Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಆಗಸ್ಟ್‌ 13 ರಂದು ಮಾಹೆಯಲ್ಲಿ ‘ಆಟಿದ ತುಳು ಪರ್ಬ’ :ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ವಿವಿಧ ರೀತಿಯ ಸ್ಪರ್ಧೆಗಳ ಆಯೋಜನೆ ..!!

Dhrishya News by Dhrishya News
11/08/2024
in ಸುದ್ದಿಗಳು
0
0
SHARES
28
VIEWS
Share on FacebookShare on Twitter

ಮಣಿಪಾಲ : ಆಗಸ್ಟ್ 13: ಮಣಿಪಾಲ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ [ಮಾಹೆ] ‘ಆಟಿದ ತುಳು ಪರ್ಬ’ವನ್ನು ಆಯೋಜಿಸುತ್ತಿದ್ದು, ಇದು ತುಳುನಾಡಿನ ಶ್ರೀಮಂತ ಸಂಸ್ಕೃತಿಯನ್ನು ಸಂಭ್ರಮಿಸುವ ಆಚರಣೆಯಾಗಿ ಗಮನಸೆಳೆಯಲಿದೆ. ಆಗಸ್ಟ್‌ 13, 2024 ರಂದು ನಡೆಯುವ ಈ ಉತ್ಸವವು ಶೈಕ್ಷಣಿಕವಾಗಿಯೂ ಉಪಯುಕ್ತವೆನಿಸುವ ಕಾರ್ಯಕ್ರಮಗಳನ್ನು ಒಳಗೊಂಡಿದ್ದು, ತೌಳವನಾಡಿನ ಭೌತಿಕ ಮತ್ತು ಆಚರಣಾತ್ಮಕ ಕಲೆಗಳು, ಜಾನಪದ ನೃತ್ಯ-ಸಂಗೀತ ವೈವಿಧ್ಯಗಳು, ಸ್ಥಳೀಯ ಪಾಕ ಸಂಸ್ಕೃತಿ ಮತ್ತು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ವಿವಿಧ ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕಾರ್ಯಕ್ರಮವು ಡಾ ಟಿ ಎಂ ಎ ಪೈ ಹಾಲ್ ನಲ್ಲಿ ಬೆಳಿಗ್ಗೆ 9.30 ರಿಂದ ಸಂಜೆ 5.00 ರವರೆಗೆ ನಡೆಯಲಿದೆ.

ಸ್ಪರ್ಧೆಗಳ ವಿವರ :

• ತುಳುಸಂಸ್ಕೃತಿಯನ್ನು ಪ್ರತಿನಿಧಿಸುವ ಚಿತ್ರಕಲಾ ಸ್ಪರ್ಧೆ ‘ತುಳು ರಂಗ್‌’ : 8 ರಿಂದ 12 ಯ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ‘ತುಳುಸಂಸ್ಕೃತಿ’ ವಿಷಯದ ಕುರಿತಾದ ಚಿತ್ರಕಲಾ ಸ್ಪರ್ಧೆ. ಯಾವುದೇ ಶಾಲೆಯ ವಿದ್ಯಾರ್ಥಿ ಮುಖ್ಯೋಪಾಧ್ಯಾಯರ ಶಿಫಾರಸು ಪತ್ರದೊಂದಿಗೆ ಹೆಸರನ್ನು ಈ ಸ್ಪರ್ಧೆಗೆ ನೋಂದಾಯಿಸಬಹುದು.

[ಕಾಗದವನ್ನು ಒದಗಿಸಲಾಗುವುದು. ಬಣ್ಣ, ಬ್ರಷ್‌ ವಿದ್ಯಾರ್ಥಿಗಳೇ ತರಬೇಕು]

• ತುಳು ಜಾನಪದ ನೃತ್ಯ ಸ್ಪರ್ಧೆ – ‘ತುಳು ನಲಿಕೆ’ : 8 ರಿಂದ 12 ಯ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ತುಳುನಾಡಿನ ವೈವಿಧ್ಯಮಯ ಕುಣಿತದ ಸಂಸ್ಕೃತಿಯನ್ನು ಪ್ರತಿನಿಧಿಸುವ ಸ್ಪರ್ಧೆ. ಯಾವುದೇ ಶಾಲೆಯ ವಿದ್ಯಾರ್ಥಿತಂಡಗಳು ಮುಖ್ಯೋಪಾಧ್ಯಾಯರ ಶಿಫಾರಸು ಪತ್ರದೊಂದಿಗೆ ಹೆಸರನ್ನು ಈ ಸ್ಪರ್ಧೆಗೆ ನೋಂದಾಯಿಸಬಹುದು. ಒಂದು ಗುಂಪಿನಲ್ಲಿ ಕನಿಷ್ಠ 2 ಮಂದಿ ಇರಬೇಕು.

• ತುಳು ಸಂಸ್ಕೃತಿಯ ಪ್ರಸ್ತುತಿ (ಪ್ರೆಸೆಂಟೇಶನ್‌] ಯ ಸ್ಪರ್ಧೆ- ‘ತುಳು ಬದ್‌ಕ್‌’: ಈ ವಿಭಾಗದಲ್ಲಿ ಪ್ರಾಯದ ಪರಿಮಿತಿಯಿಲ್ಲ. ಸಾರ್ವಜನಿಕರೂ ಭಾಗವಹಿಸಬಹುದು. ಪ್ರತಿಗುಂಪಿನಲ್ಲಿ ಕನಿಷ್ಠ 2 ಮಂದಿ ಇರಬೇಕು. ಗರಿಷ್ಠ 5 ಮಂದಿ ಇರಬಹುದು. ಸ್ಮರ್ಧಾಳುಗಳು ಪಿಪಿಟಿ, ಚಿತ್ರ, ಮಾತು, ಪ್ರಹಸನದ ಮೂಲಕ ತುಳು ಸಂಸ್ಕೃತಿಯ ಕುರಿತ ‘ಪ್ರಸ್ತುತಿ’ಯನ್ನು ಮಾಡಬಹುದು.

• ಬೆಳಿಗ್ಗೆ 10.00 ರಿಂದ ಸಂಜೆ 5.00 ರವರೆಗೆ ತುಳುಸಂಸ್ಕೃತಿಯ ಕುರಿತ ಸಾಕ್ಷ್ಯಚಿತ್ರಗಳ ಪ್ರದರ್ಶನ ಮತ್ತು ಸಂವಾದ, ತುಳು ಆಚರಣಾತ್ಮಕ ಕಲೆಗಳಲ್ಲಿ ಭಾಗಿಗಳಾಗಿರುವ ತಜ್ಞರಿಂದ ವಿಚಾರಸಂಕಿರಣ. ತುಳುವಿನ ಕರಕುಶಲ ಪರಂಪರೆಯನ್ನು ಪ್ರತಿನಿಧಿಸುವ ಮಳಿಗೆಗಳು, ಸಾಂಪ್ರದಾಯಿಕ ಆಷಾಢದ ಆಹಾರದ ಮಳಿಗೆಗಳು ಮತ್ತು ಪ್ರದರ್ಶನ.

ಹೀಗೆ ವೈವಿಧ್ಯಗಳೊಂದಿಗೆ ಇಡೀ ದಿನದ ಕಾರ್ಯಕ್ರಮ ನಡೆಯಲಿದೆ.ಕಾರ್ಯಕ್ರಮವು ಶೈಕ್ಷಣಿಕ ಆಯಾಮವನ್ನು ಕೂಡ ಹೊಂದಿದ್ದು, ತುಳುವೇತರ ಮತ್ತು ವಿದೇಶದ ವಿದ್ಯಾರ್ಥಿಗಳಿಗೆ ತುಳುನಾಡಿನ ಕುರಿತ ಅರಿವನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಒದಗಿಸಲಿದೆ. ಮಾಹೆ ಮತ್ತು ಸ್ಥಳೀಯ ಸಂಸ್ಕೃತಿಯ ನಿಕಟ ಸಂಬಂಧದ ದ್ಯೋತಕವಾಗಿಯೂ ಈ ಕಾರ್ಯಕ್ರಮಕ್ಕೆ ಮಹತ್ತ್ವವಿದೆ.

ಎಲ್ಲಾ ಸ್ಪರ್ಧೆಗಳ ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಆಸಕ್ತ ಭಾಗವಹಿಸುವವರು ಹೆಚ್ಚಿನ ವಿವರಗಳಿಗಾಗಿ ಮತ್ತು ನೋಂದಣಿಗಾಗಿ ಶ್ರೀಮತಿ ರಕ್ಷಾ ಅವರನ್ನು 9964017386 ಅಥವಾ ಶ್ರೀ ಮಿಥುನ್ ರಾಜ್ ಅವರನ್ನು 9980675538 ರಲ್ಲಿ ಸಂಪರ್ಕಿಸಬಹುದು . 

Previous Post

ಅಕ್ಟೋಬರ್ 26ರಂದು ಈ ವರ್ಷದ ಮೊದಲ ಕಂಬಳಕ್ಕೆ ಬೆಂಗಳೂರಿನಿಂದ ಚಾಲನೆ : ಏಪ್ರಿಲ್ 19ರಂದು ಶಿವಮೊಗ್ಗದಲ್ಲಿ ಮುಕ್ತಾಯ ..!!

Next Post

ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿ , ಗಂಗಾಪೂಜಾ ಸಮಾರಂಭ ಉದ್ಘಾಟಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿ , ಗಂಗಾಪೂಜಾ ಸಮಾರಂಭ ಉದ್ಘಾಟಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಸರ್ಕಾರಿ ಪಾಲಿಟೆಕ್ನಿಕ್ ಕಾರ್ಕಳದಲ್ಲಿ ರೋಟರಾಕ್ಟ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ

ಸರ್ಕಾರಿ ಪಾಲಿಟೆಕ್ನಿಕ್ ಕಾರ್ಕಳದಲ್ಲಿ ರೋಟರಾಕ್ಟ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ

14/08/2026
ಕ್ರೈಸ್ಟ್ ವಿವಿ ಸಹಭಾಗಿತ್ವದಲ್ಲಿ ಐಬಿಎಂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ನೋವೇಶನ್ ಸೆಂಟರ್ ಸ್ಥಾಪನೆ: ಎಐ ಕ್ಷೇತ್ರದಲ್ಲಿ ಸಂಶೋಧನೆ, ತರಬೇತಿ, ಪ್ರತಿಭಾ ಸಂಪನ್ಮೂಲ ಅಭಿವೃದ್ಧಿಗೆ ಬಲ

ಕ್ರೈಸ್ಟ್ ವಿವಿ ಸಹಭಾಗಿತ್ವದಲ್ಲಿ ಐಬಿಎಂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ನೋವೇಶನ್ ಸೆಂಟರ್ ಸ್ಥಾಪನೆ: ಎಐ ಕ್ಷೇತ್ರದಲ್ಲಿ ಸಂಶೋಧನೆ, ತರಬೇತಿ, ಪ್ರತಿಭಾ ಸಂಪನ್ಮೂಲ ಅಭಿವೃದ್ಧಿಗೆ ಬಲ

13/08/2026
ದಕ್ಷಿಣ ಭಾರತದ ಮಾರುಕಟ್ಟೆಗಳಿಗೆ ನಟಿ ಕೃತಿ ಶೆಟ್ಟಿ ಇಂದ್ರಿಯಾ ಬ್ರ್ಯಾಂಡ್ ರಾಯಭಾರಿ: ನೂತನ ವರಮಹಾಲಕ್ಷ್ಮಿ ಅಭಿಯಾನ ಅನಾವರಣ

ದಕ್ಷಿಣ ಭಾರತದ ಮಾರುಕಟ್ಟೆಗಳಿಗೆ ನಟಿ ಕೃತಿ ಶೆಟ್ಟಿ ಇಂದ್ರಿಯಾ ಬ್ರ್ಯಾಂಡ್ ರಾಯಭಾರಿ: ನೂತನ ವರಮಹಾಲಕ್ಷ್ಮಿ ಅಭಿಯಾನ ಅನಾವರಣ

13/08/2026
ಮಾಹೆಯ 5 ಅಂಗಸಂಸ್ಥೆಗಳಲ್ಲಿ ಮೈಕ್ರೋಸಾಫ್ಟ್ ಲ್ಯಾಬ್‌: ಎಐ ಹಾಗೂ ನಾವೀನ್ಯತೆಯತ್ತ ದೃಢ ಹೆಜ್ಜೆ

ಮಾಹೆಯ 5 ಅಂಗಸಂಸ್ಥೆಗಳಲ್ಲಿ ಮೈಕ್ರೋಸಾಫ್ಟ್ ಲ್ಯಾಬ್‌: ಎಐ ಹಾಗೂ ನಾವೀನ್ಯತೆಯತ್ತ ದೃಢ ಹೆಜ್ಜೆ

13/08/2026

Recent News