Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಮುಖಪುಟ

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ಅಪಧ್ಬಾಂದವ, ಖ್ಯಾತ ಮುಳುಗುತಜ್ಞ ಈಶ್ವರ್ ಮಲ್ಪೆ ಕುಟುಂಬಕ್ಕೆ 1ಲಕ್ಷ ರೂಪಾಯಿ ಚೆಕ್ ಹಸ್ತಾಂತರ..!!

Dhrishya News by Dhrishya News
01/10/2024
in ಮುಖಪುಟ
0
0
SHARES
19
VIEWS
Share on FacebookShare on Twitter

ಉಡುಪಿ :ಅಕ್ಟೋಬರ್ 01:ತುರ್ತು ಸಂದರ್ಭದಲ್ಲಿ ತನ್ನ ಜೀವದ ಹಂಗುತೊರೆದು ನೂರಾರು ಜೀವಗಳನ್ನು ರಕ್ಷಿಸಿದ, ಅಪಧ್ಬಾಂದವ, ಖ್ಯಾತ ಮುಳುಗುತಜ್ಞ ಈಶ್ವರ್ ಮಲ್ಪೆಯವರಿಗೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ರೂ.1 ಲಕ್ಷದ ಚೆಕ್ ನ್ನು ಅರುಣ್ ಕುಮಾರ್ ಪುತ್ತಿಲ ಈಶ್ವರ್ ಮಲ್ಪೆ ಮತ್ತು ಗೀತಾ ದಂಪತಿಗಳಿಗೆ ಅವರ ಮಲ್ಪೆಯ ಮನೆಯಲ್ಲಿ ವಿತರಿಸಿದರು

ತನ್ನ ಮಕ್ಕಳು ವಿಶೇಷ ಚೇತನರಾಗಿ ತೀವ್ರ ಅನಾರೋಗ್ಯದಿಂದಿದ್ದರೂ ಮನೆಯ ಪರಿಸ್ಥಿತಿಯನ್ನು ಲೆಕ್ಕಿಸದೆ ಪ್ರಾಕೃತಿಕ ವಿಕೋಪದ ಕಠಿಣ ಸಂದರ್ಭದಲ್ಲಿ ಜೀವದ ಹಂಗು ತೊರೆದು ಉಚಿತವಾಗಿ ರಕ್ಷಣೆಗೆ ಧಾವಿಸುವ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ಯವರ ಸೇವೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ.

ಉತ್ತರ ಕನ್ನಡ ಜಿಲ್ಲೆಯ ಶೀರೂರು ಗುಡ್ಡ ಕುಸಿತದ ರಕ್ಷಣಾ ಕಾರ್ಯದಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತದ ಮನವಿಯ ಮೇರೆಗೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ನಾಪತ್ತೆಯಾಗಿದ್ದ ಚಾಲಕ ಅರ್ಜುನ್ ಲಾರಿಯನ್ನು ಗುರುತಿಸುವಲ್ಲಿಯೂ ಈಶ್ವರ್ ಮಲ್ಪೆ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಕೊನೆಗೆ ಅವರನ್ನು ಅಧಿಕಾರಿಗಳು ಮತ್ತು ಸರ್ಕಾರ ಕಡೆಗಣನೆ ಮಾಡಿರುವುದು ಸಮಾಜದಲ್ಲಿ ತೀವ್ರ ಬೇಸರವನ್ನು ಉಂಟು ಮಾಡಿದೆ.

ಮನೆಯಲ್ಲಿ ಬಡತನವಿದ್ದರೂ ಮಾನವೀಯತೆಯಲ್ಲಿ ಅಗರ್ಭ ಶ್ರೀಮಂತರಾಗಿರುವ ಈಶ್ವರ್ ಮಲ್ಪೆಯವರ ಸೇವೆ ಇನ್ನಷ್ಟು ಬೇಕೆಂಬ ಹಂಬಲದಿಂದ ಪ್ರತಿಯೊಬ್ಬನೂ ಈಶ್ವರ್ ಮಲ್ಪೆಯವರಿಗೆ ಬೆಂಬಲವಾಗಿ ನಿಲ್ಲಬೇಕೆಂದು ಈ ಸಂದರ್ಭದಲ್ಲಿ ಅರುಣ್ ಕುಮಾರ್ ಪುತ್ತಿಲ ಹೇಳಿದರು.

ಈಶ್ವರ್ ಮಲ್ಪೆಯವರಿಗೆ ಕೇವಲ ಶ್ಲಾಘನೆ ಸಾಕಾಗುವುದಿಲ್ಲ. ಸುಮಾರು 200 ರಷ್ಟು ಜೀವಗಳನ್ನು ನೀರಿನಿಂದ ಮೇಲೆತ್ತಿದ ಈ ಸಾಧಕನ ಹೆಸರಲ್ಲಿ ಸರ್ಕಾರ ‘ಅಪಧ್ಬಾಂದವ ಈಶ್ವರ್ ಮಲ್ಪೆ ತುರ್ತು ಸೇವಾ ಘಟಕ’ ಸ್ಥಾಪಿಸಿ ಅದರ ಮೂಲಕ ರಾಜ್ಯದೆಲ್ಲೆಡೆ ತರಬೇತಿ ಪಡೆದ ಒಂದು ತುರ್ತು ಸೇವಾ ತಂಡ ರಚನೆಯಾಗುವಂತೆ ಸರ್ಕಾರ ಇವರಿಗೆ ಸವಲತ್ತು ನೀಡಬೇಕು ಮತ್ತು ಈಶ್ವರ್ ಮಲ್ಪೆಯ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾಡುವಂತೆ ಅರುಣ್ ಕುಮಾರ್ ಪುತ್ತಿಲ ಒತ್ತಾಯಿಸಿದರು

ಕೇವಲ 7 ಗಂಟೆಯಲ್ಲಿ ಒಂದೇ ವಾಟ್ಸಾಪ್ ಗ್ರೂಪ್ ನಿಂದ ಸಂಗ್ರಹ : ಮಾಧ್ಯಮಗಳ ವರದಿಗಳನ್ನು ವೀಕ್ಷಿಸಿ ಈಶ್ವರ್ ಮಲ್ಪೆಯವರಿಗೆ ಕೈಲಾದ ಕೊಡುಗೆ ನೀಡಬೇಕೆಂದು ನಿರ್ಧರಿಸಿದ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಪ್ರಮುಖರು ‘ಪುತ್ತಿಲ ಬ್ರಿಗೇಡ್’ ಎಂಬ ವಾಟ್ಸಾಪ್ ಗ್ರೂಪ್ ನಲ್ಲಿ ಹಾಕಿದ ಒಂದು ಸಂದೇಶಕ್ಕೆ ಕೇವಲ 7 ಗಂಟೆಯಲ್ಲಿ ಒಂದು ಲಕ್ಷ ರೂಪಾಯಿ ಸಂಗ್ರಹವಾಗಿದೆ. ಇದು ಈಶ್ವರ್ ಮಲ್ಪೆಯ ಮೇಲೆ ಜನರಿಗಿರುವ ಅಭಿಮಾನವನ್ನು ತೋರಿಸುತ್ತದೆ ಎಂದು ಸೇವಾ ಟ್ರಸ್ಟ್ ನ ಪ್ರಮುಖರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಉಡುಪಿ ಮೀನುಗಾರರ ಪ್ರಕೋಷ್ಠದ ಸಂಚಾಲಕರಾದ ಮಂಜು ಕೊಳ ಮಲ್ಪೆ,ಉಡುಪಿ ಹಿಂದೂ ಯುವಸೇನೆ ನಗರ ಅಧ್ಯಕ್ಷರಾದ ಸುನೀಲ್ ನೇಜಾರು, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಂದಾರು, ಯುವ ಮೋರ್ಚಾ ಉಪಾಧ್ಯಕ್ಷ ಧನುಶ್ ಮೊದಲಾದವರು ಉಪಸ್ಥಿತರಿದ್ದರು.

Previous Post

ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಅಕ್ಟೋಬರ್ 3 ರಿಂದ 12 ವೈಭವದ ಶರನ್ನವರಾತ್ರಿ ಮಹೋತ್ಸವ..!!

Next Post

ಖೋ ಖೋ : ಎಸ್ ‌ವಿ ಟಿಯ ದೀಪಿಕಾ ರಾಜ್ಯ ಮಟ್ಟಕ್ಕೆ ಆಯ್ಕೆ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಖೋ ಖೋ : ಎಸ್ ‌ವಿ ಟಿಯ ದೀಪಿಕಾ ರಾಜ್ಯ ಮಟ್ಟಕ್ಕೆ ಆಯ್ಕೆ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಾರ್ಕಳದ ಹಿರಿಯ ಕಾರ್ಯಕರ್ತ ಶ್ರೀ ಗೋಪಾಲ ಕೃಷ್ಣ ಪ್ರಭು ನಿಧನಕ್ಕೆ ಸಂತಾಪ

ಕಾರ್ಕಳದ ಹಿರಿಯ ಕಾರ್ಯಕರ್ತ ಶ್ರೀ ಗೋಪಾಲ ಕೃಷ್ಣ ಪ್ರಭು ನಿಧನಕ್ಕೆ ಸಂತಾಪ

16/06/2026
ಬ್ರಹ್ಮಾವರ: ಬ್ರಹ್ಮಾವರ ವ್ಯವಸಾಯಸೇವಾ ಸಹಕಾರಿಯಿಂದ ನೀಲಾವರ ಶಾಖೆಯಲ್ಲಿ ಬ್ಯಾಂಕಿಂಗ್     

ಬ್ರಹ್ಮಾವರ: ಬ್ರಹ್ಮಾವರ ವ್ಯವಸಾಯಸೇವಾ ಸಹಕಾರಿಯಿಂದ ನೀಲಾವರ ಶಾಖೆಯಲ್ಲಿ ಬ್ಯಾಂಕಿಂಗ್     

16/06/2026
ಉಡುಪಿ ಯಲ್ಲಿ ಜುಲೈ 5 ರಂದು  ಸೀರೆ ಡ್ರೇಪಿಂಗ್ ಸೆಮಿನಾರ್ –ಮಿಸ್ ಮಾಡದೇ ಭಾಗವಹಿಸಿ ..!

ಉಡುಪಿ ಯಲ್ಲಿ ಜುಲೈ 5 ರಂದು  ಸೀರೆ ಡ್ರೇಪಿಂಗ್ ಸೆಮಿನಾರ್ –ಮಿಸ್ ಮಾಡದೇ ಭಾಗವಹಿಸಿ ..!

16/06/2026
ಮಣಿಪಾಲ :ಯುವಕ ನಾಪತ್ತೆ ಪ್ರಕರಣ ದಾಖಲು

ಕೊಡವೂರು :ವ್ಯಕ್ತಿ ನಾಪತ್ತೆ..!

15/06/2026

Recent News

ಕಾರ್ಕಳದ ಹಿರಿಯ ಕಾರ್ಯಕರ್ತ ಶ್ರೀ ಗೋಪಾಲ ಕೃಷ್ಣ ಪ್ರಭು ನಿಧನಕ್ಕೆ ಸಂತಾಪ

ಕಾರ್ಕಳದ ಹಿರಿಯ ಕಾರ್ಯಕರ್ತ ಶ್ರೀ ಗೋಪಾಲ ಕೃಷ್ಣ ಪ್ರಭು ನಿಧನಕ್ಕೆ ಸಂತಾಪ

16/06/2026
ಬ್ರಹ್ಮಾವರ: ಬ್ರಹ್ಮಾವರ ವ್ಯವಸಾಯಸೇವಾ ಸಹಕಾರಿಯಿಂದ ನೀಲಾವರ ಶಾಖೆಯಲ್ಲಿ ಬ್ಯಾಂಕಿಂಗ್     

ಬ್ರಹ್ಮಾವರ: ಬ್ರಹ್ಮಾವರ ವ್ಯವಸಾಯಸೇವಾ ಸಹಕಾರಿಯಿಂದ ನೀಲಾವರ ಶಾಖೆಯಲ್ಲಿ ಬ್ಯಾಂಕಿಂಗ್     

16/06/2026
ಉಡುಪಿ ಯಲ್ಲಿ ಜುಲೈ 5 ರಂದು  ಸೀರೆ ಡ್ರೇಪಿಂಗ್ ಸೆಮಿನಾರ್ –ಮಿಸ್ ಮಾಡದೇ ಭಾಗವಹಿಸಿ ..!

ಉಡುಪಿ ಯಲ್ಲಿ ಜುಲೈ 5 ರಂದು  ಸೀರೆ ಡ್ರೇಪಿಂಗ್ ಸೆಮಿನಾರ್ –ಮಿಸ್ ಮಾಡದೇ ಭಾಗವಹಿಸಿ ..!

16/06/2026
ಮಣಿಪಾಲ :ಯುವಕ ನಾಪತ್ತೆ ಪ್ರಕರಣ ದಾಖಲು

ಕೊಡವೂರು :ವ್ಯಕ್ತಿ ನಾಪತ್ತೆ..!

15/06/2026
ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ

Pages

Social Media

Facebook-f Facebook-f Instagram Youtube Twitter Whatsapp

Copyright © 2023 Dhrishya News I All Copyright Reserved