Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home मौसम

ಬಜಗೋಳಿ:ಹಿಂದೂ ಧರ್ಮದ ಸದೃಢತೆಗೆ 18 ದಿನಗಳ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ..!!

ಪ್ರತೀ ದಿನ ಕುಣಿತ ಭಜನೆ ಜ.22ರಂದು ಧಾರ್ಮಿಕ ಸಭೆ,ಗೀತಾ ಸಾಹಿತ್ಯ ಸಂಭ್ರಮ

Dhrishya News by Dhrishya News
07/01/2025
in मौसम
0
0
SHARES
26
VIEWS
Share on FacebookShare on Twitter

ಬಜಗೋಳಿ:ಜನವರಿ 07:ಹಿಂದೂ ಧರ್ಮದ ಸದೃಢತೆಗೆ,ಅಯೋಧ್ಯೆ ಶ್ರೀ ರಾಮದೇವರ ಮಹೋತ್ಸವದ ಅಂಗವಾಗಿ, ಅಯೋಧ್ಯೆಗೆ ನೆಲ್ಲಿಕಾರು ಶಿಲೆ ಸಮರ್ಪಿತವಾದ ಸವಿನೆನಪಿಗಾಗಿ 2ನೇ ವರ್ಷದ 18 ದಿನಗಳ ಮಹೋತ್ಸವ ಕಾರ್ಯಕ್ರಮಕ್ಕೆ ಬಜಗೋಳಿ ದಿಡಿ೦ಬಿರಿ ಅಯ್ಯಪ್ಪ ಮಂದಿರದಲ್ಲಿ ಡಾ.ರವೀಂದ್ರ ಶೆಟ್ಟಿ ಬಜಗೋಳಿ ಚಾಲನೆ ನೀಡಿದರು.

ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಸ್ತ ಮತ ಪಂಗಡದವರಿಗೂ ಬದುಕಲು ಸಮಾನ ಅವಕಾಶ ಸಂವಿಧಾನ ನೀಡಿದ್ದು,ವಿಶ್ವಕ್ಕೆ ಮಾದರಿಯಾದ ಆಡಳಿತ ವ್ಯವಸ್ಥೆ ನಮ್ಮ ದೇಶದಲ್ಲಿದೆ. ಆದರೆ ಅಲ್ಪಸಂಖ್ಯಾತರ ಓಲೈಕೆಗಾಗಿ ಬಹುಸಂಖ್ಯಾತ ಹಿಂದೂ ಧರ್ಮವನ್ನು ಕಡೆಗಣಿಸುವಂತಹ ಮತ್ತು ರಾಜಕೀಯವಾಗಿ ಮಾತ್ರ ಬಳಸಿಕೊಳ್ಳುವ ವ್ಯವಸ್ಥೆಯಿಂದಾಗಿ ಹಿಂದೂ ಧರ್ಮದ ಉಳಿವಿಗಾಗಿ ಎಲ್ಲ ಹಿಂದೂ ದರ್ಮದವರು ಜಾತಿ ಮತ,ಪಂಗಡ‌,ರಾಜಕೀಯ ವೈಷಮ್ಯ ಬದಿಗಿಟ್ಟು ಒಗ್ಗಟ್ಟಾಗುವುದರೊಂದಿಗೆ ಸಾಮೂಹಿಕವಾಗಿ ದೇವರಿಗೆ ಪ್ರಾರ್ಥನೆ ಮಾಡುವ ಅಗತ್ಯ ಕಾಲಗಟ್ಟದಲ್ಲಿ ನಾವಿದ್ದೇವೆ.

ಶ್ರೀ ರಾಮ ಜಯರಾಮ ಜಯಜಯ ರಾಮ ಎಂಬ ನಾಮ ಸಂಕೀರ್ತನೆಯೊಂದಿಗೆ ಭಕ್ತಿಪೂರ್ವಕವಾಗಿ ದೇವರನ್ನು ಪ್ರಾರ್ಥಿಸುವ ಈ ಕಾರ್ಯಕ್ರಮದಲ್ಲಿ ಸಮಸ್ತ ಹಿಂದೂ ಬಂಧುಗಳು ಭಾಗವಹಿಸಬೇಕು ಎಂದು ಡಾ.ರವೀಂದ್ರ ಶೆಟ್ಟಿ ಬಜಗೋಳಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಶ್ರೀ ರಾಮ ತಾರಕ ಜಪ ಯಜ್ಞ ಸಮಿತಿಯ ಅಧ್ಯಕ್ಷ ದೇವಿದಾಸ್ ಪ್ರಭು,ಮುಡಾರು ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ,ಪಂಚಾಯತ್ ಸದಸ್ಯ ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.

ಜ.5ರಿಂದ ಜ.21ರ ಮಂಗಳವಾರದವರೆಗೆ ಪ್ರತೀ ದಿನ ಸಾಯಂಕಾಲ ಕುಣಿತ ಭಜನೆ ಹಾಗೂ ಜ.22 ಬುಧವಾರ ಸೂರ್ಯೋದಯದಿಂದ ಸೂರ್ಯಾಸ್ಥದ ವರೆಗೆ ಶ್ರೀ ರಾಮ ತಾರಕ ಜಪ ಯಜ್ಞ ನಡೆಯಲಿದೆ.

ಶ್ರೀ ರಾಮತಾರಕ ಜಪಯಜ್ಞದಲ್ಲಿ ಸಮಸ್ತ ಹಿಂದೂ ಬಂಧುಗಳಿಗೆ ಶ್ರೀ ರಾಮದೇವರಿಗೆ ಪುಷ್ಪಾರ್ಚನೆಯೊಂದಿಗೆ ಶ್ರೀ ರಾಮ ತಾರಕ ಜಪವನ್ನು ಪಠಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.ಸಂಜೆ 6-15ರಿಂದ ಸಮಸ್ತ ಹಿಂದೂ ಬಾಂಧವರಿಂದ ಅಯೋಧ್ಯೆಗೆ ಕಡೆ ಮುಖಮಾಡಿ ಹಣತೆಯನ್ನು ಕೈಯಲ್ಲಿ ಹಿಡಿದು ಮಹಾಮಂಗಳಾರತಿ ಕಾರ್ಯಕ್ರಮ ನಡೆಯಲಿದೆ.

ಧಾರ್ಮಿಕ ಸಭೆ:ಜ.22 ರಂದು ವಾಗ್ಮಿ ದಾಮೋದರ್ ಶರ್ಮಾರವರಿಂದ ಧಾರ್ಮಿಕ ಪ್ರವಚನ ಹಾಗೂ 7.30ರಿಂದ ವಿಠ್ಠಲ್ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ

Previous Post

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಯುವ ಮಧುಮೇಹಿಗಳಿಗೆ ಶೈಕ್ಷಣಿಕ ಕಾರ್ಯಕ್ರಮ..!!

Next Post

ದರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ತಿರುಪತಿ ಮಾದರಿಯ ‘ಶ್ರೀ ಸಾನಿಧ್ಯ ಕ್ಯೂ ಕಾಂಪ್ಲೆಕ್ಸ್‌’ ಆರಂಭ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ದರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ತಿರುಪತಿ ಮಾದರಿಯ ‘ಶ್ರೀ ಸಾನಿಧ್ಯ ಕ್ಯೂ ಕಾಂಪ್ಲೆಕ್ಸ್‌’ ಆರಂಭ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಗೀತೆಯನ್ನು ಓದುವುದಷ್ಟೇ ಅಲ್ಲ, ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಅಲೋಕ್ ಕುಮಾರ್‌ಜಿ

ಗೀತೆಯನ್ನು ಓದುವುದಷ್ಟೇ ಅಲ್ಲ, ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಅಲೋಕ್ ಕುಮಾರ್‌ಜಿ

07/08/2026
ಇಂಧನದ ಗುಣಮಟ್ಟ ಪತ್ತೆಗೆ ‘ಎಐ’ ಆಧಾರಿತ ತ್ವರಿತ ಮೇಲ್ವಿಚಾರಣಾ ವ್ಯವಸ್ಥೆ: ಜಿಹೆಚ್‌ಸಿಎಲ್ ಲಿ. ಜತೆ ಮಾಹೆ ಒಪ್ಪಂದ

ಇಂಧನದ ಗುಣಮಟ್ಟ ಪತ್ತೆಗೆ ‘ಎಐ’ ಆಧಾರಿತ ತ್ವರಿತ ಮೇಲ್ವಿಚಾರಣಾ ವ್ಯವಸ್ಥೆ: ಜಿಹೆಚ್‌ಸಿಎಲ್ ಲಿ. ಜತೆ ಮಾಹೆ ಒಪ್ಪಂದ

07/08/2026
ಈಶ್ವರ ನಗರದಲ್ಲಿ ನಗರಸಭೆ ಪಂಪ್‌ ಹೌಸ್‌ಗೆ ನುಗ್ಗಿದ ಆಟೋ; ತಾಯಿ–ಮಕ್ಕಳಿಗೆ ಗಾಯ

ಈಶ್ವರ ನಗರದಲ್ಲಿ ನಗರಸಭೆ ಪಂಪ್‌ ಹೌಸ್‌ಗೆ ನುಗ್ಗಿದ ಆಟೋ; ತಾಯಿ–ಮಕ್ಕಳಿಗೆ ಗಾಯ

07/08/2026
ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಕೃತಿ ಬಂಗೇರಾ ಆತ್ಮಹತ್ಯೆ..!

ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಕೃತಿ ಬಂಗೇರಾ ಆತ್ಮಹತ್ಯೆ..!

07/08/2026

Recent News