ಬೆಂಗಳೂರು : ಸೆಪ್ಟೆಂಬರ್ 09:ಬಡ ಮಹಿಳೆಯರನ್ನ ಬೆಂಬಲಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಉಚಿತ ಹೊಲಿಗೆ ಯಂತ್ರ ಯೋಜನೆಯನ್ನ ಆರಂಭಿಸಿದೆ
ಈ ಯೋಜನೆಗೆ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸ್ಲಲಿಸಲು ಸೆಪ್ಟೆಂಬರ್ 15 ಕೊನೆಯ ದಿನವಾಗಿದೆ.
ನೀವು ಕೂಡ ಕರ್ನಾಟಕ ಸರ್ಕಾರ ನೀಡುವ ಉಚಿತ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಉಚಿತ ಹೊಲಿಗೆ ಯಂತ್ರದ ಪಡೆಯಲು ಬೇಕಾದ ಅರ್ಹತೆಗಳು.!
* ಈ ಯೋಜನೆಯೂ ಮಹಿಳೆಯರಿಗೆ ಮಾತ್ರವಾಗಿದೆ.
* ಅಭ್ಯರ್ಥಿಯು ಕರ್ನಾಟಕದ ಖಾಯಂ ಪ್ರಜೆಯಾಗಿರಬೇಕು.
* ಅರ್ಹತಾ ಮಾನದಂಡಗಳ ಅಡಿಯಲ್ಲಿ ಬರುವ ಮಹಿಳೆಯರು ಮಾತ್ರ ಈ ಯೋಜನೆಯ ಪ್ರಯೋಜನ ಪಡೆಯಬಹುದು.
* ಕುಟುಂಬದ ಆದಾಯವು 12,000 ರೂಪಾಯಿಕ್ಕಿಂತ ಕಡಿಮೆ ಇರಬೇಕು.
* ಅಭ್ಯರ್ಥಿಯು ಬಡತನ ರೇಖೆಗಿಂತ ಕೆಳಗಿರಬೇಕು.
* ಮಹಿಳೆಯರು ದುಡಿಯುವ ವರ್ಗದಲ್ಲಿ ಕೆಲಸ ಮಾಡಲು ಸಮರ್ಥರಾಗಿದ್ದರೆ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
* ಈ ಯೋಜನೆಯಡಿಯಲ್ಲಿ ಮಹಿಳೆಯರ ಕನಿಷ್ಠ ವಯಸ್ಸು 20 ಇರಬೇಕು. ಇನ್ನು ಗರಿಷ್ಠ ವಯಸ್ಸು 49.
* ಅಭ್ಯರ್ಥಿಯು ಟೈಲರಿಂಗ್’ನಲ್ಲಿ ಪ್ರತಿಭೆಯನ್ನ ಹೊಂದಿದ್ದು, ಈ ಯೋಜನೆಯೊಂದಿಗೆ ಹೆಚ್ಚಿನ ಪ್ರಯೋಜನಗಳನ್ನ ಪಡೆಯಬಹುದು.
ಉಚಿತ ಹೊಲಿಗೆ ಯಂತ್ರ ಪಡೆಯಲು ಈ ದಾಖಲೆಗಳು ಕಡ್ಡಾಯ
* ಅರ್ಜಿದಾರರ ಕುಟುಂಬದ ಆದಾಯದ ಪರಿಶೀಲನೆಗಾಗಿ ಅರ್ಜಿದಾರರ ಆದಾಯ ಪ್ರಮಾಣಪತ್ರ.
* ಆಧಾರ್ ಕಾರ್ಡ್’ನ ನಕಲು ಪ್ರತಿ.
* ಅಭ್ಯರ್ಥಿಯ ಬಳಿ ಇರುವ ವಯಸ್ಸಿನ ದೃಢೀಕರಣ ಪ್ರಮಾಣಪತ್ರದ ಛಾಯಾಪ್ರತಿ ಅಥವಾ ಮೆಟ್ರಿಕ್ಯುಲೇಷನ್ ಪ್ರಮಾಣಪತ್ರದ ಛಾಯಾ ಪ್ರತಿ.
* ಜಾತಿ ಪ್ರಮಾಣ ಪತ್ರದ ಪ್ರತಿ
* ಟೈಲರಿಂಗ್ ಮತ್ತು ಕಟಿಂಗ್ ಸರ್ಟಿಫಿಕೇಟ್
* ಅರ್ಜಿದಾರರು ಅಂಗವಿಕಲರಾಗಿದ್ದರೆ, ಅಂಗವೈಕಲ್ಯವನ್ನ ಸಾಬೀತುಪಡಿಸುವ ಪ್ರಮಾಣಪತ್ರ.
* ಮೊಬೈಲ್ ಸಂಖ್ಯೆ
* ವಿಧವೆಯರ ಸಾಕ್ಷ್ಯದ ಅಫಿಡವಿಟ್
ಕರ್ನಾಟಕದಲ್ಲಿ ಆನ್ಲೈನ್ ಉಚಿತ ಹೊಲಿಗೆ ಯಂತ್ರ ಯೋಜನೆ ಆನ್ಲೈನ್ ನೋಂದಣಿಗೆ ಅರ್ಜಿ ಸಲ್ಲಿಸಿ.!
* ಮೊದಲು ಯೋಜನೆಯ ಅಧಿಕೃತ ವೆಬ್ಸೈಟ್ National Portal of India ಗೆ ಭೇಟಿ ನೀಡಿ
* ಮೇಲಿನ ಪರದೆಯಲ್ಲಿ ಮುಖಪುಟವನ್ನ ತೆರೆಯಿರಿ.
* ಈಗ ಉಚಿತ ಹೊಲಿಗೆ ಯಂತ್ರ ಯೋಜನೆ ಕಾಕರ್ನಾಟಕದ ಲಿಂಕ್ ಆನ್ ಲೈನ್ ಅರ್ಜಿ ನಮೂನೆ ಇರುತ್ತೆ.
* ಆ ಲಿಂಕ್ ಕ್ಲಿಕ್ ಮಾಡಿ.
* ಅದರ ನಂತರ ಅರ್ಜಿ ನಮೂನೆ ಪರದೆಯ ಮೇಲೆ ತೆರೆಯುತ್ತದೆ.
* ಅರ್ಜಿ ನಮೂನೆಯ ಕೆಳಗಿರುವ ಡೌನ್ ಲೋಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ಅದರ ನಂತರ ಪಿಎಫ್ಡಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಮತ್ತು ಎಲ್ಲಾ ಫಾರ್ಮ್ಗಳನ್ನು ಭರ್ತಿ ಮಾಡಿ.
ಹೆಸರು, ವಯಸ್ಸು, ಮೊಬೈಲ್ ಸಂಖ್ಯೆ, ವಿಳಾಸ, ಆಧಾರ್ ಸಂಖ್ಯೆ ಮತ್ತು ಇತರ ಅಗತ್ಯ ಮಾಹಿತಿಯಂತಹ ನಿಮ್ಮ ಎಲ್ಲಾ ವೈಯಕ್ತಿಕ ವಿವರಗಳನ್ನು ನಮೂದಿಸಿ.
* ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿದ ನಂತರ ಎಲ್ಲಾ ದಾಖಲೆಗಳನ್ನು ಅರ್ಜಿ ನಮೂನೆಯೊಂದಿಗೆ ಲಗತ್ತಿಸಿ.