ಸುಳ್ಯ: ಸೆಪ್ಟೆಂಬರ್ 08: ಪೆರಾಜೆ ಬಳಿಯ ಕಲ್ಬರ್ಪೆ ಎಂಬಲ್ಲಿ ದ್ವಿಚಕ್ರ ವಾಹನ ಮತ್ತು ರಿಕ್ಷಾ ಮಧ್ಯೆ ಅಪಘಾತ ಸಂಭವಿಸಿ ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ನಡೆದಿದೆ.
ಚೆಂಬು ಗ್ರಾಮದ ಕುದ್ರೆಪಾಯ ಬೊಳ್ಳೂರು ಆನಂದ ಎಂಬವರ ಪುತ್ರ ನವೀನ್ (23) ಮೃತಪಟ್ಟವರು ಎಂದು ತಿಳಿದುಬಂದಿದೆ.ನವೀನ್ ಸುಳ್ಯದ ಖಾಸಗಿ ಕಾಲೇಜಿನ ಐಟಿಐ ವಿದ್ಯಾರ್ಥಿಯಾಗಿದ್ದ ಎಂದು ತಿಳಿದು ಬಂದಿದೆ.