪುನರ್ಜೀವ ಕಾಮಗಾರಿ ವೀಕ್ಷಿಸಲಾಯ್ತು
ನಂತರ ಸಾಯಂಕಾಲ ನಡೆದ ಸಾರ್ವಜನಿಕ ಸಭೆ ನಡೆಯಿತು, ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಅಧ್ಯಕ್ಷ Rtn PHF Upendra Vagle ಇವರು ವಹಿಸಿ ಆಗಮಿಸಿರುವ ಅತಿಥಿ/ಅಭ್ಯಾಗತರನ್ನು ಸ್ವಾಗತಿಸಿ, ಪ್ರಾಸ್ಥವಿಕವಾಗಿ ಮಾತನ್ನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನ ಗೌರವಿಸಲಾಯಿತು 1.ಮೆಸ್ಕಾಂ ಇಲಾಖೆಯ ಶ್ರೀ ಸಂತೋಷ್ ಕುಮಾರ್, 2.ಆರೋಗ್ಯ ಇಲಾಖೆಯ ಶ್ರೀ ಚಂದ್ರಣ್ಣ ಮತ್ತು 3.ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕುಮಾರಿ ಶ್ರುತಿ ಕೆ ಶಿಂಧೆ ಇವರನ್ನು ಗೌರವವಿಸಲಾಯ್ತು. ವಲಯದ ಸಹಾಯಕ ಗವರ್ನರ್ Rtn Anil Desa ಅವರು ಕ್ಲಬ್ ಬುಲೆಟಿನ್ ಲೋಕಹಿತಮ್ ಬಿಡುಗಡೆಮಾಡಿದರು. ಮುಖ್ಯ ಅತಿಥಿಗಳಾಗಿ ರೋಟರಿ ಜಿಲ್ಲಾ ಗವರ್ನರ್ Rtn Major Donar CA Dev Anand ಅವರು ತಮ್ಮ ಅತಿಥಿಗಳ ಮಾತಿನಲ್ಲಿ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿಯ ಕಾರ್ಯವೈಖರಿಯನ್ನ ಶ್ಲಾಘಿಸಿದರು. ಕ್ಲಬ್ ಮಾರ್ಗದರ್ಶಕರಾದ ರೋಟರಿ ಮಾಜಿ ಜಿಲ್ಲಾ ಗವರ್ನರ್ Rtn Major doner ಡಾ ಭರತೇಶ್ ಆದಿರಾಜ್, ವಲಯ ಸೇನಾನಿ Rtn PHF Suresh Nayak KS, ಕಾರ್ಯದರ್ಶಿ Rtn ಪ್ರಶಾಂತ್ ಜೈನ್, ರೋಟರಿ ಜಿಲ್ಲೆ ಪ್ರಥಮ ಮಹಿಳೆ Rtn ರೇಖಾ ದೇವಾನಂದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. Rtn ಸುಬ್ರಹ್ಮಣ್ಯ ಉಪಾಧ್ಯ ಕಾರ್ಯಕ್ರಮದ ನಿರುಪಣೆಯನ್ನು ಮಾಡಿದರು. Rtn PHF Suresh Nayak ವಂದಿಸಿದರು.








