Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಸುದ್ದಿಗಳು

ಮಂಗಳೂರು ಕೆಎಂಸಿಗೆ ನೇಶನಲ್‌ ಮೆಡಿಕಲ್‌ ಕೌನ್ಸಿಲ್‌ನಿಂದ ಎನ್‌ಎಪಿ-ಎಎಂಆರ್‌ ಪ್ರಾದೇಶಿಕ ಕೇಂದ್ರವಾಗಿ ಮಾನ್ಯತೆ..!!

Dhrishya News by Dhrishya News
19/07/2024
in ಸುದ್ದಿಗಳು
0
0
SHARES
18
VIEWS
Share on FacebookShare on Twitter

ಮಂಗಳೂರು :ಜುಲೈ 19: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ [ಮಾಹೆ] ನ ಮಂಗಳೂರಿನ ಕಸ್ತೂರ್ಬಾ ಮೆಡಿಕಲ್‌ ಕಾಲೇಜ್‌ [ಕೆಎಂಸಿ] ನ್ನು ಪ್ರತಿಸೂಕ್ಷ್ಮಜೀವಿಗಳ ನಿರೋಧದ ರಾಷ್ಟ್ರೀಯ ಕಾರ್ಯಾಚರಣೆಯ ಪ್ರಾದೇಶಿಕ ಕೇಂದ್ರ [ಸೆಂಟರ್‌ ಫಾರ್‌ ದ ನೇಶನಲ್‌ ಆ್ಯಕ್ಷನ್‌ ಪ್ಲ್ಯಾನ್‌ ಆ್ಯಂಟಿ ಮೈಕ್ರೋಬಿಯಲ್‌ ರೆಸಿಸ್ಟ್ಯಾನ್ಸ್‌] ವಾಗಿ ರಾಷ್ಟ್ರೀಯ ವೈದ್ಯಕೀಯ ಮಂಡಳಿ [ನೇಶನಲ್‌ ಮೆಡಿಕಲ್‌ ಕೌನ್ಸಿಲ್‌-ಎನ್‌ಎಂಸಿ] ಮಾನ್ಯ ಮಾಡಿದೆ.

ಭಾರತದಲ್ಲಿ ಮಣಿಪಾಲ ಸಮೂಹದ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಪ್ರತಿಸೂಕ್ಷ್ಮಾಣುಜೀವಿಗಳ ನಿರೋಧದ ಕುರಿತ ಹೋರಾಟ ಮತ್ತು ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಪ್ರಯತ್ನದ ಹಾದಿಯಲ್ಲಿ ಈ ಮಾನ್ಯತೆಯು ಪ್ರಮುಖ ಮೈಲಿಗಲ್ಲಾಗಿದೆ. ರಾಷ್ಟ್ರೀಯ ವೈದ್ಯಕೀಯ ಮಂಡಳಿ [ನೇಶನಲ್‌ ಮೆಡಿಕಲ್‌ ಕೌನ್ಸಿಲ್‌-ಎನ್‌ಎಂಸಿ] ಯು ಭಾರತದ ವೈದ್ಯಕೀಯ ಕಾಲೇಜು ಮತ್ತು ಸಂಸ್ಥೆಗಳಲ್ಲಿ ವೈದ್ಯರನ್ನು ತರಬೇತಿಗೊಳಿಸಲು ಸಂಪನ್ಮೂಲ ಪ್ರಾಧ್ಯಾಪಕರನ್ನು ಸಿದ್ಧಪಡಿಸುತ್ತಿದೆ. ಈ ಉಪಕ್ರಮದ ಭಾಗವಾಗಿ ಮಂಗಳೂರಿನ ಕೆಎಂಸಿಯನ್ನು ಅಧಿಕೃತ ಪ್ರಾದೇಶಿಕ ಕೇಂದ್ರಗಳ ಯಾದಿಯಲ್ಲಿ ಸೇರಿಸಿಕೊಳ್ಳಲಾಗಿದೆ. ಎಲ್ಲ ಪ್ರಾದೇಶಿಕ ಕೇಂದ್ರಗಳು ಕನಿಷ್ಠ ನಾಲ್ಕು ಮಂದಿ ಪ್ರಾಧ್ಯಾಪಕರಿರುವ ಎನ್‌ಎಪಿ-ಎಎಂಆರ್‌ ಕೇಂದ್ರವನ್ನು ಸ್ಥಾಪಿಸಬೇಕಾಗಿದ್ದು ಸೂಕ್ಷ್ಮಜೀವವಿಜ್ಞಾನ, ಔಷಧ ವಿಜ್ಞಾನ, ವೈದ್ಯಕೀಯ ಮತ್ತು ಸಮೂಹ ವಿಭಾಗಕ್ಕೆ ಸೇರಿದ ಪ್ರಾಧ್ಯಾಪಕ ನೋಡಲ್‌ ಅಧಿಕಾರಿಯಾಗಿರಬೇಕಾಗುತ್ತದೆ.

ಎನ್‌ಎಂಸಿಯು ಒಬ್ಬ ಪ್ರಾದೇಶಿಕ ಸಂಚಾಲಕರನ್ನು ನೇಮಕ ಮಾಡುತ್ತಿದ್ದು, ಮಂಗಳೂರಿನ ಕೆಎಂಸಿಯ ಸೂಕ್ಷ್ಮಜೀವವಿಜ್ಞಾನ ವಿಭಾಗದ ಸಹ-ಪ್ರಾಧ್ಯಾಪಕರಾದ ಡಾ. ಪೂಜಾ ರಾವ್‌ ಈ ಹುದ್ದೆಗೆ ಆಯ್ಕೆಯಾಗಿದ್ದಾರೆ. ಮಾಹೆಯ ಉಪಕುಲಪತಿಗಳಾದ ಲೆ. ಜ. ಡಾ. ಎಂ. ಡಿ. ವೆಂಕಟೇಶ್‌ ಅವರು ಅವರು ಎನ್‌ಎಪಿ-ಎಎಂಆರ್‌ನಿಂದ ಪ್ರಾದೇಶಿಕ ಕೇಂದ್ರವಾಗಿ ಮಾಹೆಗೆ ದೊರೆತ ಮಾನ್ಯತೆ ಮಾಹೆಯ ವೈದ್ಯಕೀಯ ಶಿಕ್ಷಣ ಮತ್ತು ಸಾಮಾಜಿಕ ಸ್ವಾಸ್ಥ್ಯದ ಕುರಿತ ಕಾಳಜಿಗೆ ದೊರೆತ ಮನ್ನಣೆಯಾಗಿದೆ. ರೋಗಕಾರಕ ಸೂಕ್ಷ್ಮಾಣುಜೀವಿಗಳ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಆವಶ್ಯಕ ಕೌಶಲದ ಜೊತೆಗೆ ಜಾಗತಿಕ ಮಟ್ಟದಲ್ಲಿ ಎದುರಿಸಬೇಕಾದ ಸವಾಲುಗಳ ಬಗ್ಗೆ ಅರಿವು ಇರುವ ವೃತ್ತಿಪರ ಆರೋಗ್ಯಪಾಲಕರನ್ನು ಸಿದ್ಧಪಡಿಸುವಲ್ಲಿ ಮಾಹೆ ಬದ್ಧವಾಗಿದೆ. ಜಾಗತಿಕ ಸ್ವಾಸ್ಥ್ಯಕ್ಕೆ ಸವಾಲಾಗಿರುವ ಪ್ರತಿಸೂಕ್ಷ್ಮಾಣುಜೀವಿ ನಿರೋಧವನ್ನು ಸಾಧಿಸುವ ಎನ್‌ಎಂಸಿಯ ಧ್ಯೇಯವನ್ನು ಮಾಹೆಯು ಸದಾ ಬೆಂಬಲಿಸುತ್ತದೆ’ ಎಂದರು. ಮಂಗಳೂರಿನ ಕೆಎಂಸಿಯ ಡೀನ್‌ ಡಾ. ಉನ್ನಿಕೃಷ್ಣನ್‌ ಅವರು, ‘ಸಮಾಜವನ್ನು ಆರೋಗ್ಯಪೂರ್ಣವಾಗಿಸುವ ಎನ್‌ಎಂಸಿಯ ಆಶಯವನ್ನು ಬೆಂಬಲಿಸುವ ಅವಕಾಶ ದೊರೆತಿರುವಂತೆಯೇ ಮಾಹೆಯ ಬೋಧಕರಿಗೆ ದೊರೆತ ಅತ್ಯುತ್ತಮ ಅವಕಾಶ ಇದಾಗಿದೆ.

ನಮ್ಮ ಬೋಧಕರು ರಾಜ್ಯಮಟ್ಟದ ಮುಖ್ಯ ತರಬೇತಿದಾರರಾಗಿ ಆಯ್ಕೆಯಾಗಿದ್ದು ಜ್ಞಾನ ಮತ್ತು ಕೌಶಲವನ್ನು ಪ್ರಚುರಪಡಿಸುವಲ್ಲಿ ಮುನ್ನೆಲೆಯಲ್ಲಿ ಕಾರ್ಯಪ್ರವೃತ್ತರಾಗಲಿದ್ದಾರೆ.ಎನ್‌ಎಂಸಿಯ ರಾಷ್ಟ್ರೀಯ ಕಾರ್ಯಾಚರಣೆಯ ಯೋಜನೆಯಲ್ಲಿ ಸಹಭಾಗಿಯಾಗಲು ಮಾಹೆ ಹೆಮ್ಮೆ ಪಡುತ್ತದೆ’ ಎಂದರು.

ಪ್ರಸ್ತುತ ಮಾನ್ಯತೆಯ ಮೂಲಕ ಪ್ರತಿಸೂಕ್ಷ್ಮಾಣುಜೀವಿ ನಿರೋಧ [ಆ್ಯಂಟಿಮೆಕ್ರೋಬಿಯಲ್‌ ರೆಸಿಸ್ಟೆನ್ಸ್‌]ದ ಕುರಿತ ರಾಷ್ಟ್ರೀಯ ಕಾರ್ಯಯೋಜನೆಯ ಗುರಿಗಳನ್ನು ಸಾಧಿಸುವಲ್ಲಿ ಎನ್‌ಎಸಿಯೊಂದಿಗೆ ಕೈ ಜೋಡಿಸುವ ಅವಕಾಶ ಮಾಹೆಗೆ ಲಭಿಸಿದೆ. 

Previous Post

ಫಾಸ್ಟಾಗ್ ಸ್ಟಿಕ್ಕರ್ ವಾಹನದ ಮುಂಭಾಗದ ಗಾಜಿಗೆ ಅಂಟಿಸದೇ ಇದ್ದರೆ ದುಪ್ಪಟ್ಟು ಶುಲ್ಕ :ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ..!!

Next Post

ಕಾರ್ಕಳ ತಾಲೂಕು ಕಛೇರಿ ಮುಂದೆ ಬೀಡಿ ಕಾರ್ಮಿಕರ ಪ್ರತಿಭಟನೆ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಕಾರ್ಕಳ ತಾಲೂಕು ಕಛೇರಿ ಮುಂದೆ ಬೀಡಿ ಕಾರ್ಮಿಕರ ಪ್ರತಿಭಟನೆ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 23.9k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ಕ್ರೈಸ್ಟ್ ವಿವಿ ಸಹಭಾಗಿತ್ವದಲ್ಲಿ ಐಬಿಎಂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ನೋವೇಶನ್ ಸೆಂಟರ್ ಸ್ಥಾಪನೆ: ಎಐ ಕ್ಷೇತ್ರದಲ್ಲಿ ಸಂಶೋಧನೆ, ತರಬೇತಿ, ಪ್ರತಿಭಾ ಸಂಪನ್ಮೂಲ ಅಭಿವೃದ್ಧಿಗೆ ಬಲ

ಕ್ರೈಸ್ಟ್ ವಿವಿ ಸಹಭಾಗಿತ್ವದಲ್ಲಿ ಐಬಿಎಂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ನೋವೇಶನ್ ಸೆಂಟರ್ ಸ್ಥಾಪನೆ: ಎಐ ಕ್ಷೇತ್ರದಲ್ಲಿ ಸಂಶೋಧನೆ, ತರಬೇತಿ, ಪ್ರತಿಭಾ ಸಂಪನ್ಮೂಲ ಅಭಿವೃದ್ಧಿಗೆ ಬಲ

13/08/2026
ದಕ್ಷಿಣ ಭಾರತದ ಮಾರುಕಟ್ಟೆಗಳಿಗೆ ನಟಿ ಕೃತಿ ಶೆಟ್ಟಿ ಇಂದ್ರಿಯಾ ಬ್ರ್ಯಾಂಡ್ ರಾಯಭಾರಿ: ನೂತನ ವರಮಹಾಲಕ್ಷ್ಮಿ ಅಭಿಯಾನ ಅನಾವರಣ

ದಕ್ಷಿಣ ಭಾರತದ ಮಾರುಕಟ್ಟೆಗಳಿಗೆ ನಟಿ ಕೃತಿ ಶೆಟ್ಟಿ ಇಂದ್ರಿಯಾ ಬ್ರ್ಯಾಂಡ್ ರಾಯಭಾರಿ: ನೂತನ ವರಮಹಾಲಕ್ಷ್ಮಿ ಅಭಿಯಾನ ಅನಾವರಣ

13/08/2026
ಮಾಹೆಯ 5 ಅಂಗಸಂಸ್ಥೆಗಳಲ್ಲಿ ಮೈಕ್ರೋಸಾಫ್ಟ್ ಲ್ಯಾಬ್‌: ಎಐ ಹಾಗೂ ನಾವೀನ್ಯತೆಯತ್ತ ದೃಢ ಹೆಜ್ಜೆ

ಮಾಹೆಯ 5 ಅಂಗಸಂಸ್ಥೆಗಳಲ್ಲಿ ಮೈಕ್ರೋಸಾಫ್ಟ್ ಲ್ಯಾಬ್‌: ಎಐ ಹಾಗೂ ನಾವೀನ್ಯತೆಯತ್ತ ದೃಢ ಹೆಜ್ಜೆ

13/08/2026
ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಪ್ರಾಯೋಜಕತ್ವದಲ್ಲಿ  – BOTTLE BOOTH ಕೊಡುಗೆ

13/08/2026

Recent News