Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಬಿಜೆಪಿ ಸದಸ್ಯತ್ವ ವಿವಾದ : ತೆಲಿಕೆದ ಬೊಳ್ಳಿ ಖ್ಯಾತಿಯ ಕಾಪಿಕಾಡ್’ ಕಾಮಿಡಿ ಶೋಗೆ ಸೌದಿ ಅರೇಬಿಯಾದಲ್ಲಿ ‘ ಬಹಿಷ್ಕಾರದ ಬೆದರಿಕೆ..!

Dhrishya News by Dhrishya News
07/09/2024
in ಸುದ್ದಿಗಳು
0
0
SHARES
96
VIEWS
Share on FacebookShare on Twitter

ಮಂಗಳೂರು : ಸೆಪ್ಟೆಂಬರ್ 07: ತುಳು ನಾಡಿನ ಖ್ಯಾತ ನಟ ನಿರ್ದೇಶಕ, ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರ ‘ ಬಿಜೆಪಿ ಸದಸ್ಯತ್ವ ಇದೀಗ ವಿವಾದ ಸೃಷ್ಟಿಸಿದ್ದು ಬಿಜೆಪಿ ಸದಸ್ಯತ್ವ ಪಡೆದ ಕಾರಣಕ್ಕೆ ಸೌದಿ ಅರೇಬಿಯಾದಲ್ಲಿ ಕಾಮಿಕಾಡ್ ಅವರ ಕಾಮಿಡಿ ಶೋ ಕಾರ್ಯಕ್ರಮಕ್ಕೆ ಬಹಿಷ್ಕಾರದ ಬೆದರಿಕೆ ಬಂದಿದೆ.

ಬಿಜೆಪಿ ‘ಸದಸ್ಯತ್ವ’ ವಿವಾದ ಕರಾವಳಿಯ ಪ್ರಸಿದ್ದ ತುಳು ನಟ, ನಿರ್ದೇಶಕ ದೇವದಾಸ್ ಕಾಪಿಕಾಡ್ ಅವರನ್ನು ಸುತ್ತಿಕೊಂಡಿದೆ. ಬಿಜೆಪಿ ‘ಸದಸ್ಯತ್ವ’ ಪಡೆದ ಕಾರಣಕ್ಕೆ ಕಾರ್ಯಕ್ರಮ ಬಹಿಷ್ಕಾರದ ಬಿಸಿ ತಟ್ಟಿದೆ. ಸೌದಿ ಅರೇಬಿಯಾದಲ್ಲಿ ಕಾಪಿಕಾಡ್ ಕಾಮಿಡಿ ಶೋಗೆ ಬಹಿಷ್ಕಾರದ ಬೆದರಿಕೆ ಬಂದಿದ್ದು, ಕಾಪಿಕಾಡ್ ಶೋ ಬಹಿಷ್ಕಾರದ ಪೋಸ್ಟರ್ ಇದೀಗ ವೈರಲ್ ಆಗುತ್ತಿದೆ. ಇದರ ಬೆನ್ನಲ್ಲೇ ದೇವದಾಸ್ ಕಾಪಿಕಾಡ್ ಉಲ್ಟಾ ಹೊಡೆದಿದ್ದು ಬಿಜೆಪಿ ಸೇರ್ಪಡೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿ ಸದಸ್ಯತ್ವ ಅನ್ ಲೈನ್ ಅಭಿಯಾನದ ಅಂಗವಾಗಿ ಬುಧವಾರ ಮಾಜಿ ಕೇಂದ್ರ ಸಚಿವ ಡಿ.ವಿ‌.ಸದಾನಂದ ಗೌಡ ಸಮ್ಮುಖದಲ್ಲಿ ಕಾಪಿಕಾಡ್ ಮನೆಯಲ್ಲೇ ನಡೆದ ಸರಳ ಕಾರ್ಯಕ್ರಮದಲ್ಲಿ ದೇವದಾಸ್ ಕಾಪಿಕಾಡ್ ಬಿಜೆಪಿ ಸದಸ್ಯತ್ವ ಪಡೆದಿದ್ದರು.

ಈ ಬಗ್ಗೆ ಬಿಜೆಪಿ ಅಧಿಕೃತವಾಗಿ ಪ್ರಕಟನೆ ಕೂಡ ನೀಡಿತ್ತು. ದೇವದಾಸ್ ಕಾಪಿಕಾಡ್ ಬಿಜೆಪಿ ಸದಸ್ಯತ್ವ ಪಡೆದ ಬಗ್ಗೆ ಬಿಜೆಪಿಯಿಂದ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಕೂಡ ಹಾಕಲಾಗಿತ್ತು. ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡರು ಕೂಡ ಅಧಿಕೃತ ಫೇಸ್ಬುಕ್ ಖಾತೆ, ರಾಜ್ಯ ಮತ್ತು ದ.ಕ ಜಿಲ್ಲಾ ಬಿಜೆಪಿ ಕೂಡ ಫೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ್ದರು. ಫೋಸ್ಟ್ ವೈರಲ್ ಬೆನ್ನಲ್ಲೇ ದೇವದಾಸ್ ಕಾಪಿಕಾಡ್ ಗೆ ಬಹಿಷ್ಕಾರದ ಬಿಸಿ ತಟ್ಟಿದೆ. ಸೆ.13 ಹಾಗೂ 14 ರಂದು ಸೌದಿಯ ಜುಬೈಲ್ ನ ಪುಲಿ ರೆಸ್ಟೋರೆಂಟ್ ನಲ್ಲಿ ಆಯೋಜನೆಯಾಗಿರುವ ಕಾಪಿಕಾಡ್ ಕಾಮಿಡಿ ಕಾರ್ಯಕ್ರಮಕಕ್ಕೆ ಬಹಿಷ್ಕಾರ ಹಾಕುವ ಬೆದರಿಕೆಗಳು ಬಂದಿವೆ.

ಬಿಜೆಪಿ ಸದಸ್ಯತ್ವ ಪಡೆದ ಹಿನ್ನೆಲೆ ಕಾರ್ಯಕ್ರಮ ಬಹಿಷ್ಕರಿಸಿ ಅಂತ ಪೋಸ್ಟ್ ಗಳನ್ನು ಹರಿಯಬಿಡಲಾಗಿದ್ದು ವೈರಲ್ ಆಗ್ತಿವೆ. ಇದರ ಬೆನ್ನಲ್ಲೇ ಕಾಪಿಕಾಡ್ ಉಲ್ಟಾ ಹೊಡೆದಿದ್ದು ತಾನು ಬಿಜೆಪಿ ಸದಸ್ಯತ್ವ ಪಡೆದಿಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ. ಸದ್ಯ ಸಾಮಾಜಿಕ ತಾಣಗಳಲ್ಲಿ ಸ್ಪಷ್ಟನೆಯ ಆಡಿಯೋ ಕೂಡ ವೈರಲ್ ಆಗ್ತಿದೆ. ‘ಬಿಜೆಪಿ ನಾಯಕರ ಜೊತೆ ಕೇವಲ ಸೌಹಾರ್ದ ಭೇಟಿ ನಡೆದಿದೆ, ನಾನು ಯಾವುದೇ ಪಕ್ಷಕ್ಕೂ ಸೇರಿದವನಲ್ಲ, ಯಾವುದೇ ಪಕ್ಷಕ್ಕೆ ನಾನು ಸೇರ್ಪಡೆಯಾಗಿಲ್ಲ.ಎಲ್ಲಾ ಪಕ್ಷಗಳ ಮುಖಂಡರ ಜೊತೆ ನನಗೆ ಉತ್ತಮ ಸಂಬಂಧ ಇದೆ ಎಂಬ ಸ್ಪಷ್ಟನೆ ಆಡಿಯೋ ವೈರಲ್ ಆಗ್ತಿದೆ.

ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರಿಗೆ ಸರ್ವ ಧರ್ಮಗಳಲ್ಲಿ ಲಕ್ಷಾಂತರ ಮಂದಿ ಅಭಿಮಾನಿಗಳಿದ್ದಾರೆ.ತುಳು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿರೋ ದೇವದಾಸ್ ಕಾಪಿಕಾಡ್ ಅವರನ್ನು ಜಾತಿ, ಧರ್ಮ, ಪಕ್ಷ ಬಿಟ್ಟು ಪ್ರೀತಿಸುವ ಅಭಿಮಾನಿಗಳಿಗೆ ಕಾಪಿಕಾಡ್ ಅವರ ಒಂದು ಪಕ್ಷಕ್ಕೆ ಸೇರುವ ನಡೆ ಸಹಜವಾಗಿಯೇ ಬೇಸರ ತಂದಿದೆ.

Previous Post

ಭಟ್ಕಳ : ಆಳಸಮುದ್ರ ಮೀನುಗಾರಿಕೆಗೆ ತೆರಳಿದ ಮಲ್ಪೆಯ  ಬೋಟ್ ಮುಳುಗಡೆ -ಮೀನುಗಾರರ ರಕ್ಷಣೆ..!!

Next Post

ನ್ಯಾಷನಲ್ ಹೈವೇ ಯ್ಲಲಿ ಆಯಿಲ್ ಸೋರಿಕೆ ; ಕುಂದಾಪುರ ಟ್ರಾಫಿಕ್  ಪೊಲೀಸರಿಂದ ಆಯಿಲ್ ತುಂಬಿದ್ದ ಟ್ಯಾಂಕರ್ ವಶ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ನ್ಯಾಷನಲ್ ಹೈವೇ ಯ್ಲಲಿ ಆಯಿಲ್ ಸೋರಿಕೆ ; ಕುಂದಾಪುರ ಟ್ರಾಫಿಕ್  ಪೊಲೀಸರಿಂದ ಆಯಿಲ್ ತುಂಬಿದ್ದ ಟ್ಯಾಂಕರ್ ವಶ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕಾಣೆಯಾದ ವ್ಯಕ್ತಿಯ ಪತ್ತೆಗೆ ಮನವಿ

ಕಾಣೆಯಾದ ವ್ಯಕ್ತಿಯ ಪತ್ತೆಗೆ ಮನವಿ

06/10/2026
ಉಚ್ಚಿಲ ದಸರಾ ಸಂಭ್ರಮಕ್ಕೆ ಸಜ್ಜಾಗುತ್ತಿರುವ ಶ್ರೀ ಮಹಾಲಕ್ಷ್ಮೀ ದೇವಸ್ಥಾನ

ಉಚ್ಚಿಲ ದಸರಾ ಸಂಭ್ರಮಕ್ಕೆ ಸಜ್ಜಾಗುತ್ತಿರುವ ಶ್ರೀ ಮಹಾಲಕ್ಷ್ಮೀ ದೇವಸ್ಥಾನ

06/10/2026
ಮಾಹೆ–ಗೂಗಲ್‌ ಇಂಡಿಯಾ ಸಹಭಾಗಿತ್ವ: ಎಐ ಅನ್ವಯ ವಿಸ್ತರಣೆಗೆ ಮಹತ್ವದ ಹೆಜ್ಜೆ

ಮಾಹೆ–ಗೂಗಲ್‌ ಇಂಡಿಯಾ ಸಹಭಾಗಿತ್ವ: ಎಐ ಅನ್ವಯ ವಿಸ್ತರಣೆಗೆ ಮಹತ್ವದ ಹೆಜ್ಜೆ

06/10/2026
ಅ.7 : ಬೆಳಿಗ್ಗೆ ಗಂಟೆ 9.00ಕ್ಕೆ ಉಡುಪಿ ಪುರ ಭವನದಲ್ಲಿ “ವಿಕಸಿತ ಭಾರತ ಸಂಕಲ್ಪ ಸಭೆ” ಮತ್ತು “ಸೇವಾ ಜ್ಯೋತಿ ಯಾತ್ರೆ”.

ಅ.7 : ಬೆಳಿಗ್ಗೆ ಗಂಟೆ 9.00ಕ್ಕೆ ಉಡುಪಿ ಪುರ ಭವನದಲ್ಲಿ “ವಿಕಸಿತ ಭಾರತ ಸಂಕಲ್ಪ ಸಭೆ” ಮತ್ತು “ಸೇವಾ ಜ್ಯೋತಿ ಯಾತ್ರೆ”.

06/10/2026

Recent News

imunify-bot-check