Dhrishya News

ಮುಖಪುಟ
ಸುದ್ದಿಗಳು
ಕರಾವಳಿ
ರಾಜ್ಯ/ ರಾಷ್ಟ್ರೀಯ
ಉದ್ಯೋಗ/ಶಿಕ್ಷಣ
ಆರೋಗ್ಯ
ಸಂಪರ್ಕಿಸಿ
ಜಾಹೀರಾತು
ವಿಜ್ಞಾನ ಮತ್ತು ತಂತ್ರಜ್ಞಾನ
Facebook Instagram Youtube Twitter Whatsapp
Home ಕರಾವಳಿ

ಮಣಿಪಾಲ : ಎಂಐಟಿಯಲ್ಲಿ ಸ್ಮಾರ್ಟ್‌ ಇಂಡಿಯ ಹ್ಯಾಕಥಾನ್‌ 2023 : ಮಾಹೆ ಉಪಕುಲಪತಿಯವರಿಂದ ಉದ್ಘಾಟನೆ..!!

Dhrishya News by Dhrishya News
20/12/2023
in ಕರಾವಳಿ, ಮುಖಪುಟ, ಸುದ್ದಿಗಳು
0
0
SHARES
66
VIEWS
Share on FacebookShare on Twitter

ಮಣಿಪಾಲ ಡಿಸೆಂಬರ್‌ 20: ಭಾರತ ಸರ್ಕಾರದ ಶಿಕ್ಷಣ ಮಂತ್ರಾಲಯ ಮತ್ತು ಎಂಐಟಿಯಲ್ಲಿರುವ ಸಾಂಸ್ಥಿಕ ನಾವೀನ್ಯ ಮಂಡಳಿ [ಇನ್‌ಸ್ಟಿಟ್ಯೂಶನ್ಸ್‌ ಇನ್ನೊವೇಶನ್‌ ಕೌನ್ಸಿಲ್‌ ಆಟ್‌ ಮಣಿಪಾಲ್‌ ಇನ್ಸಿಟ್ಯೂಟ್‌ ಆಫ್‌ ಟೆಕ್ನಾಲಜಿ] ಇವುಗಳ ಸಹಯೋಗದೊಂದಿಗೆ ದಿ ಸ್ಮಾರ್ಟ್‌ ಇಂಡಿಯ ಹ್ಯಾಕಥಾನ್‌ 2023 ಇತ್ತೀಚೆಗೆ ಆಯೋಜನೆಗೊಂಡಿದ್ದು ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ನ ಉಪಕುಲಪತಿ ಲೆ. ಜ. [ಡಾ.] ಎಂ. ಡಿ. ವೆಂಕಟೇಶ್‌ ಅವರು ಉದ್ಘಾಟಿಸಿದರು.

ಡಾ. ವೆಂಕಟೇಶ್‌ ತಮ್ಮ ಉದ್ಘಾಟನ ಭಾಷಣದಲ್ಲಿ ಎಪ್ಪತ್ತೈದು ವರ್ಷಗಳ ಹಿಂದೆ ಡಾ. ಟಿ. ಎಂ. ಎ. ಪೈಯವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳು ಸಮಾಜದ ಮೇಲೆ ಗಾಢವಾದ ಪರಿಣಾಮ ಬೀರಿರುವುದನ್ನು ಉಲ್ಲೇಖಿಸಿದರು. ‘ಈ ಶಿಕ್ಷಣ ಸಂಸ್ಥೆಗಳನ್ನು ಸಮಾಜದಲ್ಲಿರುವ ಸವಾಲುಗಳಾದ ಅನಕ್ಷರತೆ, ಬಡತನ, ಮತ್ತು ಆನಾರೋಗ್ಯಗಳನ್ನು ನಿವಾರಿಸುವ ಉದ್ದೇಶದಿಂದ ಕಟ್ಟಿ ಬೆಳೆಸಲಾಗಿದೆ. ವಿಶ್ವಸಂಸ್ಥೆಯ 2017ರ ಸುಸ್ಥಿರ ಅಭಿವೃದ್ಧಿಯ ಗುರಿ [ಸಸ್ಟೆನೇಬಲ್‌ ಡೆವಲಪ್‌ಮೆಂಟ್‌ ಗೋಲ್ಸ್‌] ಯೊಂದಿಗೆ ಡಾ. ಟಿ. ಎಂ. ಪೈಯವರ ಕಾಣ್ಕೆ [ವಿಶನ್‌] ಯು ಹೊಂದಿಕೊಳ್ಳುತ್ತದೆ. ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿಮಣಿಪಾಲ ಸಂಸ್ಥೆಗಳ ಕಾರಣದಿಂದ ಉನ್ನತ ಗುಣಮಟ್ಟದ ಆಸ್ಪತ್ರೆ ಸೌಲಭ್ಯಗಳನ್ನು ಒದಗಿಸಲು, ಮಕ್ಕಳ ಮೃತ ಪ್ರಮಾಣಗಳನ್ನು ತಗ್ಗಿಸಲು, ಗರ್ಭಿಣಿಯರ ಸಾವಿನ ಪ್ರಮಾಣವನ್ನು ಕಡಿಮೆಗೊಳಿಸಲು ಮತ್ತುಸಮಾಜವನ್ನು ಸಾಕ್ಷರಗೊಳಿಸಲು ಸಾಧ್ಯವಾಗಿದ್ದು ಇದು ಇಡೀ ದೇಶದಲ್ಲಿಯೇ ಗಮನಾರ್ಹ ವಿದ್ಯಮಾನವಾಗಿದೆ.’ ಎಂದರು.

ಭಾರತದ ಪ್ರಧಾನಮಂತ್ರಿಗಳ ಆಶಯವನ್ನು ನೆನಪಿಸಿಕೊಂಡ ಡಾ. ವೆಂಕಟೇಶ್‌ ಅವರು, ‘ಭಾರತ ಯುವಶಕ್ತಿ ಇಡೀ ಜಗತ್ತಿನ ಸಮಸ್ಯೆಗಳನ್ನು ಪರಿಹರಿಸಲು ಸಮರ್ಥವಾಗಿದೆ.’ ಎಂದರು. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಎಂಐಟಿಯ ಬದ್ಧತೆಯನ್ನು ಒತ್ತಿ ಹೇಳುತ್ತ, ಎಂಐಟಿಯ ಸಾಮರ್ಥ್ಯವನ್ನು ಗುರುತಿಸಿದ ಶಿಕ್ಷಣ ಸಚಿವಾಲಯ, ಎಐಸಿಟಿಇ ಮತ್ತು ನಾವೀನ್ಯ ಮಂಡಳಿ [ಇನ್ನೋವೇಶನ್‌ ಕೌನ್ಸಿಲ್‌] ಗಳಿಗೆ ಕೃತಜ್ಞತೆ ಹೇಳಿದರು. ಹ್ಯಾಕಥಾನ್‌ 2023 ರಲ್ಲಿ ಭಾಗವಹಿಸಿರುವವರು, ಮಾನವತೆಯನ್ನು ಬಲಗೊಳಿಸಲು ಅಗತ್ಯವಿರುವ ಸಮರ್ಥ ಕೊಡುಗೆಯನ್ನು ನೀಡುವ ಮತ್ತು ದೀರ್ಘಕಾಲೀನ ಪ್ರಭಾವವನ್ನು ಬೀರುವ ಪರಿಹಾರಗಳನ್ನು ನೀಡುವಂತಾಗಲಿ ಎಂದರು. ಭಾರತ ಸರ್ಕಾರದಿಂದ ಆರ್ಥಿಕ ಬೆಂಬಲದಿಂದ ಕಾರ್ಯನಿರ್ವಹಿಸುವ ಮೆಡಿಕಲ್‌ ಡಿವೈಸ್‌ ಡೆವಲಪ್‌ಮೆಂಟ್‌ ಹಬ್‌ ಕೆಲವು ಸಮಸ್ಯೆಗಳಿಗೆ ಪರಿಹಾರ ಸಾಧ್ಯತೆಗಳನ್ನು ನೀಡಿರುವುದನ್ನುಅವರು ಉಲ್ಲೇಖಿಸಿದರು.

ಮಣಿಪಾಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿ [ಎಂಐಟಿ] ಯಲ್ಲಿ ದ ಸ್ಮಾರ್ಟ್‌ ಇಂಡಿಯ ಹ್ಯಾಕಥಾನ್‌ 2023 ನ್ನು ಹಮ್ಮಿಕೊಂಡಿರುವುದು ಗಮನಾರ್ಹವಾಗಿದ್ದು. ಈ ಸಮಾವೇಶವು ಆಯುಷ್‌ ವಿಭಾಗ, ಗುಜರಾತ್‌, ಕೇರಳ ಸರ್ಕಾರಗಳು ಸೂಚಿಸಿರುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಗಮನಹರಿಸಿತು. ತಮಿಳುನಾಡು, ಗುಜರಾತ್‌ ರಾಜ್ಯಗಳು ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸಿರುವ ಒಟ್ಟು 22 ತಂಡಗಳು ಐದು ದಿನಗಳ ಹ್ಯಾಕಥಾನ್‌ನ್ನು ಯಶಸ್ವಿಗೊಳಿಸಲು ಶ್ರಮಿಸಿದವು.

ಎಂಐಟಿಯ ನಿರ್ದೇಶಕ ಡಾ. (ಸಿಡಿಆರ್) ಅನಿಲ್ ರಾಣಾ, ಡಾ. ರಿಸಿಲ್‌ ಜೋಸೆಫ್‌, ಎಐಸಿಟಿಇನ ಸಹಾಯಕ ನಿರ್ದೇಶಕರಾದ ಕಮಲ್‌ ಸಿಂಗ್‌, ಪೂನಮ್‌, ಎಂಐಟಿಯ ಸಹನಿರ್ದೇಶಕ ಡಾ. ಸೋಮಶೇಖರ್‌ ಭಟ್‌ ಮತ್ತಿತರ ಗಣ್ಯರು ಉದ್ಘಾಟನ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಸ್ಮಾರ್ಟ್‌ ಇಂಡಿಯ ಹ್ಯಾಕಥಾನ್‌ 2023 ಯುವ ನವೋದ್ಯಮಿಗಳಲ್ಲಿ ಸಹಭಾಗಿತ್ವವನ್ನು ಹೊಂದಲು. ಸೂಕ್ತವಾದ ಯೋಚನೆಗಳನ್ನು ಬೆಳೆಸಿಕೊಳ್ಳಲು, ಪ್ರಸ್ತುತ ಜಗತ್ತಿನ ಸವಾಲುಗಳಿಗೆ ಪರಿವರ್ತಕ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ವೇದಿಕೆಯನ್ನು ಒದಗಿಸಿದೆ.

Previous Post

ಉಡುಪಿ : ಕಿಶೋರ ಯಕ್ಷಗಾನ ಸಂಭ್ರಮ – 2023 ಸಮಾರೋಪ ಸಮಾರಂಭ..!!

Next Post

ಉಡುಪಿ : ಪ್ರತಿಷ್ಟಿತ ಅಲೆವೂರು ಗ್ರೂಪ್ ಅವಾರ್ಡ್‌ಗೆ ಖ್ಯಾತ ನ್ಯಾಯವಾದಿ ಎಂ ಶಾಂತಾರಾಮ್ ಶೆಟ್ಟಿ ಆಯ್ಕೆ..!!

Dhrishya News

Dhrishya News

'DHRISHYA NEWS' is a news and entertainment website& YouTube channel. we hope to be the ideal and best channel in Coastal Karnataka by being at the forefront of every news revolution.

Next Post

ಉಡುಪಿ : ಪ್ರತಿಷ್ಟಿತ ಅಲೆವೂರು ಗ್ರೂಪ್ ಅವಾರ್ಡ್‌ಗೆ ಖ್ಯಾತ ನ್ಯಾಯವಾದಿ ಎಂ ಶಾಂತಾರಾಮ್ ಶೆಟ್ಟಿ ಆಯ್ಕೆ..!!

Leave a Reply Cancel reply

Your email address will not be published. Required fields are marked *

Stay Connected test

  • 86.6k Followers
  • 24k Followers
  • 99 Subscribers
  • Trending
  • Comments
  • Latest

ಮಲ್ಪೆ : ತೊಟ್ಟಂ ಬಳಿ ಗ್ರಾನೆಟ್ ಇಳಿಸುವಾಗ ಗ್ರಾನೆಟ್ನಡಿಗೆ ಬಿದ್ದು ಕಾರ್ಮಿಕರ ಸಾವು..!!

14/09/2023
49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

49 ಕೋಟಿ ರೂ. ಲಾಟರಿ ವಿಜೇತ – ಉದ್ಯಾವರದ ಯುವಕನಿಗೆ ಬಿಗ್ ಪಾಟ್..!!

04/02/2026

ಉಡುಪಿ :ನಾಳೆ (ಡಿ. 3)ಜಿಲ್ಲೆಯ ಎಲ್ಲಾ ಶಾಲಾ – ಪದವಿ ಪೂರ್ವ ಕಾಲೇಜು ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ..!!

02/12/2024

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ 5 ಷರತ್ತು..!!

05/06/2023

ಉಡುಪಿಯಲ್ಲಿ ನದಿಯಲ್ಲಿ ಮುಳುಗಿ ಮೂವರ ಸಾವು, ಓರ್ವ ನಾಪತ್ತೆ, ಮರುವಾಯಿ ಹೆಕ್ಕಲು ಹೋದಾಗ ದುರಂತ

0

ಇಂದ್ರಾಣಿ ನದಿ ಹೂಳೆತ್ತುವ ಕಾಮಗಾರಿ ಅವೈಜ್ಞಾನಿಕ..!!

0

ಉಡುಪಿಯಲ್ಲಿ ಇಂದು ಡಿ.ಕೆ.ಶಿವಕುಮಾರ್‌ ಬೃಹತ್ ಪಾದಯಾತ್ರೆ….!!

0

ರಸ್ತೆ ಅಪಘಾತಗೊಂಡು , ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಸಾರ್ಥಕತೆ ಮೆರೆದ ದಾನಿ

0
ರಾಜ್ಯ ಸರ್ಕಾರದ ಬಗ್ಗೆ ಬಿಜೆಪಿ ಶಾಸಕರ ಮಿಥ್ಯಾರೋಪಗಳಿಗೆ ಕಾಂಗ್ರೆಸಿನಿಂದ ನಾಳೆ ಕಾರ್ಕಳದಲ್ಲಿ ಸತ್ಯಮೇವ ಜಯತೆ

ರಾಜ್ಯ ಸರ್ಕಾರದ ಬಗ್ಗೆ ಬಿಜೆಪಿ ಶಾಸಕರ ಮಿಥ್ಯಾರೋಪಗಳಿಗೆ ಕಾಂಗ್ರೆಸಿನಿಂದ ನಾಳೆ ಕಾರ್ಕಳದಲ್ಲಿ ಸತ್ಯಮೇವ ಜಯತೆ

07/10/2026
ಬಿಜೆಪಿ ಶಾಸಕರ ಸುಳ್ಳು ಆರೋಪಗಳಿಗೆ ಉತ್ತರವಾಗಿ ಕಾರ್ಕಳ ಕಾಂಗ್ರೆಸಿನಿಂದ ಸತ್ಯಮೇವ ಜಯತೆ ಕಾರ್ಯಕ್ರಮದ ಪೂರ್ವಭಾವಿ ಸಭೆ

ಬಿಜೆಪಿ ಶಾಸಕರ ಸುಳ್ಳು ಆರೋಪಗಳಿಗೆ ಉತ್ತರವಾಗಿ ಕಾರ್ಕಳ ಕಾಂಗ್ರೆಸಿನಿಂದ ಸತ್ಯಮೇವ ಜಯತೆ ಕಾರ್ಯಕ್ರಮದ ಪೂರ್ವಭಾವಿ ಸಭೆ

06/10/2026
ಅಕ್ಷರ ಕಾಯಕಕ್ಕೆ ಸಂದ ಅರ್ಹ ಗೌರವ: ಶಿಕ್ಷಕಿ ತಾರಾಮತಿ ದೇವಾಡಿಗ ಅವರ ಸಾಧನೆ ನಾಡಿಗೆ ಆದರ್ಶ

ಅಕ್ಷರ ಕಾಯಕಕ್ಕೆ ಸಂದ ಅರ್ಹ ಗೌರವ: ಶಿಕ್ಷಕಿ ತಾರಾಮತಿ ದೇವಾಡಿಗ ಅವರ ಸಾಧನೆ ನಾಡಿಗೆ ಆದರ್ಶ

06/10/2026
ಮಾಹೆಯಲ್ಲಿ ವಿಶ್ವ ಹಾಸ್ಪಿಸ್‌ ಮತ್ತು ಉಪಶಾಮಕ ಆರೈಕೆ ದಿನ ಆಚರಣೆ

ಮಾಹೆಯಲ್ಲಿ ವಿಶ್ವ ಹಾಸ್ಪಿಸ್‌ ಮತ್ತು ಉಪಶಾಮಕ ಆರೈಕೆ ದಿನ ಆಚರಣೆ

06/10/2026

Recent News

imunify-bot-check