Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಮಾಹೆ ವತಿಯಿಂದ ವಿಶ್ವ ಮಾನಸಿಕ ಸ್ವಾಸ್ಥ್ಯ ದಿನಾಚರಣೆ :ಮಾನಸಿಕ ಆರೋಗ್ಯಕ್ಕಾಗಿ ಮ್ಯಾರಥಾನ್‌..!!

Dhrishya News by Dhrishya News
11/10/2024
in ಸುದ್ದಿಗಳು
0
0
SHARES
25
VIEWS
Share on FacebookShare on Twitter

ಮಣಿಪಾಲ ಅಕ್ಟೋಬರ್‌ 11, 2024 – ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ [ಮಾಹೆ] ನ ವಿದ್ಯಾರ್ಥಿ ವ್ಯವಹಾರ ವಿಭಾಗ [ಡಿಪಾರ್ಟ್‌ಮೆಂಟ್‌ ಆಪ್‌ ಸ್ಟೂಡೆಂಟ್‌ ಅಫೇರ್ಸ್‌] ದ ವತಿಯಿಂದ ಮಾನಸಿಕ ಆರೋಗ್ಯ ದಿನಾಚರಣೆಯ ಅಂಗವಾಗಿ ಅಕ್ಟೋಬರ್‌ 10, 2024 ರಂದು ಮಾನಸಿಕ ಸ್ವಾಸ್ಥ್ಯಕ್ಕಾಗಿ ಮ್ಯಾರಥಾನ್‌ ಯಶಸ್ವಿಯಾಗಿ ಜರಗಿತು. ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಆಶಯದಲ್ಲಿ ಸಂಜೆ 4 ಗಂಟೆಗೆ ಆರಂಭಗೊಂಡ ಮ್ಯಾರಥಾನ್‌, ಸಾಮಾಜಿಕ ಸ್ವಾಸ್ಥ್ಯಪಾಲನೆಯ ಬಗ್ಗೆ ಮಾಹೆಯ ಬದ್ಧತೆಯನ್ನು ದೃಢಪಡಿಸಿತು. ಮಾಹೆಯ ವಿವಿಧ ವಿಭಾಗಗಳ, ವಿದ್ಯಾರ್ಥಿಗಳು, ಸಿಬಂದಿಗಳು ಸೇರಿದಂತೆ ಸುಮಾರು 1000 ಮಂದಿ ಈ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು.   

ಮ್ಯಾರಥಾನ್‌ಗೆ ಹಸಿರು ನಿಶಾನೆಯೊಂದಿಗೆ ಉದ್ಘಾಟಿಸಿದ, ಮಾಹೆಯ ಕುಲಪತಿಗಳಾದ ಲೆ. ಜ. [ಡಾ] ಎಂ. ಡಿ. ವೆಂಕಟೇಶ್‌ ಅವರು ಮಾತನಾಡಿ, ಮಾನಸಿಕ ಆರೋಗ್ಯವಿದ್ದರೆ ಮಾತ್ರ ಪೂರ್ಣ ಆರೋಗ್ಯಭಾಗ್ಯ ಲಭ್ಯವಾಗುತ್ತದೆ. ಪ್ರಸ್ತುತ ಈ ಮ್ಯಾರಥಾನ್‌ ಮಾನಸಿಕ ಸ್ವಾಸ್ಥ್ಯದ ಕುರಿತ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಲಿದೆ.. ಮಾನಸಿಕ ಆರೋಗ್ಯದ ಕುರಿತು ಇರುವ ತಪ್ಪು ತಿಳುವಳಿಕೆಯನ್ನು ಕೂಡ ಇದು ಹೋಗಲಾಡಿಸುತ್ತದೆ’ ಎಂಬ ಆಶಯ ವ್ಯಕ್ತಪಡಿಸಿದರು. 

ಮಾಹೆಯ ಆರೋಗ್ಯವಿಜ್ಞಾನಗಳ ವಿಭಾಗದ ಸಹ-ಕುಲಪತಿಗಳಾದ ಡಾ. ಶರತ್‌ ರಾವ್‌, ಮುಖ್ಯ ನಿರ್ವಹಣ ಅಧಿಕಾರಿ [ಚೀಫ್‌ ಆಪರೇಟಿಂಗ್‌ ಆಫೀಸರ್‌-ಸಿಒಒ] ಡಾ. ರವಿರಾಜ್‌ ಎನ್‌. ಎಸ್‌., ಕುಲಸಚಿವ [ರಿಜಿಸ್ಟ್ರಾರ್‌] ಡಾ. ಗಿರಿಧರ್‌ ಕಿಣಿ ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿದ್ದರು. 

ಬೆಲ್‌-ಒ-ಸಿಲ್‌ ಕಂಪೆನಿಯು ಈ ಮ್ಯಾರಥಾನ್‌ನ ಪ್ರಾಯೋಜಕರಲ್ಲಿ ಒಂದಾಗಿದ್ದು, ಇದರ ತಾಂತ್ರಿಕ ಮತ್ತು ನಿರ್ವಹಣ ವಿಭಾಗದ ನಿರ್ದೇಶಕ ಅಶೋಕ್‌ ಕುಮಾರ್‌ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅವರು ಮಾತನಾಡುತ್ತ, ‘ಮಾನಸಿಕ ಸ್ವಾಸ್ಥ್ಯ ಕುರಿತ ಜಾಗೃತಿಯು ಅತ್ಯಂತ ಆವಶ್ಯಕವಾಗಿದೆ. ಮನಸ್ಸು ಸರಿಯಾಗಿದ್ದರೆ ಮಾತ್ರ ದೇಹ ಸರಿಯಾಗುವುದು. ಎಲ್ಲವೂ ಸರಿಯಾಗಿದ್ದರೆ ಆರೋಗ್ಯವಂತನಾಗಲು ಸಾಧ್ಯ. ಆರೋಗ್ಯವಂತ ಮಾತ್ರ ಸ್ವಾಸ್ಥ್ಯಪೂರ್ಣ ಸಮಾಜವನ್ನುರೂಪಿಸಲು ಶಕ್ತನಾಗುತ್ತಾನೆ’ ಎಂದರು.   

ಪ್ರಸ್ತುತ ಮ್ಯಾರಥಾನ್‌ಗೆ ಕೊಡುಗೆಗಳನ್ನು ನೀಡಿದ ಬ್ಯಾಂಕ್‌ ಆಫ್‌ ಬರೋಡಾದ ಪರವಾಗಿ ವಿದ್ಯಾಧರ ಶೆಟ್ಟಿ ಮತ್ತು ರೋಶನ್‌ ಕುಮಾರ್‌, ಕರ್ನಾಟಕ ಬ್ಯಾಂಕಿನ ವಾದಿರಾಜ ಕೆ., ಫೆಡರಲ್‌ ಬ್ಯಾಂಕಿನ ರಾಜೀವ ವಿ. ಸಿ., ಆ್ಯಕ್ಸಿಸ್‌ ಬ್ಯಾಂಕಿನ ಬಿ. ಸುರೇಶ್‌. ಕೆನರಾ ಬ್ಯಾಂಕಿನ ಪ್ರಾದೇಶಿಕ ಮುಖ್ಯಸ್ಥರಾದ ಶೀಬಾ ಅವರು ಸಕ್ರಿಯವಾಗಿ ಭಾಗವಹಿಸಿದ್ದರು. 

ಮಣಿಪಾಲ್‌ ಪೊಲೀಸ್‌ ಸ್ಟೇಶನ್‌ನ ಇನ್ಸ್‌ಪೆಕ್ಟರ್‌ ದೇವರಾಜ್‌, ಉಡುಪಿಯ ಎ. ವಿ. ಬಾಳಿಗ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಮತ್ತು ಮನಶ್ಯಾಸ್ತ್ರಜ್ಞ ಡಾ. ಪಿ. ವಿ. ಭಂಡಾರಿ ಉಪಸ್ಥಿತರಿದ್ದರು.

ಮಾಹೆಯ ವಿದ್ಯಾರ್ಥಿ ವ್ಯವಹಾರ ವಿಭಾಗದ ನಿರ್ದೇಶಕರಾದ ಡಾ. ಗೀತಾ ಮಯ್ಯ ಸ್ವಾಗತಿಸಿದರು. ಕೆಎಂಸಿ, ಮಣಿಪಾಲದ ಸಹಪ್ರಾಧ್ಯಾಪಕರಾದ ಡಾ. ರೀನಾ ಶೆರೀನ್‌ ಮತ್ತು ಮಣಿಪಾಲ ಡಿಓಸಿಯ ಸಹಾಯಕ ಪ್ರಾಧ್ಯಾಪಕ ಡಾ. ಎವರಿಲ್‌ ಜಾಕ್‌ಲಿನ್‌ ಫೆರ್ನಾಂಡೀಸ್‌ ಅವರು ಕಾರ್ಯಕ್ರಮ ನಿರ್ವಹಿಸಿದರು.

ಉಡುಪಿಯ ಕಲಾಮಯಂ ತಂಡ, ಕಟಪಾಡಿ ಚೆಂಡೆ ಬಳಗ, ಪರ್ಕಳ ಸಾಂಸ್ಕೃತಿಕ ತಂಡ, ಎಂಸಿಎಚ್‌ಪಿಯ ವಿದ್ಯಾರ್ಥಿಗಳು ಜಾನಪದ ಹಾಡು-ನೃತ್ಯಗಳನ್ನು ನಡೆಸಿಕೊಟ್ಟರು.

Previous Post

ಉಡುಪಿ : ಶಾರದೋತ್ಸವ ವಿಸರ್ಜನಾ ಮೆರವಣಿಗೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಠಿಯಿಂದ ಹಲವೆಡೆ ಮದ್ಯಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ..!!

Next Post

ಟಾಟಾ ಟ್ರಸ್ಟ್’ ನೂತನ ಅಧ್ಯಕ್ಷರಾಗಿ ನೋಯೆಲ್ ಟಾಟಾ ನೇಮಕ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಟಾಟಾ ಟ್ರಸ್ಟ್' ನೂತನ ಅಧ್ಯಕ್ಷರಾಗಿ ನೋಯೆಲ್ ಟಾಟಾ ನೇಮಕ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಗೀತೆಯನ್ನು ಓದುವುದಷ್ಟೇ ಅಲ್ಲ, ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಅಲೋಕ್ ಕುಮಾರ್‌ಜಿ

ಗೀತೆಯನ್ನು ಓದುವುದಷ್ಟೇ ಅಲ್ಲ, ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಅಲೋಕ್ ಕುಮಾರ್‌ಜಿ

07/08/2026
ಇಂಧನದ ಗುಣಮಟ್ಟ ಪತ್ತೆಗೆ ‘ಎಐ’ ಆಧಾರಿತ ತ್ವರಿತ ಮೇಲ್ವಿಚಾರಣಾ ವ್ಯವಸ್ಥೆ: ಜಿಹೆಚ್‌ಸಿಎಲ್ ಲಿ. ಜತೆ ಮಾಹೆ ಒಪ್ಪಂದ

ಇಂಧನದ ಗುಣಮಟ್ಟ ಪತ್ತೆಗೆ ‘ಎಐ’ ಆಧಾರಿತ ತ್ವರಿತ ಮೇಲ್ವಿಚಾರಣಾ ವ್ಯವಸ್ಥೆ: ಜಿಹೆಚ್‌ಸಿಎಲ್ ಲಿ. ಜತೆ ಮಾಹೆ ಒಪ್ಪಂದ

07/08/2026
ಈಶ್ವರ ನಗರದಲ್ಲಿ ನಗರಸಭೆ ಪಂಪ್‌ ಹೌಸ್‌ಗೆ ನುಗ್ಗಿದ ಆಟೋ; ತಾಯಿ–ಮಕ್ಕಳಿಗೆ ಗಾಯ

ಈಶ್ವರ ನಗರದಲ್ಲಿ ನಗರಸಭೆ ಪಂಪ್‌ ಹೌಸ್‌ಗೆ ನುಗ್ಗಿದ ಆಟೋ; ತಾಯಿ–ಮಕ್ಕಳಿಗೆ ಗಾಯ

07/08/2026
ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಕೃತಿ ಬಂಗೇರಾ ಆತ್ಮಹತ್ಯೆ..!

ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಕೃತಿ ಬಂಗೇರಾ ಆತ್ಮಹತ್ಯೆ..!

07/08/2026

Recent News