Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಕಾರ್ಕಳ ತಾಲೂಕು ಕಛೇರಿ ಮುಂದೆ ಬೀಡಿ ಕಾರ್ಮಿಕರ ಪ್ರತಿಭಟನೆ..!!

Dhrishya News by Dhrishya News
19/07/2024
in ಸುದ್ದಿಗಳು
0
0
SHARES
20
VIEWS
Share on FacebookShare on Twitter

ಕಾರ್ಕಳ :ಜುಲೈ19 :ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ 6 ಲಕ್ಷಕ್ಕೂ ಮಿಕ್ಕಿ ಬೀಡಿ ಕಾರ್ಮಿಕರು ಇವತ್ತು ಬೀಡಿ ಕಟ್ಟಿ ತಮ್ಮ ಜೀವನ ನಡೆಸುತ್ತಿದ್ದಾರೆ.ಇವತ್ತಿನ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಧಾರದಲ್ಲಿ ಸರಕಾರವು ಪ್ರತಿವರ್ಷ ಬೀಡಿ ಕಾರ್ಮಿಕರ ತುಟ್ಟಿಭತ್ಯೆ ಹೆಚ್ಚಳ ಮಾಡಿ ಕಾರ್ಮಿಕರು ಬದುಕಲು ಸಹಾಯವಾಗಲು ಏರಿಳಿತ ತುಟ್ಟಿಭತ್ಯೆ ಎಂಬುವುದು ಕಾನೂನು ಬದ್ಧ ಸವಲತ್ತು ಆ ಪ್ರಕಾರ2024 ಎಪ್ರಿಲ್ ತಿಂಗಳಿಂದ ಔದ್ಯಮಿಕ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕ 568 ಪಾಯಿಂಟ್ ಆಗಿರುತ್ತದೆ ಅದರಂತೆ 1000ಬೀಡಿಗೆ ರೂ 22.72ರಂತೆ ಬೀಡಿ ಕಾರ್ಮಿಕರಿಗೆ ನೀಡಬೇಕು. ಅದರೆ ಬೀಡಿ ಕಂಪನಿಯ ಮಾಲಕರು ನೀಡದೆ ಕಾರ್ಮಿಕರಿಗೆ ವಂಚನೆ ಮಾಡಿದ್ದಾರೆ.ಮಂಗಳೂರು ಸಹಾಯಕ ಕಾರ್ಮಿಕ ಅಧಿಕಾರಿ (ALC)ಯವರು ಎರಡು ಬಾರಿ ಕಂಪನಿಯ ಮಾಲೀಕರನ್ನು ಮಾತುಕತೆ ಕರೆದರು ತಪ್ಪಿಸಿಕೊಳ್ಳುತ್ತಿದ್ದಾರೆ.

ಸರಕಾರ ಅಧಿಕಾರಿ ಯವರ ಮಾತಿಗೂ ಕಿಂಚಿತ್ತೂ ಬೆಲೆ ಕೊಡದೆ ಸತಾಯಿಸುತ್ತಿದ್ದಾರೆ.ಭಾರತ್ ಬೀಡಿ, ಗಣೇಶ್ ಬೀಡಿ,ಟೆಲಿಫೋನ್ ಬೀಡಿ, ಇನ್ನೂ ಅನೇಕ ದೊಡ್ಡ ಕಂಪನಿಯ ಮಾಲಕರ ಪರವಾಗಿ ಇವತ್ತು ನಮ್ಮ ಶಾಸಕರು, ಸಂಸದರು ನಿಂತಿರುವ ಹಾಗೆ ಕಾಣುತ್ತದೆ. ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಯ13ಜನ ಶಾಸಕರು,2ಜನ ಸಂಸದರು 6ಲಕ್ಷಕ್ಕೂ ಮಿಕ್ಕಿ ಇರುವ ಬಡ ಬೀಡಿ ಕಾರ್ಮಿಕರ ಬಗ್ಗೆ ವಿಧಾನಸಭೆಯಲ್ಲಿ ಅಥವಾ ಲೋಕಸಭೆಯಲ್ಲಿ ಕಾರ್ಮಿಕರ ನೈಜ ಸಮಸ್ಯೆಗಳ ಬಗ್ಗೆ ಮಾತಾನಾಡುವುದಿಲ್ಲ.

ಚುನಾವಣೆ ಬರುವಾಗ ಲಕ್ಷಾಂತರ ಬೀಡಿ ಕಾರ್ಮಿಕರ ಕುಟುಂಬದ ಮತಗಳು ಬೇಕು ಎಂದು ಕಾರ್ಕಳ ತಾಲೂಕು ಬೀಡಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಕವಿರಾಜ್. ಎಸ್.ಕಾಂಚನ್ ಅರೋಪಿಸಿದ್ದಾರೆ.ಮಾತ್ರವಲ್ಲದೆ ಚುನಾವಣಾ ಸಮಯದಲ್ಲಿಬೀಡಿ ಮಾಲಕರು ಬೇರೆ ಬೇರೆ ಪಕ್ಷಕ್ಕೆ ಹಣವನ್ನು ನೀಡುತ್ತಾರೆ ಆದರೆ ಕಾರ್ಮಿಕರು ಕಷ್ಟ ಪಟ್ಟು ದುಡಿದ ಹಣವನ್ನು ನೀಡಲು ಹಿಂದೇಟು ಹಾಕುವ ಮಾಲಕರ ವಿರುದ್ಧ ಸರಕಾರವು ಕೂಡಲೇ ಕ್ರಮ ತೆಗೆದು ಕೊಳ್ಳಬೇಕು.ಎಂದು ಕಾರ್ಕಳ ತಾಲೂಕು ಕಛೇರಿ ಮುಂದೆ ನಡೆದ ಬೀಡಿ ಕಾರ್ಮಿಕರ ಪ್ರತಿಭಟನೆಯಲ್ಲಿ ಅಗ್ರಹಿಸಲಾಯಿತು.ಇತ್ತೀಚೆಗೆ ಹಲವು ಬಾರಿ ಮಂಗಳೂರು ಕಂಪನಿಯ ಪ್ರಧಾನ ಕಛೇರಿ ಮುಂದೆ ,ಹಾಗೂ ಮಂಗಳೂರು ಸಹಾಯಕ ಅಧಿಕಾರಿ ಕಛೇರಿ ಮಂದೆ ಪ್ರತಿಭಟನೆ ನಡೆಸಿದ ನಂತರ 11.40ಪೈಸೆ ಮಾಲಕರು ಕಾರ್ಮಿಕರಿಗೆ ನಿಡಿರುತ್ತಾರೆ ಅದರೆ ಒಪ್ಪಲು ಸಾಧ್ಯವಿಲ್ಲ ಕಾರ್ಮಿಕರಿ ಕಾನೂನು ಬಧ್ದ ವಾಗಿ ಸಿಗುವ 22.72ಪೈಸೆ ಕೊಡಬೇಕು. ಹಿಂದಿನ 3ವರ್ಷದ ಬಾಕಿ ಇರುವ ತುಟ್ಟಿಭತ್ಯೆ12.75ಪೈಸೆ, ಕನಿಷ್ಟ ವೇತನ ಕೂಡಲೇ ಕಾರ್ಮಿಕರಿಗೆ ನೀಡಬೇಕು. ಎಂದು ಒತ್ತಾಯಿಸಿ ಇಂದು ಕಾರ್ಕಳ ತಾಲೂಕು ಕಛೇರಿ ಮುಂದೆ ಪ್ರತಿಭಟನೆ ನಡೆಸಿ ಕಾರ್ಕಳ ಕಾರ್ಮಿಕ ಅಧಿಕಾರಿ ಮುಖಾಂತರ ಮಂಗಳೂರು ಸಹಾಯಕ ಕಾರ್ಮಿಕ ಅಧಿಕಾರಿ ಯವರಿಗೆ ಮೆರವಣಿಗೆ ಮೂಲಕ ಹೋಗಿ ಮನವಿ ನೀಡಲಾಯಿತು. ಮುಂದಿನ ದಿನಗಳಲ್ಲಿ ಕಾರ್ಮಿಕ ಸಮಸ್ಯೆಗಳನ್ನು ಬಗೆಹರಿಸದೆ ಇದ್ದಾರೆ ಶಾಸಕರು ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಚ್ಚರಿಕೆಯನ್ನು ನೀಡಲಾಯಿತು

ಪ್ರತಿಭಟನೆ ಸಭೆಯಲ್ಲಿ ಕಾರ್ಕಳ ತಾಲೂಕು ಬೀಡಿ ಕಾರ್ಮಿಕ ಸಂಘದ ಅಧ್ಯಕ್ಷ ರಾದ ಸುನೀತಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕವಿರಾಜ್. ಎಸ್.ಕಾಂಚನ್,ಕೋಶಾಧಿಕಾರಿ ಸುಮತಿ,ಕುಂದಾಪುರ ಬೀಡಿ ಕೆಲಸಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಬಲ್ಕೀಸ್,ಉಡುಪಿ ಬೀಡಿ & ಟೋಬ್ಯಾಕೊ ಲೇಬರ್ ಯುನಿಯನ್ ನ ನಳಿನಿ.ಎಸ್ ,ಸಿಐಟಿಯು ಕಾರ್ಕಳ ತಾಲೂಕು ಮುಖಂಡರಾದ ನಾಗೇಶ್, ಸಿಐಟಿಯು ಉಡುಪಿ ಮುಖಂಡರಾದ ಮೋಹನ್, ರೀತೇಶ್ ,ಕಾರ್ಕಳ ಬೀಡಿ ಕಂಟ್ರಾಕ್ಟರ್ ಮುಸ್ತಾಫ ಹಾಗೂ ಬೀಡಿ ಮುಖಂಡರಾದ ವಿಲಾಸಿನಿ,ಶಕುಂತಲಾ, ಸುಮಿತ್ರಾ,ಜಯಂತಿ, ಲಕ್ಷೀ,ಜಾನವಿ,ವಸಂತಿ ಶೆಟ್ಟಿ, ಲತಾ,ಮಾಲತಿ,ಜಯಂತಿ, ವನಿತ,ಕವಿತ,ಪ್ರಮೀಳಾ, ಉಷಾ ಉಪಸ್ಥಿತರಿದ್ದರು.

Previous Post

ಮಂಗಳೂರು ಕೆಎಂಸಿಗೆ ನೇಶನಲ್‌ ಮೆಡಿಕಲ್‌ ಕೌನ್ಸಿಲ್‌ನಿಂದ ಎನ್‌ಎಪಿ-ಎಎಂಆರ್‌ ಪ್ರಾದೇಶಿಕ ಕೇಂದ್ರವಾಗಿ ಮಾನ್ಯತೆ..!!

Next Post

ಉಡುಪಿ : ಡೆಂಗ್ಯು ಬಗ್ಗೆ ನಿರ್ಲಕ್ಷ್ಯ ಬೇಡ – ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ…!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಉಡುಪಿ : ಡೆಂಗ್ಯು ಬಗ್ಗೆ ನಿರ್ಲಕ್ಷ್ಯ ಬೇಡ - ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ...!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕ್ರೈಸ್ಟ್ ವಿವಿ ಸಹಭಾಗಿತ್ವದಲ್ಲಿ ಐಬಿಎಂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ನೋವೇಶನ್ ಸೆಂಟರ್ ಸ್ಥಾಪನೆ: ಎಐ ಕ್ಷೇತ್ರದಲ್ಲಿ ಸಂಶೋಧನೆ, ತರಬೇತಿ, ಪ್ರತಿಭಾ ಸಂಪನ್ಮೂಲ ಅಭಿವೃದ್ಧಿಗೆ ಬಲ

ಕ್ರೈಸ್ಟ್ ವಿವಿ ಸಹಭಾಗಿತ್ವದಲ್ಲಿ ಐಬಿಎಂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ನೋವೇಶನ್ ಸೆಂಟರ್ ಸ್ಥಾಪನೆ: ಎಐ ಕ್ಷೇತ್ರದಲ್ಲಿ ಸಂಶೋಧನೆ, ತರಬೇತಿ, ಪ್ರತಿಭಾ ಸಂಪನ್ಮೂಲ ಅಭಿವೃದ್ಧಿಗೆ ಬಲ

13/08/2026
ದಕ್ಷಿಣ ಭಾರತದ ಮಾರುಕಟ್ಟೆಗಳಿಗೆ ನಟಿ ಕೃತಿ ಶೆಟ್ಟಿ ಇಂದ್ರಿಯಾ ಬ್ರ್ಯಾಂಡ್ ರಾಯಭಾರಿ: ನೂತನ ವರಮಹಾಲಕ್ಷ್ಮಿ ಅಭಿಯಾನ ಅನಾವರಣ

ದಕ್ಷಿಣ ಭಾರತದ ಮಾರುಕಟ್ಟೆಗಳಿಗೆ ನಟಿ ಕೃತಿ ಶೆಟ್ಟಿ ಇಂದ್ರಿಯಾ ಬ್ರ್ಯಾಂಡ್ ರಾಯಭಾರಿ: ನೂತನ ವರಮಹಾಲಕ್ಷ್ಮಿ ಅಭಿಯಾನ ಅನಾವರಣ

13/08/2026
ಮಾಹೆಯ 5 ಅಂಗಸಂಸ್ಥೆಗಳಲ್ಲಿ ಮೈಕ್ರೋಸಾಫ್ಟ್ ಲ್ಯಾಬ್‌: ಎಐ ಹಾಗೂ ನಾವೀನ್ಯತೆಯತ್ತ ದೃಢ ಹೆಜ್ಜೆ

ಮಾಹೆಯ 5 ಅಂಗಸಂಸ್ಥೆಗಳಲ್ಲಿ ಮೈಕ್ರೋಸಾಫ್ಟ್ ಲ್ಯಾಬ್‌: ಎಐ ಹಾಗೂ ನಾವೀನ್ಯತೆಯತ್ತ ದೃಢ ಹೆಜ್ಜೆ

13/08/2026
ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

13/08/2026

Recent News